ದೀಪಿಕಾ ಲವ್ಸ್ ಆನಂದ್: ದೊರೆಸಾನಿ Serialನಲ್ಲಿ ಕಚಗುಳಿ ಇಡೋ ಪ್ರೀತಿ

Published : Apr 15, 2022, 12:49 PM IST
ದೀಪಿಕಾ ಲವ್ಸ್ ಆನಂದ್: ದೊರೆಸಾನಿ Serialನಲ್ಲಿ ಕಚಗುಳಿ ಇಡೋ ಪ್ರೀತಿ

ಸಾರಾಂಶ

ದೊರೆಸಾನಿ ಕಲರ್ಸ್ ಕನ್ನಡದಲ್ಲಿ ಸಖತ್ ಪಾಪ್ಯುಲರ್ ಆಗ್ತಿರೋ ಸೀರಿಯಲ್. ಇದರಲ್ಲಿ ದೀಪಿಕಾ ಮತ್ತು ಆನಂದ್ ಪ್ರೊಪೋಸ್ ಸೀನ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.  

'ದೊರೆಸಾನಿ' (Doresani) ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರ ಆಗುತ್ತಿರುವ ಸೀರಿಯಲ್. ಈ ಸೀರಿಯಲ್‌ನಲ್ಲಿ ರೂಪಿಕಾ ಹಾಗೂ ಪೃಥ್ವಿರಾಜ್ ನಟಿಸಿದ್ದಾರೆ. ಇವರು ಈ ಧಾರಾವಾಹಿಯಲ್ಲಿ ದೀಪಿಕಾ ಹಾಗೂ ವಿಶ್ವನಾಥ್ ಆನಂದ್ ಪಾತ್ರ ಮಾಡ್ತಿದ್ದಾರೆ. ದೊರೆಸಾನಿಯಲ್ಲೀಗ ಪ್ರೀತಿಯ ಪರ್ವ. ಎಷ್ಟೋ ಕಾಲದಿಂದ ದೀಪಿಕಾ ಒಳಗೇ ಬಚ್ಚಿಟ್ಟುಕೊಂಡಿದ್ದ ಪ್ರೀತಿ ಚಿಟ್ಟೆಯಾಗಿ ಹೊರ ಬಂದಿದೆ. ಸ್ವಚ್ಛಂದವಾಗಿ ಹಾರಲಾರಂಭಿಸಿದೆ. ಆದರೆ ಮುಂದಿದೆ ಹಬ್ಬ ಅನ್ನೋದನ್ನು ಈ ದೃಶ್ಯದ ಕೊನೆಯಲ್ಲಿ ದೀಪಿಕಾ ಮುಖದಲ್ಲಿರುವ ಎಕ್ಸ್‌ಪ್ರೆಶನ್ನೇ ಹೇಳ್ತಿದೆ. ಸಾಂಪ್ರದಾಯಿಕ ಮನೆತನ, ದೀಪಿಕಾಳನ್ನು ನೋಯಿಸಲೆಂದೇ ಹುಟ್ಟಿರುವಂತಿರುವ ಸತ್ಯವತಿ ಇವರೆಲ್ಲರ ನೆನಪಾಗಿ ತಮ್ಮಿಬ್ಬರ ಪ್ರೀತಿ ಎಲ್ಲಿ ರೆಕ್ಕೆ ಕಳ್ಕೊಂಡು ಬಿಡುತ್ತೋ ಅನ್ನೋ ಆತಂಕ ದೀಪಿಕಾ ಮುಖದಲ್ಲಿ ಮನೆ ಮಾಡಿದೆ.

 

ದೀಪಿಕಾ ಅಪ್ಪ ಪುರುಷೋತ್ತಮ್ ಮುದ್ದಿನ ಮಗಳು. ಪುರುಷೋತ್ತಮ್ ಹಡಗಲಿ ಮಧ್ಯಮ ವರ್ಗದ ಉದ್ಯೋಗಿ. ಅವರ ಬಾಸ್ ವಿಶ್ವನಾಥ್ ಆನಂದ್. ಅಂತಿಂಥ ಬಾಸ್ ಅಲ್ಲ, ಸಿಎ ಸರ್ವೀಸ್ ಕೊಡೋದ್ರಲ್ಲಿ ಟಾಪ್‌ ಮೋಸ್ಟ್ ಕಂಪನಿಗೆ ಒಡೆಯ. ಥೇಟ್ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಥರ ದೀಪಿಕಾ ಲೈಫಲ್ಲಿ ಚೆಸ್ ಆಡೋಕೆ ಹೋಗಿ ಆಕೆಯ ಮನಗೆಲ್ಲೋ ಪ್ರಯತ್ನದಲ್ಲಿದ್ದಾನೆ. ಅಂದರೆ ಈ ವಿಶ್ವನಾಥ್‌ಗೆ ಪುರುಷೋತ್ತಮ್ ಮಗಳು ದೀಪಿಕಾ ಇಷ್ಟ ಆಗಿದ್ದಾಳೆ. ತನ್ನ ಸಿರಿವಂತಿಕೆಯ ಹಿಂದೆ ಸಾಕಷ್ಟು ಹುಡುಗಿಯರು ಬಿದ್ದಿರುವಾಗ ಅದ್ಯಾವುದನ್ನೂ ಬಯಸದ ನಿಷ್ಮಲ್ಮಶ ವ್ಯಕ್ತಿತ್ವದ ದೀಪಿಕಾ ಆತನ ಮನದನ್ನೆ ಆಗಿದ್ದಾಳೆ. ತನ್ನ ಶ್ರೀಮಂತಿಕೆಯನ್ನು ಮರೆಮಾಚಿ ತಾನೊಬ್ಬ ಡ್ರೈವರ್ ಅಂತ ಹೇಳುತ್ತಲೇ ಆಕೆಯ ಸ್ನೇಹ ಸಂಪಾದಿಸಿದ್ದಾನೆ ವಿಶ್ವನಾಥ್. ಈ ಹೊತ್ತಲ್ಲಿ ದೀಪಿಕಾಳಿಂದ ದೇವರ ಮುಂದೆ ಅಪ್ಪ ಪುರುಷೋತ್ತಮ್ ಒಂದು ಮಾತು ತಗೊಳ್ತಾರೆ. ಯಾವ ಕಾರಣಕ್ಕೂ ತಾನು ಪ್ರೀತಿಸಿ ಮದುವೆ ಆಗಲ್ಲ, ಅಪ್ಪ ಹೇಳಿದವರನ್ನೇ ಮದುವೆ ಆಗೋದು ಅಂತ ದೀಪಿಕಾ ಅಪ್ಪನಿಗೆ ಮಾತು ಕೊಟ್ಟಿದ್ದಾಳೆ. ಒಂದು ಟೈಮಲ್ಲಿ ಆನಂದ್ ಮುಚ್ಚಿಟ್ಟ ಸುಳ್ಳು ಹೊರ ಬೀಳುತ್ತೆ. ಆನಂದ್ ಡ್ರೈವರ್ ಅಲ್ಲ, ದೊಡ್ಡ ಕಂಪನಿ ಬಾಸ್ ಅನ್ನೋದು ದೀಪಿಕಾಗೆ ಗೊತ್ತಾಗುತ್ತೆ. ಆತ ತನ್ನನ್ನು ಪ್ರೀತಿಸ್ತಿರೋದು, ಆತನ ಪ್ರೀತಿಯಲ್ಲಿರುವ ಪ್ರಾಮಾಣಿಕತೆ ಎಲ್ಲವೂ ಇಷ್ಟ ಆಗುತ್ತೆ.

ಮಾಸ್ಟರ್ ಆನಂದ್ ಹೆಂಡ್ತಿ ಅಂತಿದ್ದವರು ಈಗ ಯಶಸ್ವಿನಿ ಅಂತಿದ್ದಾರೆ; ಸಂತಸದಲ್ಲಿ ರಿಯಾಲಿಟಿ ವಿನ್ನರ್!

ಆದರೆ ದೀಪಿಕಾ ಅಪ್ಪನಿಗೆ ಮಾತು ಕೊಟ್ಟಿದ್ದಾಳೆ. ಅವನ ಪ್ರೀತಿ ರಿಜೆಕ್ಟ್ ಆಗುತ್ತೆ. ದೀಪಿಕಾ ರಿಜೆಕ್ಟ್ ಮಾಡಿದ್ರೂ ಆತನ ಪ್ರೀತಿ ಬೆಳೆಯುತ್ತ ಹೋಗುತ್ತೆ. ಆಕೆಯನ್ನು ಹುಡುಕುತ್ತಾ ಆಕೆಯ ಊರಿಗೆ ಹೋಗುತ್ತಾನೆ. ಅಲ್ಲೊಂದು ಪ್ರೀತಿ. ವಿನಯ್ ಅನಿತಾ ಅನ್ನೋ ಪ್ರೇಮಿಗಳ ಪ್ರೀತಿ ಉಳಿಸೋದಕ್ಕೆ ಹೊರಟು ತಾವೇ ಮದುಮಕ್ಕಳಂತೆ ಡ್ರೆಸ್ ಹಾಕಿ ಅವರನ್ನು ಬೇರ್ಪಡಿಸಕೆ ಬಂದವರನ್ನು ಯಾಮಾರಿಸುತ್ತಾರೆ. ತೆಪ್ಪ ಏರಿ ಹಿಂಬಾಲಿಸಿಕೊಂಡು ಬಂದವರಿಂದ ತಪ್ಪಿಸಿಕೊಂಡು ದ್ವೀಪ ಸೇರ್ತಾರೆ. ಅಲ್ಲಿ ಆ ರಾತ್ರಿ ಇವರಿಬ್ಬರೇ ಉಳಿಯುತ್ತಾರೆ. ಆನಂದ್ ತನ್ನ ಒಂಟಿತನ, ಅನಾಥಪ್ರಜ್ಞೆ, ನೋವಿನ ಕತೆ ಹೇಳಿದಾಗ ದೀಪಿಕಾ ಕರಗುತ್ತಾ ಹೋಗುತ್ತಾಳೆ. ಈ ಜಗತ್ತಿನಲ್ಲಿ ದೀಪಿಕಾ ಇಲ್ಲದೇ ಬದುಕೋದಕ್ಕಿಂತ ಸಾಯೋದೇ ಬೆಟರ್ ಅಂದ ಆನಂದ್ ಮಾತಿಗೆ ದೀಪಿಕಾ ಪ್ರೀತಿಯೇ ಉತ್ತರವಾಗಿ ಆತನನ್ನು ಬದುಕಿಸುತ್ತೆ. ಅಲ್ಲಿಗೆ ಎಷ್ಟೋ ಕಾಲದಿಂದ ಸಿಕ್ಕಿಹಾಕಿಕೊಂಡಿದ್ದ ಪ್ರೀತಿ ಕಟ್ಟು ಬಿಚ್ಚಿ ಸ್ವಚ್ಛಂದವಾಗಿ ಹಾರಾಡುತ್ತೆ.

ಒಂದೊಳ್ಳೆ ಕಾರಣಕ್ಕೆ ಪ್ರೀತಿಯಿಂದ ಬೆಳೆಸಿದ ಕೂದಲು ದಾನ ಮಾಡಿದ ಅನುಪಮಾ ಗೌಡ

ಮರುವಿನ ದೀಪಿಕಾ ಹೊರಡೋಕೆ ದಾರಿಯಾಗುತ್ತೆ. ಆಕೆ ಮನೆಗೆ ಹಿಂತಿರುಗುತ್ತಾಳೆ. ಆದರೆ ಅವಳಿಗೀಗ ಒಂದು ಕಡೆ ಅಪ್ಪನಿಗೆ ಕೊಟ್ಟ ಮಾತು, ಇನ್ನೊಂದು ಕಡೆ ತನ್ನ ಪ್ರೀತಿ. ಅವಳೀಗ ಯಾವುದನ್ನು ಉಳಿಸಿಕೊಳ್ಳಲು ಯಾವುದನ್ನು ಬಿಡುತ್ತಾಳೆ. ತಾನು ಪ್ರೀತಿಸಿ ಮದುವೆ ಆಗಲ್ಲ ಅಂತ ಅಪ್ಪನಿಗೆ ಮಾತು ಕೊಟ್ಟಿದ್ದಾಳೆ. ನಾನು ನಿಮ್ಮನ್ನು ಪ್ರೀತಿಸ್ತೀನಿ, ಕೊನೆಯವರೆಗೂ ನಿಮ್ಮ ಜೊತೆಗೆ ಇರ್ತೀನಿ ಅಂತ ಆನಂದ್ ಗೂ ಹೇಳಿದ್ದಾಳೆ. ಅಲ್ಲಿಗೆ ದೀಪಿಕಾ ಅಪ್ಪನ ಮಾತುಳಿಸಿಕೊಂಡ ಆದರ್ಶ ಮಗಳಾಗ್ತಾಳಾ, ಇಲ್ಲ ಪ್ರೀತಿಯನ್ನು ಉಳಿಸಿಕೊಳ್ಳುವ ಆದರ್ಶ ಪ್ರೇಮಿಯಾಗ್ತಾಳಾ? ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವ ಈ ಸಂಬಂಧಗಳನ್ನು ಬೆಸೆದು ತನ್ನ ಎರಡೂ ಮಾತುಗಳನ್ನೂ ನಡೆಸಿಕೊಳ್ತಾಳಾ? ಸೀರಿಯಲ್ ಅಂದ್ಮೇಲೆ ಏನ್ ಬೇಕಾದ್ರೂ ಆಗಬಹುದು. ಅದೇನು ಆಗ್ಬಹುದು ಅನ್ನೋದನ್ನು ನೋಡೋಕೆ ಮುಂದಿನ ಎಪಿಸೋಡ್ ವರೆಗೂ ಕಾಯಬೇಕಷ್ಟೇ..

ಪತಿ ಚಂದನ್ ಶೆಟ್ಟಿನ cookie ಎಂದು ಕರೆದು ಮೊದಲ ದಿನವೇ ನಿವೇದಿತಾ ಗೌಡ ಟ್ರೋಲ್!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!