
ಬೆಂಗಳೂರು(ಜು. 25) ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಎಲ್ಲ ಸ್ಪರ್ಧಿಗಳನ್ನು ನಗೆ ಕಡಲಿನಲ್ಲಿ ತೇಲಿಸಿದ್ದಾರೆ. ಅತಿ ಹೆಚ್ಚು ನಕ್ಕಿರುವ ಸೂಪರ್ ಸಂಡೇ ಎಂದೇ ಕಿಚ್ಚ ಬಣ್ಣಿಸಿದರು. ಕಿಚ್ಚನ ಮೆಚ್ಚುಗೆ ಚಪ್ಪಾಳೆ ಪ್ರಶಾಂತ್ ಸಂಬರಗಿ ಅವರಿಗೆ ಸಿಕ್ಕಿದೆ. ಹೋರಾಟ ಇತ್ತು.. ನದು ಇತ್ತು ಟೀಕೆ ಇತ್ತು ಆದರೆ ಪ್ರಶಾಂತ್ ಸಂಬರಗಿಗೆ ಕಿಚ್ಚನ ಮೆಚ್ಚುಗೆ ಚಪ್ಪಾಳೆ ಸಿಕ್ಕಿದೆ. ಯಾರೂ ಕೆಟ್ಟವರಲ್ಲ ಯಾರೂ ಒಳ್ಳೆಯವರಲ್ಲ ಎಂದು ಕಿಚ್ಚ ತಮ್ಮ ಮಾತು ಮುಂದುವರಿಸಿದರು.
ಮೊದಲಿಗೆ ಫಿನಾಲೆಯಲ್ಲಿ ನಿಮ್ಮ ಪ್ರಕಾರ ಯಾರಿರಬೇಕು? ಯಾರಿರಬಾರದು ಎಂದು ಪ್ರಶ್ನೆ ಕೇಳಿ ಪೋಟೋ ಇಡಲು ಸೂಚಿಸಿದರು. ಈ ವಾರದ ಸಂಡೇಯಲ್ಲಿ ಎಲಿಮಿನೇಶನ್ ಇರಲಿಲ್ಲ. ಆದರೆ ಕಿಚ್ಚ ಒಂದು ಶಾಕ್ ಕೊಟ್ಟರು. ಇವತ್ತು ಮನೆಯಿಂದ ಯಾರೂ ಹೋಗಲ್ಲ.. ಆದರೆ ಈ ವಾರದ ಮಧ್ಯದಲ್ಲಿ ಹೊರಹೋಗುತ್ತಾರೆ. ನಿಮ್ಮ ಸಮಯ ಈಗ ಶುರುವಾಗಿದೆ ಎಂದು ತಿಳಿಸದರು.
ಮಿಡಲ್ ಫಿಂಗರ್ ತೋರಿಸಿದ್ದಕ್ಕೆ ಕೊನೆಗೂ ಚಕ್ರವರ್ತಿ ಕ್ಷಮೆ
ಸೆಕೆಂಡ್ ಇನಿಂಗ್ಸ್ ನಲ್ಲಿ ವೈಷ್ಣವಿ ಸಿಟ್ಟು ಹೊರಹಾಕುತ್ತಿದ್ದಾರೆ, ಶಮಂತ್ ಮತ್ತು ದಿವ್ಯಾ ಸುರೇಶ್ ಉತ್ತಮ ಸ್ನೇಹಿತರಾಗಿದ್ದಾರೆ. ದಿವ್ಯಾ ಯು ಪೆಚ್ಚು ಮೋರೆ ಕಡಿಮೆ ಮಾಡಿಕೊಳ್ಳಬೇಕು ಎಂಬ ಒಂದಿಷ್ಟು ಪ್ರಶ್ನೆ ಸಮೇತ ಸಲಹೆಗಳು ಬಂದವು .
ಒಂದು ಬೇಜಾರಿದೆ.. ವೇದಿಕೆಯಲ್ಲಿ ನಾನು ನಿಮಗೆ ಸಿಗಲ್ಲ. ಚೆನ್ನಾಗಿ ಆಡಿ ಇನ್ನು ಉಳಿದಿರುವುದು ಕೆಲವೇ ದಿನ ಎಂದು ತಿಳಿಸಿದರು. ಪ್ರಶಾಂತ್, ಚಕ್ರವರ್ತಿ, ಶುಭಾ, ದಿವ್ಯಾ ಯು, ಶಮಂತ್ ಅವರಿಗೆ ಈಗಿನಿಂದಲೇ ಸಮಯ ಶುರುವಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.