ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ತಂದೆ-ತಾಯಿ, ಅಣ್ಣಅತ್ತಿಗೆ. ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ ಕೊಟ್ಟ ಫ್ಯಾಮಿಲಿ....
ಬಿಗ್ ಬಾಸ್ ಪ್ರತಿ ಸೀಸನ್‌ನಲ್ಲೂ 70 ದಿನಗಳು ಕಳೆದ ನಂತರ ಪೋಷಕರು ಎಂಟ್ರಿ ಕೊಡುತ್ತಾರೆ. ತಮ್ಮ ಮಕ್ಕಳ ನೆಚ್ಚಿನ ಅಡುಗೆ ಮಾಡಿಕೊಂಡು ಅವರಿಗೆ ಸಣ್ಣ ಪುಟ್ಟ ಸಲಹೆ ಕೊಟ್ಟು ಸಮಯ ಕಳೆದು ಹೋಗುತ್ತಾರೆ. ಪ್ರತಿ ಫ್ಯಾಮಿಲಿಯಿಂದ ಒಬ್ಬರು ಅಥವಾ ಇಬ್ಬರು ಬರುತ್ತಾರೆ...ಆದರೆ ಸಂಗೀತಾ ಶೃಂಗೇರಿ ಇಡೀ ಕುಟುಂಬ ನೋಡಿ ಸ್ಪರ್ಧಿಗಳು ಮಾತ್ರವಲ್ಲ ವೀಕ್ಷಕರು ಕೂಡ ಶಾಕ್ ಆಗಿದ್ದಾರೆ. ಟಫ್ ಸ್ಪರ್ಧಿಯಾಗಿರುವ ಸಂಗೀತಾ ನೆಗೆಟಿವ್ ಆಗಿ ಕಾಣಿಸುತ್ತಿದ್ದಾರಾ? ಯಾರಿಗಾದರೂ ಮೋಸ ಮಾಡುತ್ತಿದ್ದಾರಾ? ಈ ಪ್ರಶ್ನೆಗಳಿಗೆ ಫ್ಯಾಮಿಲಿ ಉತ್ತರ ಕೊಟ್ಟಿದೆ.
ಯಾಕೆ ಸಂಗೀತಾ ತುಂಬಾ ಅಳುವುದು ಎಂದು ಅತ್ತಿಗೆ ಸುಚಿತ್ರಾ ಪ್ರಶ್ನೆ ಮಾಡಿದ್ದಾರೆ. ನಾನು ಏನೇ ಮಾಡಿದರೂ ಎಲ್ಲರು ವಿರೋಧಿಸುತ್ತಾರೆ. ನನಗೆ ಇದೇ ವಿಷಯಕ್ಕೆ ಬೇಸರ ಆಗಿ ಅಳ್ತಿದ್ದೀನಿ. ಸಂಗೀತಾ ಕನ್ನಿಂಗ್, ಅವಕಾಶವಾದಿ ಮತ್ತು ನೆಗೆಟಿವ್ ಅಂತಾನೇ ಹೇಳ್ತಾರೆ. ನಾನು ನಿಜಕ್ಕೂ ನೆಗೆಟಿವ್ ಆಗಿ ಕಾಣಿಸುತ್ತಿದ್ದೀನಾ? ಇಲ್ಲಿ ಯಾರ ಬಗ್ಗೆನೂ ಕೆಟ್ಟದಾಗಿ ಮಾತನಾಡಿಲ್ಲ. ದಾರಿ ತಪ್ಪಿದ್ದೀನಾ? ಏನಾದರೂ ಕೆಟ್ಟ ಕೆಲಸ ಮಾಡಿದ್ದೀನಾ? ಪ್ರತಿಯೊಬ್ಬರಿಗೂ ನಮ್ರತಾ ಇಷ್ಟ ಆಗುತ್ತಾಳೆ ನಾನು ಅವಳಂತೆ ಇರಲು ಆಗಲ್ಲ. ಕಳೆದ ವಾರ ಎಷ್ಟು ಚೆನ್ನಾಗಿ ಟಾಸ್ಕ್ ಮಾಡಿದ್ದೀವಿ ಯಾರೂ ಉತ್ತಮ ಕೊಟ್ಟಿಲ್ಲ ಇರುವಷ್ಟು ದಿನವೂ ನಾನು ಕಳಪೆ ಪಡೆಯುತ್ತೀನಿ.
ನಿನ್ನನ್ನು ನೋಡಿ ನಾನು ಸ್ಪೂರ್ತಿ ಪಡೆಯುತ್ತೀನಿ ನೀನು ಅಷ್ಟು ಸ್ಟ್ರಾಂಗ್ ಸ್ಪರ್ಧಿ. ನೀನು ನೆಗೆಟಿವ್ ಆಗಿ ಖಂಡಿತ ಇಲ್ಲ. ನಿನ್ನ ಹಾರ್ಟ್ ಜೊತೆ ನಮ್ಮ ಹಾರ್ಟ್ ಕನೆಕ್ಟ್ ಆಗಿದೆ..ಬಿಗ್ ಬಾಸ್ ಮನೆಯಲ್ಲಿ ನೀನು ಅತ್ತೆ ನಮಗೆ ಬೇಸರ ಆಗುತ್ತದೆ. ನೀನು ನಿನ್ನ ಆಟ ಆಡುತ್ತಿರುವೆ ಇಲ್ಲಿ ಒಂಟಿಯಾಗಿ ಆಟವಾಡಲು ಎಲ್ಲರು ಬಂದಿರುವುದು. ನಿನ್ನನ್ನು ಎಷ್ಟು ಜನ ವಿರೋಧಿಸಿದರು, ಏನೇ ಕಳಪೆ ಕೊಟ್ಟರೂ ತಲೆ ಕೆಡಿಸಿಕೊಳ್ಳಬೇಡ. ನೀನು ಪ್ರತಿ ವಾರ ಕಳಪೆ ತೆಗೆದುಕೊಂಡರೂ ಬೇಸರವಿರಲ್ಲ ನಿನ್ನ ಬೆಸ್ಟ್ ನೀನು ನೀಡಬೇಕು.