
“ಸೀರಿಯಲ್‌ನಲ್ಲಿ ವೀಕ್ಷಕರು ಅಂದುಕೊಂಡಿದ್ದು ನಡೆಯಬೇಕು, ಅದೇ ಸಿನಿಮಾದಲ್ಲಿ ವೀಕ್ಷಕರು ಅಂದುಕೊಂಡಿದ್ದು ನಡೆಯಬಾರದು, ಆಗಲೇ ಸಿನಿಮಾ, ಸೀರಿಯಲ್ ಗೆಲ್ಲೋದು” ಎಂಬ ಮಾತಿದೆ. ಇದನ್ನೇ ಕನ್ನಡ ನಿರ್ದೇಶಕ ಮಧುಸೂದನ್, ಆರೂರು ಜಗದೀಶ್ ಅವರು ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು. ಈಗ ವೀಕ್ಷಕರ ಕಾಮೆಂಟ್‌ಗಳು, ವೀಕ್ಷಕರ ಅಭಿಪ್ರಾಯ ನಮಗ ಮ್ಯಾಟರ್ ಆಗುತ್ತವೆ, ಅವರೇ ನಮ್ಮ ಟೀಚರ್ಸ್ ಎಂದು ಕಲರ್ಸ್ ಕನ್ನಡ ವಾಹಿನಿಯು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದೆ.
ಹೌದು, ಕಲರ್ಸ್ ಕನ್ನಡ ವಾಹಿನಿಯು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸದ್ಯ ಪ್ರಸಾರ ಆಗುತ್ತಿರುವ ಎಲ್ಲ ಧಾರಾವಾಹಿ, ಶೋಗಳ ಫೋಟೋ ಹಂಚಿಕೊಂಡು ಕಮೆಂಟ್ಸ್ ಮ್ಯಾಟರ್ ಆಗತ್ತೆ ಎಂದು ಹೇಳಿದೆ. ಈ ಪೋಸ್ಟ್ ನೋಡಿ ವೀಕ್ಷಕರು ಕೂಡ, “ವೀಕ್ಷಕರ ಕಾಮೆಂಟ್‌ಗಳನ್ನು ವಾಹಿನಿ ಗಮನಿಸುತ್ತದೆ ಎಂದರೆ ಸೂಪರ್” ಎಂದು ಆಶ್ಚರ್ಯಚಕಿತರಾಗಿ ರಿಪ್ಲೇ ಮಾಡಿದ್ದಾರೆ.
ಇತ್ತೀಚೆಗೆ ಕನ್ನಡ ಟಿವಿ ಧಾರಾವಾಹಿಗಳು ಡಿಜಿಟಲ್ ಯುಗಕ್ಕೆ ಹೊಂದಿಕೊಂಡಿವೆ. ಧಾರಾವಾಹಿಗಳ ಎಪಿಸೋಡ್‌ಗಳನ್ನು ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ, ಅಲ್ಲಿ ಸೀರಿಯಲ್ ಪ್ರೋಮೋಗಳನ್ನು ಪ್ರಚಾರ ಮಾಡಲಾಗುವುದು. ಇದರಿಂದ ವೀಕ್ಷಕರು ಸೀರಿಯಲ್‌ನ್ನು ಯಾವುದೇ ಸಮಯದಲ್ಲಿ ನೋಡಬಹುದು, ಅಲ್ಲಿಯೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಇದರಿಂದ ವಾಹಿನಿ ಹಾಗೂ ವೀಕ್ಷಕರ ಮಧ್ಯೆ ಅಂತರ ಸೃಷ್ಟಿ ಆಗೋದಿಲ್ಲ. ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾ ವೇದಿಕೆಗಳಿಂದ ವಾಹಿನಿಗೆ ಆದಾಯ ಬರುವುದು. ಆಗ ವೀಕ್ಷಕರ ಕಾಮೆಂಟ್‌ಗಳು ದೊಡ್ಡ ಪಾತ್ರ ವಹಿಸುತ್ತವೆ ಎನ್ನೋದನ್ನು ನೆನಪಿಡಬೇಕು.
ಸೀರಿಯಲ್‌ನಲ್ಲಿ ಆ ರೀತಿ ಆಗಬೇಕಿತ್ತು, ಹೀಗೆ ಆಗಿದೆ, ಅದು ತಪ್ಪು, ಇದು ಸರಿ, ಅವರು ಚೆನ್ನಾಗಿ ನಟಿಸಿದ್ರು ಹೀಗೆ ವೀಕ್ಷಕರು ಕಾಮೆಂಟ್ ಸೆಕ್ಷನ್ ಅಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದ್ದುಂಟು, ಅಷ್ಟೇ ಅಲ್ಲದೆ ಕೆಲವೊಮ್ಮೆ ಹಿಗ್ಗಾಮುಗ್ಗವಾಗಿ ತರಾಟೆಗೆ ತೆಗೆದುಕೊಂಡಿದ್ದೂ ಇದೆ. ಮುಂದೆ ಏನು ಮಾಡಬಹುದು? ಮುಂದೆ ಏನು ಆಗಬಹುದು ಎಂದು ಕೂಡ ಅವರು ಹೇಳುತ್ತಾರೆ. ಆಗ ಆ ಸೀರಿಯಲ್ ಸ್ಕ್ರಿಪ್ಟ್ ಹೇಗೆ ವರ್ಕ್ ಆಗ್ತಿದೆ? ಜನರಿಗೆ ಹೇಗೆ ತಲುಪಿದೆ ಎಂಬುದು ಗೊತ್ತಾಗುವುದು. ಸೀರಿಯಲ್ ಟೀಂಗೂ ಕೂಡ ಮುಂದೆ ಹೇಗೆ ಸ್ಕ್ರಿಪ್ಟ್ ಮಾಡಬೇಕು ಎನ್ನೋದು ತಿಳಿಯುವುದು.
ಸೀರಿಯಲ್ ನಿರ್ಮಾಪಕರು, ಬರಹಗಾರರು, ವಾಹಿನಿಯು ಸೇರಿಕೊಂಡು ಸೋಶಿಯಲ್ ಮೀಡಿಯಾ ಕಾಮೆಂಟ್‌ಗಳನ್ನು ಮಾನಿಟರ್ ಮಾಡುತ್ತಾರೆ, ಅದರ ಆಧಾರದಲ್ಲಿ ಕಥೆಯನ್ನು ಬದಲಾಯಿಸುತ್ತಾರೆ ಎನ್ನೋದು ಕೂಡ ಸತ್ಯ ಎನ್ನಲಾಗಿದೆ. ಕೆಲವೊಮ್ಮೆ ಕಥೆಯ ಬೇಡಿಕೆಗೆ ತಕ್ಕಂತೆ ವೀಕ್ಷಕರ ವಿರುದ್ಧವಾಗಿ ನಡೆದುಕೊಳ್ಳುವುದುಂಟು. ಆದರೆ ವೀಕ್ಷಕರ ಅಭಿಪ್ರಾಯಕ್ಕೆ ಬೆಲೆ ಕೊಡೋದಂತೂ ಹೌದು. ಇದರಿಂದ ಸೀರಿಯಲ್ ಟೀಂ ಕೂಡ ತಪ್ಪು ಮಾಡಿದ್ದರೆ ತಿದ್ದಿಕೊಳ್ಳುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.