ದೊಡ್ಮನೆಯ ಬಿಗ್ ನ್ಯೂಸ್: ಕನ್ನಡ ಬಿಗ್‌ಬಾಸ್ ಸೀಸನ್​-8 ಆರಂಭಕ್ಕೆ ಡೇಟ್ ಅನೌನ್ಸ್

Published : Jan 22, 2021, 10:18 PM ISTUpdated : Jan 22, 2021, 10:23 PM IST
ದೊಡ್ಮನೆಯ ಬಿಗ್ ನ್ಯೂಸ್: ಕನ್ನಡ ಬಿಗ್‌ಬಾಸ್ ಸೀಸನ್​-8 ಆರಂಭಕ್ಕೆ ಡೇಟ್ ಅನೌನ್ಸ್

ಸಾರಾಂಶ

ಬಹುನಿರೀಕ್ಷಿತ ಕನ್ನಡದ ಬಿಗ್‌ ಮನೆಯ ಬಿಗ್​ ಬಾಸ್​ ಆರಂಭಕ್ಕೆ ಕೊನೆಗೂ ದಿನಾಂಕ ಫಿಕ್ಸ್​ ಆಗಿದೆ. ಹೌದು ಸ್ವಾಮಿ.... ಈ ಬಗ್ಗೆ ಅಧಿಕೃತ ಘೋಷಣೆ ಕೂಡ ಆಗಿದೆ.

ಬೆಂಗಳೂರು, (ಜ.22): ಕನ್ನಡದಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಕರೆಯಲ್ಪಡುವ ಬಿಗ್‌ಬಾಸ್‌ ಮತ್ತೆ ಶುರುವಾಗ್ತಿದೆ. ಹೌದು ಸ್ವಾಮಿ ಅಸಲಿ ಆಟ ಈಗ ಶುರು ಅಂತಿದ್ದಾರೆ ಕಲರ್ಸ್​ ಕನ್ನಡ ಹೆಡ್​ ಪರಮೇಶ್ವರ್​ ಗುಂಡ್ಕಲ್.

.ಯೆಸ್... ಕೊರೋನಾ ವೈರಸ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಕನ್ನಡ ಬಿಗ್​ ಬಾಸ್​ ಸೀಸನ್​ 8 ಆರಂಭಕ್ಕೆ ಇದೀಗ ಮುಹೂರ್ತ ಕೂಡಿಬಂದಿದ್ದು, ಬಹಳ ನಿರೀಕ್ಷೆ ಹುಟ್ಟುಹಾಕಿರುವ ಬಿಗ್‌ಬಾಸ್‌ ಸೀಸನ್‌ 8 ಮುಂದಿನ ತಿಂಗಳು ಅಂದ್ರೆ ಇದೇ ಫೆಬ್ರವರಿಯಿಂದ ಬಿಗ್​ ಬಾಸ್​ ಸೀಸನ್​ 8 ಆರಂಭಗೊಳ್ಳಲಿದೆ.

ಹೌದು ಸ್ವಾಮಿ, ಬಿಗ್‌ಬಾಸ್ ಶುರುವಾಗ್ತಿದೆ, ದೊಡ್ಮನೆಗೆ ಯಾರ್ಯಾರ್ ಹೋಗ್ತಾರೆ..?

ಈ ಬಗ್ಗೆ ಇಂದು ಶುಭ ಶುಕ್ರವಾರ ಅಧಿಕೃತ ಘೋಷಣೆ ಆಗಿದೆ. ಕಲರ್ಸ್​ ಕನ್ನಡ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಈ ಬಗ್ಗೆ ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.

ಕೊನೆಗೂ ಬಿಗ್ ಬಾಸ್-8 ಪ್ರಾರಂಭ ಮಾಡುವುದಾಗಿ ಅಪ್ ಡೇಟ್ ನೀಡುವ ಮೂಲಕ ಕಿರುತೆರೆ ಪ್ರೇಕ್ಷಕರ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸಿದ್ದಾರೆ. ಆದ್ರೆ, ಈ ಬಾರಿ ಬಿಗ್​ ಬಾಸ್ ಸೀಸನ್​ 8ರಲ್ಲಿ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ.

Bigg Boss Kannada to launch in Feb...

Posted by Parameshwar Gundkal on Friday, January 22, 2021

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​