ನಮ್ಮ ಭಾಗ ಯಾರೋ ಕಿತ್ಕೊಳ್ತಿದ್ದಾರೆ ಅನ್ಸುತ್ತೆ; 13 inch ಕೂದಲ ದಾನ ಮಾಡಿದ ನಟಿ!

By Suvarna NewsFirst Published Apr 13, 2022, 12:14 PM IST
Highlights

 ಒಂದೊಳ್ಳೆ ಕೆಲಸಕ್ಕೆ ಕೂದಲು ದಾನ ಮಾಡಿದ ಅನುಪಮಾ ಗೌಡ. ಭಯ ಆಗುತ್ತಿದ್ದರೂ ಮನಸ್ಸಿಗೆ ನೆಮ್ಮದಿಯಿದೆ ಎಂದ ನಟಿ...

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಅನುಪಮಾ ಗೌಡ (Anupama Gowda) ಕೆಲವು ದಿನಗಳ ಹಿಂದೆ ತಮ್ಮ ಉದ್ದವಾದ ಕೂದಲನ್ನು ಕ್ಯಾನ್ಸರ್‌ ರೋಗಿಗಳಿಗೆ  ದಾನ ಮಾಡಿದ್ದಾರೆ. ಯೂಟ್ಯೂಬ್ ಲೋಕದಲ್ಲಿ ಆಕ್ಟೀವ್ ಆಗಿರುವ ಅನುಪಮಾ ಗೌಡ ಈ processನ ಸಂಪೂರ್ಣ ವಿಡಿಯೋವನ್ನು ಮಾಡಿ ಹಂಚಿಕೊಂಡಿದ್ದಾರೆ. ನೆಗೆಟಿವ್ ಮತ್ತು ಪಾಸಿಟಿವ್ ಕಾಮೆಂಟ್ಸ್ ಎದುರಿಸುತ್ತಿರುವ ಅನುಪಮಾ ತಲೆಯಲ್ಲಿ ಏನು ಓಡುತ್ತಿದೆ?

ವಿಠಲ್ ಮಲ್ಯ ರಸ್ತೆಯಲ್ಲಿರುವ ಸಲೂನ್‌ಗೆ ಭೇಟಿ ಕೊಟ್ಟು ಅನುಪಮಾ ಗೌಡ ತಮ್ಮ ಕೂದಲು ಕಟ್ ಮಾಡಿಸಿ ಆನಂತರ ಅದನ್ನು ಮನೆಗೆ ತಂದು ಸರಿಯಾದ ಕ್ರಮದಲ್ಲಿ ಪ್ಯಾಕ್ ಮಾಡಿ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡುವ ಸಂಸ್ಥಗೆ ಪರ್ಸಲ್ ಮಾಡಿದ್ದಾರೆ.  

'ಹೆಣ್ಣಾಗಲಿ ಗಂಡಾಗಲಿ ಅವರಿಗೆ ಕೂದಲೇ ಅಂದ ನಾವು ನಮ್ಮ ಕೂದಲನ್ನು ಪ್ರಾಣದಂತೆ ಪ್ರೀತಿ ಮಾಡ್ತೀವಿ ಏಕೆಂದರೆ ಅದು ನಮ್ಮಲ್ಲಿ ಒಂದು ಭಾಗ. ಈ ಸಲ ನಾನು ಜಾಸ್ತಿ ಕೇರ್ ಮಾಡಿ ಕೂದಲು ಬೆಳೆಸುತ್ತಿದ್ದೆ ತುಂಬಾ ಜನ ಮೆಸೇಜ್ ಮಾಡಿ ಯಾಕೆ ಅಷ್ಟು ಚೆನ್ನಾಗಿರುವ ಕೂದಲು ಕಟ್ ಮಾಡಿಸಿದ್ದು ಅಂತ ಕೇಳಿದ್ದಾರೆ. ಎಷ್ಟೊಂದು ಜನ ಚೆನ್ನಾಗಿಲ್ಲ ಅಂದಿದ್ದಾರೆ ಎಷ್ಟೊಂದು ಜನ ಚೆನ್ನಾಗಿದೆ ಅಂತಿದ್ದಾರೆ ಈ ಒಂದು ಕೆಲಸನ appreciate ಮಾಡಿದ್ದಾರೆ. ಪರ್ಸನಲ್ ಆಗಿ ನನಗೆ ಏನೆಲ್ಲಾ ಎಮೋಷನ್ ಫೀಲ್ ಆಯ್ತು ಅಂತ ನಿಮ್ಮ ಜೊತೆ ಹಂಚಿಕೊಳ್ಳಬೇಕು ಅಂದುಕೊಂಡಿದ್ದೀನಿ' ಎಂದು ಅನುಪಮಾ ಮಾತನಾಡಿದ್ದಾರೆ.

ಹತ್ತು ವರ್ಷಗಳಿಂದ ಪ್ಲ್ಯಾನ್ ಮಾಡುತ್ತಿದ್ದ ಗೋವಾ ಟ್ರಿಪ್‌ಗೆ ಹೋದಾ ಕಿರುತೆರೆ ನಟಿಯರು!

'ಈ ಸಲ ನಾನು ಕೂದಲು ಬೆಳೆಸಿದ್ದೇ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಬೇಕು ಎಂದು. ಮನೆಯಿಂದ ಧೈರ್ಯ ಮಾಡಿಕೊಂಡು ಹೋದೆ ಏಕೆಂದರೆ ಈ ನಿರ್ಧಾರ ಮಾಡುವುದಕ್ಕೆ ಮೂರು ದಿನಗಳು ಬೇಕಾಗಿತ್ತು. ಇಷ್ಟು ಶಾರ್ಟ್‌ ಆಗಿ ನನ್ನ ಲೈಫ್‌ನಲ್ಲಿ ಕಟ್ ಮಾಡಿಸಿರಲಿಲ್ಲ ಹೇಗೆ ಕಾಣುತ್ತೆ ಹೇಗೆ ಇರುತ್ತೆ ಅನ್ನೋದಕ್ಕಿಂತ ಶೂಟಿಂಗ್‌ಗೆ ಏನಾಗಬಹುದು ಅನ್ನೋದು ತೆಲೆಗೆ ಬರುತ್ತೆ. ಮೊದಲನೇ ಸಲ ಅವರು ಕೂದಲು ಕಟ್ ಮಾಡಿದಾಗ ನಮ್ಮ ಭಾಗ ಒಂದನ್ನು ಯಾರೂ ಕಿತ್ಕೊಳ್ತಿದ್ದಾರೆ ಅನ್ಸುತ್ತೆ ನನಗೂ ಅದೇ ಅಯ್ತು. ಸಂಪೂರ್ಣವಾಗಿ ಕಟ್ ಮಾಡಿದ ಮೇಲೆ ರಿಯಾಲಿಟಿ ಅರ್ಥ ಆಯ್ತು ಕೂದಲು ವಾಪಸ್ ಅಂಟಿಸಿಕೊಳ್ಳುವುದಕ್ಕೆ ಆಗೋಲ್ಲ ಆದರೆ ವಾಪಸ್ ಬರುತ್ತೆ ಅಂತ. ಮೂರ್ನಾಲ್ಕು ದಿನ ಬೇಕಾಯಿತ್ತು ಈ ಶಾರ್ಟ್‌ ಕೂದಲಿಗೆ ಹೊಂದಿಕೊಳ್ಳುವುದಕ್ಕೆ' ಎಂದು ಅನುಪಮಾ ಹೇಳಿದ್ದಾರೆ.

'ಈಗ ಕಟ್ ಮಾಡಿಸಿದ ಮೇಲೆ ಮತ್ತೆ ಕೂದಲು ಎಷ್ಟು ಉದ್ದ ಬೇಕಿದ್ದರೂ ಬೆಳೆಸಬಹುದು ಯಾವ ಸ್ಟೈಲ್ ಬೇಕಿದ್ದರೂ ಮಾಡಬಹುದು ಯಾವ ಕಲರ್ ಬೇಕಿದ್ದರೂ ಹಾಕಿಸಿಕೊಳ್ಳಬಹುದು ಆದರೆ ನಮ್ಮ ಕ್ಯಾನ್ಸರ್‌ ರೋಗಿಗಳು ರಿಯಲ್ ಫೈಟರ್‌ಗಳು. ನಮ್ಮ ಕೂದಲು ಕೊಟ್ಟು ಅವರ ಮುಖದಲ್ಲಿ ನಗು ತರುವುದು ನಮಗೆ ಸಿಗುವ ರಿಯಲ್ ಸಂತೋಷ. ಸುಮಾರು ಹೆಣ್ಣುಮಕ್ಕಳು ಫುಲ್ ಬಾಲ್ಡ್‌ ಮಾಡಿಸಿಕೊಳ್ಳುತ್ತಾರೆ ಇವರೆಲ್ಲಾ ನನಗೆ ಸ್ಪೂರ್ತಿ. ನನ್ನ ಸ್ನೇಹಿತೆ ಕೃಷಿ ಮೂಲಕ  Bengaluru hair donation ಇನ್‌ಸ್ಟಾಗ್ರಾಂ ಪೇಜ್ ಸಿಗ್ತು ಅವರಿಗೆ ಸಂಪರ್ಕ ಮಾಡಿ ಹೇಗೆ ಕೂದಲು ಕೊಡಬೇಕು ಎಂದು ತಿಳಿದುಕೊಂಡೆ. ಕೂದಲನ್ನು ಮನೆಗೆ ತಂದು ಜಡೆ ತರ ಮಾಡಿ ಪ್ಯಾಕ್ ಮಾಡಿ ಅವರಿಗೆ ಪಾರ್ಸಲ್ ಮಾಡಿದೆ. ನಿಮಗೆ ಕೂದಲು ದಾನ ಮಾಡಿದ ಸರ್ಟಿಫಿಕೇಟ್ ಬೇಕು ಅಂದ್ರೂ ಕೊಡುತ್ತಾರೆ' ಎಂದಿದ್ದಾರೆ ಅನುಪಮಾ.

 

click me!