
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯಲ್ಲಿ ಶ್ವೇತಾ ಮತ್ತು ಲಕ್ಷಣಗೆ ತಂದೆ ಆಗಿ ಕಾಣಿಸಿಕೊಳ್ಳುತ್ತಿರುವ ಚಂದ್ರಶೇಖರ್ ಪಾತ್ರವನ್ನು ವೀಕ್ಷಕರು ಹೇಗೆ ಸ್ವೀಕರಿಸುತ್ತಿದ್ದಾರೆ ಎಂದು ಖಾಸಗಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಗೋವಾದಲ್ಲಿ ಮದುವೆ ಸಂಭ್ರಮ ಮಾಡುತ್ತಿರುವ ಇಡೀ ತಂಡ ಕಲರ್‌ಫುಲ್ ಆಗಿ ಕಾಣಿಸಿಕೊಳ್ಳುತ್ತಿದೆ.
'ಇಷ್ಟು ದೊಡ್ಡ ಶೋನಲ್ಲಿ ನಾನು ಭಾಗಿಯಾಗಿರುವುದಕ್ಕೆ ಖುಷಿಯಾಗಿರುವೆ ಇದರಲ್ಲಿ ದೊಡ್ಡ ಸ್ಟಾರ್‌ಗಳು ಅಭಿನಯಿಸುತ್ತಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ನಾನು ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡಿರುವೆ ಅದರೆ ಲಕ್ಷಣ ಧಾರಾವಾಹಿ ತುಂಬಾನೇ ಡಿಫರೆಂಟ್ ಆಗಿದೆ. ಸಮಾಜದಲ್ಲಿ ಚಂದ್ರಶೇಖರ್ ತುಂಬಾನೇ ಪ್ರಭಾವಿ ವ್ಯಕ್ತಿ ಆದರೆ ಮನೆ ಮತ್ತು ಹೆಣ್ಣು ಮಕ್ಕಳ ವಿಚಾರದಲ್ಲಿ ಸೂಕ್ಷ್ಮವಾಗಿರುತ್ತಾರೆ. ಬಣ್ಣ ತಾರತಮ್ಯದಿಂದ ಅಮ್ಮ,ಅಪ್ಪ ಮತ್ತು ಮಗಳ ನಡುವೆ ಸಂಬಂಧ ಹಾಳಾಗಿದೆ ಆದರೆ ಈ ಸಂಬಂಧದಲ್ಲಿ ಹಲವು ಭಾವನೆಗಳು ಮರೆಮಾಡಲಾಗಿದೆ' ಎಂದು ಇಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಚಂದ್ರಶೇಖರ್ ಪಾತ್ರ ನಿಭಾಯಿಸುವುದು ತುಂಬಾನೇ ಕಷ್ಟ ಎನ್ನುತ್ತಾರೆ ಕೀರ್ತಿ. 'ನನಗೆ ಚಂದ್ರಶೇಖರ್ ಪಾತ್ರ ಮಾಡುವುದು ದೊಡ್ಡ ಚಾಲೆಂಜ್ ಆಗಿದೆ. ಈ ಪಾತ್ರದಲ್ಲಿ ನಾನು ಶಾಂತಿ ಮತ್ತು ಸಂಯೋಜಿತ ನೋಟ ಕಾಪಾಡಿಕೊಳ್ಳಬೇಕು. ಇಷ್ಟು ದಿನ ಮಾಡಿಕೊಂಡು ಬಂದ ಪಾತ್ರದಲ್ಲಿ ದಿಟ್ಟತನವಿತ್ತು. ಲಕ್ಷಣದಲ್ಲಿ ನಾನು ಚಂದ್ರಶೇಖರ್ ಆಗಿರುವುದಕ್ಕೆ ಎಂಜಾಯ್ ಮಾಡುತ್ತಿರುವೆ' ಎಂದು ಕೀರ್ತಿ ಹೇಳಿದ್ದಾರೆ. ಕಿರುತೆರೆಯ ಮೋಸ್ಟ್ ಹ್ಯಾಪೆನಿಂಗ್ ಫಾದರ್ ಆಗಿರುವ ಚಂದ್ರಶೇಖರ್ ನಿಜ ಜೀವನದಲ್ಲಿ ಇಬ್ಬರು ಟೀನೆಜರ್‌ಗಳಿಗೆ ತಂದೆ.
'ನನಗೆ ನನ್ನ ಮಕ್ಕಳೇ ಪ್ರಪಂಚ. ನನ್ನ ಮಗಳಿಗೆ 18 ವರ್ಷ, ಮಗನಿಗೆ 15 ವರ್ಷ. ಇಬ್ಬರನ್ನೂ ಸಮವಾಗಿ ಪ್ರೀತಿಸುತ್ತೀನಿ. ಅವರ ವಯಸ್ಸಿಗೆ ನಾನು ರಿಲೇಟ್ ಆಗಿ ಅವರೊಟ್ಟಿಗೆ ಫ್ರೆಂಡ್ಲಿಯಾಗಿರುವುದಕ್ಕೆ ಪ್ರಯತ್ನ ಮಾಡುತ್ತೀನಿ. ಇಬ್ಬರು ಟೀನೆಜ್ ಮಕ್ಕಳನ್ನು ಹ್ಯಾಂಡಲ್ ಮಾಡುವುದು ತುಂಬಾನೇ ಕಷ್ಟ. ಮಕ್ಕಳು ಮಾಡಿದ ತಪ್ಪುಗಳನ್ನು ಕ್ಷಮಿಸಿ ಅವರನ್ನು ಸರಿ ದಾರಿಗೆ ತರುವುದೇ ನಿಜವಾದ ಪೇರೆಂಟಿಂಗ್. ನನ್ನ ಮಗ ನನ್ನ ನಟನೆ ನೋಡುವುದಿಲ್ಲ ಆದರೆ ಮಗಳು ಒಂದು ದಿನವೂ ಮಿಸ್ ಮಾಡದೆ ಶೋ ನೋಡುತ್ತಾಳೆ. ಲಕ್ಷಣದ ಪ್ರತಿಯೊಂದು ಎಪಿಸೋಡ್ ಇಷ್ಟ ಪಡುತ್ತಾಳೆ. ನಾನು ನಟನೆ ಆಯ್ಕೆ ಮಾಡಿಕೊಂಡಿರುವುದಕ್ಕೆ ಇಬ್ಬರಿಗೂ ಸಂತೋಷವಿದೆ' ಎಂದಿದ್ದಾರೆ ಕೀರ್ತಿ.
'ಧಾರಾವಾಹಿಯಲ್ಲಿ ನನ್ನ ಪಾತ್ರ ನೋಡಿ ನಿಜ ಜೀವನದಲ್ಲೂ ನಾನು ಹಾಗೆ ಇರಬೇಕು ಎಂದು ಮಗಳು ಇಷ್ಟ ಪಡುತ್ತಾಳೆ. ರಿಯಲ್ ಲೈಫ್ ಅಪ್ಪನಿಗಿಂತ ತೆರೆ ಮೇಲೆ ನೋಡುವ ಅಪ್ಪನೇ ಆಕೆಗೆ ಇಷ್ಟ. ಆದರೆ ಜೀವನದಲ್ಲಿ ನನಗೆ ಹಲವು ಜವಾಬ್ದಾರಿಗಳಿದೆ. ಕೆಲವೊಂದು ಸಲ ನಾನು ತುಂಬಾನೇ ಸ್ಟ್ರಿಟ್ ಆಗಿರುವೆ ಅನಿಸಬಹುದು ಆದರೆ ಆಕೆಗೆ ನಾನೊಬ್ಬ ಪ್ರೊಟೆಕ್ಟಿವ್ ಫಾದರ್ ಆಗಿರುವೆ. ಹೇಗೆ ಜೀವನ ಮಾಡಬೇಕು ಹೇಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿಕೊಟ್ಟಿರುವೆ. ಕೆಲವೊಂದು ವಿಚಾರಗಳಿಗೆ ನಾನು No ಹೇಳಿದಾಗ ಬೇಸರ ಮಾಡಿಕೊಳ್ಳುತ್ತಾಳೆ ಏಕೆಂದರೆ ಆನ್ ಸ್ಕ್ರಿನ್‌ನಲ್ಲಿ ನಾನು ಹಾಗಿಲ್ಲ. ಅದು ಕೇವಲ ಪಾತ್ರ ರಿಯಲ್‌ನಲ್ಲಿ ಅಸಾಧ್ಯ ಎಂದು ಹಲವು ಬಾರಿ ಹೇಳಿರುವೆ' ಎಂದು ಕೀರ್ತಿ ಮಾತನಾಡಿದ್ದಾರೆ.
'ಈಗಿನ ಮಕ್ಕಳ ಲೈಫ್‌ಸ್ಟೈಲ್ ನೋಡಿ ನನ್ನ ಜನರೇಷನ್ ಪೋಷಕರಿಗೆ ಕಷ್ಟವಾಗುತ್ತದೆ. ಈಗಿನ ಮಕ್ಕಳಿಗೆ ಸಿಕ್ಕಿರುವ ಎಕ್ಸ್ಪೋಷರ್ ಹಾಗಿದೆ. ಅವರಿಗೆ ಏನು ಬೇಕು ಬೇಡ ಅನ್ನುವುದರ ಬಗ್ಗೆ ತುಂಬಾನೇ ಕ್ಲಿಯರ್ ಆಗಿದ್ದಾರೆ. ಒಂದೆರಡು ನಂಬಿಕೊಂಡು ಕೂರುವ ಮಕ್ಕಳಲ್ಲ ಡಿಫರೆಂಟ್ ಆಗಿ ಟ್ರೈ ಮಾಡಬೇಕು ಎಂದು ಇಷ್ಟ ಪಡುತ್ತಾರೆ. ಪೋಷಕರಾಗಿ ಅವರೆ ನಾನು ಸಪೋರ್ಟ್ ಮಾಡಬೇಕಿದೆ' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.