ದೊರೆಸಾನಿ ಸೀರಿಯಲ್‌ನ ಯಾಕಷ್ಟು ಬೇಗ ಮುಗಿಸಿದ್ರೋ ನಂಗೊತ್ತಿಲ್ಲ ಅಂದು ಭಾವುಕರಾದ ಪೃಥ್ವಿರಾಜ್

By Suvarna NewsFirst Published Aug 23, 2022, 12:16 PM IST
Highlights

ಕಲರ್ಸ್ ಕನ್ನಡ ಚಾನಲ್‌ನಲ್ಲಿ ಪ್ರಸಾರವಾಗುತ್ತಿದ್ದ 'ದೊರೆಸಾನಿ' ಸೀರಿಯಲ್ ಇದ್ದಕ್ಕಿದ್ದ ಹಾಗೆ ವೈಂಡ್ ಅಪ್ ಆಗಿದೆ. ಸಡನ್ನಾಗಿ ಈ ಸೀರಿಯಲ್ ಮುಗಿಸೋದಕ್ಕೆ ಏನು ಕಾರಣ ಅಂತ ಜನ ಪ್ರಶ್ನೆ ಮಾಡ್ತಾನೇ ಇದ್ದಾರೆ. ಈ ಸೀರಿಯಲ್ ನಾಯಕ ಪಾತ್ರದಲ್ಲಿ ಮಿಂಚಿದ ಪೃಥ್ವಿರಾಜ್ ಅವರಿಗೂ ಇದಕ್ಕೆ ಕಾರಣ ಗೊತ್ತಿಲ್ವಂತೆ. ಅವರು ಈ ಬಗ್ಗೆ ವಿಷಾದದಿಂದ ಮಾತನ್ನಾಡಿದ್ದಾರೆ.

'ಹೌದು, ದೊರೆಸಾನಿ ಮುಗಿದಿದೆ. ನಾನು ನಿರ್ವಹಿಸುತ್ತಿದ್ದ ವಿಶ್ವನಾಥ್‌ ಆನಂದ್ ಪಾತ್ರವೂ ಮುಕ್ತಾಯಗೊಂಡಿದೆ. ಇದರಲ್ಲಿ ಯಾರದು ತಪ್ಪು ಅಂತ ಹೇಳೋಕೂ ಆಗೋದಿಲ್ಲ. ಯಾಕೆ ಹೀಗೆ ಸಡನ್ನಾಗಿ ಸೀರಿಯಲ್ ವೈಂಡ್‌ಅಪ್ ಆಯ್ತು ಅಂತ ಬಹಳ ಮಂದಿ ಕೇಳ್ತಿದ್ದಾರೆ. ತುಂಬ ಜನ ಮೆಸೇಜ್ ಮಾಡ್ತಿದ್ದಾರೆ. ಆತ್ಮೀಯರು ಕಾಲ್ ಮಾಡಿ ಕೇಳ್ತಿದ್ದಾರೆ. ಇದು ವಾಹಿನಿ ಮತ್ತು ಪ್ರೊಡಕ್ಷನ್ ಹೌಸ್ ನಿರ್ಧಾರ. ನನಗೆ ನೀವೆಲ್ಲ ಸಪೋರ್ಟ್ ಮಾಡಿದ್ದೀರಾ. ನಿಮ್ಮೆಲ್ಲರನ್ನು ನಾನು ಯಾವಾಗಲೂ ಮರೆಯುವುದಿಲ್ಲ..' ಹೀಗಂತ 'ದೊರೆಸಾನಿ' ಸೀರಿಯಲ್‌ನ ನಾಯಕ ವಿಶ್ವನಾಥ್‌ ಆನಂದ್ ಪಾತ್ರ ನಿರ್ವಹಿಸಿದ್ದ ಪೃಥ್ವಿರಾಜ್ ಹೇಳಿದ್ದಾರೆ. ಅವರು ಹೇಳಿದ ಹಾಗೇ ದೊರೆಸಾನಿ ಸೀರಿಯಲ್ ಮುಕ್ತಾಯವಾಗಿದೆ. ಇತ್ತೀಚೆಗೆ ತಾನೇ ಈ ಸೀರಿಯಲ್ ಒಂದು ವರ್ಷ ಪೂರೈಸಿತ್ತು. ಅಪ್ಪ ಮಗಳ ಪ್ರೀತಿಯ ಕಥಾವಸ್ತು ಹೊಂದಿದ್ದ ಸೀರಿಯಲ್‌ನಲ್ಲಿ ನಾಯಕಿ ದೀಪಿಕಾಗೂ ನಾಯಕ ಆನಂದ್‌ಗೂ ಮದುವೆ ನಡೆಯುವ ಮೂಲಕ ಕೊನೆ ಹಾಡಲಾಗಿದೆ. ಭಾನುವಾರ ಪ್ರಸಾರವಾಗಿದ್ದ ಮಹಾ ಸಂಚಿಕೆ ಎರಡು ಗಂಟೆಗಳ ಕಾಲ ಪ್ರಸಾರವಾಗಿದ್ದು, ಇದರಲ್ಲಿ ಏನೇನೆಲ್ಲ ಡ್ರಾಮಾಗಳು ನಡೆದಿದ್ದವು. ಮನಸ್ಸೊಳಗೇ ಇಷ್ಟಪಡುತ್ತಿದ್ದ ನಾಯಕಿ, ನಾಯಕನ ಮದುವೆಯೊಂದಿಗೆ ಈ ಸೀರಿಯಲ್‌ಗೆ ಶುಭಂ ಹೇಳಲಾಯ್ತು. ಈ ಸೀರಿಯಲ್ ನಿಂತದ್ದಕ್ಕೆ ಇದರಲ್ಲಿ ನಟಿಸುತ್ತಿದ್ದ ಕಲಾವಿದರಿಗೆಲ್ಲ ಬಹಳ ಬೇಸರವಾದಂತಿದೆ. ನಾಯಕ ಪೃಥ್ವಿರಾಜ್ ಇನ್‌ಸ್ಟಾಗ್ರಾಮ್ ಲೈವ್ ನಲ್ಲಿ ತಮ್ಮ ಮನದಿಂಗಿತ ಹಂಚಿಕೊಂಡಿದ್ದಾರೆ.

'ದೊರೆಸಾನಿ’ ಮುಗಿದಿದೆ. ವಿಶ್ವನಾಥನ್ ಆನಂದ್ ಅಧ್ಯಾಯ ಮುಗಿದಿದೆ. ಇದಕ್ಕೆ ಕಾರಣ ಏನು ಅಂತ ನನಗೆ ಗೊತ್ತಿಲ್ಲ’ ಎಂದ ಪೃಥ್ವಿರಾಜ್ ಮಾತಿಗೆ ಜನ ಬೇಸರ ವ್ಯಕ್ತಪಡಿಸಿದ್ದಾರೆ. ಹಲವರು ಈ ಸೀರಿಯಲ್ ನಿಲ್ಲಬಾರದಿತ್ತು ಅಂದಿದ್ದಾರೆ. ಈ ಸೀರಿಯಲ್‌ನ ಒಬ್ಬ ಫ್ಯಾನ್, 'ಮಂಗಳ ಗೌರಿ ಮದುವೆ ಸೀರಿಯಲ್ ಅಷ್ಟು ವರ್ಷಗಳಿಂದ ಪ್ರಸಾರವಾಗ್ತಿದೆ. ಜನ ಅದನ್ನು ನಿಲ್ಲಿಸಿ ಅಂತ ಎಷ್ಟು ಹೇಳಿದ್ರೂ ಆ ಸೀರಿಯಲ್ ನಿಲ್ಲಿಸುತ್ತಿಲ್ಲ. ಈ ಸೀರಿಯಲ್ ಚೆನ್ನಾಗಿತ್ತು. ಸಡನ್ನಾಗಿ ಯಾಕೆ ನಿಲ್ಲಿಸಿದ್ರು?' ಅಂತ ಕೇಳಿದ್ದಾರೆ. ಮತ್ತೊಬ್ಬ ವೀಕ್ಷಕರು, 'ಹಲವು ಸೀರಿಯಲ್‌ಗಳನ್ನು ಹತ್ತು ವರ್ಷಗಳ ಕಾಲ ಎಳೆದಾಡುವಾಗ ನಿಮ್ಮ ಸೀರಿಯಲ್‌ ಶುರುವಾಗಿ ಒಂದು ವರ್ಷವಾಯ್ತಷ್ಟೇ. ಇಷ್ಟು ಅಬ್ರಪ್ಟ್ ಆಗಿ ನಿಲ್ಲಿಸುವ ಅಗತ್ಯ ಏನಿತ್ತು, ಕೆಲವೊಂದು ಸೀರಿಯಲ್‌ಗಳು ತಲೆ ಬುಡ ಇಲ್ಲದ ಕತೆ ಇಟ್ಟುಕೊಂಡು ಹತ್ತು ವರ್ಷ ಆದರೂ ನಿಲ್ಲೂದಿಲ್ಲ' ಎಂದಿದ್ದಾರೆ. ಇನ್ನೊಬ್ಬರು, 'ಈ ಸೀರಿಯಲ್‌ನಲ್ಲಿ ನಿಮ್ಮ ಹಾಗೂ ಸತ್ಯವತಿಯ ಅಭಿನಯ ಬಹಳ ಚೆನ್ನಾಗಿತ್ತು. ಕಲರ್ಸ್ ಕನ್ನಡದವರು ಇಂಥಾ ಸೀರಿಯಲ್‌ನ ಅರ್ಧಕ್ಕೇ ನಿಲ್ಲಿಸಬಾರದಿತ್ತು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜೊತೆ ಜೊತೆಯಲಿ; ನಟ ಅನಿರುದ್ಧ್ ಜಾಗಕ್ಕೆ 'ವಿಕ್ರಾಂತ್ ರೋಣ' ನಿರ್ದೇಶಕ ಅನೂಪ್ ಭಂಡಾರಿ ಎಂಟ್ರಿ?

‘ದೊರೆಸಾನಿ’ ಮುಗಿಸಬೇಡಿ ಅಂತೆಲ್ಲಾ ಜನ ಹೇಳ್ತಿದ್ದಾರೆ. ಆದರೆ, ಅದು ನನ್ನ ಕೈಯಲ್ಲಿ ಇಲ್ಲ. ಯಾಕೆ ಈ ತರಹ ಆಯ್ತು ಅನ್ನೋದು ನನಗೂ ಗೊತ್ತಿಲ್ಲ. ನಮ್ಮ ಶೋಗೆ ಎಲ್ಲಾ ಕಡೆಯಿಂದಲೂ ಪ್ರಶಂಸೆ ಬಂತು. ಕಲರ್ಸ್ ಕನ್ನಡ ಮತ್ತು ನಮ್ಮ ಪ್ರೊಡಕ್ಷನ್ ಹೌಸ್‌ಗೆ ಥ್ಯಾಂಕ್ಸ್ ಹೇಳೋಕೆ ಇಷ್ಟ ಪಡುತ್ತೇನೆ. ಯಾಕಂದ್ರೆ, ಅವರೇ ನಿಮಗೆಲ್ಲಾ ನನ್ನನ್ನ ಪರಿಚಯಿಸಿರೋದು. ನನಗೆ ಒಳ್ಳೆ ಪ್ರಾಜೆಕ್ಟ್, ಒಳ್ಳೆ ರೋಲ್ ಕೊಟ್ಟಿದ್ದರು. ದೊರೆಸಾನಿ ಮುಗಿಯಿತು. ವಿಶ್ವನಾಥನ್ ಆನಂದ್ ಅಧ್ಯಾಯ ಮುಗಿಯಿತು. ಆದ್ರೆ, ಪೃಥ್ವಿರಾಜ್ ಮುಗಿದಿಲ್ಲ. ನಿಮ್ಮನ್ನ ನಾನು ಎಂಟರ್‌ಟೇನ್ ಮಾಡುತ್ತಲೇ ಇರುತ್ತೇನೆ. ನೀವೆಲ್ಲರೂ ನನಗೆ ಸಪೋರ್ಟ್ ಮಾಡುತ್ತಿರಿ. ಹೊಸ ಪ್ರಾಜೆಕ್ಟ್ ಮೂಲಕ ನಾನು ನಿಮ್ಮೆಲ್ಲರ ಮುಂದೆ ಬರುತ್ತೇನೆ. ಇದೇ ಪ್ರೀತಿ ಮುಂದುವರೆಯಲಿ' ಎನ್ನುವ ಮೂಲಕ ಅಭಿಮಾನಿಗಳನ್ನು ಸಮಾಧಾನ ಪಡಸುವ ಮಾತನ್ನು ಪೃಥ್ವಿರಾಜ್ ಆಡಿದ್ದಾರೆ.

'ನನಗೆ ತುಂಬಾ ಕಷ್ಟ ಆಗುತ್ತಿದೆ. ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ಇದು ನನ್ನ ಮನಸ್ಸಿಗೆ ತೀರಾ ಹತ್ತಿರವಾದ ಪ್ರಾಜೆಕ್ಟ್. ಹಗಲು ರಾತ್ರಿ ಇದಕ್ಕಾಗಿ ಕಷ್ಟ ಪಟ್ಟಿದ್ದೇವೆ. ನನಗೆ ತುಂಬಾ ಒಳ್ಳೆ ಹೆಸರು ತಂದುಕೊಡ್ತು. 200+ ಸಂಚಿಕೆಗಳನ್ನು ಮುಗಿಸಿದ್ವಿ. ಹೆಚ್ಚಿಗೆ ಏನೂ ಹೇಳೋಕೆ ಆಗ್ತಿಲ್ಲ. ‘ದೊರೆಸಾನಿ’ ಮುಗೀತು. ಇದು ಇಷ್ಟೇ ಅಂತ ಬರೆದಿತ್ತು ಅನ್ಸತ್ತೆ. ನಿಮ್ಮೆಲ್ಲರ ಸಪೋರ್ಟ್‌ಗೆ ಥ್ಯಾಂಕ್ಸ್’ ಎನ್ನುವ ಮೂಲಕ ತಮ್ಮ ಮೂರು ನಿಮಿಷದ ವೀಡಿಯೋ ಮುಕ್ತಾಯಗೊಳಿಸಿದ್ದಾರೆ ಪೃಥ್ವಿರಾಜ್. ಕಲರ್ಸ್ ಕನ್ನಡದಲ್ಲಿ ಈ ಹಿಂದೆ 'ಹೂಮಳೆ' ಅನ್ನೊ ಸೀರಿಯಲ್‌ಅನ್ನೂ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಹರ್ಷ ಭುವಿಯ ಮದುವೆಯ ಬಳಿಕ 'ಕನ್ನಡತಿ' ಸೀರಿಯಲ್ ಮುಕ್ತಾಯವಾಗುತ್ತೆ ಅನ್ನೋ ಮಾತು ಬಂದರೂ ವೀಕ್ಷಕರ ಅತ್ಯುತ್ತಮ ರೆಸ್ಪಾನ್ಸ್ ಕಂಡು ಆ ಸೀರಿಯಲ್ ಮುಂದುವರಿಸಿದ್ದರು.

ಅಬ್ಬಬ್ಬಾ, ವಿನಯಾ ಪ್ರಸಾದ್ ಮಗಳು ನೀವಂದುಕೊಂಡ ಹಾಗಲ್ಲ!

click me!