ಮದುವೆ ದಿನವೇ ಹೆಂಡ್ತಿ ಜೊತೆ ಜಗಳ; ಪೂಜಾರಿಯಿಂದ್ಲೇ ತಾಳಿ ಕಟ್ಟಿಸ್ಕೋ ಎಂದಿದ್ದ ವಿನಯ್‌ ಗೌಡ!

Published : Dec 01, 2023, 03:13 PM ISTUpdated : Dec 01, 2023, 05:29 PM IST
ಮದುವೆ ದಿನವೇ ಹೆಂಡ್ತಿ ಜೊತೆ ಜಗಳ; ಪೂಜಾರಿಯಿಂದ್ಲೇ ತಾಳಿ ಕಟ್ಟಿಸ್ಕೋ ಎಂದಿದ್ದ ವಿನಯ್‌ ಗೌಡ!

ಸಾರಾಂಶ

ಮುಂಬೈನಿಂದ ವಾಪಸ್‌ ಬಂದು ಪ್ರೀತಿಸಿದ ಹುಡುಗಿಯನ್ನು ಮದುವೆ ಮಾಡಿಕೊಂಡ ವಿನಯ್. ಮದುವೆ ದಿನವೂ ಜಗಳ ಯಾಕೆ...

ಬಿಗ್ ಬಾಸ್ ಸೀಸನ್ 10ರಲ್ಲಿ ಮಿಂಚುತ್ತಿರುವ ಹರ ಹರ ಮಹಾದೇವ್ ಖ್ಯಾತಿಯ ವಿನಯ್ ಗೌಡ ಯಾರಿಗೂ ಗೊತ್ತಿಲ್ಲ ಎರಡು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಒಂದು ಮನೆ ಬಿಟ್ಟು ಮುಂಬೈಗೆ ಹೋದ ಕ್ಷಣ, ಮತ್ತೊಂದು ಹೆಂಡತಿ ಜೊತೆ ಮದುವೆ ದಿನ ಜಗಳ ಮಾಡಿದ ಘಟನೆ. 

'ಒಂದೊಳ್ಳೆ ಫ್ಯಾಮಿಲಿಯಲ್ಲಿ ಒಬ್ಬನೇ ಮಗನಾಗಿ ಸೂಪರ್ ಆಗಿ ಬೆಳೆದೆ. 9 ಅಥವಾ 10 ವರ್ಷ ಇದ್ದಾಗ ವರ್ಷ ಪಪ್ಪಿ ಲವ್ ಆಯ್ತು. ಅಂಕಲ್ ಅಂಟಿ ಮದುವೆ ಮಾಡಿಕೊಂಡು ಕಾರಿನಲ್ಲಿ ಹೋಗುತ್ತಿದ್ದಾರೆ ಕ್ಯಾಮೆರಾನ ಸ್ವಲ್ಪ ತಿರುಗಿಸಿ ತೋರಿಸಿದ್ದಾರೆ ಆಗ ನಾನು ಹೆಂಡತಿ ಕೈ ಹಿಡಿದು ಸ್ಕ್ರೀನ್ ಹಿಂದೆ ನಡೆದುಕೊಂಡು ಹೋಗುತ್ತಿರುವೆ. ಇವತ್ತು ನೋಡಿ ನಗುತ್ತೀವಿ. 18 ವರ್ಷ ಆದ್ಮೇಲೆ ನನ್ನ ತಂದೆಗೆ ಆಕ್ಸಿಡೆಂಟ್ ಆಗುತ್ತದೆ ಮೋಸ್ಟ್‌ ಹ್ಯಾಂಡ್ಸಮ್‌ನಿಂದ ಹ್ಯಾಂಡಿಕ್ಯಾಪ್ ಆಗುತ್ತಾರೆ. 3 ವರ್ಷ ಹಾಸಿಗೆ ಹಿಡಯುತ್ತಾರೆ. 19 ವರ್ಷಕ್ಕೆ ನಾನು ಕಾಲಿಟ್ಟಾಗ ತಂದೆ ತಾಯಿ ಡಿವೋರ್ಸ್ ಪಡೆಯುತ್ತಾರೆ. ಅಗ ಮನೆ ಬಿಟ್ಟು ಹೋಗುತ್ತೀನಿ. ಮುಂಬೈಗೆ ಹೋಗಿ ಎಲ್ಲರೂ ಚೆನ್ನಾಗಿ ಬೆಳೆಯುತ್ತಾರೆ ಹಣ ಮಾಡುತ್ತಾರೆ ಅಂತ. ಮುಂಬೈನಲ್ಲಿ ನಾಯಿಗೆ ಅನ್ನ ಸಿಗುತ್ತೆ ಮನುಷ್ಯರಿಗೆ ಸಿಗಲ್ಲ. ವಡಾ ಪಾವ್ ತಿಂದು ಜೀವನ ನಡೆಸಿದ್ದೀನಿ' ಎಂದು ವಿನಯ್ ಮಾತನಾಡಿದ್ದಾರೆ.

ಹೆಂಡ್ತಿ ಬಿಟ್ಟೊದ್ಮೇಲೆ ಆ ಹುಡುಗಿಗೆ ಮಿಸ್ ಕಾಲ್ ಕೊಟ್ಟಿದ್ದೀನಿ; ಎರಡನೇ ಮದುವೆ ಬಗ್ಗೆ ಸುಳಿವು ಕೊಟ್ಟ ವರ್ತೂರ್ ಸಂತೋಷ್?

'ವಾಪಸ್ ಬೆಂಗಳೂರಿಗೆ ಬಂದಾಗ ಹೆಂಡತಿ ಕಾಯುತ್ತಿದ್ದಳು. ಅವಳನ್ನು ಮದುವೆ ಮಾಡಿಕೊಂಡೆ. ಬೆಳಗ್ಗೆ 8  ಗಂಟೆಗೆ ಮುಹೂರ್ತ...8.30ಕ್ಕೆ ಬಂದಳು ಅಂತ ಪೂಜಾರಿನ ಮದುವೆ ಮಾಡಿಕೋ ಎಂದು ಜಗಳ ಮಾಡಿದೆ. 10.30 ಮತ್ತೊಂದು ಮುಹೂರ್ತ ಇತ್ತು ಮದುವೆ ಮಾಡಿಕೊಂಡು ಅಲ್ಲಿದ್ದವರಿಗೆ ಸಾಗರ್ ಹೋಟೆಲ್‌ನಲ್ಲಿ ದೋಸೆ ಕೊಡಸಿ ನಾನು ಆಫೀಸ್‌ ಕೆಲಸಕ್ಕೆ ಹೋದೆ ಹೆಂಡತಿ ಮನೆಗೆ ಹೋದಲು. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಾಗ ಹೆಸರು ಸಂಪಾದನೆ ಮಾಡಿದ್ದೀನಿ. ಪ್ರತಿ ಕ್ಷಣನೂ ಜೀವನದಲ್ಲಿ ಹೋರಾಟ ಮಾಡಿದ್ದೀನಿ ಇಲ್ಲವಾದರೆ ಇಷ್ಟೊತ್ತಿದೆ ಸತ್ತು ಹೋಗಿರುತ್ತಿದ್ದೆ. ಸತ್ತು ಹೋಗುತ್ತಿದ್ದ ನನಗೆ ಪ್ರಾಣ ಕೊಟ್ಟಿದ್ದು ನನ್ನ ಹೆಂಡತಿ.' ಎಂದು ವಿನಯ್ ಹೇಳಿದ್ದಾರೆ.

ಶೂಟೌಟ್‌ ಆರ್ಡರ್‌ ಬಂದಿತ್ತಂತೆ, ಊಟಕ್ಕೆ ವಿಷ ಹಾಕಬೇಕಿತ್ತು; ಮಾನಸಿಕ ಅಸ್ವಸ್ಥ ಅಂತಾರೆಂದು ಕಣ್ಣೀರಿಟ್ಟ ಡ್ರೋನ್ ಪ್ರತಾಪ್

'ಬಿಗ್ ಬಾಸ್‌ ಮನೆಯಲ್ಲಿ ನನ್ನ ಜೊತೆಗಿರುವ ಸ್ಪರ್ಧಿಗಳಿಗೆ ಅವಮಾನ ಮಾಡಿರಬಹುದು ನಾನು. ನಿಮಗೂ ಫ್ಯಾಮಿಲಿ ಇದೆ ..ಕೈ ಮುಗಿದು ಅವರಿಗೆ ಕ್ಷಮೆ ಕೇಳುತ್ತೀನಿ. ಯಾರು ಯಾರಿಗೂ ನೋವು ಕೊಡಬೇಡಿ' ಎಂದಿದ್ದಾರೆ ವಿನಯ್. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ
BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ