ಬಿಗ್ ಬಾಸ್ ಮನೆಯಿಂದ ಐಶ್ವರ್ಯಾ ಸಿಂಧೋಗಿ ಅವರನ್ನು 13ನೇ ವಾರದಲ್ಲಿ ಎಲಿಮಿನೇಟ್ ಮಾಡಲಾಗಿದೆ. 14ನೇ ವಾರದ ಫ್ಯಾಮಿಲಿ ರೌಂಡ್‌ನಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾದ ಅವರ ಎಲಿಮಿನೇಷನ್ ಹಿಂದೆ ಬೇರೆಯೇ ಉದ್ದೇಶವಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು (ಜ.01): ಬಿಗ್ ಬಾಸ್ ಮನೆಯಿಂದ ನಾಗಿಣಿ ಖ್ಯಾತಿಯ ನಟಿ ಐಶ್ವರ್ಯಾ ಸಿಂಧೋಗಿ ಅವರು 13ನೇ ವಾರದಲ್ಲಿ ಎಲಿಮಿನೇಟ್ ಆಗಿ ಹೊರಗೆ ಹೋಗಿದ್ದಾರೆ. ಇದೀಗ 14ನೇ ವಾರದಲ್ಲಿ ಫ್ಯಾಮಿಲಿ ರೌಂಡ್ ನಡೆಯುತ್ತಿದ್ದು, ಐಶ್ವರ್ಯಾಳನ್ನು ಹೊರಗೆ ಕಳುಹಿಸಿದ್ದರ ಉದ್ದೇಶ ಬೇರೆಯೇ ಇರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಹೌದು, ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಒಟ್ಟು 17 ಸ್ಪರ್ಧಿಗಳು ಮನೆಯೊಳಗೆ ಪ್ರವೇಶ ಮಾಡಿದರೆ ಅದರಲ್ಲಿ ಇಬ್ಬರು ಜಗಳ ಮಾಡಿಕೊಂಡು ಮನೆಗೆ ಹೋಗಿದ್ದಾರೆ. ಉಳಿದಂತೆ ಇದಾದ ನಂತರ ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪುನಃ ಮನೆಯೊಳಗೆ ಬಂದಿದ್ದಾರೆ. ಒಟ್ಟು 20 ಜನರಲ್ಲಿ 9 ಜನರು ನೇರ ಎಲಿಮಿನೇಟ್ ಆಗಿ ಮನೆಗೆ ಹೋದರೆ, ಉಳಿದ ಇಬ್ಬರು ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘಿಸಿ ಮನೆಗೆ ಹೋಗಿದ್ದಾರೆ. ಆದರೆ, 13ನೇ ವಾರದವರೆಗೂ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದ ನಟಿ ಐಶ್ವರ್ಯಾ ಸಿಂಧೋಗಿ ಅವರನ್ನು ಮನೆಯಿಂದ ಎಲಿಮಿನೇಟ್ ಮಾಡಿ ಹೊರಗೆ ಕಳುಹಿಸಲಾಗಿದೆ.
ಇನ್ನು ಐಶ್ವರ್ಯಾ ಸಿಂಧೋಗಿ ಅವರಿಗಿಂದ ಕಳಪೆಯಾಗಿ ಆಟವಾಡಿದ ಕಂಟೆಸ್ಟೆಂಟ್‌ಗಳಿ ಬಿಗ್ ಬಾಸ್ ಮನೆಯಲ್ಲಿ ಇದ್ದರೂ ಅವರನ್ನು ಹೊರಗೆ ಕಳುಹಿಸದೇ ಉಳಿಸಿಕೊಂಡಿದ್ದಾರೆ ಎಂಬ ಅನುಮಾ ವೀಕ್ಷಕರಲ್ಲಿ ಮುಡಿದೆ. ಐಶ್ವರ್ಯಾ ಸಿಂಧೋಗಿಗೆ ಹೋಲಿಕೆ ಮಾಡಿದರೆ ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ಧನರಾಜ್ ಅವರೇ ಮೊದಲು ಮನೆಯಿಂದ ಹೊರಗೆ ಹೋಗುವವರು ಎಂದು ಬಿಗ್ ಬಾಸ್ ವೀಕ್ಷಣೆ ಮಾಡುತ್ತಿರುವ ಯಾರೇ ಆದರೂ ಹೇಳುತ್ತಾರೆ. ಆದರೆ, ಐಶ್ವರ್ಯಾ ಅವರನ್ನು ಮನೆಯಿಂದ ಹೊರಗೆ ಕಳುಹಿಸಿದ್ದರ ಉದ್ದೇಶ ನೇರೆಯೇ ಆಗಿರಬಹುದು ಎಂಬ ಲೆಕ್ಕಾಚಾರ ವೀಕ್ಷಕರ ವಲಯದಲ್ಲಿ ನಡೆಯುತ್ತಿದೆ.
ಏನದು ಬೇರೆ ಉದ್ದೇಶ: ಪ್ರಸ್ತುತವಾಗಿ ಬಿಗ್ ಬಾಸ್ ಮನೆಯಲ್ಲಿ 14ನೇ ವಾರದ ಟಾಸ್ಕ್ ನಡೆಯುತ್ತಿದೆ. ಇದರಲ್ಲಿ ಫ್ಯಾಮಿಲಿ ರೌಂಡ್ ಮಾಡಲಾಗುತ್ತಿದ್ದು, ಎಲ್ಲ ಕಂಟೆಸ್ಟೆಂಟ್‌ಗಳ ಮನೆಯವರನ್ನು ಬಿಗ್ ಬಾಸ್ ಮನೆಯೊಳಗೆ ಕರೆಸಿ ಎರಡೂವರೆ ತಿಂಗಳು ಮನೆಯವರಿಂದ ದೂರವಿದ್ದ ನೋವಿಗೆ ಮುಲಾಮು ಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಆದರೆ, ಇಲ್ಲಿ ಮನೆಯವರು ಎಂದು ಹೇಳಿಕೊಳ್ಳುವುದಕ್ಕೆ ಅಪ್ಪ-ಅಮ್ಮ ಇಲ್ಲದ ಐಶ್ವರ್ಯಾ ಸಿಂಧೋಗಿ ಅವರ ಕುಟುಂಬ ಸದಸ್ಯರನ್ನಾಗಿ ಯಾರನ್ನು ಕರೆಸಬೇಕು ಎಂಬ ಪ್ರಶ್ನೆ ಬಂದೇ ಬರುತ್ತದೆ. ಹೀಗಾಗಿ, ಬೇರೆ ಬೇರೆ ಸ್ಪರ್ಧಿಗಳ ಮನೆಯ ಸದಸ್ಯರು ಬಂದಾಗ ಐಶ್ವರ್ಯಾಳ ಮನಸ್ಸಿಗೆ ತುಂಬಾ ನೋವಾಗಬಹುದು ಎಂಬ ಉದ್ದೇಶದಿಂದಲೇ ಫ್ಯಾಮಿಲಿ ರೌಂಡ್‌ಗೂ ಮುನ್ನವೇ ಎಲಿಮಿನೇಟ್ ಮಾಡಿ ಮನೆಗೆ ಕಳುಹಿಸಲಾಗಿದೆಯೇ ಎಂಬ ಚರ್ಚೆಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ವೀಲ್‌ಚೇರ್‌ನಲ್ಲಿ ಕುಳಿತು ಬಂದ ತಮ್ಮ ನನ್ನನ್ನು ಗುರುತಿಸುತ್ತಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಮೋಕ್ಷಿತಾ
ಮನೆಯಿಂದ ಊಟ ಬಂದಿಲ್ಲ ಎಂದಾಗ ಕಣ್ಣೀರಿಟ್ಟಿದ್ದ ಐಶ್ವರ್ಯಾ: ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆ ನಡೆದಿದ್ದ ಮನೆಯಿಂದ ಊಟ ತರಿಸಿಕೊಡುವ ವಿಚಾರದಲ್ಲಿ ಎಲ್ಲ ಕಂಟೆಸ್ಟೆಂಟ್‌ಗಳ ಮನೆಯಿಂದ ವಿಶೇಷ ಊಟವನ್ನು ಕಳುಹಿಸಿಕೊಡಲಾಗಿತ್ತು. ಈ ವೇಳೆ ಐಶ್ವರ್ಯಾ ಅವರ ಮನೆಯಿಂದ ಊಟವೇ ಬಂದಿರಲಿಲ್ಲ. ಆಗ ಸ್ವತಃ ಉಗ್ರಂ ಮಂಜು ಅವರು ತಮ್ಮ ಮನೆಯಿಂದ ಕಳುಹಿಸಿದ್ದ ಹೋಳಿಗೆ ಊಟದ ಬಾಕ್ಸ್‌ಗೆ ಐಶ್ವರ್ಯಾ ಹೆಸರನ್ನು ಅಂಟಿಸಿ ಕೊಟ್ಟಿದ್ದರು. ಆದರೆ, ಈ ಊಟದ ಸತ್ಯಾಂಶ ಗೊತ್ತಾದಾಗ ಐಶ್ವರ್ಯಾ ತೀವ್ರವಾಗಿ ನೊಂದುಕೊಂಡು ಕಣ್ಣೀರು ಹಾಕಿದ್ದರು.
ಉದ್ದೇಶ ಒಳ್ಳೆಯದೇ?: ಇದಾದ ನಂತರ ಸ್ವತಃ ಬಿಗ್ ಬಾಸ್ ಇದು ನಿನ್ನ ತವರುಮನೆ ನಾವೇ ನಿನ್ನ ಸಂಬಂಧಿಕರು ಎಂದೆಲ್ಲಾ ಹೇಳಿದ್ದರು. ಜೊತೆಗೆ ಕಿಚ್ಚ ಸುದೀಪ್ ಅವರು ತಾವು ಬಿಗ್ ಬಾಸ್ ಮನೆಗೆ ಬರುವಾಗ ತಮಗೆ ತಿನ್ನಲು ತಂದುಕೊಂಡಿದ್ದ ಬಿಸ್ಕತ್ ಸೇರಿ ಇತರೆ ಕುರುಕಲು ತಿಂಡಿಗಳನ್ನು ಕೊಟ್ಟು ಇದು ನನ್ನ ಮನೆಯಿಂದ ಬರುವ ಪುಟ್ಟ ಕಾಣಿಕೆ ಎಂದು ಕೊಟ್ಟಿದ್ದರು. ಇದೀಗ ಎಲ್ಲರ ಕುಟುಂಬಗಳು ಬಿಗ್ ಬಾಸ್ ಮನೆಗೆ ಬರುವಾಗ ಐಶ್ವರ್ಯಾಗೆ ಭಾರೀ ನೋವು ಉಂಟಾಗಬಹುದೆಂದು ಎಲಿಮಿನೇಟ್ ಮಾಡಿರಬಹುದು. ಒಂದು ವೇಳೆ ಬಿಗ್ ಬಾಸ್ ಫ್ಯಾಮಿಲಿ ರೌಂಡ್‌ನಿಂದ ಐಶ್ವರ್ಯಾಗೆ ಆಗುತ್ತಿದ್ದ ನೋವು ತಪ್ಪಿಸುವ ಉದ್ದೇಶವನ್ನು ಹೊಂದಿದ್ದರೂ ಅದು ಒಳ್ಳೆಯದೇ ಎಂಬ ಭಾವನೆ ವೀಕ್ಷಕರ ವಲಯದಲ್ಲಿ ಬರಲಿದೆ.
ಇದನ್ನೂ ಓದಿ: ನ್ಯಾಯವೇ ನಮ್ಮನೆ ದೇವರು ಎನ್ನುವ 'ಹಳ್ಳಿ ಹೈದ ಹನುಮಂತು'ಗೆ ಬಿಗ್ ಬಾಸ್ ಅನ್ಯಾಯ!