ಸ್ಟಾರ್ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ ಶುರುವಾಗುತ್ತಿದೆ. ಅಡುಗೆ ಮತ್ತು ಕಾಮಿಡಿ ಪ್ರಮುಖ ಭಾಗವಾಗಿರುವ ಈ ಶೋ ಹೆಸರು ‘ಕುಕ್ಕು ವಿತ್ ಕಿರಿಕ್ಕು’.
ಈ ಶೋ ಏ.10 ಶನಿವಾರ 8.30ಕ್ಕೆ ಶುರುವಾಗಲಿದೆ. ಕಿಚ್ಚ ಸುದೀಪ್ ಆಗಮಿಸಿ ಶೋ ಆರಂಭಿಸಲಿದ್ದಾರೆ. ನಂತರ ಪ್ರತೀ ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಪತ್ನಿ ಗೀತಾ ಹುಟ್ಟುಹಬ್ಬ; ನಟಿ ಮಯೂರಿ ಬಯಕೆಯೆ ಸ್ವೀಟ್ ರೆಡಿ!
ಇಲ್ಲಿ ಕುಕ್ಕು ಮತ್ತು ಕಿರಿಕ್ಕು ಎಂಬ ಎರಡು ತಂಡಗಳಿರುತ್ತವೆ. ಕುಕ್ಕು ತಂಡ ಅಡುಗೆ ಮಾಡಿದರೆ ಕಿರಿಕ್ಕು ತಂಡ ಅಡುಗೆ ಮಾಡುತ್ತದೆ. ನಾನಾ ಥರದ ಸ್ಪರ್ಧೆಗಳು ನಡೆಯುತ್ತವೆ. ಅದರಲ್ಲಿ ಪ್ರತೀವಾರ ಒಂದು ಕುಕ್ಕು-ಕಿರಿಕ್ಕು ಜೋಡಿ ಗೆಲ್ಲುತ್ತದೆ. ಅಕುಲ್ ಬಾಲಾಜಿ ನಿರೂಪಕರಾಗಿರುತ್ತಾರೆ. ಸಿಹಿ ಕಹಿ ಚಂದ್ರು, ಖ್ಯಾತ ಶೆಫ್ ವೆಂಕಟೇಶ್ ಭಟ್ ಬಾಗವಹಿಸುತ್ತಿದ್ದಾರೆ.
ಅಡುಗೆ ಕಾರ್ಯಕ್ರಮದಲ್ಲಿ ಯಶ್ ತಾಯಿ: ಪುತ್ರನ ನೆಚ್ಚಿನ ರೆಸಿಪಿ ರಿವೀಲ್!
ಅವರೊಂದಿಗೆ 16 ಮಂದಿ ಸ್ಟಾರ್‌ಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕುಕ್ಕು ತಂಡದಲ್ಲಿ ಸುಂದರ್ ವೀಣಾ, ಕಿರಿಕ್ ಕೀರ್ತಿ, ಚಂದನ್, ಕವಿತಾ ಗೌಡ, ವನಿತಾ ವಾಸು, ರೆಮೋ ಅಲಿಯಾಸ್ ರೇಖಾ ಮೋಹನ್, ಅಪೂರ್ವ, ಲಾಸ್ಯ ನಾಗರಾಜ್ ಇರುತ್ತಾರೆ. ಕಿರಿಕ್ಕು ತಂಡದಲ್ಲಿ ಅರುಣ್ ಸಾಗರ್, ಪ್ರಥಮ್, ನಯನ, ಕಾರುಣ್ಯ ರಾಮ್, ಜಗ್ಗಪ್ಪ, ಚೈತ್ರಾ ವಾಸುದೇವನ್, ಅಭಿಜ್ಞಾ ಭಟ್, ವಿಶ್ವ ಇದ್ದಾರೆ. ಇದು ಕನ್ನಡ ಕಿರುತೆರೆಗೆ ಹೊಸ ರೀತಿಯ ರಿಯಾಲಿಟಿ ಶೋ.