ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಲಾಕಪ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ಅಲಿ ಮರ್ಚೆಂಟ್. ಮಾಜಿ ಪತಿಯನ್ನು ಎದುರಿಸುವುದಕ್ಕೆ ಕಷ್ಟ ಆಗುತ್ತದೆ.
ಬಾಲಿವುಡ್ ಬೋಲ್ಡ್ ಹುಡುಗಿ ಕಂಗನಾ ರಣಾವತ್ ನಡೆಸುವ ಲಾಕಪ್ ಕಾರ್ಯಕ್ರಮ ದಿನಕ್ಕೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತದೆ. ಶಿವಂ ಶರ್ಮಾ ಮತ್ತು ಸಾರಾ ಖಾನ್ ಇದ್ದರೆ ಸಾಕು ಇಡೀ ಕಾರ್ಯಕ್ರಮಕ್ಕೆ ಕಲರ್ ಹೆಚ್ಚಿಸುತ್ತಾರೆ. ಸಾರಾ ಅಂದ್ರೆ ನನಗೆ ಇಷ್ಟ ಸಾರ ಬಿಟ್ಟು ಬದುಕುವುದಕ್ಕೆ ಆಗೋಲ್ಲ ಎಂದು ಹೇಳುತ್ತಿದ್ದ ಶಿವಂಗೆ ಚಮಕ್ ನೀಡಲು ಸಾರಾ ಮಾಜಿ ಪತಿಯನ್ನು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಕರೆ ತರಲಾಗುತ್ತಿದೆ ಎನ್ನುವ ಸುದ್ದಿ ವೈರಲ್ ಅಗುತ್ತಿದೆ. ಅಲಿ ಮರ್ಚೆಂಟ್ ಲಾಕಪ್ ಮನೆಗೆ ಬರ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಸಾರಾ ಪ್ಯಾನಿಕ್ ಆಗಿದ್ದಾರೆ.
ಸಾರಾ ಮತ್ತು ಅಲಿ ಮರ್ಚೆಂಟ್ ಇಬ್ಬರು ಬಿಗ್ ಬಾಸ್ ಸೀಸನ್ 4ರ ಸ್ಪರ್ಧಿಗಳು ಇಬ್ಬರು ಮೊದಲ ಬಾರಿ ಶೋನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಆದರೆ ಮನೆಯಿಂದ ಹೊರ ಬರುತ್ತಿದ್ದಂತೆ ಎರಡೇ ತಿಂಗಳಿಗೆ ಡಿವೋರ್ಸ್ ಮಾಡಿಕೊಂಡಿದ್ದರು. ಕೆಲವು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಇವರಿಬ್ಬರು ಶೋನಲ್ಲಿ ಮದುವೆಯಾಗುವುದಕ್ಕೆ 50 ಲಕ್ಷ ಪಡೆದುಕೊಂಡಿದ್ದರಂತೆ. ಇದು ಕಹಿ ಸತ್ಯವೇ ಆದರೂ ವಾಹಿನಿ ಒಪ್ಪಿಕೊಳ್ಳುತ್ತಿಲ್ಲ.
ಎಎಲ್‌ಟಿ ಬಾಲಾಜಿ ರಿಲೀಸ್ ಮಾಡಿರುವ ವಿಡಿಯೋದಲ್ಲಿ ಸಾರಾ ತಮ್ಮ ಮಾಜಿ ಪತಿ ಅಲಿ ಒಟ್ಟಿಗೆ ಮಾತನಾಡುತ್ತಿದ್ದಾರೆ. 'ನಾವಿಬ್ಬರು ದೂರವಾಗಿ 12 ವರ್ಷಗಳು ಕಳೆದಿದೆ. ಆದರೆ ನನಗೆ ನಿನ್ನ ಬಗ್ಗೆ ತುಂಬಾನೇ ಗೌರವವಿದೆ ಎಷ್ಟೇ ಆದರೂ ನೀನು ನನ್ನ ಎಕ್ಸ್ ಬಾಯ್‌ಫ್ರೆಂಡ್. ನಮ್ಮ ಮದುವೆ ಮತ್ತ ಪರ್ಸನಲ್ ವಿಚಾರಗಳನ್ನು ನೀನು ಹೊರಗಡೆ ಮಾತನಾಡಿದ್ದರೆ ಒಳ್ಳೆಯದು ನಾವಿಬ್ಬರು ಸ್ನೇಹಿತರಾಗಿ ಇಲ್ಲಿಂದ ಹೊಸದಾಗಿ ಆರಂಭಿಸೋಣ. ನನಗೆ ನನ್ನಿಂದ ನಿನಗೆ ಏನೇ ಸಮಸ್ಯೆ ಆಗಿದ್ದರು ಅದನ್ನು ಕಾರ್ಯಕ್ರಮದಲ್ಲಿ ಮಾತನಾಡುವುದು ಬೇಡ' ಎಂದು ಸಾರಾ ಖಾನ್ ಮಾತನಾಡಿದ್ದಾರೆ.
ನನ್ನಮ್ಮನ ಫ್ರೆಂಡ್ ಡಿವೋರ್ಸಿ ಆಕೆ ಜೊತೆ ಮಲಗಿರುವೆ; ಶಾಕಿಂಗ್ ಸತ್ಯ ಬಿಚ್ಚಿಟ್ಟ ನಟ ಶಿವಂ ಶರ್ಮಾ!'ಒಬ್ಬರನ್ನು ಕೆಳೆಗೆ ಎಳೆದು ನಾನು ಮೇಲೆ ಬರಬೇಕು ಎನ್ನುವ ಇದ್ದೇಶ ನನಗಿಲ್ಲ. ಈ ಕಾರ್ಯಕ್ರಮದಲ್ಲಿ ನನಗೆ ನಿನ್ನ ಕಾಲು ಎಳೆಯುವುದಕ್ಕೆ ಅಥವಾ ಕೆಳಗೆ ಇಳಿಸುವುದಕ್ಕೆ ಇಷ್ಟವಿಲ್ಲ. ನಿನಗಾಗಿ ನಾನು ಇಲ್ಲಿ ಇದ್ದೀನಿ ಅಂದುಕೊಳ್ಳಬೇಡ. ನಮ್ಮ ಮದುವೆ ಬಗ್ಗೆ ನಾನು ಕೇರ್ ಮಾಡುವುದಿಲ್ಲ' ಎಂದು ಅಲಿ ಮರ್ಚೆಂಟ್ ಉತ್ತರ ಕೊಟ್ಟಿದ್ದಾರೆ.
'ನನ್ನ ಮದುವೆ ಜೀವನ ನನಗೆ ದೊಡ್ಡ ನರಕ. ಆತನ ನಡವಳಿಕೆಯಿಂದ ನಾನು ಬೇಸತ್ತಿರುವೆ. ಸಂಬಂಧ ಮುರಿಯುವ ಮುನ್ನ ನಾನು ಅಲಿಗೆ ತುಂಬಾನೇ ಚಾನ್ಸ್ ಕೊಟ್ಟಿರುವೆ. ಈಗ ನಾವು ದೂರ ಆದ ಮೇಲೆ ಅನಿಸುತ್ತಿದೆ ಏನು ಆಗಿದೆಯೋ ಅದೆಲ್ಲಾ ಒಳ್ಳೆಯದಕ್ಕೆ ಆಗಿದೆ ಎಂದು. ವೃತ್ತಿ ಜೀವನದಲ್ಲಿ ಇನ್ನು ಮುಂದೆ ಒಳ್ಳೆ ಕೆಲಸಗಳನ್ನು ಮಾಡಬೇಕು ಅಂದುಕೊಂಡಿರುವೆ' ಎಂದು ಸಾರಾ DNA ಸಂದರ್ಶನದಲ್ಲಿ ಮಾತನಾಡಿದ್ದಾರೆ.
ದಿನವಿಡೀ ಪತಿ ಕಂಠ ಪೂರ್ತಿ ಕುಡಿತು ಹಲ್ಲೆ ಮಾಡ್ತಾನೆ,ಮೊಬೈಲ್ ಕೊಡಲ್ಲ: ನಟಿ Poonam Pandey ಆರೋಪ'ನನ್ನ ಜೀವನದಲ್ಲಿ ಯಾವ ತಪ್ಪು ಆಗಿಲ್ಲ ಎಂದು ಜನರಿಗೆ ನಾನು ತಿಳಿಸಬೇಕು. ಈ ರೀತಿ ಶೋ ಸಿಗಲಿ ಎಂದು ತುಂಬಾ ದಿನಗಳಿಂದ ಕಾಯುತ್ತಿರುವೆ. ನಾನು ಬದಲಾಗಿದ್ದೀನಿ. ನಾನು ನಾನಾಗಿಲ್ಲ ಬದಲಾಗಿರುವೆ. ಸಾರಾ ಕೂಡ ಪರ್ಸನಲ್ ಲೈಫಲ್ಲಿ ತುಂಬಾನೇ ಬದಲಾಗಿದ್ದಾರೆ. ನಮ್ಮ ಜೀವನದಲ್ಲಿ ನಡೆದಿರುವ ಅನೇಕ ಘಟನೆಗಳು ಪಬ್ಲಿಕ್‌ನಲ್ಲಿ ನಡೆದಿದೆ ಹೀಗಾಗಿ ನಾವು ಯಾವ ವಿಚಾರದ ಬಗ್ಗೆನೂ ಕ್ಲಾರಿಟಿ ನೀಡಬೇಕಿಲ್ಲ. ನನ್ನ ಕೆಲಸದ ಮೂಲಕ ಜನರ ಪ್ರೀತಿ ಗಳಿಸಬೇಕಿದೆ. ನನ್ನ ಜೀವನದ ಸಣ್ಣ ಭಾಗದಲ್ಲಿ ತಪ್ಪು ಆಗಿದೆ ಎಂದು ಪದೇ ಪದೇ ಅದರ ಬಗ್ಗೆ ಮಾತನಾಡುವುದಕ್ಕೆ ಇಷ್ಟವಿಲ್ಲ' ಎಂದು ಕಾರ್ಯಕ್ರಮ ಎಂಟರ್ ಆಗುವ ಮುನ್ನ ಅಲಿ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಡಿವೋರ್ಸ್ ಆಗಿ ಹಲವು ವರ್ಷಗಳ ನಂತರ ನಾನು ಗೋವಾದಲ್ಲಿ ಸಾರಾನ ಭೇಟಿ ಮಾಡಿದ್ದೆ. ನಾನು ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ ಆಗ ಆಕೆ ಸ್ನೇಹಿತರ ಜೊತೆ ಬಂದಿದ್ದರು. ಆಕೆ ಬೇಸರ ಮುಖ ಮಾಡಿಕೊಂಡರು, ಆಕೆ ಸ್ನೇಹಿತರು ನನ್ನನ್ನು ಟೀಕೆ ಮಾಡಿದ್ದರು. ಈಗ ಕಾರ್ಯಕ್ರಮದಲ್ಲಿ ನನ್ನನ್ನು ನೋಡಿ ಹೇಗೆ ರಿಯಾಕ್ಟ್ ಮಾಡುತ್ತಾಳೆ ಗೊತ್ತಿಲ್ಲ. ಇದು ರಿಯಾಲಿಟಿ ಶೋ ಹೀಗಾಗಿ ಏನು ಬೇಕಿದ್ದರೂ ಆಗಬಹುದು' ಎಂದು ಅಲಿ ಹೇಳಿದ್ದಾರೆ.