
ಬೆಂಗಳೂರು(ಏ. 11) ಏನ್ರೀ ಲಕ್ಕು ನಿಮ್ಮದು... ಶಮಂತ್ ಈ ವಾರ ಬಿಗ್ ಬಾಸ್ ನಿಂದ ಎಲಿಮಿನೇಟ್ ಆದರೂ ಬಚಾವ್ ಆಗಿದ್ದಾರೆ. ವೈಜಯಂತಿ ತಾವೇ ಮೆನಯಿಂದ ಹೊರಬರುವ ತೀರ್ಮಾನ ತೆಗೆದುಕೊಂಡ ಕಾರಣ ಶಮಂತ್ ಸೇವ್ ಆಗಿದ್ದಾರೆ. ಆದರೆ ಶಮಂತ್ ಮುಂದಿನ ವಾರ ನೇರವಾಗಿ ನಾಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ನಲ್ಲಿ ಹಿಂದೆ ಇಂಥದ್ದು ನಡೆದಿಲ್ಲ. ಇದೇ ಮೊದಲ ಸಾರಿ ಹೀಗೆ ಆಗಿದ್ದು ಎಂದು ಕಿಚ್ಚ ಸುದೀಪ್ ವಿವರಿಸಿದರು. ಮೊದಲ ವಾರ ನಾಯಕನಾಗಿದ್ದ ಶಮಂತ್ ಗೆ ಎರಡನೇ ವಾರವೂ ನಾಯಕನ ಪಟ್ಟ ಒಲಿದು ಬಂದಿತ್ತು.
ಇದಾದ ಮೇಲೆ ಶಮಂತ್ ಗೋಸ್ಕರ ಇಡೀ ಮನೆಯವರು ಬೆಡ್ ರೂಂ ಬಿಟ್ಟುಕೊಟ್ಟಿದ್ದರು. ಆ ವಾರ ಮನೆಯವರು ಹೊರಗೆ ನಿದ್ರಿಸಿದರೆ ಶಮಂತ್ ಕಳಪೆ ಬೋರ್ಡ್ ನೇತಾಕಿಕೊಂಡು ಜೈಲಿನಲ್ಲಿ ಮಲಗಿದ್ದರು.
ಶಮಂತ್ ಗೆ ಒಂದಾದ ಮೇಲೆ ಒಂದು ಅದೃಷ್ಟ ಒಲಿದು ಬಂದಂತೆ ಆಗಿದೆ. ಮನೆಯಲ್ಲಿಯೂ ಇದೇ ಮಾತುಕತೆಗಳಾಗಿವೆ. ನಾನು ಈ ರೇಸ್ ಗೆ ಸರಿಯಾದ ವ್ಯಕ್ತಿ ಅಲ್ಲ ಎಂಬ ಕಾರಣಕ್ಕೆ ವೈಜಯಂತಿ ಅಡಿಗ ಹೊರಹೋಗಿದ್ದಾರೆ.
ಒಬ್ಬರ ಅವಕಾಶವನ್ನು ಕಸಿದುಕೊಂಡಿರಿ.. ಇನ್ನು ಮುಂದೆ ಹೀಗೆ ಯಾವ ಸಂದರ್ಭದಲ್ಲಿಯೂ ಮಾಡಬೇಡಿ ಎಂದು ಕಿಚ್ಚ ಸುದೀಪ್ ವೈಜಯಂತಿಗೆ ಸಲಹೆ ನೀಡಿದರು. ಮನೆಗೆ ಹೋಗಿ ನಾಲ್ಕೇ ದಿನಕ್ಕೆ ವೈಜಯಂತಿ ಹೊರಬಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.