ನನ್ನಮ್ಮನ ಫ್ರೆಂಡ್ ಡಿವೋರ್ಸಿ ಆಕೆ ಜೊತೆ ಮಲಗಿರುವೆ; ಶಾಕಿಂಗ್ ಸತ್ಯ ಬಿಚ್ಚಿಟ್ಟ ನಟ ಶಿವಂ ಶರ್ಮಾ!

By Suvarna News  |  First Published Mar 14, 2022, 11:53 AM IST

ಲಾಕಪ್‌ನಲ್ಲಿ ಎಲಿಮಿನೇಷ್‌ನಿಂದ ಬಜಾವ್ ಆಗಲು ಯಾರಿಗೂ ಗೊತ್ತಿರದ ಸತ್ಯವನ್ನು ರಿವೀಲ್ ಮಾಡಿದ ನಟ ಶಿವಂ ಶರ್ಮಾ. ಕಂಗನಾ ರಿಯಾಕ್ಷನ್ ಏನು?


ಬಾಲಿವುಡ್‌ ಬೋಲ್ಡ್‌ ನಟಿ ಕಂಗನಾ ರಣಾವತ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಲಾಕಪ್ ರಿಯಾಲಿಟಿ ಶೋ ದಿನೇ ದಿನೇ ವೀಕ್ಷಕರ ಗಮನ ಸೆಳೆಯುತ್ತಿದೆ. ಅದರಲ್ಲೂ ಸಾರಾ ಖಾನ್ ಮತ್ತು ಶವಂ ಶರ್ಮಾ ಹೆಚ್ಚಿಗೆ ಹೈಲೈಟ್ ಆಗುತ್ತಿದ್ದಾರೆ. ಇದು ಪಕ್ಕಾ ಜೈಲ್‌ ಥೀಮ್‌ನಲ್ಲಿ ನಡೆಯುತ್ತಿರುವ ಶೋ ಆಗಿದ್ದು ಶಿವಂ ಶರ್ಮಾ, ಕರಣ್ವೀರ್ ಮತ್ತು ಪಾಯಲ್‌ ಹೆಸರಿನಲ್ಲಿ ಚಾರ್ಚ್‌ ಶೀಟ್‌ ಬುಕ್‌ ಆಗಿದೆ. ಯಾರು ಮೊದಲ ಬಜರ್ ಹೊಡೆಯುತ್ತಾರೋ ಅವರು ಎಲಿಮಿನೇಷ್‌ನಿಂದ ಸೇಫ್ ಆಗುತ್ತಾರೆ ಹಾಗೇ ಅವರ ಜೀವನದಲ್ಲಿ ಇದುವರೆಗೂ ಯಾರೊಂದಿಗೂ ಹಂಚಿಕೊಂಡಿರದ ಸತ್ಯವನ್ನು ರಿವೀಲ್ ಮಾಡಬೇಕಿತ್ತು.

ಬಜರ್ ಹೊಡೆದ ತಕ್ಷಣ ಶಿವಂ ಸತ್ಯವನ್ನು ರಿವೀಲ್ ಮಾಡಿದ್ದಾರೆ. ನನ್ನ ತಾಯಿ ಸ್ನೇಹಿತೆ ಜೊತೆ ನಾನು ಸೆಕ್ಸ್ಯುಯಲ್ ಫೇವರ್ ಹಂಚಿಕೊಂಡಿರುವ ಶಿವಂ ಆಕೆಗೆ ಡಿವೋರ್ಸ ಆಗಿತ್ತು ಇದು ಸಂಪೂರ್ಣ ಮ್ಯೂಚುಯಲ್ ನಿರ್ಧಾರ ಎಂದಿದ್ದಾರೆ. 'ಒಬ್ರು ಡಿವೋರ್ಸ್‌ ಲೇಡಿ ಇದ್ರು ಅವರು ಭಾಬಿ. ಆಕೆ ನನ್ನ ಮನೆಯ ಬಳಿಯೇ ವಾಸಿಸುತ್ತಿದ್ದರು ನನ್ನ ತಾಯಿ ಫ್ರೆಂಡ್. ಇದು ಡರ್ಟಿ ಅಲ್ಲ ಕಾರಣ ಆಕೆಗೆ ಡಿವೋರ್ಸ್ ಆಗಿತ್ತು, ಆಕೆಗೆ ಸೆಕ್ಸ್ಯುಯಲ್ ಲೈಫ್ ನೀಡಬೇಕು ಎಂದು ನಾನು ಮುಂದಾದೆ. ನಾನು ಸೂಪರ್ ಆಗಿ ವೈಟ್ ಸಾಸ್ ಪಾಸ್ತಾ ಮಾಡ್ತೀನಿ, ಮನೆಯಲ್ಲಿ ಮಾಡಿದಾಗಲೆಲ್ಲಾ ಆಕೆಗೆ ತೆಗೆದುಕೊಂಡು ಹೋಗಿ ಕೊಟ್ಟು ಬರುತ್ತಿದ್ದೆ. ಆಗ ಅವರ ಮನೆಯಲ್ಲಿ ಒಳ್ಳೆಯ ಸಮಯ ಕಳೆಯುತ್ತಿದ್ದೆ. ಅದು ತುಂಬಾ ಹಳೆಯ ವಿಚಾರ, ನಾನು ಕಾಲೇಜಿನಲ್ಲಿದ್ದೆ ಸುಮಾರು 8-9 ವರ್ಷಗಳ ಕಥೆ ಇದು' ಎಂದು ಶಿವಂ ಹೇಳಿದ್ದಾರೆ. 

Tap to resize

Latest Videos

ಪತ್ರದಲ್ಲಿ ಬರೆದಿರುವ ರೀತಿಯಲ್ಲಿ ಓದಲು ಕಂಗನಾ ಶಿವಂಗೆ ಆರ್ಡರ್ ಮಾಡುತ್ತಾರೆ. 'ನನ್ನ ಮನೆಯ ಎದುರು ಭಾಬಿ ಇದ್ದರು. ಆಕೆಗೆ ಡಿವೋರ್ಸ್‌ ಆಗಿತ್ತು ನನ್ನ ತಾಯಿ ಸ್ನೇಹಿತೆ ಕೂಡ. ಅವರ ಮನೆಗೆ ನಾನು ಪಾಸ್ತಾ ಮಾಡಿಕೊಂಡು ತೆಗೆದುಕೊಂಡು ಹೋಗುತ್ತಿದ್ದೆ, ಬೆಡ್‌ ಹಿಟ್‌ ಆದ್ಮೇಲೆ ವಾಪಸ್ ಬರ್ತಿದ್ದೆ' ಎಂದು ಶಿವಂ ಜೋರಾಗಿ ಓದಿದ್ದಾರೆ. ಇದನ್ನು ಹೇಳಿದ ನಂತರ 'ಇದು ಪ್ರೀತಿ ಕೊಟ್ಟು ಪ್ರೀತಿ ಪಡೆಯುವುದು, ಲೈಫಲ್ಲಿ ತುಂಬಾನೇ ಬೇಸರದ ಕ್ಷಣಗಳಿದೆ ನಾವು ಸಂತೋಷವನ್ನು ಹಂಚಬೇಕು' ಎನ್ನುತ್ತಾರೆ. ತಕ್ಷಣವೇ ಕಂಗನಾ ಹಾಗಿದ್ರೆ ನೀನು ಅದೇ ರೀತಿಯ ಪ್ರೀತಿಯನ್ನು ಇಲ್ಲಿ ಸಾರಾ ಖಾನ್‌ಗೆ ನೀಡುತ್ತಿರುವುದಾ ಎಂದು ಕೇಳುತ್ತಾರೆ. 'ಇಲ್ಲ ಮೇಡಂ ಆಗ ನಾನು ಚೋಟಾ ಬಚ್ಚ, ಈಗ ನಾನು ದೊಡ್ಡವನಾಗಿರುವೆ ಈಗ ಎಲ್ಲಾ ದೊಡ್ಡ ಮಿಸ್‌ಚೀಫ್ ಮಾಡುವೆ' ಎಂದಿದ್ದಾನೆ.

Kangana Controversy: ರಿಯಾಲಿಟಿ ಷೋ 'ಲಾಕ್‌ ಅಪ್'ಗೆ ಹೈದರಾಬಾದ್ ಕೋರ್ಟ್ ತಡೆಯಾಜ್ಞೆ

ಶಿವಂ ಸೀಕ್ರೆಟ್‌ ಕೇಳಿದ ತಕ್ಷಣ ಎಲ್ಲರು ಗಾಬರಿ ಆಗಿದ್ದರು. ಹೀಗಾಗಿ ಪಕ್ಕದಲ್ಲಿದ್ದ ಬಬಿತಾ ಫೋಗಟ್ ಅನಿಸಿಕೆ ಏನೆಂದು ಕಂಗನಾ ಕೇಳುತ್ತಾರೆ. 'ಇದೆಲ್ಲಾ ಅವರ ಥಿಂಕಿಂಗ್‌ ಮೇಲೆ ಬಿಟ್ಟಿದ್ದು.  ನಾನು ಜೀವನದಲ್ಲಿ ಎಂದೂ ಈ ರೀತಿಯ ಲೋಚನೆಗಳನ್ನು ಒಪ್ಪಿಕೊಳ್ಳುವುದಿಲ್ಲ ಹಾಗೆ ಈ ಕಾನ್ಸೆಪ್ಟ್‌ ನನಗೆ ಅರ್ಥವಾಗುವುದಿಲ್ಲ. ಇದು ನನಗೆ ದೊಡ್ಡ ಶಾಕ್‌ ಏಕೆಂದರೆ ಎಷ್ಟೇ ದಡ್ಡ ಆಗಿದ್ದರೂ ವಯಸ್ಸಿನ ಬಗ್ಗೆ ಯೋಚನೆ ಮಾಡಬೇಕು. ಇದೆಲ್ಲಾ ನನಗೆ ಅರ್ಥ ಆಗೋಲ್ಲ ಏನು ಹೇಳಬೇಕು ಗೊತ್ತಿಲ್ಲ' ಎಂದಿದ್ದಾರೆ ಬಬಿತಾ. 

ದಿನವಿಡೀ ಪತಿ ಕಂಠ ಪೂರ್ತಿ ಕುಡಿತು ಹಲ್ಲೆ ಮಾಡ್ತಾನೆ,ಮೊಬೈಲ್ ಕೊಡಲ್ಲ: ನಟಿ Poonam Pandey ಆರೋಪ

'ಇಲ್ಲ ಆಕೆ ಗಂಡ ಕಳೆದುಕೊಂಡಿದ್ದಾಳೆ ಅಂತ ನಾನು ಮುಂದುವರೆದಿಲ್ಲ. ಆಕೆಗೂ ಇದೆಲ್ಲಾ ಬೇಕಿತ್ತು ಹಾಗೇ ನಾನ್ನೊಬ್ಬರ ಗುಡ್‌ ಲುಕ್ಕಿಂಗ್ ಹುಡುಗ ಹೀಗಾಗಿ ಆಕೆಗೆ ನನ್ನ ಮೇಲೆ ಇಂಟ್ರೆಸ್ಟ್‌ ಇತ್ತು. ಹೀಗಾಗಿ ಇದು ವನ್ ಸೈಡ್‌ ಅಲ್ಲ ಇದೆಲ್ಲಾ ಮ್ಯೂಚುಯಲ್. ಇದಕ್ಕೆ ಪ್ರೀತಿ ಎನ್ನುವ ಪಟ್ಟ ಕಟ್ಟುವುದಕ್ಕೆ ಆಗೋಲ್ಲ ಯಾರಿಗೆ ಏನು ಬೇಕು ಹಾಗೆ ಕರೆದುಕೊಳ್ಳಬಹುದು' ಎಂದು ಶಿವಂ ಬಬಿತಾ ಮಾತಿಗೆ ಉತ್ತರ ಕೊಟ್ಟಿದ್ದಾರೆ. 'ಇದೆಲ್ಲಾ ಕೇಳಿ ನನಗೆ ಅರ್ಥವಾದ ಪ್ರಕಾರ ಇದನ್ನು using the person ಎನ್ನಬಹುದು.' ಎಂದಿದ್ದಾರೆ ಬಬಿತಾ. 'ಇಲ್ಲ ಸಾಧ್ಯವೇ ಇಲ್ಲ. ಹಾಗೆ ನೋಡಿದ್ದರೆ ಆಕೆ ಕೂಡ ನನ್ನನ್ನು ಬಳಸಿಕೊಂಡಿದ್ದಾರೆ. ಆಕೆಗೆ ಆಗಷ್ಟೇ ಡಿವೋರ್ಸ್ ಆಗಿತ್ತು ನನ್ನ ಮೇಲೆ ಇಂಟ್ರೆಸ್ಟಿ ಇತ್ತು.  ಇದರಲ್ಲಿ ನನಗೆ ಯಾವ ತಪ್ಪು ಕಾಣಿಸುತ್ತಿಲ್ಲ' ಎಂದು ಶಿವಂ ಧ್ವನಿ ಎತ್ತುತ್ತಾರೆ. 

ಕೆಲವು ದಿನಗಳಿಂದ ಶಿವಂ ಸಾರಾ ಖಾನ್‌ ಹಿಂದೆ ಬಿದ್ದಿರುವ ಕಾರಣ ಆಕೆಯ ಅನಿಸಿಕೆ ಬೇಕು ಎಂದು ಕಂಗನಾ ಹೇಳಿದ್ದಾರೆ. 'ಇದೆಲ್ಲಾ ಅವರಿಗೆ ಬಿಟ್ಟಿದ್ದು ಅವರಿಬ್ಬರ ಮ್ಯೂಚುಯಲ್ ನಿರ್ಧಾರ ಇದಾಗಿತ್ತು ಈ ಬಗ್ಗೆ ಮಾತನಾಡಲು ನನಗೆ ಹಕ್ಕಿಲ್ಲ ಹಾಗೇ ಅವನನ್ನು ಜಡ್ಜ್ ಮಾಡಲು ನಾವು ಯಾರು?' ಎಂದು ಸಾರಾ ಹೇಳಿದ್ದಾರೆ.

click me!