Kannadathi: ಭುವಿ ಕೈಗೆ ಸೂತ್ರ ಕೊಟ್ಟು ಪಾತ್ರ ಮುಗಿಸಿದ ಅಮ್ಮಮ್ಮ: ಇನ್ಮುಂದೆ ಸೀರಿಯಲ್ ನೋಡೋಲ್ಲವೆಂದ ವೀಕ್ಷಕರು!

By Suvarna NewsFirst Published Nov 8, 2022, 4:35 PM IST
Highlights

Kannadathi Serial Updates: ಅಮ್ಮಮ್ಮ ಎಂಬ ಗಟ್ಟಿ ಪಾತ್ರವನ್ನು ಕಲರ್ಸ್ ಕನ್ನಡ ತನ್ನ ಸೀರಿಯಲ್ ಕನ್ನಡತಿಯಲ್ಲಿ ಮುಗಿಸುತ್ತಿದೆ. ಅಮ್ಮಮ್ಮ ಇನ್ನಿಲ್ಲವೆಂಬಂತೆ ಪ್ರೋಮೋ ಪೋಸ್ಟ್ ಆಗಿದ್ದು, ಇನ್ನು ಮುಂದೆ ಸೀರಿಯಲ್ ನೋಡೋಲ್ಲ ಅಂತಿದ್ದಾರೆ ಪ್ರೇಕ್ಷಕರು.

ಹಸಿರು ಪೇಟೆಯ ಗಟ್ಟಿಗಿತ್ತಿಯರಾದ ರತ್ನಮಾಲಾ ಎಂಬ ಅಮ್ಮಮ್ಮ ಹಾಗೂ ಭುವಿ ಎಂಬ ಮುಗ್ಧ ಮನಸ್ಸಿನ, ಆದರೆ ಎಂಥದ್ದೇ ಕಷ್ಟ ಎದುರಾದರೂ ಧೈರ್ಯದಿಂದ ಎದುರಿಸುವ ಹಸಿರುಪೇಟೆಯ ಕುಡಿಗಳ ಮೇಲೆ ಡಿಪೆಂಡ್ ಆದ ಕಥೆ ಕನ್ನಡತಿ. ಹಳ್ಳಿಯಿಂದ ಬಂದು, ಬೆಂಗಳೂರಿನಲ್ಲಿ ಕೆಫೆ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಅಮ್ಮಮ್ಮನ ವ್ಯವಹಾರ ಚಾಕಚಕ್ಯತೆಗೆ ಎಲ್ಲರೂ ಫಿದಾ ಆಗಿದ್ದರು. ಸದಾ ಕನ್ನಡ ಮಾತನಾಡುವ ಭುವಿ ಎಂಬ ಹೆಸರಿನ ಹೀರೋಯಿನ್ ಹಾಗೂ ಹೀರೋ ಅಮ್ಮ ರತ್ನಮ್ಮನ ಪಾತ್ರದಿಂದಲೇ ಈ ಧಾರಾವಾಹಿ ಎಲ್ಲರ ಮನೆ ಮಾತಾಗಿತ್ತು. ಅತ್ಯಂತ ಗಟ್ಟಿ ವ್ಯಕ್ತಿತ್ವದ ಎರಡು ಹೆಣ್ಣು ಮಕ್ಕಳ ಪಾತ್ರಗಳಿಂದ ಈ ಧಾರಾವಾಹಿ ಟಿಆರ್‌ಪಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಸುಳ್ಳಲ್ಲ. 

ಆದರೆ, ಎಲ್ಲವಕ್ಕೂ ಕೊನೆ ಎಂಬುವುದು ಇರಲೇಬೇಕಲ್ಲ? ಹಲವು ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದ ರತ್ನಮ್ಮನ ಪಾತ್ರ ಮುಗಿಯುತ್ತಿದೆ. ಭುವಿ ಕೈಗೆ ಸೂತ್ರ ಕೊಟ್ಟು ಪಾತ್ರ ಮುಗಿಸಿದ ಅಮ್ಮಮ್ಮ ಎಂಬ ಪ್ರೋಮೋ ಪೋಸ್ಟ್ ಆಗಿದೆ. ಎಂಥ ಮಕ್ಕಳಿಗಾದರೂ ಅಮ್ಮ (Mother) ಎಂಬ ಭಾವ ಹುಟ್ಟುವಂತೆ ಅಭಿನಯಿಸುತ್ತಿದ್ದ ಅಮ್ಮಮ್ಮನ ಪಾತ್ರ ಕೊನೆಯಾಗುತ್ತಿರುವುದನ್ನು ಕಲ್ಪಿಸಿಕೊಳ್ಳಲೂ ಕನ್ನಡತಿ ಅಭಿಮಾನಿಗಳಿಗೆ (Fans) ಕಷ್ಟವಾಗುತ್ತಿದೆ ಎಂಬುವುದು ಅವರು ಮಾಡುತ್ತಿರುವ ಕಮೆಂಟ್ಸ್‌ನಿಂದಲೇ ಗೊತ್ತಾಗುತ್ತೆ. ಅಮ್ಮಮ್ಮನ ಪಾತ್ರದ ಜೊತೆ ಕನ್ನಡತಿ ಕಥೆಯೂ ಮುಗಿಯಿತೆಂದು ಹೇಳುತ್ತಿದ್ದಾರೆ ವೀಕ್ಷಕರು. 

ಕನ್ನಡತಿ ಬೋರ್, ಅತ್ತಿದ್ದು ಸಾಕು, ಬೋಲ್ಡ್ ಆಗಲಿ ಭುವಿ ಅಂತಿದ್ದಾರೆ ವೀಕ್ಷಕರು

ದಯವಿಟ್ಟು ಅಮ್ಮಮ್ಮನ ಪಾತ್ರ ಕನ್ನಡತಿ ಧಾರವಾಹಿಯಲ್ಲಿ ಇದ್ದರೇನೆ ಚಂದ. ಮತ್ತೆ ಯಾರೂ ಆ ಪಾತ್ರಕ್ಕೆ (Character) ಜೀವ (Life) ತುಂಬಲಾರರು ಎಂದು ಒಬ್ಬರು ಹೇಳಿದರೆ, ಅಮ್ಮಮ್ಮ ಸಾಯುವುದು ಕನಸಾಗಲಿ. ಅಷ್ಟಕ್ಕೂ ಹೀಗೆ ಪಾತ್ರವನ್ನು ಸಾಯಿಸಿ ಮೂರು ನಾಲ್ಕು ದಿನಗಳ ನಂತರ ಮತ್ತೆ ಕರೆ ತರುವ ಕೀರ್ತಿ ಈ ಚಾನೆಲ್‌ಗಿದೆ ಎನ್ನುವ ಮೂಲಕ ಕಲರ್ಸ್ ಕನ್ನಡ ಕಾಲೆಳೆದವರೂ ಇದ್ದಾರೆ. 

ಹಾಗಂಥ ಎಲ್ಲ ನೆಟ್ಟಿಗರು, ವೀಕ್ಷಕರ ಕಮೆಂಟ್ಸ್ (Comments) ಸಹ ನೆಗಟಿವ್ ಆಗಿಲ್ಲ. ಅಮ್ಮಮ್ಮನ ಪಾತ್ರವನ್ನು ಅಂತ್ಯಗೊಳಿಸುವ ಮೂಲಕ ಕನ್ನಡತಿ ಧಾರಾವಾಹಿಗೆ ಹೊಸ ತಿರುವು ಸಿಗಲಿದೆ. ಇನ್ನು ಕಥೆ ಭುವಿ ಹಾಗೂ ಹರ್ಷನ ಸುತ್ತವೇ ಸುತ್ತಲಿದ್ದು, ಕಥೆ ಇಂಟರೆಸ್ಟಿಂಗ್ ಆಗಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಅಮ್ಮಮ್ಮನ ಪಾತ್ರ, ಪಾತ್ರದ ನಿರ್ವಹಣೆ, ಪಾತ್ರ ನಿರ್ವಹಿಸಲು ಬೇಕಾಗಿರುವ ಅಮೂಲ್ಯವಾದ ಮಾತು ಮತ್ತು ವಾಕ್ಯಗಳ ಕೌಶಲ್ಯ ತುಂಬಾ ಅದ್ಭುತವಾಗಿದ್ದವು. ಸಂಬಂಧ (Relationship), ಭಾವನೆ (Emotion) ಸಾಧನೆ, ಸಂಪೂರ್ಣತೆ (Completeness) ಗುರಿ ಸಾಧಿಸುವಿಕೆ ಒಂದೊಂದು ಸನ್ನಿವೇಶವನ್ನೂ ತುಂಬಾ ಅರ್ಥಪೂರ್ಣವಾಗಿ, ನೋಡುಗರ ಮನಸ್ಸನ್ನು ಅಹ್ಲಾದಿಸುವಂತೆ ಕಣ್ಣುಗಳಲ್ಲಿ ನೀರು ತುಂಬಿಕೊಂಡು, ತನ್ನ ಜೀವನದ ಘಟನೆಗಳನ್ನ ಕ್ಷಣಮಾತ್ರದಲ್ಲಿ ಕಣ್ಣ ಮುಂದೆ ತಂದು ಕೊಟ್ಟರು. ಮುಗಿಯದ ಪಾತ್ರ ಅಮ್ಮಮ್ಮ. ತುಂಬಾ ತುಂಬಾ ಧನ್ಯವಾದಗಳು ಬರಹಗಾರರಿಗೆ ಮತ್ತು ಪಾತ್ರಧಾರಿಗೆ ಹಾಗೂ ಕನ್ನಡತಿಯ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳೆಂದಿದ್ದಾರೆ ಮತ್ತೊಬ್ಬರು.

ಅಮ್ಮಮ್ಮನನ್ನು ಸಾಯಿಸಲು ಅಮೆರಿಕಕ್ಕೆ ಹೋಗಿ, ಹುಷಾರಾಗಿ ಬಂದಂತೆ ತೋರಿಸಿದ್ದೇಕೆ? ಭುವಿ ಮನೆಗೆ ಕಾಲಿಟ್ಟ ಕೂಡಲೇ ಅಮ್ಮಮ್ಮ ಸತ್ತರು ಎಂಬುದನ್ನು ತಪ್ಪಿಸಿಲಿಕ್ಕಾಗಿ ಮಾತ್ರ ಅಮ್ಮಮ್ಮನ ಆಯುಸ್ಸನ್ನು ಇನ್ನಷ್ಟು ಮುಂದಕ್ಕೆ ಹಾಕಿದ್ದು ಬಿಟ್ಟರೆ, ಅಮ್ಮಮ್ಮ ಅಮೆರಿಕದಲ್ಲಿ ಚಿಕಿತ್ಸೆ ಪಡೆದು, ಬಂದು ಮಾಡಿದ್ದು ಏನೂ ಇಲ್ಲ. ಸುಮ್ಮನೆ ಕಥೆ ಒಂದಷ್ಟು ದಿನ ಮುಂದಕ್ಕೆ ಹೋಗದೆ, ಇದ್ದ ಜಾಗದಲ್ಲೇ ಗಿರಕಿ ಹೊಡೆಯಿತು ಅಷ್ಟೇ. ಇನ್ನು ವೀಕ್ಷಕರಿಗೆ ಈ ಭುವಿಯ ಬೋರಿಂಗ್ ಅಭಿನಯ ನೋಡುವ , ಉಪದೇಶ ಕೇಳುವ ದೌರ್ಭಾಗ್ಯ ಅಷ್ಟೇ, ಎಂದೂ ಸಂಕಟ ತೋಡಿಕೊಂಡಿದ್ದಾರೆ. 

Kannadathi: ಅಮ್ಮಮ್ಮನ ಕೊಲೆ ಯತ್ನದ ಕೇಸ್‌ ಸಾನ್ಯಾ ಮೇಲೆ ಬೀಳೋ ಕ್ಷಣ ಹತ್ತಿರದಲ್ಲಿದೆ!

ನೆಗಟಿವ್ ಆಗಲಿ, ಪಾಸಿಟಿವ್ ಆಗಲಿ ಕನ್ನಡತಿ ಎಂಬ ಧಾರಾವಾಹಿ ನೋಡುಗರಿಗೆ ಅಮ್ಮಮ್ಮನ ಸಾವು ನೋವು ತಂದಿರುವುದಂತೂ ಸತ್ಯ. ಅಪ್ಪಟ ಕನ್ನಡ ಮಾತನಾಡಿಯೇ ವೀಕ್ಷಕರ ಹೃದಯ ಗೆದ್ದ ಭುವಿಗೆ ಅಮ್ಮಮ್ಮ ಇದ್ದು, ಮತ್ತಷ್ಟು ಸಪೋರ್ಟ್ ಮಾಡಬೇಕಿತ್ತು ಎಂಬುವುದು ವೀಕ್ಷಕರ ಅಭಿಪ್ರಾಯ. ಒಟ್ಟಿನಲ್ಲಿ ಇನ್ನಾದರೂ ಭುವಿ ಮತ್ತಷ್ಟು ಗಟ್ಟಿಯಾಗಿ, ಅಮ್ಮಮ್ಮ ಕಟ್ಟಿದ ಸಾಮ್ರಾಜ್ಯವನ್ನು ಹೇಗೆ ಬೆಳೆಸುತ್ತಾಳೆ, ಮನೆಯವರ ಪ್ರೀತಿಯನ್ನು ಹೇಗೆ ಗೆಲ್ಲುತ್ತಾಳೋ ಕಾದು ನೋಡಬೇಕು. ಆದರೆ, ಇನ್ನೂ ಅಳುಮುಂಜಿಯಾಗಿಯೇ, ತಾನು ಮುಗ್ಧೆ ಅನ್ನೋ ರೀತಿ ಈ ಪಾತ್ರ ಮುಂದುವರಿದರೆ ಮಾತ್ರ ಓದುಗರಿಗೆ ನೋಡಲು ಬೋರ್ ಎನಿಸುವುದು ಗ್ಯಾರಂಟಿ. ನೋಡೋಣ ಕಥೆ ಹೇಗೆ ಮುಂದುವರಿಯುತ್ತೋ ಎಂದು. 

ಅಮ್ಮಮ್ಮ ಆಗಿ ಮನೋಜ್ಞವಾಗಿ ಚಿತ್ಕಲಾ ಬಿರಾದಾರ್ ಅವರು ಅಭಿನಯಿಸುತ್ತಿದ್ದರು. 

click me!