
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾಮಿಡಿ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ ಅಲಿಯಾಸ್ ಜಿಜಿ ಅವರಿಗೆ ಚಿತ್ರೀಕರಣದ ವೇಳೆ ಅಪಘಾತವಾಗಿದೆ. ಜಿಜಿ ಅವರ ಆರೋಗ್ಯದ ಬಗ್ಗೆ ನಟ ಜಗ್ಗೇಶ್ ಟ್ಟೀಟ್ ಮಾಡಿದ್ದಾರೆ.
'ಕಾಮಿಡಿ ಕಿಲಾಡಿ ನಟ ಜಿಜಿ ಗೋವಿಂದೇ ಗೌಡರು ಚಿತ್ರೀಕರಣ ಸಮಯದಲ್ಲಿ ಅಪಘಾತವಾಗಿ, ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದಯವಿಟ್ಟು ಅವನಿಗೆ ಏನೂ ಆಗದಂತೆ ನೀವು ಪ್ರಾರ್ಥನೆ ಮಾಡಿ. ನಾನು ಗಣಪತಿಗೆ ಪ್ರಾರ್ಥಿಸಿ ಆಸ್ಪತ್ರೆಗೆ ಹೊರಟೆ,' ಎಂದು ಜಗ್ಗೇಶ್ ಟ್ಟೀಟ್ ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಜಿಜಿ ಅವರನ್ನು ಭೇಟಿ ಮಾಡಿದ ನಟ ಜಗ್ಗೇಶ್ 'ಈಗ ತಾನೇ ಗೋವಿಂದೇ ಗೌಡನನ್ನು ಭೇಟಿ ಮಾಡಿದೆ. ರಾಯರ ಆಶೀರ್ವಾದಿಂದ ಕ್ಷೇಮವಾಗಿದ್ದಾನೆ,' ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಜೀ ವಾಹಿನಿಯ ಶರಣಯ್ಯ ಇದ್ದರು ಎನ್ನಲಾಗಿದೆ.
ಯೋಗರಾಜ್ ಭಟ್ ನಿರ್ದೇಶನ 'ಆದ್ದರಿಂದ' ಚಿತ್ರದಲ್ಲಿ ಗೋವಿಂದೇ ಗೌಡ ಮತ್ತು ಅವರ ಪತ್ನಿ ದಿವ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಅವಘತ ನಡೆದಿರುವುದು ಯಾವ ಸೆಟ್‌ನಲ್ಲಿ ಎಂಬ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಹಾಗೂ ಜಗ್ಗೇಶ್ ಹೊರತು ಪಡಿಸಿ, ಕಾಮಿಡಿ ಕಿಲಾಡಿಗಳು ಇನ್ನಿತರ ಕಲಾವಿದರಿಂದ ಯಾವ ಮಾಹಿತಿಯೂ ಹೊರಬಂದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.