ಆ್ಯಂಕರ್ ಸೃಜನ್ ಲೋಕೇಶ್ ಅವರು ತಮ್ಮನ್ನು ಸುತ್ತುವರೆದಿರುವ ಕಾಂಟ್ರವರ್ಸಿಗಳ ಬಗ್ಗೆ ಮಾತನಾಡುತ್ತಾ ಕಾಲೇಜಿನ ದಿನಗಳಲ್ಲಿ ಹೇಗೆ ಮಗುವಾದ ಸುದ್ದಿ ಹರಡಿತ್ತು ಎಂದು ಹೇಳಿದ್ದಾರೆ.
ಆ್ಯಂಕರ್ ಸೃಜನ್ ಲೋಕೇಶ್ ಅವರಿಗೆ ಬೇರೆ ಪರಿಚಯ ಬೇಕಿಲ್ಲ. ಕಿರುತೆರೆ, ಹಿರಿತೆರೆ ವೀಕ್ಷಕರಿಗೆ ಇವರು ಚೆನ್ನಾಗಿ ಪರಿಚಯವಿರುವವರೇ. ಅದರಲ್ಲಿಯೂ ಇದೀಗ ಮಜಾ ಟಾಕೀಸ್ನಂಥ ರಿಯಾಲಿಟಿ ಷೋಗಳ ಮೂಲಕ ಮನೆ ಮಾತಾಗಿದ್ದಾರೆ. ರಂಗಭೂಮಿ ಹಾಗೂ ಸಿನಿಮಾಗಳಲ್ಲಿ ಹೆಗ್ಗುರುತು ಮೂಡಿಸಿರುವ ಲೋಕೇಶ್ ಮತ್ತು ಗಿರಿಜಾ ಅವರ ಪುತ್ರನಾಗಿರುವುದರಿಂದ ಸಹಜವಾಗಿ ನಟನೆ, ಮಾತು ಎಲ್ಲವೂ ಸೃಜನ್ ಅವರಿಗೆ ರಕ್ತದಲ್ಲಿಯೇ ಬಂದುಬಿಟ್ಟಿದೆ. ಆದರೆ ಯಶಸ್ಸು ಹೆಚ್ಚಿದಂತೆಲ್ಲಾ ಕಾಂಟ್ರವರ್ಸಿಗಳು ಅವರ ಬೆನ್ನಹಿಂದೆಯೇ ಬಂದುಬಿಡುತ್ತವೆ. ಅದರಲ್ಲಿಯೂ ಬಣ್ಣದ ಲೋಕ ಎಂದರೇನೇ ಅದು ಕಾಂಟ್ರವರ್ಸಿಯ ಲೋಕ. ಕೆಲವರು ಹೆಚ್ಚು ಫೇಮಸ್ ಆಗುವುದಕ್ಕೆ ಉದ್ದೇಶಪೂರ್ವಕವಾಗಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡರೆ, ಮತ್ತೆ ಕೆಲವರು ವಿವಾದಗಳಿಂದ ದೂರ ಇರಲು ಬಯಸಿದರೂ ವಿವಾದ ಸುತ್ತುವರೆದು ಬಿಡುತ್ತವೆ.
ಈ ಎರಡನೆಯ ಸಾಲಿಗೆ ಸೇರಿದವರು ಸೃಜನ್ ಲೋಕೇಶ್. ಇತ್ತೀಚಿನ ದಿನಗಳಲ್ಲಿ ಇವರ ಹೆಸರನ್ನು ಯಾರ್ಯಾರದ್ದೋ ಜೊತೆಯಲ್ಲಿ ಸೇರಿಸಿ ವಿನಾಕಾರಣ ವಿವಾದ ಸೃಷ್ಟಿಸಲಾಗುತ್ತಿದೆ. ಅದರಲ್ಲಿಯೂ ಈಗಂತೂ ಯೂಟ್ಯೂಬರ್ಗಳ ಮಧ್ಯೆ ಪೈಪೋಟಿ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಒಳ್ಳೆಯ ಸುದ್ದಿಗಳನ್ನು ಕೊಟ್ಟರೆ ಜನ ನೋಡುವುದಿಲ್ಲ ಎನ್ನುವುದು ಅವರಿಗೆ ಗೊತ್ತು, ಆದ್ದರಿಂದ ತಮ್ಮ ಚಾನೆಲ್ಗಳಿಗೆ ವ್ಯೂಸ್ ಹೆಚ್ಚಾಗಲಿ ಎನ್ನುವ ಕಾರಣಕ್ಕೆ ಯಾರದ್ದೋ ಮಾನಹಾನಿ ಮಾಡಲು ಹಿಂದೆಮುಂದೆ ನೋಡುವುದಿಲ್ಲ, ಒಟ್ಟಿನಲ್ಲಿ ತಮಗೆ ವ್ಯೂಸ್ ಹೆಚ್ಚು ಬರಬೇಕು ಅಷ್ಟೇ. ಅದೇ ಇನ್ನೊಂದೆಡೆ ಜನರ ಮನಸ್ಥಿತಿಯೂ ಅದೇ ರೀತಿ ಇದೆ. ಒಳ್ಳೆಯ ಸುದ್ದಿಗಳು ಸಿಗಲ್ವಾ ಎಂದು ಕೆಟ್ಟ ಕೆಟ್ಟ ಭಾಷೆಗಳಲ್ಲಿ ಕಮೆಂಟ್ ಮಾಡುತ್ತಲೇ ಇಂಥ ವಿಷಯಗಳನ್ನು ಮಾತ್ರ ಓದುವ, ನೋಡುವ ದೊಡ್ಡ ವರ್ಗವೇ ಇದೆ. ಅಂಥವರಿಗೆ ಆಹಾರ ಆಗುವವರು ಕೆಲವು ನಟ-ನಟಿಯರು. ಅದರಲ್ಲಿ ಒಬ್ಬರು ಸೃಜನ್ ಲೋಕೇಶ್.
ನನಗೆ, ನಿನಗೆ ಸಂಬಂಧ ಕಲ್ಪಿಸಿದ್ರೆ ನಾನ್ ಏನ್ ಮಾಡಲಿ? ಬಹುಮುಖ್ಯವಾದ ಗಾಸಿಪ್ ಬಗ್ಗೆ ಸೃಜನ್ ಲೋಕೇಶ್ ಮಾತು!
ತಮ್ಮ ಮೇಲೆ ಬರುತ್ತಿರುವ ಕಮೆಂಟ್ಸ್ಗಳು, ಕಾಂಟ್ರವರ್ಸಿಗಳ ಬಗ್ಗೆ ತೀಕ್ಷ್ಣವಾಗಿಯೇ ಮಾತನಾಡಿರುವ ಸೃಜನ್ ಲೋಕೇಶ್ ಅವರು, ತಮ್ಮ ಜೀವನದ ಅತ್ಯಂತ ಕೆಟ್ಟಿ ಕಮೆಂಟ್ ಬಗ್ಗೆಯೂ ಹೇಳಿದ್ದಾರೆ. ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್ ಜೊತೆಗಿನ ಸಂದರ್ಶನದಲ್ಲಿ ಅವರು ಕಾಲೇಜಿನ ದಿನದಲ್ಲಿಯೇ ಕಾಂಟ್ರವರ್ಸಿಯೊಂದು ಹೇಗೆ ತಮ್ಮನ್ನು ಸುತ್ತುವರೆದಿತ್ತು ಎಂದು ತಿಳಿಸಿದ್ದಾರೆ. ಇದು ತಮ್ಮ ಜೀವನದ ಅತ್ಯಂತ ಕೆಟ್ಟ ಕಾಂಟ್ರವರ್ಸಿ ಎಂದಿದ್ದಾರೆ. 'ಸುಮಾರು 20-21 ವರ್ಷದವನು ಇದ್ದೆ ಆಗ. ಕಾಲೇಜಿಗೆ ಹೋಗುತ್ತಿದ್ದೆ. ಆಗ ಸ್ನೇಹಿತನೊಬ್ಬ ಕರೆ ಮಾಡಿ ಕಂಗ್ರಾಟ್ಸ್ ಅಂದ. ಯಾಕಲೋ ಎಂದು ಕೇಳಿದೆ. ನಿನಗೆ ಗಂಡುಮಗು ಆಯ್ತಂತೆ. ಕಂಗ್ರಾಟ್ಸ್ ಎಂದ. ನನಗೆ ಶಾಕ್ ಆಗೋಯ್ತು. ಹಾಗಂತ ಅವನು ತಮಾಷೆ ಮಾಡಿದ್ದಲ್ಲ. ಸೀರಿಯಸ್ ಆಗಿಯೇ ಹೇಳಿದ್ದ. ಹಾಗೆ ಸುದ್ದಿ ಕೂಡ ಆಗಿತ್ತು. ಅದಕ್ಕಾಗಿಯೇ ಹಾಗೆ ಹೇಳಿದ್ದ' ಎಂದಿದ್ದಾರೆ ಸೃಜನ್.
ಕೈಯಲ್ಲಿ ದುಡ್ಡಿಲ್ಲ, ಸರಿಯಾದ ಕೆಲ್ಸ ಇಲ್ಲ. ಆಗಲೇ ನನಗೆ ಗಂಡುಮಗುವಿನ ಅಪ್ಪ ಮಾಡಿಬಿಟ್ಟಿದ್ರು ಎಲ್ಲಾ ಸೇರಿ ಎಂದು ಸೃಜನ್ ಅವರು ನಕ್ಕಿದ್ದಾರೆ. ಹೀಗೆ ಅಲ್ಲಿಂದ ಇಲ್ಲಿಯವರೆಗೂ ಹೇಗೆ ವಿವಾದ ತಮ್ಮನ್ನು ಸುತ್ತುವರೆದುಕೊಂಡು ಬಂದಿದೆ ಎಂದು ಮಾತನಾಡಿದ್ದಾರೆ. ಆ ಕಾಂಟ್ರವರ್ಸಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ತಾವು ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ಇಂಥ ಕಾಂಟ್ರವರ್ಸಿಗಳಿಗೆ ಕಿವುಡನಾಗಿರುವುದೇ ಒಳ್ಳೆಯದು, ಇಲ್ಲದಿದ್ದರೆ ಸಮಸ್ಯೆ ಆಗಿಬಿಡುತ್ತದೆ ಎಂದಿದ್ದಾರೆ.
ಚಳಿ ಚಳಿ ತಾಳೆನು ಈ ಚಳಿಯಾ... ಹಾಡಿಗೆ ಹಿರಿಯ ನಟಿಯರ ಭರ್ಜರಿ ಡಾನ್ಸ್: ಸುಸ್ತಾದ ಸೃಜನ್ ಲೋಕೇಶ್!