ನೀನು ಬಂದು ಮಲ್ಕೊಂಡ್ರೆನೇ ಜೀವನ: ಲಾಡ್ಜ್‌ನಲ್ಲಿ ನಡೆದ ಘಟನೆ ಬಿಚ್ಚಿಟ್ಟ ಮಜಾ ಭಾರತ ಸುಶ್ಮಿತಾ!

By Vaishnavi Chandrashekar  |  First Published Aug 31, 2023, 2:54 PM IST

ಕಿರುತೆರೆ ಜನಪ್ರಿಯ ಹಾಸ್ಯ ನಟಿ ಸುಶ್ಮಿತಾ ಆ ಒಂದು ದಿನ ಆಡಿಷನ್ ಕೊಡುವಾಗ ನಡೆದ ಘಟನೆಯನ್ನು ರಿವೀಲ್ ಮಾಡಿದ್ದಾರೆ.... 


ಕನ್ನಡ ಜನಪ್ರಿಯ ಹಾಸ್ಯ ರಿಯಾಲಿಟಿ ಶೋ ಮಜಾ ಭಾರತ ಮತ್ತು ಗಿಚ್ಚಿ ಗಿಲಿಗಿಲಿ ಸೀಸನ್ 1 ಮತ್ತು 2 ರಲ್ಲಿ ಸ್ಪರ್ಧಿಸಿರುವ ಸುಶ್ಮಿತಾ ಈ ಹಿಂದೆ ಸಿನಿಮಾ ರಂಗಕ್ಕೆ ಕಾಲಿಡಬೇಕು ಎಂದು ಸಾಕಷ್ಟು ಆಡಿಷನ್‌ಗಳನ್ನು ನೀಡಿದ್ದರಂತೆ. ಅದೆಷ್ಟೋ ಮಂದಿ ಆಡಿಷನ್‌ಗೆ ಕರೆ ಮಾಡುತ್ತಿದ್ದರು ಆಗ ಒಂದೂ ಮಿಸ್ ಮಾಡದೇ ಪ್ರಯತ್ನ ಪಡುತ್ತಿದ್ದರಂತೆ. ಆದರೆ ಒಂದು ದಿನ ಹೋಟೆಲ್‌ನಲ್ಲಿ ಹೋಗಿ ಹಿಂತಿರುಗಿ ಬಂದು ತೆಗೆದುಕೊಂಡ ನಿರ್ಧಾರ ಜೀವನ ಬದಲಾಯಿಸಿತ್ತು ಎಂದು ಹೇಳಿದ್ದಾರೆ. 

'ಒಂದು ಸಲ ನಾನು ಆಡಿಷನ್ ಕೊಟ್ಟಿದ್ದೆ..ನಿಜ ಹೇಳಬೇಕು ಅಂದ್ರೆ ನಾನು ಆಡಿಷನ್ ಕೊಟ್ಟ ಸ್ಥಳವೇ ಆ ತರ ಇತ್ತು. ಆ ಘಟನೆ ನೆನಪಿಸಿಕೊಂಡೆ ಆಗುವುದಿಲ್ಲ. ಸಾಮಾನ್ಯವಾಗಿ ನಾನು ಆಡಿಷನ್ ಕೊಡುವ ದಿನ ಒಟ್ಟಿಗೆ ಯಾರನ್ನಾದರೂ ಕರೆದುಕೊಂಡು ಹೋಗುವೆ ಆದರೆ ಅಂದು ನಾನು ಹೋಗಿದ್ದು ಹೋಟೆಲ್‌ ರೂಮ್‌ (ಲಾಡ್ಜ್‌) ಆದರೆ ಅವತ್ತು ನನ್ನ ಪರಿಸ್ಥಿತಿ ಸರಿಯಾಗಿರಲಿಲ್ಲ ಹೀಗಾಗಿ ನನ್ನ ಜೊತೆ ಯಾರೂ ಬರಲಿಲ್ಲ. ಅವತ್ತು ಹೋಟೆಲ್‌ ಮುಂದೆ ನಿಂತುಕೊಂಡಿದ್ದಾಗ ಆ ಹೋಟೆಲ್ ಹೆಸರಿನ ಪಕ್ಕ ಲಾಡ್ಜ್‌ ಅನ್ನೋ ಪದ ಬರೆದಿದ್ದರು...ಯಾರು ಲಾಡ್ಜ್‌ನಲ್ಲಿ ಆಡಿಷನ್ ಮಾಡುತ್ತಾರೆ ಅಂತ ಅವತ್ತು ಅಂದುಕೊಂಡೆ. ಧೈರ್ಯ ಮಾಡಿಕೊಂಡು ವಾಚ್‌ಮೆಸ್ ಸಹಾಯದಿಂದ ನಾನು ಮೆಟ್ಟಿಲು ಹತ್ತಿ ಮೂರನೇ ಮಹಡಿ ಕಡೆ ನಡೆದುಕೊಂಡು ಹೋದೆ ಆದರೆ ನನ್ನ ಮನಸ್ಸು ಬೇಡ ಈ ಕೆಲಸ ಒಪ್ಪಿಕೊಳ್ಳಬೇಡ ಆಡಿಷನ್ ಕೊಡಬೇಡ ಎನ್ನುತ್ತಿತ್ತು ತಕ್ಷಣವೇ ನಾನು ಕೆಳಗೆ ಇಳಿದು ಬಂದೆ. ಅವತ್ತೇ ನಿರ್ಧಾರ ಮಾಡಿಕೊಂಡೆ ಆಡಿಷನ್‌ಗೆ ಜೊತೆಯಲ್ಲಿ ಒಬ್ಬರನ್ನು ಕರೆದುಕೊಂಡು ಹೋಗಬೇಕು ಇಲ್ಲ ಅಂದ್ರೆ ಯಾವುದಾದರೂ ದಾರಿ ಹುಡುಕಿ ಕೆಲಸ ಮಾಡೋಣ ಅಂತ ಮನಸ್ಸು ಮಾಡಿದೆ' ಎಂದು ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ಸುಶ್ಮಿತಾ ಮಾತನಾಡಿದ್ದಾರೆ.

Tap to resize

Latest Videos

10 ವರ್ಷ ಆದ್ಮೇಲೆ ಈಕೆ ಸಿಕ್ಕಿರುವುದು ನನ್ನ ಅದೃಷ್ಟ: ಲವ್‌ ಬಗ್ಗೆ ಹಿಂಟ್ ಕೊಟ್ಟ ರಕ್ಷಿತ್ ಶೆಟ್ಟಿ?

'ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿಗೆ ಕಾಣಿಸಿಕೊಂಡಾಗ ನಿರ್ದೇಶಕರು ಅಥವಾ ನಿರ್ಮಾಪಕರು ನನ್ನನ್ನು ಕರೆಯುತ್ತಾರೆಂದು ಅದಕ್ಕೂ ಟ್ರೈ ಮಾಡಿದೆ ಆದರೆ ಅದೂ ಸರಿ ಹೋಗಲ್ಲ ಎಂದು ಸುಮ್ಮನಿದೆ. ರಿಯಾಲಿಟಿ ಶೋನಲ್ಲಿ ಈ ರೀತಿ ಯಾವ ಕೆಟ್ಟ ಕೆಲಸ ನಡೆಯುವುದಿಲ್ಲ ಎಂದು ಟ್ರೈ ಮಾಡಿದೆ ಆದರೆ ನನ್ನ ಕೈ ಹಿಡಿಯಿತ್ತು. ಇಂಡಷ್ಟ್ರಿಯಲ್ಲಿ ನಾವು ಹೇಗಿರುತ್ತೀವಿ ಜೀವನ ಮತ್ತು ಭವಿಷ್ಯ ಹಾಗೆ ಇರುತ್ತದೆ ಅಂದು ನಾನು ಆ ಲಾಡ್ಜ್‌ಗೆ ಹೋದರೆ ಖಂಡಿತಾ ನನ್ನ ಜೀವನ ಈ ರೀತಿ ಇರುತ್ತಿರಲಿಲ್ಲ. ಇದೇ ಇಂಡಸ್ಟ್ರಿಯಲ್ಲಿ ನಾವು ಹೇಗಿರುತ್ತೀವಿ ಜನರು ಹಾಗೆ ಇರುತ್ತಾರೆ..ಅಂದು ನಾನು ಒಪ್ಪಿಕೊಂಡಿದ್ದರೆ...ನೀವು ಬಂದು ಮಲಗಿಕೊಂಡರೆನೇ ಸಿನಿಮಾ ಅನ್ನೋ ರೀತಿ ಪರಿಸ್ಥಿತಿ ಬರುತ್ತಿತ್ತು...'ಎಂದು ಸುಶ್ಮಿತಾ ಹೇಳಿದ್ದಾರೆ. 

click me!