
ಸೀತಾರಾಮ ಸೀರಿಯಲ್ ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ. ಸೀತಾ ಮತ್ತು ರಾಮ್ ಇನ್ನೇನು ಒಂದಾಗುತ್ತಾರೆ ಎನ್ನುವ ಕಾಲಕ್ಕೆ ರಾಮ್ನನ್ನು ಕೊಲ್ಲಲು ಚಿಕ್ಕಮ್ಮ ಭಾರ್ಗವಿ ಸಂಚು ರೂಪಿಸಿದ್ದಳು. ಆತನ ಕಾರನ್ನು ಆ್ಯಕ್ಸಿಡೆಂಟ್ ಮಾಡಿಸಿದ್ದಾಳೆ. ಸೀತಾಳನ್ನು ತಾತ ದೇಸಾಯಿ ಮನೆಗೆ ಕರೆಸಿ ಇನ್ನೇನು ಮದುವೆ ಮಾತುಕತೆ ಮುಂದುವರೆಸಬೇಕು ಎನ್ನುವಾಗಲೇ ಇದು ಸಾಧ್ಯವಾಗಬಾರದು ಎನ್ನುವ ಕಾರಣಕ್ಕೆ ಭಾರ್ಗವಿ ಈ ತಂತ್ರವನ್ನು ರೂಪಿಸಿದ್ದಳು. ಇದಕ್ಕಾಗಿ ಎಲ್ಲರ ಎದುರು ಒಳ್ಳೆಯತನದ ಸೋಗು ಹಾಕಿಕೊಂಡಿರೋ ಭಾರ್ಗವಿ, ಯಾರಿಗೂ ಅನುಮಾನ ಬಾರದಂತೆ ರಾಮ್ನನ್ನು ವಿದೇಶಕ್ಕೆ ಕಳುಹಿಸುವ ಸಂಚು ರೂಪಿಸಿದಳು. ಅಲ್ಲಿ ತುರ್ತಾಗಿ ಯಾವುದೇ ಆಫೀಸ್ ಕೆಲಸಕ್ಕೆ ಸಂಬಂಧಿಸಿದಂತೆ ಮೀಟಿಂಗ್ ಇದೆ ಎಂದು ಅವನನ್ನು ಕಳುಹಿಸಿದಳು.
ಆದರೆ ಅದೇ ಇನ್ನೊಂದೆಡೆ ಭಾರ್ಗವಿಯ ಕುತಂತ್ರ ಗೆಳೆಯ ಅಶೋಕ್ಗೆ ತಿಳಿದಿತ್ತು. ಸತ್ಯಜೀತ್ ಎಲ್ಲಾ ಸತ್ಯವನ್ನೂ ಹೇಳಿದ್ದ. ಇದಕ್ಕೂ ಮುನ್ನವೇ ಭಾರ್ಗವಿಯ ಎಲ್ಲಾ ತಂತ್ರಗಳೂ ಅವನಿಗೆ ಗೊತ್ತಿದ್ದರೂ, ರಾಮ್ ಅದನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ ಅವನು ತನ್ನ ಚಿಕ್ಕಮ್ಮ ಒಳ್ಳೆಯವಳು ಎಂದೇ ಅಂದುಕೊಂಡಿದ್ದಾನೆ. ತನ್ನ ತಾಯಿಯ ಸಾವಿಗೆ ಅವಳೇ ಕಾರಣ ಎನ್ನುವುದೂ ಅವನಿಗೆ ಗೊತ್ತಿಲ್ಲ. ಅದರೆ ಸೀತಾ ಮತ್ತು ರಾಮ್ನನ್ನು ಬೇರೆ ಮಾಡಲು ಅವನನ್ನು ವಿದೇಶಕ್ಕೆ ಕಳುಹಿಸುವ ಪ್ಲ್ಯಾನ್ ಮಾಡಿರುವುದು ಅಶೋಕ್ಗೆ ಗೊತ್ತಾಗಿದೆ.
ಚಿಕ್ಕಮ್ಮಂದಿರ ಮೇಲೆ ನಿರ್ದೇಶಕರಿಗೆ ಯಾಕಿಷ್ಟು ಕೋಪ? ಬೇರೆ ಕಥೆನೇ ಸಿಗಲ್ವಾ? ಫ್ಯಾನ್ಸ್ ಬೇಸರ!
ಇದೇ ವೇಳೆ ರಾಮ್ ಕಾರು ವಿಮಾನ ನಿಲ್ದಾಣದ ಬಳಿ ಆ್ಯಕ್ಸಿಡೆಂಟ್ ಆಗಿರುವ ಸುದ್ದಿ ಬಂದಿದೆ. ಅದನ್ನು ಮಾಡಿಸಿದ್ದ ಭಾರ್ಗವಿಯೇ ಎಂದು ಬೇರೆ ಹೇಳಬೇಕಾಗಿಲ್ಲ. ಭಾರ್ಗವಿ ಎಲ್ಲರ ಎದುರು ಗಾಬರಿಯಿಂದ ರಾಮ್ಗೆ ಅಪಘಾತವಾಗಿದೆ ಎಂದಿದ್ದಾಳೆ. ಎಲ್ಲರೂ ಹೌಹಾರಿ ಹೋಗಿದ್ದಾರೆ. ಅದೇ ಸಮಯದಲ್ಲಿ ಅಲ್ಲಿಯೇ ಇದ್ದ ಪ್ರಿಯಾ, ರಾಮ್ ಬದಲು ಆಶೋಕ್ ವಿದೇಶಕ್ಕೆ ಹೋಗಿದ್ದ, ಹಾಗಿದ್ದರೆ ಅಪಘಾತವಾಗಿದ್ದು ಅಶೋಕ್ ಎಂದು ಜೋರಾಗಿ ಕೂಗಿಕೊಂಡಿದ್ದಾಳೆ. ಅಲ್ಲಿಗೆ ತನ್ನ ಸ್ನೇಹಿತನ ಪ್ರಾಣ ಕಾಪಾಡಲು ಅಶೋಕ್ ಹೋಗಿದ್ದಾನೆ. ಅಪಘಾತವಾಗಿದೆ. ಮುಂದೇನು ಎನ್ನುವುದು ಈಗಿರುವ ಪ್ರಶ್ನೆ.
ಒಂದೆಡೆ ಸೀತಾಗೂ ರಾಮ್ ಕಾರು ಅಪಘಾತ ಆಗಿರುವ ಸುದ್ದಿ ಬಂದಿದ್ದು, ಅವಳಿಗೂ ಆಘಾತವಾಗಿ ಮನೆಯಿಂದ ಹೋಗಿದ್ದಾಳೆ. ಅತ್ತ ರಾಮ್ ಮನೆಯವರಿಗೆ ಅದು ಅಶೋಕ್ ಎಂದು ಗೊತ್ತಾಗಿದೆ. ಭಾರ್ಗವಿ ಮಾತ್ರ ರಾಮ್ ಬದಲು ಅಶೋಕ್ ಹೋಗಿದ್ದು ಎಂದು ಕೇಳಿ ಸಿಟ್ಟುಗೊಂಡಿದ್ದಾಳೆ. ರಾಮ್ನನ್ನು ಮುಗಿಸುವ ಪ್ರಯತ್ನ ಮಾಡಿದರೆ ಅದು ಸಾಧ್ಯವಾಗಲಿಲ್ಲ ಎನ್ನುವ ಕೊರಗು ಅವಳದ್ದು. ಸೀತಾ ಅಂತೂ ರಾಮ್ ಮನೆ ಸೇರಿರುವ ಹೊತ್ತಿನಲ್ಲಿ ಆಗಿರುವ ಈ ಘಟನೆಯಿಂದ ಮುಂದೇನು ಆಗುತ್ತದೆಯೋ ಎನ್ನುವುದು ಸೀರಿಯಲ್ ಪ್ರೇಮಿಗಳ ಆತಂಕ. ಸ್ನೇಹಿತನಿಗಾಗಿ ತನ್ನ ಪ್ರಾಣವನ್ನೇ ಒತ್ತೆಯಿಟ್ಟಿರುವ ಅಶೋಕ್ನನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಇದ್ದರೆ ಇಂಥ ಸ್ನೇಹಿತ ಇರಬೇಕು ಎನ್ನುತ್ತಿದ್ದಾರೆ.
ಅಮ್ಮನ ದಿನಕ್ಕೆ ಸಿಹಿ-ಸೀತಾ ಭರ್ಜರಿ ಆಫರ್: ತಾಯಿಗೆ ಪ್ರಶ್ನೆ ಕೇಳಿ- ಟ್ಯಾಗ್ ಮಾಡಿ- ಏನಿದು ವಿಶೇಷ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.