ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ರೂಪೇಶ್ ರಾಜಣ್ಣನ ಮಾತಿಗೆ ದಿವ್ಯಾ ಕಣ್ಣೀರಾಕಿದ್ದಾರೆ.
ಬಿಗ್ ಬಾಸ್ ಸೀಸನ್ 9, 7ನೇ ವಾರಕ್ಕೆ ಕಾಲಿಟ್ಟಿದೆ. 6ನೇ ವಾರ ಬಿಗ್ ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಔಟ್ ಆಗಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ. ಸ್ಪರ್ಧಿಗಳ ನಡುವೆ ಕಿತ್ತಾಟ, ಜಗಳ ಕೂಡ ಜೋರಾಗಿದೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಯಾರ್ ಫೇಕ್ ಯಾರ್ ರಿಯಲ್ ಎನ್ನುವ ಟಾಸ್ಕ್ ನೀಡಿದೆ. ಈ ಟಾಸ್ಕ್ ಪ್ರಕಾರ ಬಿಗ್ ಮನೆಯಲ್ಲಿ ಯಾರು ಫೇಕ್ ಯಾರು ರಿಯಲ್ ಎಂದು ಹೇಳಬೇಕು. ಈ ಟಾಸ್ಕ್ ಈಗ ಬಿಗ್ ಮನೆಯಲ್ಲಿ ಕಿಚ್ಚು ಹೊತ್ತಿಸಿದೆ. ರೂಪೇಶ್ ರಾಜಣ್ಣ ಮತ್ತು ದಿವ್ಯಾ ಉರುಡುಗ ನಡುವಿನ ವಾಗ್ವಾದ ನಡೆದಿದೆ.
ದಿವ್ಯಾ ಉರುಡುಗ ಈ ಮನೆಯಲ್ಲಿ ಫೇಕ್ ಎಂದು ರೂಪೇಶ್ ರಾಜಣ್ಣ ಹೇಳಿದರು. ಜೊತೆಗೆ ಉದಾಹರಣೆ ಸಮೇತ ವಿವರಿಸಿದರು. ಹಾಡು ಮಾಡಿದ್ವಿ ಅದನ್ನು ಎಲ್ಲೂ ಸಹ ರೂಪೇಶ್ ರಾಜಣ್ಣ ಮಾಡಿದ ಟ್ಯೂನ್ ಎಂದು ಹೇಳಿಲ್ಲ, ನಾನೇ ಮಾಡಿದ್ದು ಎನ್ನುವ ಹಾಗೆ ಬಿಂಬಿಸಿದರು. ಇನ್ನೂ ಕಿಚನ್ ನಲ್ಲಿ ಒಂದು ಲೋಟ ಒಡೆದು ಹೋದ ಬಗ್ಗೆಯೂ ರೂಪೇಶ್ ರಾಜಣ್ಣ ಉದಾಹರಣೆ ನೀಡಿ ದಿವ್ಯಾಗೆ ಚುಚ್ಚು ಮಾತನಾಡಿದರು. ರೂಪೇಶ್ ಮಾತಿನಿಂದ ದಿವ್ಯಾ ಗಳಗಳನೆ ಅಳಲು ಶುರು ಮಾಡಿದರು. ತಾನೆಲ್ಲೂ ನಾನು ಬರೆದ ಹಾಡೆಂದು ಹೇಳಿಕೊಂಡಿಲ್ಲ ಎಂದು ದಿವ್ಯಾ ಬಿಕ್ಕಿ ಬಿಕ್ಕಿ ಅತ್ತರು. ದಿವ್ಯಾ ಅವರನ್ನು ಉಳಿದ ಸ್ಪರ್ಧಿಗಳು ಸಮಾಧಾನ ಪಡಿಸಿದರು. ಇಷ್ಟಕ್ಕೆ ಸುಮ್ಮನಾಗದ ರೂಪೇಶ್, ಹೇಳಿದ್ದಕ್ಕೆಲ್ಲ ಅಳುತ್ತಿದ್ದರೆ ಎಲ್ಲರೂ ಸೇರಿಕೊಂಡು ಅಳೋಣ ಎಂದು ಮತ್ತೆ ವ್ಯಂಗ್ಯ ಮಾಡಿದರು.
ಇಷ್ಟು ದಿನ ಚೆನ್ನಾಗಿಯೇ ಮಾತನಾಡುತ್ತಿದ್ದರು, ಈಗ ಹೀಗೆಲ್ಲ ಹೇಳುತ್ತಿದ್ದಾರೆ ಎಂದರೆ ನಾನು ಫೇಕ್ ಹಾ ಅಥವಾ ಅವರಾ ಎಂದು ಪ್ರಶ್ನೆ ಮಾಡಿದರು. ಈ ಸಂಚಿಕೆ ಇಂದು (ನವೆಂಬರ್ 8) ಪ್ರಸಾರವಾಗುತ್ತಿದೆ.
BBK9; ನಿಯಮ ಬ್ರೇಕ್ ಮಾಡಿದ್ದು ಅರ್ಯವರ್ಧನ್ ಆದರೆ ಕಿತ್ತಾಡಿದ್ದು ರೂಪೇಶ್ ಮತ್ತು ಅರುಣ್ ಸಾಗರ್
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು
ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನಿ ನಕ್ಷತ್ರ ಧರಾವಾಹಿ ಖ್ಯಾತಿಯ ನಟಿ ಮಯೂರಿ, ದೀಪಿಕಾ ದಾಸ್, ನವಾಜ್, ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ, ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.
BBK9 ಆಕೆ ಇಲ್ಲದೆ ಬದುಕುವುದು ಕಷ್ಟ; ಸಾನ್ಯಾ ಮಡಿಲಿನಲ್ಲಿ ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ!
ಮನೆಯಿಂದ ಹೊರಹೋಗಿರುವ ಸ್ಪರ್ಧಿಗಳು
ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ್ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. 4ನೇ ವಾರ ಮಯೂರಿ ಹಾಗೂ 5ನೇ ವಾರ ನೇಹಾ ಗೌಡ, 6ನೇ ವಾರ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 12 ಮಂದಿ ಇದ್ದಾರೆ. 7ನೇ ವಾರ ಯಾರು ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.