ಟ್ರೋಲ್‌ನಿಂದ ತಾಯಿ ಆರೋಗ್ಯ ಕೆಟ್ಟಿದೆ; ನನಗೆ ಯಾರೂ ಇಲ್ಲ ಎಂದು ಕಣ್ಣೀರಿಟ್ಟ ಸೋನು ಗೌಡ

Published : Aug 24, 2023, 02:02 PM IST
ಟ್ರೋಲ್‌ನಿಂದ ತಾಯಿ ಆರೋಗ್ಯ ಕೆಟ್ಟಿದೆ; ನನಗೆ ಯಾರೂ ಇಲ್ಲ ಎಂದು ಕಣ್ಣೀರಿಟ್ಟ ಸೋನು ಗೌಡ

ಸಾರಾಂಶ

 ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಟ್ರೋಲ್‌ ನೋಡಿ ಕಣ್ಣೀರಿಟ್ಟ ಸೋನು ಗೌಡ. ಬಿಗ್‌ ಬಾಸ್‌ನಿಂದ ಹೊರ ಬರುತ್ತಿದ್ದಂತೆ ಹೆಚ್ಚಾಯ್ತು ನೆಗೆಟಿವಿಟಿ....   

ಸೋಷಿಯಲ್ ಮೀಡಿಯಾ ಸ್ಟಾರ್, ಬಿಗ್ ಬಾಸ್ ಸ್ಪರ್ಧಿ ಸೋನು ಗೌಡ ಟ್ರೋಲಿಗರ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಟ್ರೋಲ್ ಮತ್ತು ನೆಗೆಟಿವ್ ಕಾಮೆಂಟ್‌ಗಳಿಂದ ಕುಟುಂಬದಲ್ಲಿ ಸಮಸ್ಯೆ ಆಗುತ್ತಿದೆ. ನನ್ನ ಮಾನಸಿಕ ನೆಮ್ಮದಿ ಹಾಳಾಗಿದೆ ಎಂದು ಸೋನು ಕಣ್ಣೀರಿಟ್ಟಿದ್ದಾರೆ. 

ಇಟ್ಕೊಂಡಿಲ್ಲ ಬಿಡೋಕೆ ಲವ್‌ನಿಂದ ಏನ್ ಸಿಗುತ್ತೆ ಅಸಹ್ಯ: ಕನಸಿನ ರಾಜನ ಬಗ್ಗೆ ಸೋನು ಗೌಡ ಟ್ವಿಸ್ಟ್‌

'ನನ್ನ ಯುಟ್ಯೂಬ್ ಇನ್‌ಸ್ಟಾಗ್ರಾಂನಲ್ಲಿ ತೀರಾ ಕೆಟ್ಟ ಕಾಮೆಂಟ್‌ಗಳು ಬರುತ್ತಿದೆ. ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿದೆ ನಾನು ಯಾರೊಟ್ಟಿಗೂ ಶೇರ್ ಮಾಡಿಕೊಳ್ಳುವುದಿಲ್ಲ. ಒಂದು ಲಿಮಿಟ್ ವರೆಗೂ ಓಕೆ ಅದನ್ನೂ ಮೀರಿ ಮಾಡಿದರೆ ಕಷ್ಟವಾಗುತ್ತದೆ. ಒಂದು ವಾರದ ಹಿಂದೆ ನನ್ನ ತಾಯಿ ಯುಟ್ಯೂಬ್ ಚಾನೆಲ್‌ ಹೆಚ್ಚಿಗೆ ನೋಡುತ್ತಾರೆ ಆ ನನ್ನ ಬಗ್ಗೆ ಒಂದೆರಡು ಟ್ರೋಲ್ ವಿಡಿಯೋ ನೋಡುತ್ತಿದ್ದರು ಕೆಟ್ಟ ಕಾಮೆಂಟ್‌ ಮತ್ತು ಕೆಟ್ಟ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಮಾತಿಗೆ ಮುಂಚೆ ಬೀಪ್‌ ಪದಗಳನ್ನು ಬಳಸಿದ್ದಾರೆ. ಆ ವಿಡಿಯೋ ನಾನು ಕೇಳಿಸಿಕೊಂಡರೆ ಬೇಸರ ಆಗುತ್ತದೆ ಅಂತ ಸೌಂಡ್ ಕಡಿಮೆ ಮಾಡಿಕೊಂಡು ನೋಡುತ್ತಾ ಅಳುತ್ತಿದ್ದರು. ನನಗೆ ಕೇಳಿಸುತ್ತಿದ್ದರೂ ಸುಮ್ಮನಿದೆ. ನನ್ನಿಂದ ನನ್ನ ಕುಟುಂಬ ನೋವು ಪಡುತ್ತಿದೆ ದಯವಿಟ್ಟು ಹೀಗೆ ಮಾಡಬೇಡಿ. ನಾನು ಯಾರಿಗೂ ಗೊಂದರೆ ಕೊಟ್ಟಿಲ್ಲ ನಾನು 20 ವರ್ಷದ ಹುಡುಗಿ ಇದ್ದಾಗ ಮಾಡಿದ ತಪ್ಪಿಗೆ ಈಗಲೂ ಶಿಕ್ಷೆಯಾಗಿ ಕೊಡುತ್ತಿದ್ದೀರಾ? 4 ವರ್ಷ ಕಳೆದರೂ ನಾನು ಬೇಸರದಲ್ಲಿರುವೆ' ಎಂದು ಸೋನು ಗೌಡ ವಿಡಿಯೋದಲ್ಲಿ ಮಾತನಾಡಿದ್ದಾರೆ.

ಕಾಂತಾರ ಸಿನಿಮಾ ನೋಡಿ 2 ವಾರ ಆಸ್ಪತ್ರೆಯಲ್ಲಿದ್ದ ಬಿಗ್ ಬಾಸ್ ಸೋನು ಗೌಡ

'ನನ್ನ ಬಗ್ಗೆ ಅತಿ ಹೆಚ್ಚು ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ ಮಾಡುತ್ತಿರುವುದು ಹೆಣ್ಣು ಮಕ್ಕಳು. ಯಾರಿಗಾದರೂ ಗೊಂದರೆ ಕೊಟ್ಟರೆ ಕಳ್ಳತನ ಮಾಡಿದರೆ ಅಥವಾ ಹೊಡೆದರೆ ತಪ್ಪು ಈ ರೀತಿ ಮಾತನಾಡಿ ಆದರೆ ನನ್ನ ವೈಯಕ್ತಿ ಜೀವನದಲ್ಲಿ ಆದ ತಪ್ಪನ್ನು ಯಾಕೆ ನೀವು ಪಬ್ಲಿಕ್ ಮಾಡುತ್ತಿರುವು? ಟ್ರೋಲ್ ಮಾಡಬೇಡಿ ಎನ್ನುತ್ತಿಲ್ಲ ಆದರೆ ಫ್ಯಾಮಿಲಿವರೆಗೂ ಬೇಡ. ನನ್ನ ಟ್ರೋಲ್ ವಿಡಿಯೋ ಅವಮಾನಗಳನ್ನು ನೋಡಿ ನನ್ನ ತಾಯಿ ಆರೋಗ್ಯ ಕೆಟ್ಟಿದೆ. ಈಗಲೂ ಟ್ರೋಲ್‌ಗಳನ್ನು ನೋಡಿ ನನ್ನ ಕುಟುಂಬಸ್ಥರು ನನ್ನನ್ನು ಮಾತನಾಡಿಸುವುದಿಲ್ಲ ಕೆಲವು ಮಾತ್ರ ನಮ್ಮ ಜೊತೆ ಚೆನ್ನಾಗಿರುವುದು. ನಾನು ತಪ್ಪು ಮಾಡಿರುವುದಕ್ಕೆ ಟ್ರೋಲ್ ಮಾಡಿ ಏನ್ ಏನೋ ಮಾಡಿ ಎಡಿಟ್ ಮಾಡಬೇಡಿ' ಎಂದು ಸೋನು ಗೌಡ ಹೇಳಿದ್ದಾರೆ.

'ಇಷ್ಟೊಂದು ಶೋಕಿ ಮಾಡುತ್ತೀಯಾ ಜನರಿಗೆ ಸಹಾಯ ಮಾಡುವುದಕ್ಕೆ ಆಗಲ್ವಾ ಎಂದು ಕೇಳುತ್ತಾರೆ. ಒಬ್ರು ಸಹಾಯ ಮಾಡಿ ವಿಡಿಯೋ ಮಾಡುತ್ತಾರೆ ಆದರೆ ನಾನು ಹಾಗಲ್ಲ ...ನಿಜಕ್ಕೂ ತರಕಾರಿ ಹಣ್ಣು ದಿನಸಿ ಪ್ರತಿಯೊಂದನ್ನು ಏನೇ ಉಳಿದರೂ ಯಾವುತ್ತೂ ವೇಸ್ಟ್‌ ಮಾಡಿಲ್ಲ ಅನಾಥಾಶ್ರಮಕ್ಕೆ ನೀಡುತ್ತೀವಿ ಅದನ್ನು ವಿಡಿಯೋ ಮಾಡಿ ಹಾಕಲ್ಲ ನನಗೆ ಹಿಂಸೆ ಆಗುತ್ತಿದೆ. ಏನೂ ತೋರಿಸಿಕೊಂಡು ಮಾಡುವುದಿಲ್ಲ. ಜನರ ಟ್ರೋ ನೋಡಿ ನನಗೆ ಮೆಂಟಲಿ ಶಾಕ್ ಆಗುತ್ತಿದೆ...ಯಾರ ಜೊತೆನೂ ಮಾತನಾಡಬಾರದು ಜೊತೆಗಿರಬಾರದು ಅನಿಸುತ್ತಿದೆ. ಬಿಗ್ ಬಾಸ್‌ನಿಂದ ಬಂದ್ಮೇಲೆ ನನ್ನನ್ನು ಬೀಪ್‌ ಪದಗಳಿಂದ ಮಾತನಾಡಿಸುತ್ತಿದ್ದೀರಿ. ನನ್ನ ನೋವು ಯಾರಿಗೂ ಹೇಳಿಕೊಳ್ಳಲು ಆಗಲ್ಲ ಹೀಗಾಗಿ ಯಾರ ಜೊತೆಗೂ ವಿಡಿಯೋ ಮಾಡಲ್ಲ. ಟ್ರೋಲ್‌ಗಳು ಮಾಡುವ ಕೆಟ್ಟ ಕೆಲಸದಿಂದ ಸಾವಿರಾರು ಹೆಣ್ಣುಮಕ್ಕಳ ಜೀವನ ಹಾಳಾಗುತ್ತಿದೆ. ನಾನು ಇನ್ನೂ ಬದುಕಿದ್ದೀನಿ ಅಂದ್ರೆ ನನ್ನ ಫ್ಯಾಮಿಲಿಗೋಸ್ಕರ' ಎಂದು ಸೋನು ಗೌಡ ಕಣ್ಣೀರಿಟ್ಟಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ಈಗ ಬಂತು ನೋಡಿ ಮಜಾ! Ashwini Gowda ತನ್ನಂತೇ ಮಾತಾಡೋ ಹಾಗೆ ಮಾಡಿದ Rakshita Shetty!
Kannada Serials: ಸೀರಿಯಲ್​ ನಾಯಕಿಯರು ಭಾರಿ ಸಂಕಷ್ಟದಲ್ಲಿ! ದೀಪಾ, ನಿಧಿ ಆಯ್ತು ಈಗ ಭಾರ್ಗವಿಯೂ ಜೈಲಿಗೆ- ಏನಾಗ್ತಿದೆ ಇಲ್ಲಿ? ​