ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ್ ಮತ್ತು ಅವರ ಪತಿ ಯಶಸ್ ಅವರು ಕಿಚನ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ತಮ್ಮ ಮದುವೆಯ ಕುತೂಹಲದ ಮಾಹಿತಿ ಶೇರ್ ಮಾಡಿಕೊಳ್ಳಲಿದ್ದಾರೆ.
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ್ (Aditi Prabhudev) ಅವರು ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. 1994, ಜನವರಿ 13 ರಂದು ಜನಿಸಿದ ನಟಿ ಅದಿತಿ, ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದಾರೆ. ತಮ್ಮ ಅಭಿನಯದ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಅದಿತಿ ಪ್ರಭುದೇವ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ದಾವಣಗೆರೆಯಲ್ಲಿ ಜನಿಸಿದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅದಿತಿ ಪ್ರಭುದೇವ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದಿತಿ ಪ್ರಭುದೇವ ಅವರ ಯಶಸ್ ಪಟ್ಲಾ ಅವರ ಪತ್ನಿಯಾದರು. ಯಶಸ್ ಅವರು ಕಾಫಿ ಎಸ್ಟೇಟ್‌ನ ಮಾಲೀಕ ಹಾಗೂ ಬ್ಯುಸಿನೆಸ್‌ಮ್ಯಾನ್ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕತ್ ಆ್ಯಕ್ಟೀವ್ ಆಗಿರೋ ನಟಿ ಖುದ್ದು ಯೂಟ್ಯೂಬ್ ಚಾನೆಲ್ ಒಂದನ್ನು ನಡೆಸುತ್ತಿದ್ದಾರೆ. ಇದರಲ್ಲಿ ಹಲವಾರು ರೀತಿಯ ಆರೋಗ್ಯ ಟಿಪ್ಸ್ ಹಾಗೂ ಅಡುಗೆಯ ಕುರಿತು ಮಾಹಿತಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರ ಆಗ್ತಿರೋ ಕಿಚನ್ ಕಾರ್ಯಕ್ರಮದಲ್ಲಿ ಈಗ ಈ ಜೋಡಿ ಕಾಣಿಸಿಕೊಳ್ಳಲಿದೆ. ಅದಿತಿ-ಯಶಸ್ ಮಾಡಿದ್ರು ಸಿಹಿ ಕುಂಬಳದ ಸೂಪ್; ತಾಳಿ ಕಟ್ಟೋ ಕ್ಷಣದ ರೋಚಕತೆ ಫುಲ್ ಟಾಪ್ ಎನ್ನುವ ಹೆಸರಿನಲ್ಲಿ ಇದರ ಪ್ರೊಮೋ ಬಿಡುಗಡೆಯಾಗಿದೆ, ಇದರಲ್ಲಿ ಅದಿತಿ ಮತ್ತು ಯಶಸ್ ತಮ್ಮ ಬಾಳಿನ ಪಯಣದ ಕುರಿತು ಮಾತನಾಡಿದ್ದಾರೆ.
ನಟಿ ಅದಿತಿ ಹೇರ್ಕಟ್ ಸೂಪರ್ರೋ, ಪನ್ನೀರ್ ರೆಸಿಪಿ ಸೂಪರ್ರೊ? ಪತಿ ರಿಯಾಕ್ಷನ್ ಹೇಗಿತ್ತು?
ಇವರಿಬ್ಬರದ್ದರೂ ಅರೇಂಜ್ಡ್ ಮ್ಯಾರೇಜ್. ಇವರಿಬ್ಬರೂ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದ ಸಮಯದಲ್ಲಿ ಫ್ಯಾನ್ಸ್ ಸ್ವಲ್ಪ ಶಾಕ್ ಆಗಿದ್ದರು. ಲವ್ ಮ್ಯಾರೇಜಾ, ಅರೇಂಜ್ಡ್ ಎನ್ನೋ ಬಗ್ಗೆ ಸಕತ್ ಚರ್ಚೆಯಾಗಿತ್ತು. ಇದಕ್ಕೆ ತೆರೆ ಎಳೆದಿದ್ದ ಅದಿತಿ ಅವರು, ನಮ್ಮಿಬ್ಬರದ್ದೂ ಅರೆಂಜ್ಡ್ ಮದುವೆ. ನನಗೆ ಪ್ರಾಣಿ, ಪಕ್ಷಿ, ಪ್ರಕೃತಿಯೆಂದರೆ ತುಂಬಾ ಇಷ್ಟ. ಕೂರ್ಗಲ್ಲಿ ವಾಸಿಸುತ್ತಿರುವ ಯಶಸ್ ಕೂಡ ಇದೇ ಮನೋಭಾವವನ್ನು ಹೊಂದಿರುವವರಾಗಿದ್ದಾರೆ. ನನ್ನ ವೃತ್ತಿ ಜೀವನಕ್ಕೆ ಯಶಸ್ ಹಾಗೂ ಅವರ ಕುಟುಂಬದವರು ಬೆಂಬಲ ನೀಡಿದ್ದಾರೆ. ಗಾಸಿಪ್‌ಗಳನ್ನು ಹುಟ್ಟುಹಾಕಲು ನನಗೆ ಇಷ್ಟವಿಲ್ಲ. ಇದರಿಂದಾಗಿ ನಿಶ್ಚಿತಾರ್ಥವನ್ನು ಅಧಿಕೃತ ಘೋಷಣೆ ಮಾಡಿದ್ದೇವೆ ಎಂದಿದ್ದರು. ಯಶಸ್ ಅವರು ಅದಿತಿ ಅಭಿನಯದ ಪರ್ಫೆಕ್ಟ್ ಗರ್ಲ್ ಅಲ್ಬಂ ಸಾಂಗ್ ನಲ್ಲಿ ಅವರನ್ನು ಮೊದಲು ನೋಡಿದ್ದರು. ಇವರನ್ನು ನೋಡಿ ಇಷ್ಟಪಟ್ಟಿರುವ ವಿಚಾರವನ್ನು ಮನೆಯವರಿಗೆ ತಿಳಿಸಿದ್ದರು. ನಂತರ ಯಶಸ್ ಪೋಷಕರು ಅದಿತಿ ಮನೆಯಲ್ಲೂ ಹುಡುಗನನ್ನು ಹುಡುಕುತ್ತಿರುವ ವಿಷಯ ತಿಳಿದು ಇಬ್ಬರ ಮನೆಯವರು ಮದುವೆ ಪ್ರಸ್ತಾಪ ಮಾಡಿದ್ದರು.
ಕಿಚನ್ (Kitchen) ಪ್ರೊಮೋದಲ್ಲಿ ದಂಪತಿ ಸೇರಿ ಸಿಹಿ ಕುಂಬಳದ ಸೂಪ್ ಮಾಡಲು ರೆಡಿ ಮಾಡಿಕೊಂಡಿರೋದನ್ನು ನೋಡಬಹುದು. ಇದೇ ವೇಳೆ ಅದಿತಿ ತಮ್ಮ ಎಂಗೇಜ್ಮೆಂಟ್ ಮತ್ತು ಮದುವೆಯ ಕುರಿತು ಕುತೂಹಲದ ಘಟನೆ ಹೇಳಿದ್ದಾರೆ. ಎಂಗೇಜ್ಮೆಂಟ್ ಸಮಯದಲ್ಲಿ ಯಶಸ್ ಅವರು ಉಂಗುರ ಹಾಕಲು ಬಂದಾಗ ಕೈ ಗಡಗಡ ನಡುಗುತ್ತಿತ್ತು ಎಂದಿದ್ದಾರೆ. ಆದರೆ ತಾಳಿ ಕಟ್ಟುವ ಸಮಯದಲ್ಲಿ ಯಶಸ್ ಬಿಂದಾಸ್ ಆಗಿ ಕಟ್ಟಿದರು ಎಂದು ಹೇಳಿದರು. ಜೊತೆಗೆ ತಾವು ಎಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ ಪಟ್ಟ ಕಷ್ಟದ ಕುರಿತೂ ಮಾತನಾಡಿದರು. ಇದರ ಬಗ್ಗೆ ಇನ್ನಷ್ಟು ವಿವರ ಜೀ ಟಿ.ವಿ.ಯ ಕಿಚನ್ನ ಸಂಪೂರ್ಣ ಸಂಚಿಕೆಯಲ್ಲಿ ನೋಡಬಹುದು.
ಫೇಸ್ಮಾಸ್ಕ್, ಸ್ಕ್ರಬ್, ಹೇರ್ ಆಯಿಲ್ ಮಾಡೋದು ಇಷ್ಟು ಸುಲಭನಾ? ನಟಿ ಅದಿತಿ ಪ್ರಭುದೇವ ಟಿಪ್ಸ್!