ಪ್ರಭಾವಿ ವ್ಯಕ್ತಿಗಳನ್ನು ಡೇಟ್ ಮಾಡಿರುವುದಾಗಿ ಒಪ್ಪಿಕೊಂಡ ನಟಿ ಮಂದನಾ!

By Suvarna News  |  First Published Apr 13, 2022, 3:42 PM IST

ಗೋಲ್ಡ್‌ ಡಿಗ್ಗರ್ ಎಂದ ಪ್ರತಿ ಸ್ಪರ್ಧಿಗಳ ಮುಖಕ್ಕೆ ಸತ್ಯ ಹೇಳಿದ ನಟಿ ಮಂದನಾ ಕರೀಮಿ. ಶಾಕ್ ಆದ ವೀಕ್ಷಕರ ರಿಯಾಕ್ಷನ್ ಇದು....


ಕಂಗನಾ ರಣಾವತ್ ಮತ್ತು ಏಕ್ತಾ ಕಪೂರ್ ಡೈರೆಕ್ಷನ್‌ನಲ್ಲಿ ಮೂಡಿ ಬರುತ್ತಿರುವ ಲಾಕಪ್ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ಕರಾಳ ಸತ್ಯಗಳನ್ನು ಹೊರ ಹಾಕುತ್ತಿದೆ. ಚಾರ್ಚ್‌ಶೀಟ್‌ನಿಂದ ಸೇವ್ ಆಗಲು ಒಂದು ಗಿಮಿಕ್ ಮಾಡಬೇಕಾದರೆ ಹೊರಡಗೆ ಮಾಡಿರುವ ಫೇಮ್‌ ಉಳಿಸಿಕೊಳ್ಳಲು ಮತ್ತೊಂದು ಗೇಮ್ ಶುರು ಮಾಡಬೇಕಿದೆ. ಇಡೀ ಮನೆಗೆ ಟಾರ್ಗೆಟ್ ಆಗಿರುವ ಮಂದನಾ ಕರೀಮಿಗೆ ಈಗ ಗೋಲ್ಡ್‌ ಡಿಗ್ಗರ್ ಎನ್ನುವ ಕಿರೀಟ ಸಿಕ್ಕಿರುವುದು ವೀಕ್ಷಕರಿಗೆ ಶಾಕ್ ತಂದಿದೆ.

ಮಂದನಾ ಲೀವಿಂಗ್ ಏರಿಯಾದಲ್ಲಿ ಕುಳಿತುರುವಾಗ ಅಜ್ಮಾ ಫಲ್ಲಾಹ್ ಅಲ್ಲಿಗೆ ಬಂದು ಜನರು ನಿನ್ನ ವ್ಯಕ್ತಿತ್ವದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ ನೀನು ಬೇರೆ ರೀತಿಯ ವ್ಯಕ್ತಿ ಎಂದು ಹೇಳುತ್ತಿದ್ದಾರೆ ಹುಷಾರು ಎಂದು ಹೇಳುತ್ತಾನೆ. ತಕ್ಷಣವೇ ಪಕ್ಕ ಕುಳಿತಿದ್ದ ಸೈಶಾ ಶಿಂಧೆ ಆಕೆ ಯಾರನ್ನ ಬೇಕಿದ್ದರೂ ಡೇಟ್ ಮಾಡಬಹುದು ಅವರಿಗೇನು ಪ್ರಾಬ್ಲಂ? ಎಂದು ಪ್ರಶ್ನಿಸುತ್ತಾಳೆ. ಕೋಪ ಮಾಡಿಕೊಂಡು ಅಜ್ಮಾ ಫಲ್ಲಾಹ್ ನೇರವಾಗಿ ಹೇಳುತ್ತಾನೆ 'ಮಂದನಾ ಕೆಟ್ಟವಳು ಆಕೆ ಗೋಲ್ಡ್‌ ಡಿಗ್ಗರ್ ಎಂದು ಅನೇಕರು ಕಾಮೆಂಟ್ ಮಾಡ್ತಿದ್ದಾರೆ ಆಕೆ ಇದರ ಬಗ್ಗೆ ರಿಯಾಕ್ಟ ಮಾಡದೆ ಸುಮ್ಮನೆದ್ದರೆ ಸತ್ಯ ಅಂದುಕೊಳ್ಳುತ್ತಾರೆ' ಎಂದು ಹೇಳುತ್ತಾನೆ.

Tap to resize

Latest Videos

'ಜನರು ನನ್ನನ್ನು ನೋಡಿದ ತಕ್ಷಣ ನಾನು ತುಂಬಾನೇ ಫ್ಯಾನ್ಸಿ ಅಂದುಕೊಳ್ಳುತ್ತಾರೆ ಅದರೆ ನಾನು ನನ್ನ ಹಣದಿಂದ ನನ್ನನ್ನು ನಾನು ನೋಡಿಕೊಳ್ಳುತ್ತಿರುವುದು.ನಾನು ಸಂಪಾದನೆ ಮಾಡಿರುವ ಹಣ. ಇಲ್ಲಿ ಇರುವವರಿಗೆ ನನ್ನ ಡೇಟಿಂಗ್ ಬಗ್ಗೆ ಚಿಂತೆ ಆದರೆ ಅದೂ ಕ್ಲಾರಿಟಿ ನೀಡುತ್ತೀನಿ. ಹೌದು ನಾನು ಕೆಲವು ಪ್ರಭಾವಿ ವ್ಯಕ್ತಿಗಳನ್ನು ಡೇಟ್ ಮಾಡಿದ್ದೀನಿ ಸತ್ಯ ಒಪ್ಪಿಕೊಳ್ಳುತ್ತೀನಿ ಅದರೆ ಅದು ಹಣಕ್ಕೆ ಅಂದರೆ ಮಾತ್ರ ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಸಾಕ್ಷಿ ಮತ್ತು ರೆಕಾರ್ಡ್‌ ನನ್ನ ಬಳಿ ಇದೆ ನಾನು ಪ್ರಭಾವಿ ವ್ಯಕ್ತಿಗಳ ಜೊತೆ ಬ್ರೇಕಪ್ ಮಾಡಿಕೊಳ್ಳುವುದಕ್ಕೆ ಕಾರಣ ಹಣ ಅಲ್ಲ ಅವರ ಸಮಯ ಎಂದು. ಇನ್ನೂ ಸತ್ಯ ಹೇಳಬೇಕು ಅಂದ್ರೆ ನಾನು ಅದೆಷ್ಟೊ ಕಳೆದುಕೊಂಡಿರುವೆ. ನನಗೆ ಕೆಟ್ಟ ಹೆಸರು ಬಂದಿದೆ ನನ್ನ ಜೀವನ ಹಾಳಾಗಿದೆ. ನನ್ನ ಎಕ್ಸ್‌ ಮಾಡಿರುವ ರೀತಿನೇ' ಎಂದು ಮಂದನಾ ಜೋರಾಗಿ ಹೇಳಿದ್ದಾರೆ.

ಖ್ಯಾತ ನಿರ್ದೇಶಕನ ಜೊತೆ ಅಫೇರ್ ಇತ್ತು, ಗರ್ಭಿಣಿಯಾದೆ ಎಂದು ದೂರ ಸರಿದ; ಕಣ್ಣೀರಿಟ್ಟ ಮಂದನಾ ಕರೀಮಿ

ಮಂದನಾ ಮಾತುಗಳನ್ನು ಕೇಳಿ ಆಲಿ ಮರ್ಚೆಂಟ್ ವಿಚಿತ್ರವಾಗಿ ವರ್ತಿಸುತ್ತಾನೆ. 'ನಾನು ಏನು ಮಾಡಿದ್ದೀನಿ ಅದು ನನಗೆ ಮಾತ್ರ ಗೊತ್ತು.ಯಾರು ನನ್ನ ಇಷ್ಟ ಪಟ್ಟಿದ್ದಾರೆ ನಾನು ಯಾರನ್ನ ಇಷ್ಟ ಪಟ್ಟಿದ್ದೀನಿ ನನ್ನ ಸಂಬಂಧ ಹೇಗಿತ್ತು ಎನ್ನುವುದರ ಬಗ್ಗೆ ಯಾರು ಮಾತನಾಡುವುದು ಬೇಡ' ಎಂದು ಎಲ್ಲರ ಎದುರು ಕ್ಲಾರಿಟಿ ಕೊಟ್ಟಿದ್ದಾರೆ. 

ಈ ಘಟನೆ ನಡೆದು ಎಲ್ಲಾ ಕೂಲ್ ಆದ ಬಳಿ ಆಲಿ ಕ್ಯಾಮೆರಾ ಎದುರು ಬಂದು ಮಂದನಾ ಬಗ್ಗೆ ಮಾತನಾಡುತ್ತಾರೆ. 'ನಾನು ಆಕೆಯನ್ನು ನೇರವಾಗಿ ಗೋಲ್ಡ್‌ ಡಿಗರ್ ಎಂದು ಕರೆಯುತ್ತಿಲ್ಲ ಆದರೆ ಆ ರೀತಿ ಮಾಡುವ ಎಲ್ಲಾ ಲಕ್ಷಣಗಳು ಆಕೆಗೆ ಇದೆ. ಗಾಳ ಹಾಕುವುದಕ್ಕೆ ಕಾಯುತ್ತಾಳೆ, ಜನರಿಂದ ಸಿಂಪತಿ ಗಿಟ್ಟಿಸಿಕೊಳ್ಳುವುದೇ ಆಕೆ ಕೆಲಸ. ಹಣ ಇವರುವ ಜನರಿಗೆ ಕ್ಲೋಸ್ ಆಗುತ್ತಾಳೆ ತಮ್ಮ ಕಷ್ಟಗಳನ್ನು ಹಂಚಿಕೊಂಡು ಬೆಸ್ಟ್‌ಫ್ರೆಂಡ್ ಆಗಿ ಪ್ರೀತಿ ಶುರು ಮಾಡಿ ಹಣ ಪಡೆದುಕೊಳ್ಳುತ್ತಾಳೆ. ಇದನ್ನು ಜೀಶನ್‌ ಮತ್ತ ನನ್ನ ಜೊತೆ ಟ್ರೈ ಮಾಡಿದಲು ಆದರೆ ಆಗಲಿಲ್ಲ' ಎಂದು ಹೇಳಿದ್ದಾನೆ.

ಗೆಲ್ಲಬೇಕು ಅಂದ್ರೆ ನೀನು ಬೇರೆಯವರ *** ನೆಕ್ಕುತ್ತೀಯಾ; ಲಾಕಪ್‌ ಶೋನಲ್ಲಿ ಫುಲ್ ಬೀಪ್ ಪದಗಳು!

ಆಲಿ ಕ್ಯಾಮೆರಾ ಜೊತೆ ಮಾತನಾಡುವುದನ್ನು ನೋಡಿ ಮತ್ತೊಂದು ಕ್ಯಾಮೆರಾದಲ್ಲಿ ಮಂದನಾ ಮಾತನಾಡುತ್ತಾಳೆ. 'ಅಲಿ ಅಂತ ಜನರು ನಮ್ಮ ಸುತ್ತ ಇರುವುದು ನಮ್ಮ ಬಗ್ಗೆ ಗಾಸಿಪ್ ಮಾಡುವುದಕ್ಕೆ. ಸಾಧನೆ ಮಾಡಲು ಬಂದಿರುವ ಎಂದು ಸುಳ್ಳು ಹೇಳಿ ಇಲ್ಲಿ ತನ್ನ ಮಾಜಿ ಪತ್ನಿಗೆ ಸಹಾಯ ಮಾಡುತ್ತಿದ್ದಾನೆ. ಸಾರಾ ದೂರ ಮಾಡಿದ ಮೇಲೆ ಬೇರೆಯವರನ್ನು ಬಳಸಿಕೊಳ್ಳುತ್ತಿದ್ದಾನೆ. ಇಂತ ಜನರು ಜೀವನದಲ್ಲಿ ಉದ್ದಾರ ಆಗುವುದಿಲ್ಲ' ಎಂದು ಮಂದನಾ ಹೇಳಿದ್ದಾಳೆ.

click me!