ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ Kantara chapter 1 Movie ಟಿವಿಯಲ್ಲಿ ಪ್ರಸಾರ, ಯಾವಾಗ?

Published : Jan 22, 2026, 04:17 PM IST
highest rated films of 2025 on imdb kantara chapter 1 to homebound

ಸಾರಾಂಶ

Kantara Chapter 1 Movie: ರಿಷಬ್‌ ಶೆಟ್ಟಿ, ರುಕ್ಮಿಣಿ ವಸಂತ್‌, ಪ್ರಮೋದ್‌ ಶೆಟ್ಟಿ, ಜಯರಾಮ್‌, ಗುಲ್ಶನ್‌ ದೇವಯ್ಯ ನಟನೆಯ ‘ಕಾಂತಾರ ಚಾಪ್ಟರ್‌ 1ʼ ಸಿನಿಮಾವು ಟಿವಿಯಲ್ಲಿ ಪ್ರಸಾರ ಆಗಲಿದೆ. ಹಾಗಾದರೆ ಯಾವಾಗ? ಎಲ್ಲಿ ನೋಡಬಹುದು? 

ಬಾಕ್ಸ್ ಆಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ‘ಕಾಂತಾರ: ಚಾಪ್ಟರ್ 1’ ಇದೇ ಜನವರಿ 24 ರಂದು ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

ಈ ಸಿನಿಮಾ ಕತೆ ಏನು?

4ನೇ ಶತಮಾನದ ಕದಂಬ ರಾಜವಂಶದ ಕಾಲದ ಒಂದು ಇತಿಹಾಸ ಕಥೆಯೇ 'ಕಾಂತಾರ: ಚಾಪ್ಟರ್ 1'. ಕಾಂತಾರ ಎಂಬ ಪ್ರದೇಶದ ನಾಯಕ ಬೇರ್ಮೆ, ಬಾಂಗ್ರಾ ರಾಜ ಮನೆತನದ ನಡುವಿನ ಸಂಘರ್ಷ ಈ ಸಿನಿಮಾದಲ್ಲಿದೆ. ಈ ಸಂಘರ್ಷದಲ್ಲಿ ಏನೇನು ಆಗುವುದು ಎಂಬ ಬಗ್ಗೆ ಸುಂದರವಾಗಿ ತೋರಿಸಲಾಗಿದೆ.

ಕಾಂತಾರ ಎನ್ನುವ ಅದ್ಭುತ ಅರಣ್ಯಭೂಮಿಯ ಹುಟ್ಟಿನ ಕಥೆ ಇಲ್ಲಿದೆ. ಈ ನೆಲದ ಸಂಪ್ರದಾಯಗಳು, ನಂಬಿಕೆ, ಜನಪದ ಕಥೆಗಳು ಇಲ್ಲಿವೆ. ಸಾಂಸ್ಕೃತಿಕ, ಭಾವನಾತ್ಮಕ, ಜಾನಪದ ಅಂಶಗಳಿಂದ ಪ್ರೇಕ್ಷಕರ ಮನಗೆದ್ದಿರುವ ಕಾಂತಾರ:ಚಾಪ್ಟರ್ 1, ಭಾರತ ಚಿತ್ರರಂಗದಲ್ಲಿ ದೊಡ್ಡ ಮೈಲುಗಲ್ಲು ಸಾಧಿಸಿದೆ.

ಪಾತ್ರಧಾರಿಗಳು ಯಾರು?

ನಟ ರಿಷಬ್ ಶೆಟ್ಟಿ ಈ ಸಿನಿಮಾದಲ್ಲಿ ಬೇರ್ಮೆ ಮತ್ತು ಮಾಯಕಾರ ಎಂಬ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್ ಅವರು ಕನಕಾವತಿ ಎಂಬ ಪಾತ್ರವನ್ನು ನಿರ್ವಹಿಸಿದರೆ, ನಟ ಜಯರಾಮ್ ಅವರು ರಾಜ ರಾಜಶೇಖರನ ಪಾತ್ರದಲ್ಲಿ ನಟಿಸಿದ್ದಾರೆ. ನಟ ಗುಲ್ಶನ್ ದೇವಯ್ಯ ಕುಲಶೇಖರ ಎಂಬ ರಾಜನ ಪಾತ್ರ ನಿರ್ವಹಿಸಿದ್ದಾರೆ. ಪ್ರಮೋದ್ ಶೆಟ್ಟಿ ಭೋಗೇಂದ್ರ ಎಂಬ ಪಾತ್ರ ಮಾಡಿದ್ದಾರೆ.

ರಿಷಬ್ ಶೆಟ್ಟಿ ಅವರ ಅಭಿನಯವು ಪ್ರೇಕ್ಷಕರನ್ನು ಮತ್ತೊಂದು ಜಗತ್ತಿಗೆ ಕೊಂಡೊಯ್ಯುತ್ತದೆ. ಬರ್ಮೆ ಪಾತ್ರದಲ್ಲಿ ಅವರ ಅಭಿನಯ ಚೆನ್ನಾಗಿದೆ. ಇನ್ನು ಅವರ ಅಭಿನಯವು ಭಾರೀ ಶಕ್ತಿಯುತವಾಗಿದೆ. ಈ ಸಿನಿಮಾದಲ್ಲಿ ಪೌರಾಣಿಕ, ಭಾವನಾತ್ಮಕ ದೃಶ್ಯಗಳಿವೆ. ಅದ್ಭುತವಾದ ಆಕ್ಷನ್, ಪ್ರಬಲ ದೈವಿಕ ಕ್ಷಣಗಳು ಈ ಸಿನಿಮಾದಲ್ಲಿವೆ.

“ಕಾಂತಾರ:ಚಾಪ್ಟರ್ 1 ಒಂದು ಸಿನಿಮಾ ಮಾತ್ರವಲ್ಲ; ಇದು ಕರ್ನಾಟಕದ ಸಂಸ್ಕೃತಿ, ಪರಂಪರೆಯ ಪ್ರತಿಬಿಂಬ. ನಮಗೆ ಈ ಸಿನೆಮಾಟಿಕ್ ಮಾಸ್ಟರ್‌ಪೀಸ್ ಸಿನಿಮಾವನ್ನು ಜೀ ಕನ್ನಡದಲ್ಲಿ ಪ್ರಸಾರ ಮಾಡಲು ಹೆಮ್ಮೆ ಇದೆ. ಈ ಸಿನಿಮಾವನ್ನು ನಮ್ಮ ವಾಹಿನಿಯ ಮೂಲಕ ಮನೆಮಂದಿಯೆಲ್ಲ ಒಟ್ಟಾಗಿ ಕುಳಿತು ನೋಡಬಹುದು” ಎಂದು ಜೀ ಕನ್ನಡ ಮತ್ತು ಕನ್ನಡ ZEE5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಹೇಳಿದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Puttakkana Makkalu Serial Ends… ಭಾವುಕರಾದ ಪುಟ್ಟಕ್ಕನ ಹಿರಿಯ ಮಗಳು ಸಹನಾ
ಚಿಗವ್ವ, ದೊಡ್ಡವ್ವ‌ ಅನ್ಕಂಡ್ ಮಾತಾಡೋರ್ ಗೆದ್ಬುಟ್ರೆ ಬೇಜಾರಾಗಲ್ವ? ಕುಸುಮ ಹೀಗಂದಿದ್ದು ಯಾರಿಗೆ ಗೊತ್ತಾಯ್ತಾ?