ಮಧ್ಯೆರಾತ್ರಿ ಶೂಟಿಂಗ್‌ನಿಂದ ಬಂದ್ರೂ ಮಾರನೇ ದಿನಕ್ಕೆ ಅಡುಗೆ ಮಾಡ್ತಾಳೆ; ಪತ್ನಿ ಬಗ್ಗೆ 'ಗೀತಾ' ಶೋಭರಾಜ್‌ ಮಾತು

By Vaishnavi Chandrashekar  |  First Published Mar 10, 2023, 5:32 PM IST

ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಮಿಂಚುತ್ತಿರುವ ದೀಪಿಕಾ. ಪತ್ನಿಯಲ್ಲಿರುವ ಕಲೆಯನ್ನು ಹೊಗಳಿದ ಶೋಭರಾಜ್‌...ಜೀವನದ ದೇವತೆಗಳಿವರು....
 


ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ 'ಗೀತಾ' ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಶೋಭರಾಜ್‌ ರಿಯಲ್ ಲೈಫ್‌ ಪತ್ನಿ ದೀಪಿಕಾ ಜೊತೆ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ಫಿನಾಲೆ ಹಂತ ತಲುಪುವ ಜೋಡಿಗಳಾಗಿದ್ದರೂ ಕೊನೆ ಹಂತದಲ್ಲಿ ಎಲಿಮಿನೇಟ್ ಆದರು. ಈ ಶೋನಿಂದ ಶೋಭರಾಜ್‌ ಅಷ್ಟೇ ಅಲ್ಲ ಅವರ ಪತ್ನಿ ದೀಪಿಕಾ ಕೂಡ ಜನಪ್ರಿಯತೆ ಪಡೆದುಕೊಂಡು ಗಿಚ್ಚಿ ಗಿಲಿಗಿಲಿ ಸೀಸನ್ 2 ಶೋಗೆ ಸ್ಪರ್ಧಿಯಾಗಿ ಆಯ್ಕೆ ಆಗಿದರು. ಈಗಾಗಲೆ 10 ಎಪಿಸೋಡ್‌ಗಳು ಮುಗಿಸಿ ದೀಪಿಕಾ ಬೆಸ್ಟ್‌ ಕಲಾವಿದೆ ಎಂದು ಸಾಭೀತು ಮಾಡಿದ್ದಾರೆ. ಮಹಿಳಾ ದಿನಚರಣೆ ದಿನ ಶೋಭರಾಜ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೆಂಡತಿಗೆ ಸಪೋರ್ಟ್ ಮಾಡಿದ್ದಾರೆ. 

'ನನ್ನ ಹೆಂಡತಿ ಪ್ರತಿಭೆಯನ್ನು ನಾನು ಹೊರ ತಂದಿಲ್ಲ ಆಕೆಯನ್ನು ಕರೆದುಕೊಂಡು ಬಂದಿರುವುದು ಒಂದು ನೆಪ ಅಷ್ಟೆ. ಆಕೆಯನ್ನು ಪ್ರ್ಯಾಕ್ಟೀಸ್‌ಗೆ ಕರೆದುಕೊಂಡು ಬಂದಾಗ ಅನೇಕರು ಹೇಳುತ್ತಿದ್ದರು ನೀವು ಹೇಳಿ ಕೊಟ್ಟಿರುವುದು ಎಂದು ನಾನೇ ಇನ್ನು ಅಂಬೆಗಾಲು ಇಡುತ್ತಿರುವುದು ನನ್ನ ಹೆಂಡತಿಗೆ ಹೇಳಿ ಕೊಡುವುದಕ್ಕೆ ನಾನು ಯಾರು?. ನಾನು ಹೇಳಿ ಕೊಟ್ಟಿರುವುದನ್ನು ಆಕೆ ಮಾಡಿದಳು ಅನ್ನೋದು ಸುಳ್ಳು. ಮನೆಯಲ್ಲಿ ಆಕೆ ಬಂದು ಕೇಳುವಳು ನಾನು ಹೀಗೆ ಮಾಡಬಹುದಾ? ನಾನು ಏನು ಮಾಡಿದರೆ ಸರಿ ಎಂದು ಕೇಳುತ್ತಿದ್ದಳು. ನಾನು ಹೇಳುವುದನ್ನು ಆಕೆ ಮಾಡುವುದಿಲ್ಲ ಆದರೂ ನಾನು ಸಲಹೆ ಕೊಡುತ್ತಿದ್ದೆ. ನಾವಿಬ್ಬರೂ ಚರ್ಚೆ ಮಾಡಿದಾಗ ಆಕೆಯಲ್ಲಿ ಇರುವ ಪ್ರತಿಭೆ ಅಥವಾ ಕಲಾವಿದೆ ಜಾಗೃತಳಾಗುತ್ತಿದ್ದಳು. ನಾನು ಹೇಳಿ ಕೊಡುವುದಿಲ್ಲ...ಧೈರ್ಯ ತುಂಬುತ್ತಿದ್ದೆ.' ಎಂದು ಶೋಭರಾಜ್ ಮಾತನಾಡಿದ್ದಾರೆ. 

Tap to resize

Latest Videos

'ನನ್ನನ್ನು ಟ್ರೋಲ್ ಮಾಡಿ; ಆದರೆ ರೂಲ್ ಮಾಡಬೇಡಿ' ಎಂದ ಶೋಭರಾಜ್!

'ಗಿಚ್ಚಿ ಗಿಲಿಗಿಲಿಗೆ ನನ್ನನ್ನು ಕರೆಯುತ್ತಿದ್ದಾರೆ ನಾನು ಹೋಗ್ಲಾ ಎಂದು ನಾಚಿಕೆಯಿಂದ ಕೇಳುತ್ತಿದ್ದಳು. ನೀನು ಹೋಗು ಎಂದು ನಾನು ಧೈರ್ಯ ಮಾಡಿ ಕಳುಹಿಸಿದೆ. ವೇದಿಕೆ ಮೇಲೆ ಆಕೆ ನಾಟಕ ಮಾಡಿಲ್ಲ ನಿಜ ಜೀವನದಲ್ಲಿ ಇರುವ ರೀತಿ ಇದ್ದಾಳೆ. ಶೂಟಿಂಗ್ ಮುಗಿಸಿಕೊಂಡು ರಾತ್ರಿ 12 ಅಥವಾ 1 ಗಂಟೆಗೆ ಬಂದ್ಮೇಲೂ ಫ್ರೆಶಪ್ ಆಗಿ ಮಾರನೇ ದಿನ ಗಂಡ ಶೂಟಿಂಗ್ ಹೋಗುತ್ತಾನೆ ಅಂತ ತಿಂಡಿ ಊಟಕ್ಕೆ ತಯಾರಿ ಮಾಡಿ ಆಮೇಲೆ ಬಂದು ಮಲಗಿಕೊಳ್ಳುತ್ತಾಳೆ. ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುವೆ ಮನೆಯಲ್ಲಿ ಮೂರು ದೇವತೆಗಳ ನಡುವೆ ಇರುವೆ. ಮಹಿಳಾ ದಿನಾಚರಣೆ ಎಂದು ಹೇಳುವುದಕ್ಕಿಂತ ದೇವತೆಗಳ ದಿನ ಎಂದು ಹೇಳಬೇಕು. ನನ್ನ ಹೆಂಡತಿ ಬಗ್ಗೆ ಹೇಳುವುದಕ್ಕೆ ಹೆಮ್ಮೆಯಾಗುತ್ತದೆ. ನನ್ನ ಹೆಂಡತಿಯನ್ನು ಅನೇಕ ಕಾರ್ಯಕ್ರಮಗಳಿಗೆ ಗೆಸ್ಟ್‌ ಆಗಿ ಕರೆದಿದ್ದಾರೆ...ನನ್ನ ಹೆಂಡತಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು. ನೀನು ಕಿರೀಟ ಗಳಿಸಿಕೊಂಡು ಹೊರ ಬರುವುದು ಬ್ರಹ್ಮಾಂಡಕ್ಕೆ ಬಿಟ್ಟಿದ್ದು ಇಲ್ಲಿಂದ ನೀನು ಕಾಲಿಟ್ಟು ಶೋಭರಾಜ್‌ ಗಂಡ ದೀಪಿಕಾ ಎಂದು ಕರೆಯುವ ಬದಲು ದೀಪಿಕಾ ಗಂಡ ಶೋಭರಾಜ್ ಎಂದು ಜನರು ಹೇಳಬೇಕು ಆಗ ಮನಸ್ಸಿನಿಂದ ಖುಷಿ ಪಡುವೆ.' ಎಂದು ಶೋಭರಾಜ್ ಹೇಳಿದ್ದಾರೆ. 

ನಿವೇದಿತಾಗೆ ತಂದೆ ತಾಯಿ ಕಷ್ಟನೇ ತೋರಿಸಿಲ್ಲ: 3ನೇ ವಾರ್ಷಿಕೋತ್ಸವದ ದಿನ ಭಾವುಕರಾದ ಚಂದನ್-ನಿವಿ

'ಮಗು ಹುಟ್ಟುವ ಮುನ್ನ ಕೆಲಸ ಕಲಸ ಅಂತ ಬ್ಯುಸಿಯಾಗಿದ್ದೆ ಮದುವೆ ಆದ್ಮೇಲೆ ಮಗು ಗಂಡ ಅಂತ ಮೂರು ಹೊತ್ತು ಮನೆಯಲ್ಲಿರುವೆ. ಶೋಭರಾಜ್‌ ಒಬ್ಬ ಕಲಾವಿದರು ಆಗಿದ್ದ ಕಾರಣ ಮದುವೆ ತುಂಬಾ ಕಾಂಪ್ಲೀಕೇಶ್‌ನಲ್ಲಿ ನಡೆಯಿತ್ತು. ಈಗ ನನ್ನ ಮಗಳು ನಟಿ ಎಂದು ನನ್ನ ಮನೆಯವರು ಹೇಳುತ್ತಿದ್ದಾರೆ. ಶೋಭರಾಜ್‌ರನ್ನು ಮದುವೆಯಾಗುತ್ತಿರಲಿಲ್ಲ  ಅಂದಿದ್ರೆ ಇಷ್ಟೊಂದು ಖುಷಿ ನೆಮ್ಮದಿ ಹಾಗೂ ಯಶಸ್ಸು ಸಿಗುತ್ತಿರಲಿಲ್ಲ. ಜನರು ಸಿಕ್ಕರೆ ಶೋಭರಾಜ್‌ ಪತ್ನಿ ಎಂದು ಹೇಳುವುದಿಲ್ಲ ಗಿಚ್ಚಿ ಗಿಲಿಗಿಲಿ ದೀಪಿಕಾ ಎಂದು ಕರೆಯುತ್ತಾರೆ' ಎಂದಿದ್ದಾರೆ ದೀಪಿಕಾ.
 

click me!