
ಕಿರುತೆರೆಯ ಟಾಕಿಂಗ್ ಕ್ವೀನ್, ಮಜಾ ಟಾಕೀಸ್ ಸುಂದರಿ ರಾಣಿ ಅಲಿಯಾಸ್ ಶ್ವೇತಾ ಚೆಂಗಪ್ಪ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಶ್ವೇತಾ ಸೋಂಕಿನ ಬಗ್ಗೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
'ಎಲ್ಲಾ ರೀತಿಯ ಮುಂಜಾಗೃತ ಕ್ರಮಗಳನ್ನು ಕೈಗೊಂಡರೂ, ನನಗೆ ಕೋವಿಡ್19 ಪಾಸಿಟಿವ್ ಎಂದು ತಿಳಿದು ಬಂದಿದೆ. ನಾಗರೀಕ ಪ್ರಜೆಯಾಗಿ ನಾನು ನನ್ನ ವೈದ್ಯರು ನೀಡುವ ಸಲಹೆಯಿಂದ ಮನೆಯಲ್ಲಿಯೇ ಕ್ವಾರಂಟೈನ್ ಆಗಿರುವೆ. ಔಷಧಿಗಳನ್ನು ಸೇವಿಸುತ್ತಿರುವೆ. ನನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ,' ಎಂದು ಶ್ವೇತಾ ಮನವಿ ಮಾಡಿಕೊಂಡಿದ್ದಾರೆ. ದಯವಿಟ್ಟು ಈ ವೈರಸ್ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬೇಡಿ. ಹುಷಾರಾಗಿ ಇರಬೇಕು, ಎಂದು ಕೇಳಿ ಕೊಂಡಿದ್ದಾರೆ.
ಕೊರೋನಾ ವ್ಯಾಕ್ಸೀನ್ ಫಸ್ಟ್ ಡೋಸ್ ಪಡೆದ ಪುನೀತ್ ರಾಜ್‌ಕುಮಾರ್
ಕೆಲವು ದಿನಗಳ ಹಿಂದೆ ಶ್ವೇತಾ ಚೆಂಗಪ್ಪ ಅವರ ತಾಯಿ ಕೊರೋನಾ ಲಸಿಕೆ ಪಡೆದುಕೊಂಡಿದ್ದರು. 'ನಮ್ಮ ಮನೆಯ ಸ್ಟ್ರಾಂಗ್ ಪಿಲ್ಲರ್ ಆಂದ್ರೆ ಅಮ್ಮ ಅಪ್ಪ. ಬೆಂಗಳೂರಿನಲ್ಲಿ ಅಮ್ಮ ಮೊದಲ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಅಪ್ಪ ಕೂರ್ಗ್‌ನಲ್ಲಿರುವ ಕಾರಣ ಅಲ್ಲಿಯೇ ವ್ಯಾಕ್ಸಿನ್ ಪಡೆದುಕೊಂಡರು. ನಮ್ಮ ಅತ್ತೆ-ಮಾವ ಅವರಿಗೂ ವ್ಯಾಕ್ಸಿನ್ ಕೊಡಿಸಲಾಗಿದೆ. ನಿಮ್ಮ ಮನೆಯಲ್ಲಿ ಅಪ್ಪ ಅಮ್ಮ ಅಜ್ಜಿ ತಾತ ಅತ್ತೆ ಮಾವ ಎಲ್ಲರಿಗೂ vaccination ಆಯ್ತಾ? ದಯವಿಟ್ಟು ನಿಮ್ಮ ಆಪ್ತರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ,' ಎಂದು ಶ್ವೇತಾ ಪೋಸ್ಟ್ ಮಾಡಿದ್ದರು.
ಶ್ವೇತಾ ಚೆಂಗಪ್ಪ ಅವರಿಗೆ ಎರಡು ವರ್ಷದ ಮಗನಿರುವ ಕಾರಣ ನೆಟ್ಟಿಗರು ಜಿಯಾನ್ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ನಿಮ್ಮ ಮಗ ಹೇಗಿದ್ದಾನೆ? ತಾತ ಅಜ್ಜಿ ಸ್ವಲ್ಪ ದಿನ ನೋಡಿಕೊಳ್ಳಲಿ. ನೀವು ರೆಸ್ಟ್ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ.
ನಟಿ ಭೂಮಿ ಪಡ್ನೆಕರ್, ನಟ ವಿಕ್ಕಿ ಕೌಶಲ್‌ಗೆ ಕೊರೋನಾ ಪಾಸಿಟಿವ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.