ಪ್ರೀತಿ ದೇವತೆ ನಿನ್ನಾಣೆ... ದರ್ಶನ್​ ಚಿತ್ರದ ಹಾಡಿಗೆ ಅನುಶ್ರೀ-ಅಕುಲ್​ ರೊಮಾನ್ಸ್​: ನೆಟ್ಟಿಗರಿಗೆ ಇನ್ನೇನೋ ಚಿಂತೆ!

By Suchethana D  |  First Published Aug 14, 2024, 2:34 PM IST

ದರ್ಶನ್​ ಅಭಿನಯದ ಸುಂಟರಗಾಳಿ ಚಿತ್ರದ ನಿನ್ನಾಣೆ... ನಿನ್ನಾಣೆ... ಹಾಡಿಗೆ ಆ್ಯಂಕರ್​ಗಳಾದ ಅನುಶ್ರೀ ಮತ್ತು ಅಕುಲ್​ ಬಾಲಾಜಿ ರೀಲ್ಸ್​ ಮಾಡಿದ್ದು, ಅಭಿಮಾನಿಗಳು ಏನೆಲ್ಲಾ ಹೇಳ್ತಿದ್ದಾರೆ ಕೇಳಿ...
 


ಕನ್ನಡ ಕಿರುತೆರೆ ಜನಪ್ರಿಯ ನಿರೂಪಕರಲ್ಲಿ ಸದ್ಯದ ಮಟ್ಟಿಗೆ ಸಕತ್​ ಫೇಮಸ್​ ಆಗಿರುವವರ ಪೈಕಿ ಅನುಶ್ರೀ ಮತ್ತು ಅಕುಲ್​ ಬಾಲಾಜಿ ಸೇರಿದ್ದಾರೆ. ಇವರಿಬ್ಬರ ನಿರೂಪಣಾ ಶೈಲಿಗೆ ಮೆಚ್ಚಿಕೊಂಡವರು ಹಲವರು. ಆ್ಯಂಕರ್​ ಅನುಶ್ರೀ ಅವರು  ಮನೆಮಾತಾಗಿರುವ ನಟಿ. ಇದೀಗ ಇವರಿಬ್ಬರೂ ಸೇರಿ ದರ್ಶನ್​- ರಕ್ಷಿತಾ ಅಭಿನಯದ, 200ರಲ್ಲಿ ಬಿಡುಗಡೆಯಾಗಿರುವ ಸುಂಟರಗಾಳಿ ಚಿತ್ರದ ನಿನ್ನಾಣೆ ನಿನ್ನಾಣೆ ಹಾಡಿಗೆ ಇವರಿಬ್ಬರೂ ರೀಲ್ಸ್​ ಮಾಡಿದ್ದಾರೆ. ಇತ್ತೀಚಿಗೆ ಕೆಲವು ಚಿತ್ರ ತಾರೆಯರು ದರ್ಶನ್​ ಅವರ ಅಭಿನಯದ ಚಿತ್ರಗಳಿಗೆ ಹೀಗೆ ರೀಲ್ಸ್​ ಮಾಡುವುದು ಹೆಚ್ಚಾಗಿದೆ. ಅದರಂತೆಯೇ ಅಕುಲ್​ ಬಾಲಾಜಿ ಮತ್ತು ಅನುಶ್ರೀ ಸಕತ್​ ರೊಮ್ಯಾಂಟಿಕ್​  ಮೂಡ್​ನಲ್ಲಿ ರೀಲ್ಸ್​ ಮಾಡಿದ್ದಾರೆ. ದರ್ಶನ್​ ಫ್ಯಾನ್ಸ್​ ಈ ಹಾಡಿಗೆ ಬಲು ಹರ್ಷ ವ್ಯಕ್ತಪಡಿಸಿದ್ರೆ,  ಅನುಶ್ರೀ ಫ್ಯಾನ್ಸ್​ಗೆ ಬೇರೆಯದ್ದೇ ಚಿಂತೆ. ಅದೇ ಅನುಶ್ರೀ ಅವರ ಮದುವೆಯ ಚಿಂತೆ. ಬರೀ ಬೇರೆಯವರ ಜೊತೆ ರೊಮಾನ್ಸ್​ ಮಾಡೋದು ಆಗೋಯ್ತು, ನಿಮ್ಮ ರಿಯಲ್​ ಜೋಡಿ ಜೊತೆ ಹೀಗೆ ರೊಮಾನ್ಸ್​ ನೋಡುವ ಆಸೆ ಅಂತಿದ್ದಾರೆ ಅಭಿಮಾನಿಗಳು. 
 
ಅಷ್ಟಕ್ಕೂ ಆ್ಯಂಕರ್​ ಅನುಶ್ರೀ ಎಂದರೆ ಅಲ್ಲಿ ನಗುವಿರಲೇ ಬೇಕು. ತಮ್ಮ ಹಾಸ್ಯದ ಧಾಟಿಯಿಂದ ಆ್ಯಂಕರಿಂಗ್​ ಮಾಡುವಲ್ಲಿ ಅನುಶ್ರೀ ಸಕತ್​ ಫೇಮಸ್​.   ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಸರಿಗಮಪ ಸಂಗೀತದ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ.  ತಮ್ಮ ಚಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರಿಗಿದೆ. ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಇದಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2023ರಲ್ಲಿ ಅನುಶ್ರೀ ಅವರಿಗೆ ಹಲವಾರು ಪ್ರಶಸ್ತಿಗಳೂ ಸಂದಿವೆ.

ಸಖಿಯೇ ಸಖಿಯೇಗೆ ಆ್ಯಂಕರ್ಸ್​ ಶ್ವೇತಾ-ಅಕುಲ್​ ಭರ್ಜರಿ ಸ್ಟೆಪ್​: ಜಗ್ಗಣ್ಣ ಕಂಡುಬಿಟ್ರು ಎಂದ ಫ್ಯಾನ್ಸ್​

Tap to resize

Latest Videos

 ಮಂಗಳೂರು ಮೂಲದ ಅನುಶ್ರೀ, ನಮ್ಮ ಟಿವಿ ಚಾನೆಲ್ ನಲ್ಲಿ ಅಂತ್ಯಾಕ್ಷರಿ ಮ್ಯೂಸಿಕ್ ಶೋ ಮೂಲಕ ಟಿವಿ ಜರ್ನಿ ಶುರು ಮಾಡಿದರು. ETV ಯಲ್ಲಿ ಶುರು ಮಾಡಿದ ‘ಡಿಮ್ಯಾಂಡಪ್ಪೋ ಡಿಮ್ಯಾಂಡ್’ ಇವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡನ್ನು ತಂದು ಕೊಟ್ಟಿತು. ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕುಣಿಯೋಣು ಬಾರಾ, ಕಾಮಿಡಿ ಕಿಲಾಡಿಗಳು ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ‘ಬೆಂಕಿಪೊಟ್ಣ’ ಸಿನಿಮಾ ಇವರ ಮೊದಲ ಸಿನಿಮಾ. ಈ ಚಿತ್ರದಲ್ಲಿ,  NAK ಮೀಡಿಯಾದಿಂದ Best debut Actress ಅವಾರ್ಡ್ ಪಡೆದರು. ‘ಮುರಳಿ ಮೀಟ್ಸ್ ಮೀರಾ’ ಸಿನಿಮಾಗಾಗಿ ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ ಪಡೆದಿದ್ದಾರೆ. ಅನುಶ್ರೀ ಆ್ಯಂಕರ್ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿರುವ ಅನುಶ್ರೀ ಇದರಲ್ಲಿ ಸಿನಿಮಾ ತಾರೆಯರ ಸಂದರ್ಶನ ಮಾಡುತ್ತಾರೆ. 

ಇನ್ನು ಅಕುಲ್‌ ಬಾಲಾಜಿ ಕೂಡ ಆ್ಯಂಕರ್​ ನಿಂಗ್‌ನಲ್ಲಿ ಸಕತ್‌ ಫೇಮಸ್‌. ಅಗಥ, ಗುಪ್ತ ಗಾಮಿನಿ, ಯಾವ ಜನ್ಮದ ಮೈತ್ರಿ, ಜಗಳಗಂಟಿಯರು ಸೇರಿದಂತೆ ಕೆಲ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಹಳ್ಳಿ ಹೈದ ಪ್ಯಾಟೆಗ್ ಬಂದ, ಪ್ಯಾಟೆ ಮಂದಿ ಕಾಡಿಗ ಬಂದ್ರು ಸೇರಿದಂತೆ 30ಕ್ಕೂ ಹೆಚ್ಚು ಟಿವಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. 2007 ರಲ್ಲಿ ತೆರೆಕಂಡ `ಮಿಲನ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿ ಪರದೆಗೆ ಎಂಟ್ರಿಕೊಟ್ಟಿರುವ ಅಕುಲ್‌ ಅವರು,  2008 ರಲ್ಲಿ ತೆರೆಕಂಡ `ಆತ್ಮೀಯ’ ಚಿತ್ರದ ಮೂಲಕ ನಾಯಕ ನಟನಾಗಿದ್ದಾರೆ.  ವಾಸ್ತವ, ನೆರಮು, ಬನ್ನಿ, ಮೈನ, ಪ್ಯಾರ್ಗೆ ಆಗ್ಬಿಟ್ಟೈತೆ, ಲೂಸ್​ಗಳು, ಕ್ರೇಜಿಸ್ಟಾರ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಹುಚ್ಚನಂತೆ ಪ್ರೀತಿಸೋ ಗಂಡ ಸಿಗ್ಲಪ್ಪಾ ಅಂತೀರಾ? ದೇವ್ರು ವರ ಕೊಡೋ ಮೊದ್ಲು ಈ ಮಾನಸಿಕ ಸಮಸ್ಯೆ ಅರಿಯಿರಿ!

 

ದರ್ಶನ್​ ಚಿತ್ರದ ಹಾಡಿಗೆ ಅನುಶ್ರೀ- ಅಕುಲ್​ ರೊಮಾನ್ಸ್​- ಈ ಲಿಂಕ್​ ಕ್ಲಿಕ್​ ಮಾಡಿ
 

click me!