ಕಲರ್ಸ್ ಕನ್ನಡದಲ್ಲಿ ಕೆಲ ಧಾರಾವಾಹಿಗಳು ಮುಗಿಯುವ ಹಂತದಲ್ಲಿವೆ. ಬಿಗ್ ಬಾಸ್ ಕಾರಣಕ್ಕೆ ಕಥೆಗೆ ಅಂತ್ಯ ಹೇಳುವ ತಯಾರಿ ನಡೆದಿದೆ. ಇದ್ರಲ್ಲಿ ಚುಕ್ಕಿ ತಾರೆ ಸೀರಿಯಲ್ ಕೂಡ ಸೇರಿದೆ.
ಕಲರ್ಸ್ ಕನ್ನಡ (Colors Kannada ) ದಲ್ಲಿ ಪ್ರಸಾರವಾಗ್ತಿರುವ ಚುಕ್ಕಿ ತಾರೆ (Chukki Taare Serial) ಸೀರಿಯಲ್ ಅಭಿಮಾನಿಗಳಿಗೆ ಬೇಸರದ ಸಂಗತಿ ಒಂದಿದೆ. ಪುಟಾಣಿ ಮಹಿತಾ (Mahita) ನಟನೆಯನ್ನು ಪ್ರೀತಿಯಿಂದ ವೀಕ್ಷಣೆ ಮಾಡ್ತಿದ್ದ ವೀಕ್ಷಕರಿಗೆ ಧಾರಾವಾಹಿ ತಂಡ ವಿದಾಯ ಹೇಳಲಿದೆ, ಶೀಘ್ರವೇ ಧಾರಾವಾಹಿ ಮುಕ್ತಾಯಗೊಳ್ಳಲಿದೆ. ಇದೇ ಮಾರ್ಚ್ 18ರಿಂದ ಶುರುವಾಗಿದ್ದ ಚುಕ್ಕಿತಾರೆ ಧಾರಾವಾಹಿಯಲ್ಲಿ ಉತ್ತಮ ನಟರ ದಂಡೇ ಇತ್ತು. ಒಂದೆರಡು ವರ್ಷ ಧಾರಾವಾಹಿ ಆರಾಮವಾಗಿ ಓಡುತ್ತೆ ಅಂತ ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದ್ರೆ ಈ ಧಾರಾವಾಹಿ ಇದೇ ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್ ನಲ್ಲಿ ಮುಕ್ತಾಯಗೊಳ್ಳಲಿದೆ. ಧಾರಾವಾಹಿ ಶುರುವಾಗಿ ಆರೇ ತಿಂಗಳಲ್ಲಿ ಮುಕ್ತಾಯವಾಗ್ತಿದೆ ಎಂಬುದು ಅನೇಕರ ಬೇಸರಕ್ಕೆ ಕಾರಣವಾಗಿದೆ.
ಕಲರ್ಸ್ ಕನ್ನಡದ ಈ ಧಾರಾವಾಹಿ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿತ್ತು. ಅಪ್ಪ – ಮಗಳ ಪ್ರೀತಿಯ ಕಥೆ ಹೇಳುವ ಈ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಪ್ರತಿ ದಿನ 6 ಗಂಟೆಗೆ ಪ್ರಸಾರವಾಗ್ತಿದೆ. ಸೂಪರ್ ಹಿಟ್ ಹಾಡುಗಳ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ ನವೀನ್ ಸಜ್ಜು, ಈ ಧಾರಾವಾಹಿ ಮೂಲಕ ತಮ್ಮ ನಟನಾ ವೃತ್ತಿಯನ್ನು ಶುರು ಮಾಡಿದ್ದರು. ಸೀರಿಯಲ್ ನಲ್ಲಿ ನಾಯಕನ ಪಾತ್ರದಲ್ಲಿ ನಟಿಸುತ್ತಿರುವ ನವೀನ್ ಸಜ್ಜು, ತಮ್ಮ ಧ್ವನಿ ಮಾತ್ರವಲ್ಲ ನಟನೆ ಮೂಲಕವೂ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Tamanna Bhatia : ಕಾಶಿಗೆ ತಮನ್ನಾ ಭೇಟಿ.. ಗರ್ಭಗುಡಿ ಪ್ರವೇಶದ ಬಗ್ಗೆ ಅಭಿಮಾನಿಯ ವಿರೋಧ
ಇನ್ನು ಮಗಳ ಪಾತ್ರದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಮಹಿತಾ ನಟಿಸುತ್ತಿದ್ದಾರೆ. ಬಡ ಕುಟುಂಬದ, ಅಪ್ಪನ ಪ್ರೀತಿಯ ಮಗಳು ಚುಕ್ಕಿ ಪಾತ್ರಕ್ಕೆ ಮಹಿತಾ ಜೀವತುಂಬಿದ್ದಾರೆ. ಇನ್ನು ಚುಕ್ಕಿ ಸ್ನೇಹಿತೆ, ಶ್ರೀಮಂತರ ಮನೆ ಮಗಳು ಇಬ್ಬನಿ ಪಾತ್ರದಲ್ಲಿ ಪುಟಾಣಿ ಸ್ಪೂರ್ತಿ ಕಾಣಿಸಿಕೊಂಡಿದ್ದಾರೆ. ವಿಶಾಲ್ ಹೆಗಡೆ, ಜಯಶ್ರೀ ರಾಜ್ ಸೇರಿದಂತೆ ಅದ್ಭುತ ಕಲಾವಿದರು ಈ ಸೀರಿಯಲ್ ನಲ್ಲಿದ್ದು, ಎಲ್ಲ ಧಾರಾವಾಹಿಗಿಂತ ಈ ಧಾರಾವಾಹಿ ಸ್ವಲ್ಪ ಭಿನ್ನವಾಗಿದೆ. ಮಕ್ಕಳ ಸ್ನೇಹ, ಸಂಭ್ರಮ, ಶಾಲೆ ಸೇರಿದಂತೆ ಅನೇಕ ಸುಂದರ ವಿಷ್ಯಗಳನ್ನು ಇಟ್ಟುಕೊಂಡು ಈ ಕಥೆ ಹೆಣೆಯಲಾಗಿದೆ. ಆದ್ರೆ ಈ ಧಾರಾವಾಹಿ ಶೀಘ್ರವೇ ಮುಕ್ತಾಯಗೊಳ್ಳಲಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಟಿಆರ್ ಪಿ ಕಾರಣ ಎನ್ನಲಾಗ್ತಿದೆ. ಸಂಜೆ ಆರಕ್ಕೆ ಪ್ರಸಾರವಾಗುವ ಧಾರಾವಾಹಿಗೆ ಟಿಆರ್ ಪಿ ಕಡಿಮೆ ಇರುವ ಕಾರಣ ಇದನ್ನು ತೆಗೆಯಲಾಗ್ತಿದೆ ಎನ್ನಲಾಗ್ತಿದ್ದರೂ, ಬಿಗ್ ಬಾಸ್ ಕೂಡ ಒಂದು ಕಾರಣ.
ಬ್ರಹ್ಮಗಂಟು ನಾಯಕಿ ದೀಪಾ ಬೋಲ್ಡ್’ನೆಸ್ ಕಂಡು ವೀಕ್ಷಕರು ಶಾಕ್! ಏನಮ್ಮ ನಿನ್ನ ಅವತಾರ ಅಂತಿದ್ದಾರೆ ಜನ
ನಂಬರ್ ಒನ್ ಧಾರಾವಾಹಿ ಪ್ರಸಾರವಾಗುವ, ಟಿಆರ್ ಪಿಯಲ್ಲಿ ಮುಂದಿರುವ ಚಾನೆಲ್ ಎಂದೇ ಕಲರ್ಸ್ ಕನ್ನಡ ಪ್ರಸಿದ್ಧಿ ಪಡೆದಿದೆ. ಅದ್ಭುತ ಕಲಾವಿದರನ್ನು ಕಲರ್ಸ್ ಕನ್ನಡ ನೀಡಿದೆ. ಅನೇಕ ಪ್ರಸಿದ್ಧ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳು ಈ ಚಾನೆಲ್ ನಲ್ಲಿ ಪ್ರಸಾರವಾಗ್ತಿವೆ. ಸೆಪ್ಟೆಂಬರ್ ನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಸಾರವಾಗಲಿದೆ. ಹಾಗಾಗಿ ಮೂರು ಧಾರಾವಾಹಿಗಳು ಅಂತ್ಯಗೊಳ್ಳಲಿವೆ. ಪ್ರತಿ ವರ್ಷವೂ ಬಿಗ್ ಬಾಸ್ ಬರ್ತಿದ್ದಂತೆ ಕೆಲವೊಂದಿಷ್ಟು ಧಾರಾವಾಹಿಗಳು ಮುಗಿಯುವ ಜೊತೆಗೆ ಸಮಯದಲ್ಲಿ ಬದಲಾವಣೆಯಾಗುತ್ತದೆ. ಈ ಬಾರಿ ಕೂಡ ಮೂರು ಧಾರಾವಾಹಿ ಕೊನೆಯಾಗಲಿದ್ದು, ಅದ್ರಲ್ಲಿ ಚುಕ್ಕಿತಾರೆ ಸೇರಿದೆ. ಅಂತರಪಟ, ಮತ್ತು ಕೆಂಡಸಂಪಿಗೆ ಧಾರಾವಾಹಿ ಮುಕ್ತಾಯಗೊಂಡ್ರೆ ಬಿಗ್ ಬಾಸ್ ಜೊತೆ ವಿಜಯ್ ಸೂರ್ಯ ಖಡಕ್ ಲುಕ್ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗ್ತಿದೆ. ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ಪ್ರೋಮೋ ರಿಲೀಸ್ ಆಗಿದೆ. ವಿಜಯ್ ಸೂರ್ಯ ಅಭಿನಯದ ದೃಷ್ಟಿ ಬೊಟ್ಟು ಧಾರಾವಾಹಿ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿದ್ದು, ಚುಕ್ಕಿ ತಾರೆ ಜಾಗಕ್ಕೆ ದೃಷ್ಟಿ ಬೊಟ್ಟು ಬರುತ್ತಾ ಕಾದು ನೋಡ್ಬೇಕಿದೆ.