ಡ್ರೋನ್ ಪ್ರತಾಪ್ ಬೇಜಾನ್ ಕೊಬ್ಬು ತೋರಿಸ್ತಾ ಇದ್ದಾನೆ ಇಷ್ಟ್ರಲ್ಲೇ ಕೊಡ್ತೀನಿ; ಹೊಡೆಯುವ ಪ್ಲ್ಯಾನ್‌ನಲ್ಲಿದ್ರಾ ರಕ್ಷಕ್?

By Vaishnavi Chandrashekar  |  First Published Nov 6, 2023, 9:06 AM IST

ಆ ಒಂದು ಮಾತು ಹೇಳಿ ಸಂಕಷ್ಟಕ್ಕೆ ಸಿಲುಕಿಕೊಂಡ ರಕ್ಷಕ್. ತುಕಾಲಿ ಸಂತು ಚರ್ಚೆ ಮಾಡಿದ್ದು ಸರಿ ಅಲ್ಲ ಎಂದ ಫ್ಯಾನ್ಸ್‌. 


ಕನ್ನಡ ಚಿತ್ರರಂಗದ ಹಿರಿಯ ಹೆಮ್ಮೆಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಬುಲೆಟ್ ಪ್ರಕಾಶ್ ಅಗಲಿದ ನಂತರ ರಕ್ಷಕ್ ಕುಟುಂಬದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿಬಿಟ್ಟರು. ಇದರಿಂದ ಸೋಷಿಯಲ್ ಮೀಡಿಯಾ ತುಂಬಾ ರಕ್ಷಕ್ ಮಾಸ್ ಡೈಲಾಗ್ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತದೆ. ಇಷ್ಟೊಂದು ಫ್ಯಾನ್ ಕ್ರೇಜ್ ಇದ್ರೂ ಯಾಕೆ ರಕ್ಷಕ್ ಹೊರ ಬಂದ್ರು?

ತುಂಬಾ ಸಮಯದಿಂದ ರಕ್ಷಕ್‌ಗೆ ಡ್ರೋನ್ ಪ್ರತಾಪ್ ಕಂಡರೆ ಆಗುತ್ತಿರಲಿಲ್ಲ...ಸಿಟ್ಟು ಮಾಡಿಕೊಳ್ಳುತ್ತಿದ್ದರು. ಅಲ್ಲದೆ ಪ್ರತಾಪ್‌ಗೆ ಹೊಡೆಯುವ ಪ್ಲ್ಯಾನ್ ಇಟ್ಟುಕೊಂಡಿದ್ದರು ಅನ್ಸುತ್ತೆ ಅದು ಫ್ಲಾಪ್ ಆಗಿದ್ದೇ ಒಳ್ಳೆಯದು ಎನ್ನುತ್ತಾರೆ. ಶುಕ್ರವಾರ ಅಂದ್ರೆ ನವೆಂಬರ್ 3ರಂದು ಪ್ರತಾಪ್ ಅಡುಗೆ ಮನೆಯಲ್ಲಿ ಆಡಿದ ಮಾತುಗಳು ಚರ್ಚೆ ಹುಟ್ಟುಹಾಕಿಸುತ್ತದೆ. ಪ್ರತಾಪ್ ತಮಗೆ ಕೆಲಸ ಹೇಳಿದ್ದಾನೆ ಎಂದು ರಕ್ಷಕ್ ಕೋಪ ಮಾಡಿಕೊಳ್ಳುತ್ತಾರೆ. 'ಬೇಜಾನ್ ಕೊಬ್ಬು ತೋರಿಸ್ತಾ ಇದಾನೆ. ಅವನಿಗೆ ಇಷ್ಟ್ರಲ್ಲೇ ಕೊಡ್ತೀನಿ' ಎಂದು ರಕ್ಷಕ್ ಹೇಳುತ್ತಾರೆ. 

Tap to resize

Latest Videos

ವಿಚಿತ್ರ ಅನಿಸುತ್ತಿದೆ, ಒಂಟಿಯಾಗಿರಲು ಆಗುತ್ತಿಲ್ಲ ಮಾನಸಿಕ ನೆಮ್ಮದಿ ಇಲ್ಲ: ನಟಿ ಕೃಷಿ ತಾಪಂಡ ಭಾವುಕ

ಇದೆಲ್ಲಾ ಆಯ್ತು ಅಂತೆ ಸುಮ್ಮನಿದ್ದರೆ ವೀಕೆಂಡ್‌ನಲ್ಲಿ ಸುದೀಪ್ ಯಾರು ಹೊರಟಾಗಿ ಮಾತನಾಡಿರುತ್ತಾರೆ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ರಕ್ಷಕ್‌ಗೆ ಮಾತಿಗೆ ಏನೂ ಹೇಳಿರುವುದಿಲ್ಲ. ಆದರೆ ವಿನಯ್, ನಮ್ರತಾ, ತುಕಾಲಿ...ಎಲ್ಲರೂ ಆಡಿರುವ ಮಾತುಗಳ ಬಗ್ಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಆಗ ರಕ್ಷಕ್ ಅಲರ್ಟ್ ಆಗುತ್ತಾರೆ. 'ನನಗೆ ಏನು ಮಾಡಬೇಕು ಅನ್ನೋದೇ ತಿಳಿಯುತ್ತಿಲ್ಲ. ಏನು ಮಾಡೋಣ ಹೇಳಿ. ಎಲ್ಲರ ಜೊತೆ ಮಾತನಾಡಿಕೊಂಡು ಇದ್ದೀನಿ ಎಲ್ಲರ ಜೊತೆ ಚೆನ್ನಾಗಿ ಬೆರೆಯುತ್ತಿದ್ದೀನಿ. ಆದರೂ ಅದು ಸರಿ ಆಗುತ್ತಿಲ್ಲ. ಯಾರಿಗಾದರೂ ಹೊಡೆದು ಹೊರಗೆ ಹೋಗೋಣವೇ' ಎಂದು ಸಂತೋಷ್ ಬಳಿ ರಕ್ಷಕ್ ಹೇಳುತ್ತಾರಂತೆ.

ನಂಗೆ ಪಬ್ಲಿಸಿಟಿ ಬೇಕು ಅಷ್ಟೇ, ಕೋಪ ಬಂದ್ರೆ ಬೀಪ್ *** ಪದಗಳು ಬರುತ್ತೆ: ರಕ್ಷಕ್ ಬುಲೆಟ್

ಗುಂಪಿನಲ್ಲಿ ಸೇರಿಕೊಂಡು ಒಂದಾದರೆ ಒಂಟಿಯಾಗಿ ಆಟ ಆಡುವುದು ಹೇಗೆ ಅನ್ನೋದು ಸುದೀಪ್‌ ಮತ್ತು ಜನರ ಪ್ರಶ್ನೆ ಆಗಿತ್ತು ಅದನ್ನೂ ನೆಗೆಟಿವ್ ಆಗಿ ಸ್ವೀಕರಿಸಿದ ರಕ್ಷಕ್ ಮನೆಯಿಂದ ಯಾರಿಗೂ ಹೊಡೆಯದೆ ಹೊರ ಬಂದಿರುವುದು ಒಳ್ಳೆಯ ನಿರ್ಧಾರ ಎಂದು ನೆಟ್ಟಿಗರು ಹೇಳುತ್ತಾರೆ. 

click me!