ನಿಜ ಜೀವನದ 'ಸತ್ಯ' ರೊಂದಿಗೆ ಮಾತನಾಡಿದ ಸತ್ಯ!

By Suvarna NewsFirst Published Apr 5, 2021, 10:58 PM IST
Highlights

ಜೀ ಕನ್ನಡದ “ಸತ್ಯ” ಧಾರಾವಾಹಿ  ತಂಡದ ವಿನೂತನ ಕಾರ್ಯಕ್ರಮ/  ನಿಜ ಜೀವನದ ಹೋರಾಟಗಾರ-ಸಾಧಕ ಮಹಿಳೆಯರೊಂದಿಗೆ ಮಾತುಕತೆ/  ಇದು ಧಾರಾವಾಹಿಯಲ್ಲ ಜೀವನ/ 

ಬೆಂಗಳೂರು(ಏ. 05) ಕನ್ನಡ ಕಿರುತೆರೆಯಲ್ಲಿ ವಿನೂತನ ಧಾರಾವಾಹಿಗಳ ಮೂಲಕ ಮುಂಚೂಣಿಯಲ್ಲಿರುವ ಜೀ ಕನ್ನಡ ಈ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿನೂತನವಾಗಿ ಆಚರಿಸಿದೆ. ಜೀ ಕನ್ನಡದಲ್ಲಿ ದಿಟ್ಟ ಹೆಣ್ಣುಮಗಳ ಪ್ರತಿನಿಧಿಯಾಗಿರುವ “ಸತ್ಯ” ನಿಜ ಜೀವನದ “ಸತ್ಯ”ರ ಪಾತ್ರಗಳೊಂದಿಗೆ ವಿನೂತನ ರೀತಿಯಲ್ಲಿ ಮುಂದೆ ಬಂದಿದ್ದಾರೆ. ಸತ್ಯ ನಿಜ ಜೀವನದ ಸತ್ಯರನ್ನು ಸಂದರ್ಶಿಸಿದ್ದಾರೆ.

ಮಂಡ್ಯ ಜನರ ಮಧ್ಯೆ ನಾಗಿಣಿ ಆರತಕ್ಷತೆ; ಯಾರೆಲ್ಲ ಬಂದಿದ್ದರು? 

“ಸತ್ಯ” ಧಾರಾವಾಹಿ ಪ್ರಾರಂಭವಾದ ದಿನದಿಂದಲೂ ಮಹಿಳೆಯರನ್ನು ಅಪಾರವಾಗಿ ಸೆಳೆದಿದೆ. ಸತ್ಯ ಪಾತ್ರವು ಎಲ್ಲ ಮಹಿಳೆಯರಿಗೂ ಸ್ಫೂರ್ತಿ ತುಂಬಿದೆ. ಈಗ ನಿಜ ಜೀವನದ ಸತ್ಯ ಪಾತ್ರಧಾರಿಗಳಾದ ಮೈಸೂರಿನ ಆಟೊ ಚಾಲಕಿ ಸೌಮ್ಯಾ ರಾಣಿ, ಮಂಡ್ಯದಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕಾರ್ಯ ನಿರ್ವಹಿಸುವ ಸುಮಲತಾ, ಬೆಂಗಳೂರಿನ ಗೋ ಪಿಂಕ್ ಕ್ಲಬ್ ನ ರೂಪಾ ಆಲಿಸಾ, ಬೆಂಗಳೂರಿನ ಸ್ವಿಗ್ಗಿ ಡೆಲಿವರಿ ಮಾಡುವ ಮೂಲಕ ಬದುಕು ಕಟ್ಟಿಕೊಂಡ ಉಮಾ ರೆಡ್ಡಿ ಅವರುಗಳು ಸತ್ಯ ಧಾರಾವಾಹಿಯ ಪಾತ್ರಗಳಂತೆಯೇ ಬದುಕಿದವರು. ಬದುಕಿನ ಸಂಕಷ್ಟಗಳನ್ನು ಎದುರಿಸಿ ದಿಟ್ಟವಾಗಿ ನಿಂತವರು.

ಈ ಎಲ್ಲರೂ ಧಾರಾವಾಹಿ ಪಾತ್ರಕ್ಕೆ ಸ್ಫೂರ್ತಿಯಾದವರು, ಒಟ್ಟಿಗೆ ಮಹಿಳಾ ದಿನಾಚರಣೆಗೆ ಹೊಸದೊಂದು ಅರ್ಥ ನೀಡಲಾಗಿದೆ.  ಎಲ್ಲ ಧಾರಾವಾಹಿಗಳನ್ನು ಹಿಂದಕ್ಕೆ ಹಾಕಿದ ಸತ್ಯ ಮೊದಲನೇ ಸ್ಥಾನಕ್ಕೆ ಏರಿದ್ದು ದಾಖಲೆ. 

click me!