ಬಿಬಿ ಮನೆಯಿಂದ ಸಾನ್ಯಾ ಐಯರ್ ಹೊರ ಬರುತ್ತಿದ್ದಂತೆ ಭಾವುಕರಾದ ರೂಪೇಶ್ ಶೆಟ್ಟಿ. ಒಂದು ದಿನವೂ ಅಕೆಯನ್ನು ಬಿಟ್ಟು ಇರಲಿಲ್ಲ....
ಬಿಗ್ ಬಾಸ್ ಸೀಸನ್ 9 43ನೇ ದಿನಕ್ಕೆ ಕಾಲಿಟ್ಟಿದೆ. ಕಡಿಮೆ ವೋಟ್ ಪಡೆದು ಬಿಬಿ ಮನೆಯಿಂದ ಹೊರ ಬಂದಿರುವ 6ನೇ ಸ್ಪರ್ಧಿ ಸಾನ್ಯಾ ಐಯರ್. ಬಿಗ್ ಬಾಸ್ ಓಟಿಟಿಯಿಂದ ನೇರವಾಗಿ ಟಿವಿ ಬಿಗ್ ಬಾಸ್‌ಗೆ ಪ್ರವೇಶ ಪಡೆದ ನಾಲ್ಕನೇ ವ್ಯಕ್ತ ಸಾನ್ಯಾ. ಈ 98 ದಿನಗಳ ಅವಧಿಯಲ್ಲಿ ಸಾನ್ಯಾ ಮತ್ತು ರೂಪೇಶ್ ಒಳ್ಳೆಯ ಸ್ನೇಹಿತರಾಗಿದ್ದರು ದಿನವೂ ಒಟ್ಟಿಗೆ ಸಮಯ ಕಳೆಯುತ್ತಿದ್ದರು ಹೀಗಾಗಿ ಸಾನ್ಯಾ ಮನೆಯಿಂದ ಹೊರ ನಡೆಯುವ ಸಮಯದಲ್ಲಿ ರೂಪೇಶ್ ಶೆಟ್ಟಿ ಭಾವುಕರಾಗಿದ್ದಾರೆ. ಸಾನ್ಯಾ ಹೊರಡುವ ಮುನ್ನ ಮೇಕಪ್ ರೂಪ್‌ಗೆ ಕರೆದುಕೊಂಡು ಹೋಗು ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.
ರೂಪೇಶ್ ಮಾತು:
'Thank you so much for everything. ಬಿಗ್ ಬಾಸ್ ಮನೆಯಲ್ಲಿ ನಿನ್ನನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೀನಿ. ಸ್ಪರ್ಧಿಯಾಗಿ ಹೇಳುತ್ತಿಲ್ಲ ನನ್ನ ಲೈಫ್‌ನ ನೀನು ತುಂಬಾ ಬದಲಾಯಿಸಿರುವ ನಾನು ನೋಡೋ ರೀತಿ ಬದಲಾಗಿದೆ ನನ್ನ ಭಾವನೆಗಳು ಬದಲಾಗಿದೆ. ನನ್ನ ಜೀವನದಲ್ಲಿ ಯಾವ ಹುಡುಗಿಗೂ ಜಾಗ ಕೊಡುವುದಿಲ್ಲ ಅಂದುಕೊಂಡಿದ್ದೆ. ನನ್ನ ಹೃದಯದಲ್ಲಿ ನೀನು ಯಾವಾಗಲೂ ಇರುತ್ತೀಯಾ. ನಿನ್ನಿಂದ ನನ್ನ ಜೀವನ ತುಂಬಾ ಬದಲಾಗಿದೆ ನನ್ನ ಫ್ಯಾಮಿಲಿ ಮೇಲೆ ಪ್ರೀತಿ ಬರುವುದಕ್ಕೆ ನೀನೇ ಕಾರಣ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಬಿಡು ನಿನ್ನ ಸಮಯ ಕೊಡಲು ಆಗಲಿಲ್ಲ. ಸತ್ಯ ಹೇಳುತ್ತೀನಿ ಈ ಮನೆಯಲ್ಲಿ ನಿನ್ನಷ್ಟು ಮುಖ್ಯ ನನಗೆ ಯಾರೂ ಇಲ್ಲ ನನ್ನ ಲೈಫಲ್ಲಿ ನೀನು ತುಂಬಾನೇ ಮೂಖ್ಯ. ಜೀವನದಲ್ಲಿ ನಿನ್ನಿಂದ ತುಂಬಾ ಪಾಠ ಕಲಿತಿರುವೆ. ನಾನು ಹೊರಗೆರ ಬರುವಾಗ ನೀನು ಅದೇ ಸಾನ್ಯಾ ಆಗಿರು ಬದಲಾಗಬೇಡ. ನೀನು ಬದಲಾದರೆ ನಿನ್ನ ಮೇಲಿರುವ ಬೆಲೆ ಕಡಿಮೆ ಆಗಿ ಬಿಡುತ್ತದೆ. ಪ್ರತಿವಾರವೂ ನೀನು ನನಗೆ ಕೆಂಪು ಟೀ-ಶರ್ಡ್ ಕಳುಹಿಸು ಅದರ ಮೇಲೆ S ಅಕ್ಷರ ಇರಲಿ. ಸ್ಪರ್ಧಿಯಾಗಿ ಆಟ ಸೋತಿರಬಹುದು ಆದರೆ ಒಬ್ಬ ಒಳ್ಳೆ ವ್ಯಕ್ತಿಯಾಗಿ ಅಪಾರ ಜನರನ್ನು ಸಂಪಾದನೆ ಮಾಡಿರುವೆ.ಈ ಮನೆಯಲ್ಲಿ ನಾನು ಎರಡು ಸಲ ಅತ್ತಿರುವೆ ಅದು ನಿನ್ನ ಕಾರಣಕ್ಕೆ ಅಷ್ಟೆ ಈ ಕಣ್ಣೀರು ಮನಸ್ಸಿನಿಂದ' ಎಂದು ಸಾನ್ಯಾ ಎದುರು ಕುಳಿತುಕೊಂಡು ಕಣ್ಣೀರಿಟ್ಟಿದ್ದಾರೆ.
BBK9 ಕ್ಯಾಪ್ಟನ್ ರೂಮಲ್ಲಿ ರೂಪೇಶ್- ಸಾನ್ಯಾ ನಡುವೆ ಏನಾಯ್ತು: ಕಂಫರ್ಟ್ ಝೋನ್‌ನಲ್ಲಿ ತಬ್ಬಿಕೊಳ್ಳುವುದು ತಪ್ಪಲ್ಲ?
ಸಾನ್ಯಾ ಮನೆಯಿಂದ ಹೊರ ನಡೆದ ನಂತರವೂ ರೂಪೇಶ್ ಅಳುತ್ತಿದ್ದರು. ಬಾತ್‌ರೂಮ್‌ನಲ್ಲಿ ಬಿಕ್ಕಿಬಿಕ್ಕಿ ಕಣ್ಣಿರಿಟ್ಟಿದ್ದಾರೆ. 'ಸಾನ್ಯಾ ಬಿಟ್ಟು ಜೀವನ ಮಾಡುವುದಕ್ಕೆ ಕಷ್ಟ ಆಗುತ್ತುದೆ. ಒಂದು ದಿನವೂ ಸಾನ್ಯಾಗೆ ಗುಡ್ ಮಾರ್ನಿಂಗ್ ಹೇಳದೆ ದಿನ ಆರಂಭಿಸಿಲ್ಲ. 100 ದಿನ ಜೊತೆಗಿದ್ದು ಒಳ್ಳೆ ಜೀವನದ ಪಾಠ ಹೇಳಿಕೊಟ್ಟಿದ್ದಾಳೆ. ನನಗೆ ಹುಡುಗಿಯರು ಅಂದ್ರೆ ಇಷ್ಟಾನೇ ಇರಲಿಲ್ಲ ಬಿಬಿ ಮನೆಗೆ ಬಂದ ದಿನವೇ ಹೇಳಿದ್ದೆ ಲೈಫ್‌ಟೈಂ ಸಿಂಗಲ್ ಆಗಿರುತ್ತೀನಿ ಅಂತ. ಪ್ರತಿ ಸಲ ನಾನು ಗೆದ್ದಾಗಲ್ಲೂ ಸೆಲೆಬ್ರೇಟ್ ಮಾಡುತ್ತಿದ್ದಳು ಸೋತಾಗ ಪಕ್ಕ ನಿಲ್ಲುತ್ತಿದ್ದಳು. ಬಿಗ್ ಬಾಸ್‌ಯಿಂದ ನನ್ನ ಲೈಫ್‌ಗೆ ಸಿಕ್ಕಿರುವ ಬೆಸ್ಟ್ ಫ್ರೆಂಡ್ ಅವಳು ತುಂಬಾ ಒಳ್ಳೆ ಹುಡುಗಿ. ಮನೆಯಿಂದ ಬಿಗ್ ಬಾಸ್‌ಗೆ ಬರುವಾಗ ಯಾರನ್ನೂ ಮಿಸ್ ಮಾಡಿ ಅತ್ತಿಲ್ಲ ಆದರೆ ಸಾನ್ಯಾ ಇಲ್ಲಿಂದ ಹೊರಗಡೆ ಹೋಗುವಾಗ ಆದ ನೋವು ಮರೆಯಲು ಆಗುವುದಿಲ್ಲ . ನಾಳೆಯಿಂದ ಆಟ ಕರೆಕ್ಟ್ ಆಗಿ ಆಟ ಆಡುತ್ತೀನಿ...ಸಾನ್ಯಾಯಿಂದ ನಾನು ಜೀವನ ನೋಡುವ ದೃಷ್ಟಿ ಬದಲಾಗಿದೆ. ನನಗೆ ಅತಿ ಹೆಚ್ಚು ಕೇರ್ ಮಾಡುತ್ತಿದ್ದ ವ್ಯಕ್ತಿ ಸಾನ್ಯಾ. ಒಂದು ದಿನವೂ ನನಗೆ ಯಾರೂ ಕರೆ ಮಾಡಿ ಊಟ ಆಯ್ತಾ ಅಂತ ಕೇಳುತ್ತಿರಲಿಲ್ಲ ಆದರೆ ಅವಳು ನನಗೋಸ್ಕರ ಕಾದು ಊಟ ಮಾಡುತ್ತಿದ್ದಳು. ಗ್ರೇಟ್' ಎಂದು ರೂಪೇಶ್ ಕಣ್ಣಿರಿಟ್ಟಿದ್ದಾರೆ.