
ಕಲರ್ಸ್ ಕನ್ನಡದ ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಕುತೂಹಲ ಕೆರಳಿಸುವ ಪ್ರೊಮೋವೊಂದು ಹರಿದಾಡುತ್ತಿದೆ, 'ಹಬ್ಬಕ್ಕೆ ಮತ್ತಷ್ಟು ಸೌಂಡ್ ಮಾಡೋಣ; ಇಲ್ಲೇನೋ ನಡೀತಿದೆ... ಸದ್ಯದಲ್ಲೇ ಹೇಳ್ತೀವಿ!' ಅನ್ನೋ ಬರಹ ಭಾರೀ ಕುತೂಹಲ ಕೆರಳಿಸುತ್ತಿದೆ. ದೀಪಾವಳಿ ಸಮಯದಲ್ಲಿ ಕಲರ್ಸ್ ಕನ್ನಡದಲ್ಲಿ ಎನೋ ಸಮ್‌ಥಿಂಗ್ ಸ್ಪೆಷಲ್ ಕಾರ್ಯಕ್ರಮ ಪ್ರಸಾರವಾಗಲಿದೆ ಎಂಬ ಊಹೆ ಎಲ್ಲರಲ್ಲಿ ಹಬ್ಬಿದೆ. ಅದೇನೆಂದು ತಿಳಿಯಲು ಸ್ವಲ್ಪ ಸಮಯ ಕಾಯಲೇಬೇಕು.
ಹೌದು, ಕಲರ್ಸ್ ಕನ್ನಡದಲ್ಲಿ ಹಳೆಯ ಮತ್ತು ಹೊಸ ಧಾರಾವಾಹಿಗಳು ಸಖತ್ ಸೌಂಡ್ ಮಾಡುತ್ತಿವೆ. ಟಿಆರ್‌ಪಿಯಲ್ಲಿ ಕೂಡ ಸಾಕಷ್ಟು ಸೀರಿಯಲ್‌ಗಳು ಮುನ್ನಡೆ ಕಾಯ್ದುಕೊಂಡಿವೆ. ಇದೀಗ ದೀಪಾವಳಿ ಪ್ರಯುಕ್ತ ಏನೋ ವಿಶೇಷತೆ ಇದೆ ಎಂಬ ಮಾಹಿತಿಯನ್ನು ಕಲರ್ಸ್ ಕನ್ನಡ ತನ್ನ ಪ್ರೋಮೋ ಮೂಲಕ ಹರಿಯಬಿಟ್ಟಿದೆ. ಆದರೆ, ಅದೇನೆಂದು ಊಹೆ ಮಾಡಲು ಬಿಟ್ಟು ಸದ್ಯ ಟಿವಿ ವೀಕ್ಷಕರ ತಲೆಗೆ ಹುಳ ಬಿಟ್ಟಿದೆ ಎನ್ನಬಹುದು.
ಐ ಆ್ಯಮ್ ದ ಲೀಡರ್, ಬ್ಲಡಿ ಲೀಡರ್; ಗುಡುಗಿದ ಡೇರ್ ಡೆವಿಲ್ ತನಿಷಾ ಮುಂದೆ ತಲೆತಗ್ಗಿಸಿ ನಿಂತಿದ್ಯಾರು?
ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸಖತ್ ಸೌಂಡ್ ಮಾಡತೊಡಗಿದೆ. ಬಿಗ ಬಾಸ್ ವೀಕೆಂಡ್ ಸಂಚಿಕೆಗಳಾದ ' ಕಿಚ್ಚನ ಪಂಚಾಯಿತಿ' ಹಾಗೂ 'ಸೂಪರ್ ಸಂಡೇ ವಿತ್ ಸುದೀಪ' ಸಂಚಿಕೆಗಳು ತುಂಬಾ ಸದ್ದಿ ಮಾಡುತ್ತಿವೆ. ಟಿವಿಆರ್ ಕೂಡ ತುಂಬಾ ಜಾಸ್ತಿ ಇದ್ದು, ಈ ಬಾರಿಯ ಬಿಗ ಬಾಸ್ ಶೋ ಸೂಪರ್ ಹಿಟ್ ಎಂಬಂತಾಗಿದೆ. ಈಗಾಗಲೇ ನಾಲ್ಕು ವಾರಗಳು ಕಳೆದು 5ನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್, ಇನ್ಮುಂದೆ ತನ್ನ ಜನಪ್ರಿಯತೆಯನ್ನು ಮತ್ತಷಗಟು ಹೆಚ್ಚಿಸಿಕೊಂಡರೂ ಅಚ್ಚರಿಯೇನಿಲ್ಲ.
ಬೆಂಕಿ ಜೊತೆ ಬಿರುಗಾಳಿಯ ಹೊಸ ಪ್ರೇಮ ಕಥೆ; ಬಲಗಾಲಿಟ್ಟು ಬರಲಿದೆ ಮನೆಮನೆಯಲ್ಲಿ ಗೌರಿಶಂಕರ!
ಒಟ್ಟಿನಲ್ಲಿ, ಕಲರ್ಸ್ ಕನ್ನಡದಲ್ಲಿ ಈ ಬಾರಿಯ ದೀಪಾವಳಿಗೆ ಅದೇನೋ ವಿಶೇಷತೆ ಕಾದಿದೆ. ಅಧಿಕೃತವಾಗಿಯೇ ವಾಹಿನಿ ವೀಕ್ಷಕರ ತಲೆಗೆ ಹುಳ ಬಿಟ್ಟಿದೆ ಎಂದಮೇಲೆ ಏನೂ ಇಲ್ಲದಿರಲು ಸಾಧ್ಯವೇ ಇಲ್ಲ. ದೀಪಾವಳಿ ಈಗಾಗಲೇ ಶುರುವಾಗಿದೆ. ವಿಶೇಷವೇನೆಂದು ತಿಳಿಯಲು ಸ್ವಲ್ಪವೇ ಕಾಲ ಕಾಯಬೇಕು. ಅದೇನೆಂದು ನೋಡಿಯೇಬಿಡೋಣ ಎಂದು ವೀಕ್ಷಕರು ಕಾಯುತ್ತಿದ್ದಾರೆ ಎನ್ನಬಹುದು. ಸಂಚಿಕೆ ಪ್ರಸಾರ ಕಾಣುವ ಮೊದಲು ಸಹಜವಾಗಿಯೇ ವೀಕ್ಷಕವಲಯದಲ್ಲಿ ಭಾರೀ ಕುತೂಹಲ ಮನೆಮಾಡಿದೆ ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.