ಟಿವಿ ಇತಿಹಾಸದಲ್ಲೇ ಹೊಸ ಪ್ರಯೋಗ; ಏಳು ಗಂಟೆಗೆ ಅಕ್ಕನ ಕಥೆ, ಏಳೂವರೆಗೆ ತಂಗಿಯ ಕಥೆ

By Vaishnavi Chandrashekar  |  First Published Mar 10, 2023, 4:16 PM IST

ಲಕ್ಷ್ಮಿ ಬಾರಮ್ಮ ಜೊತೆ ಭಾಗ್ಯಲಕ್ಷ್ಮಿ ಕಥೆ. ಅಕ್ಕ ತಂಗಿ ಕಥೆಗೆ ಸಾಕ್ಷಿ ಆಯ್ತು ಕಲರ್ಸ್‌ ಕನ್ನಡ ವಾಹಿನಿ..... 


ಭಾರತೀಯ ಧಾರಾವಾಹಿಗಳ ಇತಿಹಾಸದಲ್ಲೇ ಒಂದು ಹೊಸ ಪುಟ ತೆರೆಯುತ್ತಿದೆ.ಕಲರ್ಸ್‌ ಕನ್ನಡ ವಾಹಿನಿಯು ಒಂದು ಕತೆಯನ್ನು ಎರಡು ಧಾರಾವಾಹಿಗಳಾಗಿ ಹೇಳುವ ಹೊಸ ಸಾಹಸಕ್ಕೆ ಕೈಹಾಕಿದೆ. 

ಜನ ಮೆಚ್ಚುಗೆಗಳಿಸಿರುವ ಧಾರಾವಾಹಿ 'ಭಾಗ್ಯಲಕ್ಷ್ಮೀ' ಪ್ರಮುಖ ಘಟ್ಟ ತಲುಪಿರುವ ಹೊತ್ತಿನಲ್ಲಿಅದನ್ನು ಎರಡು ಧಾರಾವಾಹಿಗಳಾಗಿ ಬೆಳೆಸಲು ಅದು ನಿರ್ಧರಿಸಿದೆ. ಅಂದರೆ ಈಗ ಸಂಜೆ ಏಳು ಗಂಟೆಗೆ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮೀ'ಯ ಜೊತೆಗೆ ಏಳೂವರೆಯಿಂದ  ಲಕ್ಷ್ಮೀಬಾರಮ್ಮ' ಎಂಬ ಹೊಸ ಧಾರಾವಾಹಿ ಇದೇ ಸೋಮವಾರದಿಂದ ಶುರುವಾಗಲಿದೆ.ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಅಕ್ಕ ಭಾಗ್ಯಳ ಕತೆ ಮುಂದುವರಿದರೆ ಅದರ ಬೆನ್ನಿಗೇ ಪ್ರಸಾರವಾಗಲಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿಈಗಷ್ಟೇ ಮದುವೆಯಾಗಿ ಗಂಡನ ಮನೆಗೆ ತೆರಳಿರುವ ತಂಗಿ ಲಕ್ಷ್ಮಿಯ ಬದುಕು ತೆರೆದುಕೊಳ್ಳುತ್ತದೆ.

Tap to resize

Latest Videos

ಎಷ್ಟು ಸುತ್ತಿನ ಕಾಲುಂಗುರ ಧರಿಸಬೇಕು?; ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಕಾಲುಂಗುರದ ಮಹತ್ವ

ಆದರೆ ಈ ಅಕ್ಕ ತಂಗಿಯರ ಬಾಂಧವ್ಯ ಎಷ್ಟು ಹತ್ತಿರದ್ದು ಎಂದು ಈಗಾಗಲೇ ವೀಕ್ಷಕರಿಗೆ ಗೊತ್ತಿರುವುದರಿಂದ ಧಾರಾವಾಹಿಗಳು ಎರಡಾದರೂ ಇವೊಂಥರ ಅವಳಿ ಕತೆಗಳಾಗಿ ಬೆಳೆಯಲಿವೆ ಎಂದು ಊಹಿಸಬಹುದು. ಹೀಗೆ ಪಾತ್ರಗಳನ್ನು ಹಂಚಿಕೊಂಡ ಎರಡು ಪ್ರತ್ಯೇಕ ಧಾರಾವಾಹಿಗಳು ಒಂದರ ಬೆನ್ನಿಗೆ ಇನ್ನೊಂದರಂತೆ ಪ್ರಸಾರವಾಗುತ್ತಿರುವುದು ನಿಜಕ್ಕೂ ಹೊಸತು. ವೀಕ್ಷಕರ ಪಾಲಿಗೆ ಇದು ಪ್ರತಿದಿನ ಒಂದು ಗಂಟೆಯ ಡಬಲ್ ಮನರಂಜನೆ.
ಪದ್ಮಜಾರಾವ್, ಸುಷ್ಮಾರಾವ್, ಸುದರ್ಶನ್‌ ರಾಜು ಮತ್ತು ಗೌತಮಿ ಗೌಡ ಪ್ರಮುಖ ಪಾತ್ರದಲ್ಲಿರುವ ಭಾಗ್ಯಲಕ್ಷ್ಮೀಯನ್ನು ಮುನ್ನೆಡೆಸಿದರೆ, ಶಮಂತ್, ಭೂಮಿಕಾ, ಸುಷ್ಮಾನಾಣಯ್ಯ, ತನ್ವಿರಾವ್ಮುಂತಾದವರು ಹೊಸದಾಗಿ ಶುರುವಾಗಲಿರು ವಲಕ್ಷ್ಮೀ ಬಾರಮ್ಮದರಥವನ್ನು ಎಳೆಯಲಿದ್ದಾರೆ.

ಬೆಳ್ಳಿ ತೆರೆಯಲ್ಲಿ ಸೋತು, ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ನಟಿಯರು

ಭಾಗ್ಯ ಈಗಷ್ಟೇ ಹರ ಸಾಹಸಮಾಡಿ ತಂಗಿ ಲಕ್ಷ್ಮಿಯ ಮದುವೆ ಮಾಡಿ ಮುಗಿಸಿದ್ದಾಳೆ. ಅಕ್ಕ ತಂಗಿ ಇನ್ನು ಮುಂದೆ ಎರಡು ಮನೆಗಳಲ್ಲಿ ಮಾತ್ರವಲ್ಲ ಎರಡು ಬೇರೆ ಬೇರೆ ಧಾರಾವಾಹಿಗಳಲ್ಲಿ ಬದುಕ ಬೇಕಾಗಿದೆ. ಎರಡೂ ಧಾರಾವಾಹಿಗಳನ್ನು ನಿರ್ಮಿಸುತ್ತಿರುವುದು ಶ್ರೀಜೈಮಾತಾ ಕಂಬೈನ್ಸ್. ಇಂಥದೊಂದು ಹೊಸ ಸಾಹಸದ ಬಗ್ಗೆ ನಮಗೂ ಕುತೂಹಲವಿದೆ ಎಂದಿರುವ ಕಲರ್ಸ್‌ ಕನ್ನಡ ವಾಹಿನಿಯವಕ್ತಾರರು, ಜನ ಈ ಪ್ರಯೋಗವನ್ನು ಸ್ವೀಕರಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

 

click me!