BBK 10: ಪ್ರತಾಪ್​ ಮನೆಯ ಹೆಣ್ಣುಮಕ್ಕಳನ್ನು ನೋಡೋ ದೃಷ್ಟಿ ಸರಿಯಿಲ್ಲ? ಸುದೀಪ್​ ಮಾತಿಗೆ ಆಗಿದ್ದೇನು?

Published : Nov 05, 2023, 04:49 PM ISTUpdated : Nov 05, 2023, 05:01 PM IST
 BBK 10: ಪ್ರತಾಪ್​ ಮನೆಯ ಹೆಣ್ಣುಮಕ್ಕಳನ್ನು ನೋಡೋ ದೃಷ್ಟಿ ಸರಿಯಿಲ್ಲ? ಸುದೀಪ್​ ಮಾತಿಗೆ ಆಗಿದ್ದೇನು?

ಸಾರಾಂಶ

ಡ್ರೋನ್​ ಪ್ರತಾಪ್​ ಮನೆಯ ಹೆಣ್ಣುಮಕ್ಕಳನ್ನು ನೋಡೋ ದೃಷ್ಟಿ ಸರಿಯಿಲ್ಲ! ಸುದೀಪ್​ ಮಾತಿಗೆ ಕೋಲಾಹಲ  

ಬಿಗ್​ಬಾಸ್​ ಕನ್ನಡದ 10ನೇ ಸೀಸನ್​ ಈಗ ಭಾರಿ ಸದ್ದು ಮಾಡುತ್ತಿದೆ.  ಬಿಗ್​ ಬಾಸ್​ ಶುರುವಾಗಿ ನಾಲ್ಕು ವಾರಗಳಾಗಿದ್ದು, ಇದಾಗಲೇ ಇಬ್ಬರು ಎಲಿಮಿನೇಟ್​ ಆಗಿದ್ದಾರೆ. ಸ್ನೇಕ್​ ಶ್ಯಾಮ್​ ಜತ್ತು ಗೌರೀಶ್​ ಅಕ್ಕಿ ಅವರು ಮನೆಯಿಂದ ಹೊರಕ್ಕೆ ಹೋಗಿದ್ದು, ಮೂರನೆಯ ಸ್ಪರ್ಧಿ  ಬುಲೆಟ್ ಪುತ್ರ ರಕ್ಷಕ್ ಬುಲೆಟ್  ಮನೆಯಿಂದ ಔಟ್ ಆಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ನಡುವೆಯೇ ಕಲರ್ಸ್​ ಕನ್ನಡ ವಾಹಿನಿ ಪ್ರೊಮೋ ಒಂದನ್ನು ರಿಲೀಸ್​ ಮಾಡಿದ್ದು, ಇದರಲ್ಲಿ ಸುದೀಪ್​ ಅವರು ಆಡಿದ ಮಾತು ಹಾಗೂ ಕೊನೆಗೆ ಅವರು ಹೇಳಿದ ಮಾತಿನಿಂದ ಸಾಮಾಜಿಕ ಜಾಲತಾಣದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಡ್ರೋನ್​ ಪ್ರತಾಪ್​ ಕುರಿತ ಮಾತು ಅದಾಗಿದ್ದು, ಈ ಮಾತಿಗೆ ಹಾಗೂ ಸುದೀಪ್​ ಅವರ ಉತ್ತರಕ್ಕೆ ಡ್ರೋನ್​ ಪ್ರತಾಪ್​ ಫ್ಯಾನ್ಸ್​ ನಡುವೆ ಕಮೆಂಟ್​ ಬಾಕ್ಸ್​ನಲ್ಲಿ ವಾಕ್ಸಮರ ಶುರುವಾಗಿದ್ದು ಕೋಲಾಹಲ ಸೃಷ್ಟಿಸಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ತುಕಾಲಿ ಸಂತು, ಸ್ನೇಹಿತ್ ಗೌಡ, ಇಶಾನಿ ಹಾಗೂ ನಮೃತಾ ಗೌಡ ಜೊತೆಗೆ ವಿನಯ್ ಮಾತನಾಡುತ್ತಿದ್ದರು. ಈ ಸಂದರ್ಭ ತುಕಾಲಿ ಸಂತೋಷ್, ಈಗ ಎಲ್ಲರೂ ಸೀರೆ ಹಾಕಿಕೊಂಡು ಓಡಾಡಿದರೆ ಹೈಕ್ಳು ಯಾರನ್ನು ನೋಡ್ತಾರೆ? ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಿನಯ್, ಯಾರು ಏನಾದರೂ ಹಾಕಲಿ ಒಬ್ಬನದ್ದು ಮಾತ್ರ ಒಂದೇ ರಿಯಾಕ್ಷನ್. ಅವನು (ಡ್ರೋನ್ ಪ್ರತಾಪ್) ಹೇಗೆ ನೋಡ್ತಾನೆ ಅಂದ್ರೆ ತುಂಬಾ ಕೆಟ್ಟದಾಗಿ ನೋಡ್ತಾನೆ. ಅವನು ಯಾವತ್ತಾದರೂ ನೋಡುವ ನಾನು ತೋರಿಸ್ತೀನಿ ನೋಡಿ ಎಂದು ಕೆಲ ದಿನಗಳ ಹಿಂದೆ ಹೇಳಿದ್ದರು. ಈ ಮಾತನ್ನೇ ಆಧಾರವಾಗಿಟ್ಟುಕೊಂಡ ಸುದೀಪ್​ ಅವರು,  ಪ್ರತಾಪ್​ ಅವರು ಬಿಗ್​ಬಾಸ್​ ಮನೆಯ ಹೆಣ್ಣುಮಕ್ಕಳನ್ನು ನೋಡೋ ದೃಷ್ಟಿ ಸರಿಯಿಲ್ಲ, ಇದಕ್ಕೆ ಏನಂತೀರಾ ಎಂದು ಪ್ರಶ್ನಿಸಿದರು.

ಅರೆಸ್ಟ್‌ ನಾಟಕವಾಡಿದ ನಟಿ ಉರ್ಫಿ ಜಾವೇದ್‌ಗೆ ಜೈಲು ಫಿಕ್ಸ್‌? ಮಾಡಿದ್ದೇನು, ಆಗಿದ್ದೇನು?

ಆಗ ಸ್ಪರ್ಧಿಗಳಲ್ಲಿ ಕೆಲವರು ನೋ ಎಂದಿದ್ದರೆ, ಇನ್ನು ಕೆಲವರು ಎಸ್​ ಎಂದರು. ಎಸ್​ ಅಂದವರಿಗೆ ಸಮರ್ಥನೆ ನೀಡುವಂತೆ ಸುದೀಪ್​ ಅವರು ಹೇಳಿದಾಗ, ಪ್ರತಾಪ್​ ರೊಮ್ಯಾಂಟಿಕ್​ ಹೀರೋ ಥರ ಇದ್ದಾನೆ ಎಂದು ಸಂತೋಷ್​ ಹೇಳಿದರು. ಆಗ ಮಧ್ಯೆ ಪ್ರವೇಶಿಸಿದ  ಸುದೀಪ್​ ನಾವು ರೊಮ್ಯಾಂಟಿಕ್​ ಬಗ್ಗೆ ಮಾತನಾಡುತ್ತಾ ಇಲ್ಲ ಎಂದರು. ಆಗ ವಿನಯ್​ ಅವರು, ಅವನು (ಪ್ರತಾಪ್​) ಏನು ಯೋಚನೆ ಮಾಡಿಕೊಂಡು ಎಲ್ಲಿ ನೋಡ್ತಾ ಇರ್ತಾನೆ ಅಂತಾನೇ ಗೊತ್ತಾಗಲ್ಲ ಸರ್​ ಎಂದರು. ಆಗ ಸುದೀಪ್​, ನೀವು ಹೇಳ್ತಿರೋದು ತಪ್ಪು. ಯಾರಾದರೂ ನೋಡೋ ರೀತಿ ಅಥವಾ ಸ್ಪರ್ಶಿಸಿದಾಗಲೇ ಗೊತ್ತಾಗತ್ತೆ ಆ ಸ್ಪರ್ಶ ಸರಿಯಿಲ್ಲ ಎಂದು. ಅದರ ಮೇಲೆ ನೀವು ನಂಬಬೇಕೆ ಹೊರತು ಸುಮ್ಮನೇ ಏನೋ ಊಹೆಯ ಮೇಲೆ ಅಲ್ಲ ಎಂದಾಗ ವಿನಯ್​, ನನ್ನಂದ ಏನಾದ್ರೂ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಂಡರು. 

ಇದರ ವಿಡಿಯೋ ವೈರಲ್​ ಆಗಿದ್ದು, ಇದಕ್ಕೆ ಡ್ರೋನ್​ ಪ್ರತಾಪ್​ ಖಾಸಗಿ ಜೀವನವನ್ನು ಎಳೆದು ತಂದು ಕಮೆಂಟ್​ ಬಾಕ್ಸ್​ನಲ್ಲಿ ವಾದ-ಪ್ರತಿವಾದ ಶುರು ಮಾಡಲಾಗಿದೆ. ಪ್ರತಾಪ್ ಅವರ ವ್ಯಕ್ತಿತ್ವ ಹಾಳು ಹಾಗುತ್ತ ಇತ್ತು. ಇದರ ಬಗ್ಗೆ ಮಾತು ಅಡಿದ್ದಕೆ ಧನ್ಯವಾದಗಳು ಸುದೀಪ್ ಸರ್ ಮತ್ತು ಕಲರ್ಸ್ ಕನ್ನಡ ಟೀಮ್ ಎಂದು ಪ್ರತಾಪ್​ ಫ್ಯಾನ್ಸ್​ ಎಂಬ ಹೆಸರಿನಲ್ಲಿ ಇನ್​ಸ್ಟಾಗ್ರಾಮ್​ ಖಾತೆಯಿಂದ ಕಮೆಂಟ್​ ಮಾಡಲಾಗಿದೆ. ಅದಕ್ಕೆ ಕೆಲವರು ಎಸ್​ ಎಸ್​ ಎಂದಿದ್ದಾರೆ. ಇನ್ನು ಕೆಲವರು ಡ್ರೋನ್​ ಮಾಡುವ ಹೆಸರಿನಲ್ಲಿ ದೇಶದ ಹೆಸರನ್ನು ಹಾಳು ಮಾಡಿ ತಿರುಗುತ್ತಾ ಇದ್ದವನು ಇವನು ಎಂದಾಗ ಇದಕ್ಕೆ ಕೆಲವರು ಗರಂ  ಆಗಿದ್ದಾರೆ. ದೇಶದ ಹೆಸರು ಹೇಳ್ಕೊಂಡು ಹಾಳು ಮಾಡಿರೋದು ತುಂಬಾ ಜನ ಇದ್ದಾರೆ. ಒಬ್ಬನು ಉದ್ಧಾರ ಆಗ್ತಾನೆ ಅಂದ್ರೆ ನಿಮ್ಮಂಥವರಿಗೆ ಸಹಿಸಲಿಕ್ಕೆ ಆಗಲ್ಲ ಅನ್ಸುತ್ತೆ ಎಂದು ಕಿಡಿ ಕಾರಿದ್ದಾರೆ. ಹೀಗೆ ಡ್ರೋನ್​ ಪ್ರತಾಪ್​ ಪರ ಮತ್ತು ವಿರುದ್ಧ ಕಮೆಂಟ್​ಗಳ ಸುರಿಮಳೆಯೇ ಆಗುತ್ತಿದೆ. 

ರಾಖಿ ಪತಿ ಆದಿಲ್‌ ಜೊತೆ ಶೆರ್ಲಿನ್‌ ಚೋಪ್ರಾ ಮತ್ತೆ ರೊಮ್ಯಾನ್ಸ್‌: ವಿಡಿಯೋ ನೋಡಿ ದಂಗಾದ ಫ್ಯಾನ್ಸ್‌!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?