ಪ್ರಜ್ಞಾಹೀನ ಸ್ಥಿತಿಯಿಂದ ಹೊರ ಬಂದ ಬಿಗ್ ಬಾಸ್ ಸ್ಪರ್ಧಿ ಯಶಿಕಾ. ನಟಿ ವಿರುದ್ಧ ಎರಡು ಕೇಸ್ ದಾಖಲು. ನಟಿಯ ಆರೋಗ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡಿದ ಸಹೋದರಿ.....
ಮಹಾಬಲಿಪುರಂನ ಈಸ್ಟ್ ಕೋಸ್ಟ್ ರಸ್ತೆಯ ಅಪಘಾತದಲ್ಲಿ ಗಾಯಗೊಂಡ ನಟಿ ಯಶಿಕಾ ಪ್ರಜ್ಞಾಹೀನ ಸ್ಥಿತಿಯಿಂದ ಹೊರ ಬಂದಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಸಹೋದರಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
'ಹಾಯ್ ಎಲ್ಲರಿಗೂ. ನಿಮ್ಮ ಪ್ರಾರ್ಥನೆಗಳಿಂದ ಯಶಿಕಾಗೆ ಪ್ರಜ್ಞೆ ಬಂದಿದೆ ಹಾಗೂ ದೇವರ ದಯೆಯಿಂದ ಒಂದು ಸರ್ಜರಿಯೂ ಯಶಸ್ವಿ ಆಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಟಿಪಲ್ ಫ್ಯಾಕ್ಚರ್ ಆಗಿರುವ ಕಾರಣ ಇನ್ನೂ ಎರಡು ಮೂರು ಸರ್ಜರಿ ಮಾಡಬೇಕಿದೆ. ಆದಷ್ಟು ಬೇಗ ಚೇತರಿಸಿಕೊಂಡು ಬರಲಿದ್ದಾಳೆ,' ಎಂದು ಓಶೀನ್ ಬರೆದುಕೊಂಡಿದ್ದಾರೆ.
ಮಹಾಬಲಿಪುರಂನ ಪೊಲೀಸರು ಸಿಸಿ ಕ್ಯಾಮೆರಾದಲ್ಲಿ ಯಶಿಕಾ ಕಾರು ಚಾಯಿಸುತ್ತಿದ್ದ ವೇಗ ಗಮನಿಸಿ, ಓವರ್ ಸ್ಪೀಡ್ ಎಂದು ಡ್ರೈವಿಂಗ್ ಲೈಸೆನ್ಸ್ ಸೀಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಿರ್ಲಕ್ಷ್ಯದಿಂದ ಸ್ನೇಹಿತೆ ಸಾವಿಗೆ ಕಾರಣ ಎಂದು ಎರಡು ಪ್ರಕರಣಗಳನ್ನು ದಾಖಲೆ ಮಾಡಿಕೊಂಡಿದ್ದಾರೆ. ವೈದ್ಯರು ತಿಳಿಸಿದ ಪ್ರಕಾರ ಯಶಿಕಾ ಹಾಗೂ ಸ್ನೇಹಿತರು ಮಧ್ಯಪಾನ ಸೇವಿಸಿದ್ದರು.
ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡ ನಟಿ ಯಶಿಕಾ ಆನಂದ್; ಸ್ನೇಹಿತೆ ಸ್ಥಳದಲೇ ಸಾವು!ಶನಿವಾರ ರಸ್ತೆ ಅಪಘಾತದಿಂದ ತಲೆಗೆ ಬಲವಾಗಿ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಸ್ನೇಹಿತೆ ಭವಾನಿ ಮೂಲತಃ USAನವರು. ಭಾನುವಾರ ರಾತ್ರಿ ಮತ್ತೆ ತಮ್ಮ ದೇಶಕ್ಕೆ ಹೊರಡುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಯಶಿಕಾಗೆ ಪ್ರಜ್ಞೆ ಬಂದ ನಂತರ ಆಸ್ಪತ್ರೆಯಲ್ಲಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಯಶಿಕಾ ಹೇಳಿಕೆಯನ್ನು ಪಡೆದುಕೊಂಡು ತನಿಖೆ ಮುಂದುವರೆಸಲಿದ್ದಾರೆ.