ತಂದೆ ಹೆಸರನ್ನು ಬಳಸಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದ ರಕ್ಷಕ್ ಬುಲೆಟ್. ಬೇರೆ ಬೀಪ್ ಪದಗಳನ್ನು ಲೆಕ್ಕ ಮಾಡಿಲ್ಲ ಯಾಕೆ ಗೂಬೆ ಮ್ಯಾಟರ್ ಆಗುತ್ತೆ?
ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿದ ರಕ್ಷಕ್ ಬುಲೆಟ್ ಮನೆಯಲ್ಲಿದ್ದಾಗ ಮಾಡಿದ ಸೌಂಡ್‌ಗಿಂತ ಹೊರ ಬಂದ ಮೇಲೆ ಮಾಡುತ್ತಿರುವ ಸೌಂಡ್ ಹೆಚ್ಚಾಗಿದೆ. ಬಿಗ್ ಬಾಸ್ ಮನೆಯಲ್ಲಿ ಆಗುತ್ತಿರುವ ಸಣ್ಣ ಪುಟ್ಟ ಅನ್ಯಯಗಳನ್ನು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ರಕ್ಷಕ್ ನೀಡುವ ಹೇಳಿಕೆ ಮತ್ತು ಮಾಡುವ ತಪ್ಪುಗಳಿಗೆ ಅವರ ತಂದೆ ಬುಲೆಟ್ ಪ್ರಕಾಶ್ ಹೆಸರು ತೆಗೆಯುತ್ತಿರುವುದಕ್ಕೆ ಗರಂ ಆಗಿದ್ದಾರೆ.
'ರಕ್ಷಕ್ ಗೂಬೆ ಅಂತ ಹೇಳಿದ್ದಾನೆ ಅಂತ ಅಂದ್ರೆ ನನಗೆ ಬೇಸರ ಆಗುತ್ತಿರಲಿಲ್ಲ. ಅಲ್ಲಿ ನನ್ನ ತಂದೆ ಹೆಸರು ಬರುತ್ತೆ, ಬುಲೆಟ್ ಪ್ರಕಾಶ್ ಮಗ ರಸ್ತೆಯಲ್ಲಿ ಹೋಗುವವರಿಗೆ ಗೂಬೆ ಅಂತ ಹೇಳಿದ್ರೆ ಸುಮ್ಮನೆ ಇರ್ತಾರಾ? ಸುದೀಪ್ ಅಣ್ಣ ಸೀನಿಯರ್ ಓಕೆ ಅದಕ್ಕೆ ನಾನು ಬೆಲೆ ಕೊಟ್ಟಿದೀನಿ ಎಲ್ಲಾನೂ ತೆಗೆದುಕೊಂಡು ಹೋಗಲು ಆಗಲ್ಲ. ನನಗೆ ಅಂತ ಫ್ಯಾಮಿಲಿ ಇದೆ ನನ್ನನ್ನು ಪ್ರೀತಿ ಮಾಡುವ ಜನರು ಇರುತ್ತಾರೆ. ನ್ಯಾಯ ಪ್ರತಿಯೊಬ್ಬರಿಗೂ ಒಂದೇ ಇರಬೇಕು. ನಾನು ತಪ್ಪು ಮಾಡಿದರೆ ಬೈದರೆ ನಾನು ಕೇಳುತ್ತೀನಿ ನನ್ನ ತಂದೆ ನೀವು ಎಲ್ಲಾ ಸೀನಿಯರ್‌ಗಳು ನಾನು ತಿದ್ದಿಕೊಂಡು ಸರಿ ಮಾಡಿಕೊಳ್ಳುತ್ತೀನಿ, ಅವರ ಮಾತುಗಳನ್ನು ಸೈಡು ಮಾಡಿ ನೀನು ಯಾವ ದೊಣ್ಣೆ ನಾಯಕ ಅಂತ ಹೇಳುವ ಹುಡುಗ ನಾನು ಅಲ್ಲ. ಜಗಳ ಮಾಡಿದ್ದಕ್ಕೆ ನಾನು ಸಾರಿ ಕೇಳುವುದಿಲ್ಲ ಸುದೀಪ್ ಅಣ್ಣ ಮುಂದೆ ನೇರವಾಗಿ ಹೇಳುತ್ತೀನಿ' ಎಂದು ರಕ್ಷಕ್ ಫ್ಯೂಚರ್ ವರ್ಡ್ ಕನ್ನಡ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಬಿಗ್ ಬಾಸ್ ಸಂಭಾವನೆ ವಿಚಾರದಲ್ಲಿ ಬಕ್ರಾ ಆಗ್ಬಿಟ್ಟೆ, ಒಂದು ಟನ್ ಇಟ್ಟಿಗೆನೂ ಬರಲ್ಲ: ರಕ್ಷಕ್ ಬುಲೆಟ್
'ಗೂಬೆ ಅನ್ನೋ ಪದ ಅಷ್ಟೋಂದು ಪರಿಣಾಮ ಬೀರುತ್ತೆ ಅಂತ ಗೊತ್ತಿರಲಿಲ್ಲ. ಅಲ್ಲಿ ಅಮ್ಮನ್, ತಗಡು, ಗುಲಾಮಾ ಅಂತ ಹೇಳಿರುವ ಪದಗಳು ಕೇಳಿಸಿರಲಿಲ್ಲ. ನಾನು ರೆಗ್ಯೂಲರ್ ಆಗಿ ಬಳಸುವ ಪದಗಳು ನಾನು ಇರುವುದೇ ಹೀಗೆ ನಾನು ಯಾರಿಗೂ ಕೇರ್ ಮಾಡುವುದಿಲ್ಲ ಆದರೆ ಬಿಗ್ ಬಾಸ್ ಮನೆಯಲ್ಲಿ ನಾನು ಏನೂ ಬಳಸಿಲ್ಲ. ಬುಲೆಟ್ ಪ್ರಕಾಶ್ ಮಗನನ್ನು ಸಾವಿರಾರು ಮಂದಿ ನೋಡುತ್ತಾರೆ ಅಲ್ಲದೆ ಬಿಗ್ ಬಾಸ್ ಬೆಲೆ ನನಗೆ ಗೊತ್ತಿದೆ ಅದನ್ನು ನಾನು ಗೌರವಿಸುತ್ತೀನಿ' ಎಂದು ರಕ್ಷಕ್ ಹೇಳಿದ್ದಾರೆ.
ನಾನು ಕಾಮೆಂಟ್ ಮಾಡಿದ್ರೆ ಉಚ್ಚೆ ಹೊಯ್ಕಂಬಿಡಬೇಕು: ಡ್ರೋನ್ ಪ್ರತಾಪ್ ಪರ ನಿಂತವರಿಗೆ ರಕ್ಷಕ್ ಬುಲೆಟ್ ಟಾಂಗ್
'ಸುದೀಪ್ ಅಣ್ಣ ನನ್ನ ತಂದೆ ಹೆಸರು ಬಳಸಿದ್ದು ಬೇಸರ ಆಗಿದೆ. ಸುದೀಪ್ ಅಣ್ಣ ಏನೇ ಹೇಳಿದರೂ ವೀಕೆಂಡ್‌ನಲ್ಲಿ ನಾವು ಕೇಳಬೇಕು. ಗೂಬೆ ಅನ್ನೋ ಪದಕ್ಕೆ ನನ್ನ ಅಪ್ಪನನ್ನು ರೋಡಿಗೆ ನಿಲಿಸಿದರು. ಸುದೀಪ್ ಅಣ್ಣ ಮೇಲೆ ಅಷ್ಟೇ ಪ್ರೀತಿ ಇದೆ, ಇದುವರೆಗೂ ಅವರು ಏನೇ ಹೇಳಿದರೂ ಕೇಳುತ್ತೀನಿ ಇಂಡಸ್ಟ್ರಿಯಲ್ಲಿ ಒಟ್ಟಿಗೆ ಸಾಗುತ್ತೀವಿ. ತುಂಬಾ ಕೆಟ್ಟ ಪದಗಳನ್ನು ಬಳಸಿದ್ದಾರೆ ಅದನ್ನು ಪ್ರಶ್ನೆ ಮಾಡಿದೇ ಗೂಬೆ ಅನ್ನೋ ಪದವನ್ನು ಇಷ್ಟು ದೊಡ್ಡದು ಮಾಡಿದ್ದು ಬೇಸರ ಆಗಿತ್ತು. ವಾರ ಫುಲ್ ಮಾಡಿರುವುದು ಜನರು ಮರೆತು ಸುದೀಪ್ ಅಣ್ಣ ವೀಕೆಂಡ್‌ನಲ್ಲಿ ಬಂದು ಮಾತನಾಡುವುದು ಲೆಕ್ಕ ಮಾಡುತ್ತಾರೆ, ಅದನ್ನು ಮುಂದಿನ ವಾರಕ್ಕೂ ಮುಂದುವರೆಯುತ್ತದೆ' ಎಂದಿದ್ದಾರೆ ರಕ್ಷಕ್.