ವೇದಿಕೆ ಮೇಲೆ ಪ್ರೇಮಲೋಕ ಸೃಷ್ಟಿಸಿ ಕಿಚ್ಚು ಹೊತ್ತಿಸಿದ ಕ್ರೇಜಿಸ್ಟಾರ್​ ರವಿಚಂದ್ರನ್​- ರಚಿತಾ ರಾಮ್​

By Suvarna News  |  First Published Feb 9, 2024, 3:42 PM IST

ಡ್ರಾಮಾ ಜ್ಯೂನಿಯರ್ಸ್​ ವೇದಿಕೆ ಮೇಲೆ ಪ್ರೇಮಲೋಕವನ್ನು ಸೃಷ್ಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ ಕ್ರೇಜಿ ಸ್ಟಾರ್​ ರವಿಚಂದ್ರನ್​ ಮತ್ತು ಡಿಂಪಲ್​ ಕ್ವೀನ್​ ರಚಿತಾ ರಾಮ್​
 


ಕ್ರೇಜಿಸ್ಟಾರ್ ರವಿಚಂದ್ರನ್ ಎಂದರೇನೇ ಪ್ರೇಮದ ನೆನಪಾಗುತ್ತದೆ. 1987ರಲ್ಲಿ ಬಿಡುಗಡೆಯಾಗಿದ್ದ ಅವರ  ಪ್ರೇಮಲೋಕ ಚಿತ್ರವನ್ನು ಪ್ರೀತಿಸುವ ಜನ ಇಂದಿಗೂ ದೊಡ್ಡ ಮಟ್ಟದಲ್ಲಿಯೇ ಇದ್ದಾರೆ. ಅದರಲ್ಲಿಯೂ ಪ್ರೇಮಲೋಕದಿಂದ ಬಂದ ಪ್ರೇಮದ ಸಂಗೀತ... ಹಾಡು ಇಂದಿಗೂ ಎಲ್ಲರ ನಾಲಿಗೆಯ ಮೇಲೆ ಹರಿದಾಡುತ್ತದೆ. ಇದೀಗ ರವಿಚಂದ್ರನ್​ ಅವರು ಪ್ರೇಮಲೋಕ ಪಾರ್ಟ್​ 2 ಕುರಿತೂ   ಹಂಪಿ ಉತ್ಸವದಲ್ಲಿ ಮಾತನಾಡಿದ್ದರು. ಅತಿಥಿಯಾಗಿ ಪಾಲ್ಗೊಂಡಿದ್ದ ಅವರು,  ತಮ್ಮ ಪ್ರೇಮಲೋಕ 2 ಚಿತ್ರದ ಕನಸನ್ನು ಹೇಳಿದ್ದರು.  ಈ ಸಿನಿಮಾದಲ್ಲಿ  25 ಹಾಡುಗಳು ಇರಲಿವೆ ಎಂದಿದ್ದರು.   

37 ವರ್ಷದ ಬಳಿಕ ಮತ್ತೆ ಪ್ರೇಮಲೋಕ ಕಟ್ಟಿಕೊಡುವೆ ಎಂದು ಹೇಳಿ ಪ್ರೇಕ್ಷಕರಿಗೆ ಥ್ರಿಲ್ ಮೂಡಿಸಿದ್ದರು. ನಾನು ಕಳೆದ ಒಂದು ವರ್ಷದಿಂದ ಸುಮ್ಮನೆ ಕುಳಿತಿಲ್ಲ. ಮತ್ತೊಂದು ಪ್ರೇಮಲೋಕ ಸಿನಿಮಾ ಮಾಡುತ್ತೇನೆ. ಪ್ರತಿ ಮನೆ ಮನೆಯಲ್ಲಿ ಪ್ರೇಮಲೋಕ ವೀಕ್ಷಿಸುವಂತಹ ಸಿನಿಮಾ ಮಾಡುವೆ ಎಂದಿದ್ದರು. ನಾನು ನಿಮಗೆ ಒಂದು ಮಾತು ಕೊಡುತ್ತೇನೆ. ಮುಂದಿನ ವರ್ಷದೊಳಗೆ ನೀವು ಇಷ್ಟ ಪಡುವ ಪ್ರೇಮಲೋಕ ಚಿತ್ರ ಮಾಡುವೆ ಎಂದಿದ್ದರು. ಇದೀಗ 62 ವರ್ಷದ ರವಿಚಂದ್ರನ್​ ಅವರು ಡಿಂಪಲ್​ ಕ್ವೀನ್​ ರಚಿತಾ ರಾಮ್​ ಜೊತೆಗೆ ಪ್ರೇಮಲೋಕದ ಹಾಡಿನ ಮೂಲಕ ಡ್ರಾಮಾ ಜ್ಯೂನಿಯರ್ಸ್​ ವೇದಿಕೆಯಲ್ಲಿ ಕಿಚ್ಚು ಹೊತ್ತಿಸಿದ್ದಾರೆ. ಬಂದ್ಲು ಸಾರ್​... ಶಕುಂತಲಾ ಹಾಡಿಗೆ ರಚಿತಾ ರಾಮ್​ ಮತ್ತು ರವಿಚಂದ್ರನ್​ ನಟಿಸಿದ್ದು, ಫ್ಯಾನ್​ ಇದನ್ನು ನೋಡಿ ಫಿದಾ ಆಗಿದ್ದಾರೆ.

Tap to resize

Latest Videos

ಅಮೃತಧಾರೆಗೆ ನಟಿ ಸಪ್ತಮಿ ಗೌಡ ಎಂಟ್ರಿ! ಭೂಮಿಕಾ ತಂಗಿ ಜೊತೆ ಜೈದೇವನ ಮದ್ವೆ- ಇದೇನಿದು?
 
ಅಂದಹಾಗೆ, ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಮಕ್ಕಳು ಭರ್ಜರಿಯಾಗಿ ಮನರಂಜನೆ ನೀಡುವ ‘ಡ್ರಾಮಾ ಜೂನಿಯರ್ಸ್’ (Drama Juniors) ರಿಯಾಲಿಟಿ ಶೋ 4ನೇ ಸೀಸನ್ ಮುಗಿಸಿ 5ನೇ ಸೀಸನ್​ ಆರಂಭವಾಗಿದೆ.   ಸತತ 23 ವಾರಗಳ ಕಾಲ ಕರುನಾಡನ್ನು ರಂಜಿಸಿತ್ತು ಕಳೆದ ಸೀಸನ್​,  ‘ಡ್ರಾಮಾ ಜ್ಯೂನಿಯರ್ಸ್​ ಸೀಸನ್​ 4’ ವಿನ್ನರ್​  ಆಗಿದ್ದವರು ಕುಂದಾಪುರದ ಸಮೃದ್ಧಿ ಎಸ್. ಮೊಗವೀರ್. ಈಕೆಗೆ ಟ್ರೋಫಿ ಜೊತೆಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗಿತ್ತು. ಚಾಮರಾಜನಗರದ ಗೌತಮ್ ರಾಜ್ ಮತ್ತು ಉಡುಪಿಯ ಸಾನಿಧ್ಯ ಆಚಾರ್ ಸಮಬಲ ಸಾಧಿಸಿಕೊಂಡು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
  
ಕನ್ನಡ ಚಿತ್ರರಂಗಕ್ಕೆ ಹತ್ತು ಹಲವು ಬಾಲ ಕಲಾವಿದರನ್ನು ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಆರಂಭವಾದ ಡ್ರಾಮಾ ಜ್ಯೂನಿಯರ್ಸ್ ಶೋ ಯಶಸ್ವಿಯಾಗಿ ಹಲವು ಪ್ರತಿಭೆಗಳನ್ನು ಕರ್ನಾಟಕಕ್ಕೆ ಪರಿಚಯಿಸಿದೆ. ಇದೀಗ ಐದನೇ ಸೀಸನ್​ನಲ್ಲಿ ಕೂಡ ಮಕ್ಕಳು ಭರ್ಜರಿಯಾಗಿ ಪ್ರೇಕ್ಷಕರಿಗೆ ಎಂಟರ್​ಟೇನ್​ಮೆಂಟ್​ ನೀಡುತ್ತಿದ್ದಾರೆ. ಕಳೆದ ನವೆಂಬರ್​ 18ರಿಂದ ಸೀಸನ್​ 5  ಶುರುವಾಗಲಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಆಡಿಷನ್ ನಡೆಸಲಾಗಿತ್ತು. ತೀರ್ಪುಗಾರರಾಗಿ ಜೂಲಿ ಲಕ್ಷ್ಮಿ, ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಚಿತಾ ರಾಮ್ ಈ ಷೋನಲ್ಲಿಯೂ ಮುಂದುವರೆದಿದ್ದಾರೆ. 

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ: ವಿಶೇಷ ವಿಡಿಯೋ ರಿಲೀಸ್​...
 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!