ಅಮೃತಧಾರೆಗೆ ನಟಿ ಸಪ್ತಮಿ ಗೌಡ ಎಂಟ್ರಿ! ಭೂಮಿಕಾ ತಂಗಿ ಜೊತೆ ಜೈದೇವನ ಮದ್ವೆ- ಇದೇನಿದು?

Published : Feb 09, 2024, 11:59 AM ISTUpdated : Feb 09, 2024, 12:00 PM IST
ಅಮೃತಧಾರೆಗೆ ನಟಿ ಸಪ್ತಮಿ ಗೌಡ ಎಂಟ್ರಿ! ಭೂಮಿಕಾ ತಂಗಿ ಜೊತೆ ಜೈದೇವನ ಮದ್ವೆ- ಇದೇನಿದು?

ಸಾರಾಂಶ

ಭೂಮಿಕಾ ತಂಗಿಯ ಜೊತೆ ಜೈದೇವನ ಮದ್ವೆ ನಡೆಯುತ್ತಿದೆ. ಅದೇ ಇನ್ನೊಂದೆಡೆ, ನಟಿ ಸಪ್ತಮಿ ಗೌಡ ಎಂಟ್ರಿ ಕೊಟ್ಟಿದ್ದಾರೆ. ಅಮೃತಧಾರೆ ಸೀರಿಯಲ್​ನಲ್ಲಿ ಏನಿದು ಟ್ವಿಸ್ಟ್​?  

ನಾನು ನೋಡಿರೋ ಲವ್​ ಸ್ಟೋರಿಗಳು ಮದ್ವೆಯಲ್ಲಿಯೇ ಎಂಡ್​ ಆಗತ್ತೆ; ಆದರೆ ರಿಯಲ್​ ಲೈಫ್​ನಲ್ಲಿ ಮದ್ವೆ ಎನ್ನೋದು ಶುಭಂ ಅಲ್ಲ, ಶುಭಾರಂಭ. ಇವತ್ತು ನಡೀತಿರೋ ಮದ್ವೆ, ಶುಭನೋ- ಅಶುಭನೋ? ಮದುಮಗಳಿಗೆ ಕಣ್ಣು ಬಿದ್ದರೆ ದೃಷ್ಟಿ ತೆಗೆಯಬಹುದು, ಆದರೆ ಮದುವೆಗೇ ಕಣ್ಣು ಬಿದ್ದರೆ? ಗೌತಮ್​  ಮದ್ವೆಯಲ್ಲಿ ಭೂಮಿಕಾ ಥರ ಅವಳ ತಂಗಿನೂ ಖುಷಿಯಾಗಿ ಇರ್ತಾಳಾ? ಏಕೆಂದ್ರೆ ಜೈದೇವ್​ ಅಣ್ಣ ಗೌತಮ್​  ಥರ ಅಲ್ವಲ್ಲಾ? ಎನ್ನುತ್ತಲೇ ಅಮೃತಧಾರೆ ಸೀರಿಯಲ್​ಗೆ ಸ್ಯಾಂಡಲ್​ವುಡ್​ ನಟಿ, ಕಾಂತಾರಾ ಬ್ಯೂಟಿ ಸಪ್ತಮಿ ಗೌಡ ಎಂಟ್ರಿ ಕೊಟ್ಟಿದ್ದು, ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.

ಅಷ್ಟಕ್ಕೂ ಕಂತ್ರ ಜೈದೇವ್​ ಎಲ್ಲರ ಮನವೊಲಿಸಿ ಭೂಮಿಕಾ ತಂಗಿ ಜೊತೆ ಮದ್ವೆಯಾಗಲು ರೆಡಿಯಾಗಿದ್ದಾನೆ. ಅದೇ ಇನ್ನೊಂದೆಡೆ, ಆತ ಕೆಲಸದಾಕೆಯ ಜೊತೆ ಸಂಬಂಧ ಇಟ್ಟುಕೊಂಡಿರುವ ವಿಷ್ಯ ಯಾರಿಗೂ ಗೊತ್ತಿಲ್ಲ. ಪಾರ್ಥನನ್ನು ಪ್ರೀತಿಸ್ತಿರೋ ಭೂಮಿಕಾ ತಂಗಿ ಪೇಚಿಗೆ ಸಿಲುಕಿದ್ದಾಳೆ. ಇಷ್ಟವಿಲ್ಲದ ಮದ್ವೆಗೆ ಈಕೆ ರೆಡಿಯಾಗುವ ಅನಿವಾರ್ಯತೆ ಉಂಟಾಗಿದೆ. ಇವಳು ಪಾರ್ಥನ ಜೊತೆ ಲವ್​  ಮಾಡ್ತಿರೋ ವಿಷ್ಯ ಕೂಡ ಯಾರಿಗೂ ಗೊತ್ತಿಲ್ಲ.

ಆಗ ನನಗಿನ್ನೂ 19 ವರ್ಷ... ಸೌತ್​ ನಿರ್ಮಾಪಕ ಮಂಚಕ್ಕೆ ಕರೆದ್ರು... ಅನುಭವ ಹೇಳಿದ ಬಿಗ್​ಬಾಸ್​ ಅಂಕಿತಾ

ಮದ್ವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಹಾರವನ್ನೂ ಬದಲಿಸಿಕೊಂಡು ಆಗಿದೆ. ತಾನು ಗೆದ್ದೆನೆಂದು ಬೀಗುತ್ತಿದ್ದಾನೆ ಜೈದೇವ. ಪಾರ್ಥ ಮತ್ತು ಭೂಮಿಕಾ ತಂಗಿ ಮಾತ್ರ ಕಣ್ಣೀರು. ಆದರೆ ಇದು ಯಾರ ಗಮನಕ್ಕೂ ಬರುತ್ತಿಲ್ಲ. ಇನ್ನೇನು ತಾಳಿ ಕಟ್ಟಬೇಕು, ಅಷ್ಟರದಲ್ಲಿಯೇ ಸೀರಿಯಲ್​ಗೆ ಟ್ವಿಸ್ಟ್​ ಸಿಕ್ಕಿದೆ. ಮದುಮಗನ ಜಾಗದಲ್ಲಿ ಕುಳಿತಿರೋ ಜೈದೇವನಿಗೆ ಯಾರೋ ಚಾಕು ಹಿಡಿದಿದ್ದಾರೆ. ಎಲ್ಲರೂ ಗಾಬರಿಯಿಂದ ನೋಡಿದ್ದಾರೆ. ಅಲ್ಲಿ ಒಂದಿಷ್ಟು ಮಾತುಕತೆ ನಡೆದಿದೆ. ಅಸಲಿಗೆ ಆತ ಜೈದೇವ ಸಂಬಂಧ ಇಟ್ಟುಕೊಂಡಿರುವ ಯುವತಿಯ ಅಜ್ಜ.

ಎಲ್ಲರೂ ಶಾಕ್​ ಆಗಿದ್ದಾರೆ. ಗೌತಮ್​ ಚಿಕ್ಕಮ್ಮ ಅಂತೂ ರೇಗುತ್ತಿದ್ದಾಳೆ. ಏನಾಗುತ್ತಿದೆ ಎಂದು ತಿಳಿಯುತ್ತಿಲ್ಲ. ಅಷ್ಟರಲ್ಲಿಯೇ ಕೆಲಸದಾಕೆಯನ್ನು ಮದುಮಗಳಂತೆ ಶೃಂಗಾರ ಮಾಡಿಕೊಂಡು ಬಂದಿರುವ ಭೂಮಿಕಾ, ಜೈದೇವನ ಮದ್ವೆ ಈಗಲೇ ನಡೆಯುತ್ತದೆ, ಆದರೆ ನನ್ನ ತಂಗಿಯ ಜೊತೆಗಲ್ಲ. ಬದಲಿಗೆ ಈಕೆಯ ಜೊತೆ ಎಂದಿದ್ದಾಳೆ. ಇದರಿಂದ ಜೈದೇವ್​ ಅಮ್ಮ ಅಂದರೆ ಗೌತಮ್​ ಚಿಕ್ಕಮ್ಮ ಪಿತ್ತ ನೆತ್ತಿಗೇರಿದೆ. ಭೂಮಿಕಾಳ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾಳೆ. ಗೌತಮ್​ಗೆ ಪತ್ನಿಯ ಸಾಥ್​ ಕೊಡಬೇಕೋ, ಅಥವಾ ಅಮ್ಮನಂತೆ ವರ್ತಿಸುತ್ತಿರುವ ಚಿಕ್ಕಮ್ಮನ ಮಾತಿಗೋ ಗೊತ್ತಾಗದೇ ಚಡಪಡಿಸುತ್ತಿದ್ದಾನೆ. ಮುಂದೇನು? ಒಟ್ಟಿನಲ್ಲಿ ಸೀರಿಯಲ್​ನಲ್ಲಿ ಇದಕ್ಕೆ ಉತ್ತರ ಸಿಗಲಿದೆ. 

ಒಬ್ಬಳು ಸಾಲಲ್ಲಾ ಅಂತ ಇನ್ನೊಬ್ಬಳು ಬಂದ್ಲಾ? ಒಳ್ಳೆಯ ಸೀರಿಯಲ್​ ಹಳಿ ತಪ್ಪಿಸಬೇಡಿ ಅಂದ ಫ್ಯಾನ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?