ಅನುಬಂಧ ವೇದಿಕೆಯಲ್ಲಿ ಹೆಣ್ಣು ಮಗುವಿಗೆ ಆಸೆ ಪಟ್ಟಿದ್ದ ಕವಿತಾಗೆ ಗಂಡು ಮಗು, ಗೊಂಬೆಗೂ ಗಂಡೇ ಹುಟ್ಟೋದು ಎಂದ ಫ್ಯಾನ್ಸ್‌!

Published : Sep 19, 2024, 05:00 PM IST
ಅನುಬಂಧ ವೇದಿಕೆಯಲ್ಲಿ ಹೆಣ್ಣು ಮಗುವಿಗೆ ಆಸೆ ಪಟ್ಟಿದ್ದ ಕವಿತಾಗೆ ಗಂಡು ಮಗು, ಗೊಂಬೆಗೂ ಗಂಡೇ ಹುಟ್ಟೋದು ಎಂದ ಫ್ಯಾನ್ಸ್‌!

ಸಾರಾಂಶ

ಕಲರ್ಸ್‌ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ನಟಿ ಕವಿತಾ ಗೌಡ ಅವರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕವಿತಾ ಗೌಡ ಹೆಣ್ಣು ಮಗುವಿಗೆ ಆಸೆ ಪಟ್ಟಿದ್ದರು. ಆದರೆ, ಕಾರ್ಯಕ್ರಮ ಪ್ರಸಾರವಾಗುವ ಮುನ್ನವೇ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯ ವರ್ಷದ ಅತ್ಯಂತ ಜನಪ್ರಿಯ ಅವಾರ್ಡ್ಸ್‌ ಶೋ ಅನುಬಂಧ ಅವಾರ್ಡ್ಸ್‌ 2024ಗೆ ವೇದಿಕೆ ಸಿದ್ದವಾಗಿದೆ. ಇದೇ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಸೀರಿಯಲ್‌ ಲೋಕದ ಜನಪ್ರಿಯ ತಾರೆಗಳಾಗಿರುವ, ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕವಿತಾ ಗೌಡ ಹಾಗೂ ನೇಹಾ ಗೌಡ ಅವರಿಗೆ ಸೀಮಂತ ಕಾರ್ಯಕ್ರಮವನ್ನೂ ಮಾಡಲಾಗಿದೆ. ಆದರೆ, ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮ ಪ್ರಸಾರವಾಗುವ ಮೊದಲೇ ಕವಿತಾ ಗೌಡ ಅವರು ಮುದ್ದಾದ ಗಂಡು ಮಗುವಿಗೆ ಬುಧವಾರ ಜನ್ಮ ನೀಡಿದ್ದಾರೆ. ಆದರೆ, ಕಾರ್ಯಕ್ರಮದ ವೇದಿಕೆಯಲ್ಲಿ ಕವಿತಾ ಗೌಡ ಹೆಣ್ಣುಮಗುವಿಗೆ ಆಸೆ ಪಟ್ಟಿದ್ದರು ಎನ್ನುವುದು ಗೊತ್ತಾಗಿದೆ. ಇದರ ಪ್ರೋಮೋವನ್ನು ಅನುಬಂಧ ಅವಾರ್ಡ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ಜನರೂ ಕೂಡ ನಿಮ್ಮ ಕಾರ್ಯಕ್ರಮ ಪ್ರಸಾರ ಆಗುವುದರ ಒಳಗಾಗಿ ಕವಿತಾ ಗೌಡ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ಮಾಹಿತಿ ನೀಡಿದ್ದಾರೆ. ಇನ್ನು ಲಕ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಕವಿತಾ ಗೌಡ ಚಿನ್ನು ಪಾತ್ರದಲ್ಲಿ ನಟಿಸಿದ್ದರೆ, ಗೊಂಬೆ ಪಾತ್ರದಲ್ಲಿದ್ದ ನೇಹಾ ಗೌಡ ಕೂಡ ಈಗ ಗರ್ಭಿಣಿ. ಕವಿತಾ ಗೌಡ ಅವರಂತೆಯೇ ನೇಹಾ ಗೌಡಗೂ ಗಂಡು ಮಗುವೇ ಹುಟ್ಟಲಿ ಎಂದು ಹಾರೈಸಿದ್ದಾರೆ.

ಸಂಬಂಧದ ಮಹಾ ವೇದಿಕೆಯಲ್ಲಿ ಗೊಂಬೆ, ಲಚ್ಚಿ ಸೀಮಂತ ಎನ್ನುವುದರೊಂದಿಗೆ ಆರಂಭವಾಗುವ ಪ್ರೋಮೋದಲ್ಲಿ, ಸ್ವತಃ ನೇಹಾ ಗೌಡ ಇದು ನಮ್ಮ ಜೀವನದ ಅತ್ಯಂತ ಸ್ಮರಣೀಯ ಕ್ಷಣ ಎಂದಿದ್ದಾರೆ. ಈ ವೇಳೆ ನೇಹಾ ಗೌಡ ಅವರ ಪತಿ ಚಂದನ್‌, 'ಹೆಣ್ಣು ಮಗು ಆದರೆ ನನಗೆ ಇಷ್ಟ..' ಎಂದು ಹೇಳಿದ್ದಾರೆ.

ನೇಹಾ ಗೌಡ ಹಾಗೂ ಕವಿತಾ ಗೌಡ ಒಂದೇ ಸೀರಿಯಲ್‌ನಲ್ಲಿ ನಟಿಸಿದ್ದು ಮಾತ್ರವಲ್ಲ, ಒಂದೇ ಸಮಯದಲ್ಲಿಯೇ ಗರ್ಭಿಣಿಯೂ ಆಗಿದ್ದರು. ಸೀರಿಯಲ್‌ನಲ್ಲೂ ಇವರಿಬ್ಬರ ಪತಿಯ ಹೆಸರು ಕೂಡ ಚಂದು ಆಗಿತ್ತು. ನಿಜ ಜೀವನದಲ್ಲೂ ಕೂಡ ಇವರಿಬ್ಬರ ಪತಿಯ ಹೆಸರು ಕೂಡ ಚಂದು ಆಗಿದೆ. ಈ ಹಂತದಲ್ಲಿ ನಾವಿಬ್ಬರೂ ಕೂಡ ತೋರಿಸುತ್ತಿರುವ ವೈದ್ಯರೂ ಕೂಡ ಒಬ್ಬರೇ ಎಂದು ನೇಹಾ ಗೌಡ ತಿಳಿಸಿದ್ದಾರೆ.

ಈ ಹಂತದಲ್ಲಿ ನಿರೂಪಕಿ ಅನುಪಮಾ, ಕವಿತಾ ಗೌಡ ಅವರಿಗೆ ನಿಗೆ ಚಂದು ಬೇಕಾ? ಲಕ್ಷ್ಮೀ ಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಜಾಣ್ಮೆಯ ಉತ್ತರ ನೀಡಿರುವ ಕವಿತಾ ಗೌಡ, ಚಂದುಗೊಂದು ಲಕ್ಮೀ ಸಿಗಲಿ ಎಂದು ಹೇಳಿದ್ದಾರೆ. ಆದರೆ, ಕವಿತಾ ಗೌಡ ಅವರ ಈ ಆಸೆ ಈಡೇರಿಲ್ಲ.  ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕಾರ್ಯಕ್ರಮಕ್ಕೆ ಬಂದು, ಇಬ್ಬರೂ ಗರ್ಭಿಣಿಯರಿಗೆ ಹಾರೈಸಿ, ಆಶೀರ್ವಾದ ಮಾಡಿದ್ದರು.

ಗಂಡು ಮಗುವಿಗೆ ಜನ್ಮ ನೀಡಿದ ಲಕ್ಮೀ ಬಾರಮ್ಮ ನಟಿ ಕವಿತಾ ಗೌಡ!

'ಅನುಬಂಧ ಟೆಲಿಕಾಸ್ಟ್ ಆಗೋ ಅಷ್ಟ್ರಲ್ಲಿ ಕವಿತಾ ಅವ್ರ್ಗೆ ಮಗ ಹುಟ್ಟಿ ಆಯ್ತು..' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದರೆ, ಗೊಂಚೆ, ಚಿನ್ನು ಸಹೋದರಿಯರ ಬಾಂಧವ್ಯವನ್ನೂ ಯಾರೂ ರಿಪ್ಲೇಸ್‌ ಮಾಡಲು ಸಾಧ್ಯವಾಗಿಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ. 'ಎಷ್ಟೇ ಫ್ರೆಂಡ್ಸ್ ಆಗಿದ್ರೂ, ಗರ್ಭಿಣಿ ಹೊಟ್ಟೆ ಮೇಲೆ ಕೈ ಇಟ್ಟು ಕಾಮಿಡಿ ಮಾಡೋ ಸೃಜನ್, ಅದೂ ಕೂಡ ಸ್ಟೇಜ್ ಮೇಲೆ... Have some boundary..' ಎಂದು ಸೃಜನ್‌ ಲೋಕೇಶ್‌ ವರ್ತನೆಗೆ ಕಿಡಿಕಾರಿದ್ದಾರೆ. ಇನ್ನೂ ಕೆಲವರು ನೇಹಾ ಗೌಡ ಅವರಿಗೂ ಗಂಡು ಮಗು ಆದರೆ ಒಳ್ಳೆಯದು ಎಂದು ಹರಸಿದ್ದಾರೆ.

ನಟಿ ಕವಿತಾ ಗೌಡ ಸೀಮಂತ ಸಂಭ್ರಮ, ತುಂಬು ಗರ್ಭಿಣಿ ನೇಹಾ ಗೌಡ ಭಾಗಿ, ಮೊದಲು ತಾಯಿ ಆಗೋದ್ಯಾರೆಂಬ ಕುತೂಹಲ!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?