ದೊಡ್ಮನೆಯಲ್ಲಿ ಧನರಾಜ್ ದೊಡ್ಡ ಕುಟುಂಬ... ಹೆಂಡ್ತಿ ಕೈಯಿಂದ ಬಿತ್ತು ಏಟು, ಮಗಳನ್ನ ಕಂಡು ಎಮೋಷನಲ್!

By Pavna Das  |  First Published Jan 2, 2025, 11:12 AM IST

ಬಿಗ್ ಬಾಸ್ ಮನೆಯಲ್ಲಿ ಇದೀಗ ಫ್ಯಾಮಿಲಿ ರೌಂಡ್ ನಡೆಯುತ್ತಿದ್ದು, ಇವತ್ತಿನ ಸಂಚಿಕೆಯಲ್ಲಿ ಧನರಾಜ್ ಅವರ ದೊಡ್ಡ ಕುಟುಂಬದ ಎಂಟ್ರಿಯಾಗಲಿದ್ದು, ಮೂರು ತಿಂಗಳ ಬಳಿಕ ಮಗಳನ್ನು ನೋಡಿ ಎಮೋಷನಲ್ ಆಗಿದ್ದಾರೆ ಧನರಾಜ್. 
 


ಬಿಗ್ ಬಾಸ್ ಸೀಸನ್ 11 (Bigg Boss Season 11) ಅಂತಿಮ ಘಟ್ಟವನ್ನು ತಲುಪಿದೆ. ಇದೀಗ ಫ್ಯಾಮಿಲಿ ರೌಂಡ್ (family round) ಅದ್ಧೂರಿಯಾಗಿ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಒಬ್ಬೊಬ ಸ್ಪರ್ಧಿಗಳ ಮನೆಯಿಂದ ಮನೆಯ ಸದಸ್ಯರೆಲ್ಲಾ ಬಂದು, ತಮ್ಮ ಮಕ್ಕಳೊಂದಿಗೆ, ಬಿಗ್ ಬಾಸ್ ಇತರ ಸ್ಪರ್ಧಿಗಳ ಜೊತೆ ಸಮಯ ಕಳೆದಿದ್ದಾರೆ. ಇದೀಗ ಧನರಾಜ್ (Dhanraj Achar) ಅವರ ದೊಡ್ಡ ಕುಟುಂಬ ಕೂಡ ದೊಡ್ಮನೆಗೆ ಕಾಲಿಟ್ಟಿದ್ದು, ಎಲ್ಲರೂ ಜೊತೆಯಾಗಿ ಸೇರಿ ಸಂಭ್ರಮಿಸಿದ್ದಾರೆ. ಧನರಾಜ್ ಹೆಂಡ್ತಿ ಕೈಯಿಂದ ಏಟು ಕೂಡ ತಿಂದಿದ್ದಾರೆ. ಜೊತೆಗೆ ಮುರು ತಿಂಗಳ ಬಳಿಕ ಮುದ್ದು ಮಗಳನ್ನು ನೋಡಿ ಎಮೋಷನಲ್ ಆಗಿದ್ದಾರೆ ಧನರಾಜ್. 

ವೀಲ್‌ಚೇರ್‌ನಲ್ಲಿ ಕುಳಿತು ಬಂದ ತಮ್ಮ ನನ್ನನ್ನು ಗುರುತಿಸುತ್ತಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಮೋಕ್ಷಿತಾ

Tap to resize

Latest Videos

ಪ್ರತಿ ಸ್ಪರ್ಧಿಗಳ ಮನೆಯಿಂದ ಹೆಚ್ಚೆಂದರೆ ನಾಲ್ಕು ಜನ ಬಂದಿದ್ದೇ ಹೆಚ್ಚು. ಆದರೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಾಮಿಡಿ ವಿಡಿಯೋಗಳಿಂದಲೇ ಗುರುತಿಸಿಕೊಂಡ ಧನರಾಜ್ ಯಾವಾಗಲೂ ತಮ್ಮ ದೊಡ್ಡದಾದ ಫ್ಯಾಮಿಲಿ ಜೊತೆಗೆ ಕಾಣಿಸಿಕೊಳ್ಳುತ್ತಲಿರುತ್ತಾರೆ. ಹಾಗಾಗಿ ಈ ಬಾರಿ ಅಲ್ಲದೇ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ದೊಡ್ಮನೆಗೆ ಧನರಾಜ್ ಆಚಾರ್ ಅವರ ದೊಡ್ಡ ಕುಟುಂಬದ ಸದಸ್ಯರೆಲ್ಲರೂ ಎಂಟ್ರಿ ಕೊಟ್ಟಿದ್ದಾರೆ. ದೊಡ್ಮನೆಯ ಗಾರ್ಡನ್ ಏರಿಯಾದಲ್ಲಿ ಧನರಾಜ್ ಫ್ಯಾಮಿಲಿಯ ಸದಸ್ಯರು ಹುಲಿ ಡ್ಯಾನ್ಸ್ (tiger dance) ಮಾಡಿದ್ದಾರೆ. ಇದನ್ನ ನೋಡಿದ ಧನರಾಜ್ ಕೂಡ ಡ್ಯಾನ್ಸ್ ಮಾಡಿದ್ದಾರೆ. ಧನರಾಜ್ ರನ್ನು ಎತ್ತಿಕೊಂಡು ಕುಟುಂಬ ಸದಸ್ಯರು ಸಂಭ್ರಮಿಸಿದ್ದಾರೆ. 

ಇನ್ನು ಮನೆಯ ಸದಸ್ಯರು ಪೌಸ್ ಆಗಿರುವ ಹೊತ್ತಿಗೆ ಧನರಾಜ್ ಪತ್ನಿ ಪ್ರಜ್ಞಾ (Prajna Dhanraj) ಕೂಡ ಎಂಟ್ರಿ ಕೊಟ್ಟಿದ್ದು,  ಬಂದ ಪತ್ನಿ ಧನರಾಜ್‌ಗೆ ಐಶ್ವರ್ಯ ಹೆಸರು ಹೇಳಿ ಅಷ್ಟೇ ಪ್ರೀತಿಯಿಂದ ಕೆನ್ನೆಗೆ ಏಟು ಕೊಟ್ಟಿದ್ದಾರೆ. ನಾನು ನಿಮ್ಮ ಹತ್ತಿರ ಇರದೇ ಇದ್ದದ್ದು ಒಳ್ಳೆಯದಾಯ್ತು ಅಲ್ವಾ? ಯಾವಾಗ್ಲೂ ಐಶ್ ಐಶ್ ಅಂತ ಇರ್ತೀರಿ, ಐಶ್ವರ್ಯಗೆ ಲೈನ್ ಹೊಡಿತ್ತಿದ್ರಾ ಅಂತಾನೂ ಕೇಳಿದ್ದಾರೆ. 

ರಾಧಾ-ಕೃಷ್ಣ ತರ ಇದ್ದೀರಾ ಎಂದ ತ್ರಿವಿಕ್ರಮ್ ತಾಯಿ; ಭವ್ಯಾ ಗೌಡ ಸೊಸೆ ಅಂತ ಒಪ್ಪಿಕೊಂಡ್ರಾ ಎಂದ ಫ್ಯಾನ್ಸ್‌

ಇನ್ನೊಂದು ಕಡೆ ದೊಡ್ಮನೆಯ ಟೀವಿಯಲ್ಲಿ ಧನರಾಜ್ ಪುಟ್ಟ ಕಂದಮ್ಮ ತೊಟ್ಟಿಲಲ್ಲಿ ಮಲಗಿರೋದನ್ನು ಕಾಣಿಸಲಾಗುತ್ತೆ, ಆವಾಗ ಧನರಾಜ್ ಮಗಳ ಫೋಟೊ ಮುಟ್ಟಿ, ಒಂದು ಸಲ ಎತ್ತಿಕೊಳ್ಳಬೇಕು ಅನಿಸ್ತಿದೆ ಎನ್ನುತ್ತಾರೆ. ಆವಾಗ ಬಿಗ್ ಬಾಸ್ ಧನರಾಜ್ ಓಡಿ ಎನ್ನುತ್ತಾರೆ. ಧನರಾಜ್ ಓಡುತ್ತಾ ಹೋಗಿ, ತೊಟ್ಟಿಲಲ್ಲಿ ಮಲಗಿದ ಮಗಳ ಬಳಿ ಹೋಗಿ ಆಕೆಗೆ ಮುದ್ದು ಮಾಡುತ್ತಾ, ಭಾವುಕರಾಗಿದ್ದಾರೆ. ಇಂದು ರಾತ್ರಿ ಧನರಾಜ್ ಕುಟುಂಬದ  ಎಪಿಸೋಡ್ ಪ್ರಸಾರ ಆಗಲಿದೆ. ಬಿಗ್​ಬಾಸ್ ವೀಕ್ಷಕರು ಅದನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. 

 

click me!