ಹೃದಯಘಾತದಿಂದ ಹರ್ಷ ನಿಧನ. ಯಮ ಇವನಿಗೆ ಪಾಶ ಹಾಕಿ ಕರೆದೊಯ್ದ ಎಂದ ಜಗ್ಗೇಶ್.
ಕನ್ನಡ ಕಿರುತೆರೆ ಲೋಕದಲ್ಲಿ ಇತಿಹಾಸ ಸೃಷ್ಟಿಸಿದ ಕಾಮಿಡಿ ಶೋ ಅಂದ್ರೆ ಕಾಮಿಡಿ ಕಿಲಾಡಿಗಳು (Comedy Kiladigalu). ಎಷ್ಟೇ ಆಯಾಮಗಳಲ್ಲಿ ಬಂದರೂ ನಾವು ನೋಡೋಕೆ ರೆಡಿ ಪ್ರಸಾರ ಮಾಡಿ ಎಂದು ವೀಕ್ಷಕರು ಡಿಮ್ಯಾಂಡ್ ಮಾಡುತ್ತಿದ್ದ ಕಾಲವದು. ಕಲಾವಿದರ ಹಾಸ್ಯ, ತೀರ್ಪುಗಾರರ (Judge) ಪ್ರೋತ್ಸಾಹ ಎಲ್ಲರಿಗೂ ಆನಂದ ನೀಡುತ್ತಿತ್ತು. ಆದರೆ ಈ ತಂಡ ಇಂದು ಒಬ್ಬ ಮುಖ್ಯವಾದ ವ್ಯಕ್ತಿಯನ್ನು ಕಳೆದುಕೊಂಡಿದೆ.
ಕಾಮಿಡಿ ಕಿಲಾಡಿಗಳು ಶೋನಲ್ಲಿ ಸ್ಕ್ರಿಪ್ಟ್ ರೈಟರ್ (Script Writer) ಆಗಿ ಕೆಲಸ ಮಾಡುತ್ತಿದ್ದ ಹರ್ಷ (Harsha) ಕೊನೆ ಉಸಿರೆಳೆದಿದ್ದಾರೆ. ಈ ಬಗ್ಗೆ ನಟ ಜಗ್ಗೇಶ್ (Jaggesh)) ಟ್ಟೀಟ್ ಮಾಡಿದ್ದಾರೆ. 'ಕಾಮಿಡಿ ಕಿಲಾಡಿಗಳು ನಗುವಿಗೆ ಇವನ ಕೆಲ ಬರಹದ ನಾಟಕದ ಕೊಡುಗೆಯೂ ಕಾರಣ ಬಂಗಾರದಂತಹ ಯುವಕ ಕೇವಲ 27 ವರ್ಷಕ್ಕೆ ಯಮ ಇವನಿಗೆ ಪಾಶ ಹಾಕಿ ಕರೆದೊಯ್ದ! ಬಾಳಿ ಬದುಕಬೇಕಿದ್ದ ಈ ಕಂದನಿಗೆ ಈ ಸಾವು ನ್ಯಾಯವೇ. ಇವನ ಅಗಲಿಕೆ ದುಃಖ ಬರಿಸುವ ಶಕ್ತಿ ರಾಯರು ಇವನ ತಂದೆತಾಯಿಗೆ ನೀಡಲಿ. ಓಂ ಶಾಂತಿ ಸದ್ಗತಿ' ಎಂದು ಬರೆದುಕೊಂಡಿದ್ದಾರೆ.
ಹರ್ಷ ಮೂಲತಃ ತುಮಕೂರಿನವರು (Tumakuru). ಎಂಬಿಎ (MBA) ಶಿಕ್ಷಣ ಪಡೆದು ಬೆಂಗಳೂರಿನ (Bengaluru) ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಿನಿಮಾ ಕ್ಷೇತ್ರದ ಕಡೆ ಹೆಚ್ಚು ಆಸಕ್ತಿ ಇದ್ದ ಕಾರಣ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಹರ್ಷ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.
ನಗುವಿಗೆ ಇವನ ಕೆಲ ಬರಹದ ನಾಟಕದ ಕೊಡಿಗೆಯು ಕಾರಣ..ಬಂಗಾರದದಂತ ಯುವಕ ಕೇವಲ 27ವರ್ಷಕ್ಕೆ ಯಮ ಇವನಿಗೆ ಪಾಶ ಹಾಕಿ ಕರೆದೋಯ್ದ!ಬಾಳಿ ಬದುಕಬೇಕಿದ್ದ ಈ ಕಂದನಿಗೆ ಈ ಸಾವು ನ್ಯಾಯವೆ..
ಇವನ ಅಗಲಿಕೆ ದುಃಖ ಬರಿಣಸುವ ಶಕ್ತಿ ರಾಯರು ಇವನ ತಂದೆತಾಯಿಗೆ ನೀಡಲಿ..
ಓಂ ಶಾಂತಿ ಸಧ್ಘತಿ😭 pic.twitter.com/EuAgdMGg2S
ಕಾಮಿಡಿ ಕಿಲಾಡಿಗಳು ಶೋ ಅದೆಷ್ಟೋ ಕಲಾವಿದರ ಜೀವನಕ್ಕೆ ದಾರಿ ದೀಪವಾಗಿದೆ. ವೇದಿಕೆ ಮೇಲೆ ಹಾಸ್ಯ ಮಾಡಿ ನಾಟಕ ಮಾಡಿ ಭೇಷ್ ಎನ್ನಿಸಿಕೊಂಡವರು ಇಂದು ಕನ್ನಡ ಚಿತ್ರರಂಗದಲ್ಲಿ (Sandalwood) ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ಕೆಲವರು ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜನಪ್ರಿಯತೆ ಪಡೆಯುತ್ತಿದ್ದಾರೆ. ಸ್ಟಾರ್ ನಟರ ಜೊತೆ ಕೆಲಸ ಮಾಡುವುದಕ್ಕೆ ಕಾರಣವೇ ಕಾಮಿಡಿ ಕಿಲಾಡಿಗಳು ಎಂದು ಹಲವು ವೇದಿಕೆಗಳಲ್ಲಿ ಹೇಳಿದ್ದಾರೆ.
ಚಿತ್ರೀಕರಣದಲ್ಲಿ ಅಪಘಾತ; ಕಾಮಿಡಿ ಕಿಲಾಡಿಗಳು ಗೋವಿಂದೇ ಗೌಡ ಆಸ್ಪತ್ರೆಗೆ ದಾಖಲುಕಳೆದ ವರ್ಷ ಜುಲೈ (July) ತಿಂಗಳಿನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಿಜಿ ಅಲಿಯಾ ಗೋವಿಂದೇ ಗೌಡ (Govinde Gowda) ಅವರಿಗೆ ಚಿತ್ರೀಕರಣದ ವೇಳೆ ಅಪಘಾತವಾಗಿತ್ತು ಅವರ ಆರೋಗ್ಯದ ಬಗ್ಗೆ ಜಗ್ಗೇಶ್ ಟ್ಟೀಟ್ ಮಾಡಿದ್ದರು. ಕಾಮಿಡಿ ಕಿಲಾಡಿ ನಟ ಜಿಜಿ ಗೋವಿಂದೇ ಗೌಡರು ಚಿತ್ರೀಕರಣ ಸಮಯದಲ್ಲಿ ಅಪಘಾತವಾಗಿ, ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದಯವಿಟ್ಟು ಅವನಿಗೆ ಏನೂ ಆಗದಂತೆ ನೀವು ಪ್ರಾರ್ಥನೆ ಮಾಡಿ. ನಾನು ಗಣಪತಿಗೆ ಪ್ರಾರ್ಥಿಸಿ ಆಸ್ಪತ್ರೆಗೆ ಹೊರಟೆ,' ಎಂದು ಜಗ್ಗೇಶ್ ಟ್ಟೀಟ್ ಮಾಡಿದ್ದಾರೆ. ಗೋವಿಂದ್ ಅವರು ಈಗ ಹುಷಾರಾಗಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನಲಾಗಿದೆ.
ಶಿವರಾಜ್ ಕೆಆರ್ ಪೇಟೆ (Shivaraj KR Pete) ಮತ್ತು ನಯನಾ (Nayana) ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡು 10ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಸೂರಜ್ (Sooraj) ಮತ್ತು ಪ್ಯಾಕು ಪ್ಯಾಕು ಹಿತೇಷ್ (Hitesh) ನಿರ್ದೇಶಕ ಪ್ರೇಮ್ (Jogi Prem) ಜೊತೆ ಏಕ್ ಲವ್ ಯಾ (Ek Love Ya) ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಅನೇಕ ಕಲಾವಿದರ ಜೀವನಕ್ಕೆ ಕಾಮಿಡಿ ಕಿಲಾಡಿಗಳು ಶೋ ದಾರಿ ದೀಪವಾಗಿದೆ.