ರೀಲ್ಸ್ ಸ್ಟಾರ್ ಸುಷ್ಮಿತಾ ಪ್ರಭು ಎನ್ನುವವರ ಹೆಸರಲ್ಲಿ ನಕಲಿ ಖಾತೆಯನ್ನು ತೆರೆದು ನಟ ದರ್ಶನ್ ವಿರುದ್ಧ ಕೆಟ್ಟ ಸಂದೇಶಗಳನ್ನು ಹಾಕಲಾಗುತ್ತಿದೆ.
ಬೆಂಗಳೂರು (ಆ.18): ರೀಲ್ಸ್ ಸ್ಟಾರ್ ಸುಷ್ಮಿತಾ ಪ್ರಭು ಎನ್ನುವವರ ಹೆಸರಲ್ಲಿ ನಕಲಿ ಖಾತೆಯನ್ನು ತೆರೆದು ನಟ ದರ್ಶನ್ ವಿರುದ್ಧ ಕೆಟ್ಟ ಸಂದೇಶಗಳನ್ನು ಹಾಕಲಾಗುತ್ತಿದೆ. ಈ ಬಗ್ಗೆ ಸುಷ್ಮಿತಾ ಪ್ರಭು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡು ಅಳಲು ತೋಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಫೇಕ್ ಐಡಿ ಕ್ರಿಯೇಟ್ ಮಾಡಿ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದ ಎಂಬ ಆರೋಪದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಈಗ ಅದೇ ರೀತಿ ಮತ್ತೊಬ್ಬ ವ್ಯಕ್ತಿ ರೀಲ್ಸ್ ಸ್ಟಾರ್ ಸುಷ್ಮಿತಾ ಪ್ರಭು ಎನ್ನುವವರ ಹೆಸರಲ್ಲಿ ನಕಲಿ ಖಾತೆಯನ್ನು ತೆರೆದು ನಟ ದರ್ಶನ್ ವಿರುದ್ಧ ಕೆಟ್ಟ ಸಂದೇಶಗಳನ್ನು ಹಾಕುತ್ತಿದ್ದು, ಯುವತಿ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾಳೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಯುವತಿ, ನನ್ನ ನೇಮ್‌ನಲ್ಲಿ ಸುಶ್ಮಿತಾಪ್ರಭು247 (Sushmithaprabhu247) ಎನ್ನುವ ಫೇಕ್ ಐಡಿ ಕ್ರಿಯೇಟ್ ಮಾಡಲಾಗಿದೆ. ಇದು ನಾನಲ್ಲ, ಇದು ನನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲ. ಯಾವನೋ ನನ್ನ ಹೆಸರಿನಲ್ಲಿ ಮುಖ ತೋರಿಸಲು ಹೆದರಿಕೊಳ್ಳುವ ಒಬ್ಬ **** ನನ್ನ **** ಮಾಡಿರುವ ಐಡಿ ಆಗಿದೆ. ಅವನ ಉದ್ದೇಶ ಏನೆಂತ ಹೇಳಿದರೆ ಡಿ ಬಾಸ್ (ನಟ ದರ್ಶನ್) ಕೆಟ್ಟ ಕೆಟ್ಟದಾಗಿ ನ್ಯೂಸ್‌ಗಳನ್ನು ಹರಡುವುದಾಗಿದೆ. ಹೇಗೂ ಅವನಿಗೆ ಮುಖ ತೋರಿಸುವ ಯೋಗ್ಯತೆಯಿಲ್ಲ. ಕೇವಲ ನನ್ನ ಹೆಸರಿನಲ್ಲಿ ಮಾತ್ರವಲ್ಲ, ನನ್ನದೇ ತರಹ ತುಂಬಾ ಹುಡುಗಿಯರ ಹೆಸರಿನಲ್ಲಿ ಹೀಗೆ ನಕಲಿ ಖಾತೆಯನ್ನು ತೆರೆದು ಸಂದೇಶ ಮಾಡುತ್ತಿದ್ದಾನೆ. ಇಲ್ಲಿ ಇಂತಹ ನಕಲಿ ಐಡಿ ತಯಾರಿಸಿ ದರ್ಶನ್ ಹೆಸರನ್ನು ಹಾಳು ಮಾಡುವುದರ ಜೊತೆಗೆ ಹುಡುಗಿಯರ ಹೆಸರು ಹಾಗೂ ಫೋಟೋಗಳನ್ನು ಬಳಸಿ ಅವರ ಹೆಸರು ಹಾಗೂ ಮರ್ಯಾದೆಯನ್ನು ಹಾಳು ಮಾಡುತ್ತಿದ್ದಾರೆ.
ಬೆಂಗಳೂರು ವಿದ್ಯಾರ್ಥಿನಿ ರೇಪ್ ಕೇಸ್‌ಗೆ ಟ್ವಿಸ್ಟ್; ಬೈಕ್‌ನಲ್ಲಿ ಡ್ರಾಪ್ ಕೊಡೋದಾಗಿ ಶೆಡ್‌ಗೆ ಕರೆದೊಯ್ದ ಕಾಮುಕ
ನಾನು ಈಗ ಏನು ಮಾಡಬೇಕು ಗೊತ್ತಾಗುತ್ತಿಲ್ಲ. ನಾನೀನು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕಾ.? ಅಥವಾ ಸೈಬರ್ ಕ್ರೈಮ್ ಇಲಾಖೆಯ ಪೊಲೀಸರಿಗೆ ದೂರು ನೀಡಬೇಕಾ ಗೊತ್ತಾಗುತ್ತಿಲ್ಲ. ಯಾರು ಇಂತಹ ಕೃತ್ಯ ಮಾಡುವವರ ಬಗ್ಗೆ ಬೇಕ ಕ್ರಮ ತೆಗೆದುಕೊಳ್ಳುತ್ತಾರಾ ತಿಳಿಸಿ. ಈಗಾಗಲೇ ಇಂತಹ ನಕಲಿ ಐಡಿ ಸೃಷ್ಟಿಸಿದ್ದಕ್ಕೆ ಇನ್‌ಸ್ಟಾಗ್ರಾಮ್ ಆಪ್ ಮಾಲೀಕರಾದ ಮೆಟಾ ಸಂಸ್ಥೆಯನ್ನು ಸಂಪರ್ಕ ಮಾಡಿ ನನಗೆ ಸಾಕಾಗಿ ಹೋಗಿದೆ. ಅವರು ಯಾವುದಕ್ಕೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಅವರು ಒಂದು ರಿಪ್ಲೈ ಮಾಡುವುದಕ್ಕೆ 2 ತಿಂಗಳು ತೆಗೆದುಕೊಳ್ಳುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇಂತಹ ನಕಲಿ ಇನ್‌ಸ್ಟಾಗ್ರಾಮ್ ಐಡಿಗಳನ್ನು ಕೆಟ್ಟದಾಗಿ ನ್ಯೂಸ್‌ಗಳನ್ನು ಹರಡುತ್ತಿದ್ದು, ಮನೆಯವರು, ಸಂಬಂಧಿಕರು ಹಾಗೂ ಸ್ನೇಹಿತರಿಂದ ಎಚ್ಚರಿಕೆಯಿಂದ ಇರುವಂತೆ ಸಲಹೆ ಬಂದಿವೆ. ಇದರಿಂದ ನನಗೆ ನೆಮ್ಮದಿ ಇಲ್ಲದಂತಾಗಿದೆ. ಕೂಡಲೇ ಇಂತಹ ನಕಲಿ ಖಾತೆಗಳಿಂದ ಮುಕ್ತಿ ಬೇಕು ಎನ್ನುವಂತೆ ಮನವಿ ಮಾಡಿಕೊಂಡಿದ್ದಾರೆ.
ನಿವೇದಿತಾ ಗೌಡಗೆ ಬಂದಂತೆಯೇ ನಟಿ ಶೋಭಿತಾಗೂ ನೆಟ್ಟಿಗರ ಕೆಟ್ಟ ಕಾಮೆಂಟ್
ಇನ್ನು ಸುಶ್ಮಿತಾ ಅವರ ವಿಡಿಯೋಗೆ ಕಾಮೆಂಟ್ ಮಾಡಿದ ನೆಟ್ಟಿಗನೊಬ್ಬ 'ಧೈರ್ಯವೇ ಧನಲಕ್ಷ್ಮಿ. ಇವತ್ತು ವರಮಹಾಲಕ್ಷ್ಮಿ ಹಬ್ಬ ನಿಮ್ಮ ಕೂಗು ದೇವರಿಗೆ ಮುಟ್ಟಿದೆ. ಅವನನ್ನು ಇಲ್ಲ ಅವಳನ್ನು ಆದಷ್ಟು ಬೇಗ ಶೆಡ್ಡಿಗೆ ಹೋಗುವಂತಾಗಲಿ'.. ಎಂದು ಧೈರ್ಯ ಹೇಳುವ ಜತೆಗೆ ನಗೆ ಚಟಾಕಿ ಹಾರಿಸಿದ್ದಾನೆ. ಮತ್ತೊಬ್ಬ ರು ನೀವು ಹೆದರಬೇಡಿ ಸಿಸ್ಟರ್ ನಿಮ್ಮೊಂದಿಗೆ ನಾವಿರುತ್ತೇವೆ. ನೀವು ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ್ ಕೊಡಿ ಎಂದು ಸಲಹೆ ನೀಡಿದ್ದಾರೆ. ಇಂತಹ ಕಿಡಿಗೇಡಿಗಳ ಕೃತ್ಯಕ್ಕೆ ಕ್ರಮ ಕೈಗೊಳ್ಳುವ ಕುರಿತು ಪೊಲೀಸ್ ಇಲಾಖೆ ಒಂದು ಸ್ಪಷ್ಟ ಸುತ್ತೋಲೆಯನ್ನು ಅಥವಾ ಸಹಾಯವಾಣಿಯನ್ನು ನೀಡಬೇಕು ಎಂದು ನೆಟ್ಟಿಗರಿಂದ ಮನವಿ ಮಾಡಲಾಗಿದೆ.
Cinema Hungama: ದರ್ಶನ್ & ಪವಿತ್ರ ಗೌಡಗೆ ಮಾಸಿದ ಹಬ್ಬ!