
ಬಿಗ್ ಬಾಸ್ ಸೀಸನ್ 10 ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆದಿದೆ. ಗ್ರೋಫಿ ಮತ್ತು 50 ಲಕ್ಷ ಹಣವನ್ನು ನಟ ಕಾರ್ತಿಕ್ ಮಹೇಶ್ ಗೆದ್ದಿದ್ದಾರೆ, ಎರಡನೇ ಸ್ಥಾನವನ್ನು ಡ್ರೋನ್ ಪ್ರತಾಪ್ ಪಡೆದಿದ್ದಾರೆ ಹಾಗೂ ಮೂರನೇ ಸ್ಥಾನದಲ್ಲಿ ಸಂಗೀತಾ ಶೃಂಗೇರಿ ಇದ್ದಾರೆ. ಸಂದರ್ಶನಗಳಲ್ಲಿ ಬೇಕಾಬಿಟ್ಟಿ ಕಾಮೆಂಟ್ ಮಾಡುತ್ತಿರುವ ರಕ್ಷಕ್ ಬುಲೆಟ್‌ಗೆ ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಬುದ್ಧಿ ಮಾತುಗಳನ್ನು ಹೇಳಿದ್ದಾರೆ.
'ಏನಾಗಿದೆ ನಿಮಗೆಲ್ಲಾ ಇಂಟರ್ವ್ಯೂಗಳಿಗೆ ಹೋದಾಗ? ಎಲಿಮಿನೇಟ್ ಆಗಿರುವ ಕೆಲವು ಸರ್ಧಿಗಳು...ಅದರಲ್ಲೂ ರಕ್ಷಕ್ ಬುಲೆಟ್ ಅವರೆ. ಬೇರೆ ಸಂದರ್ಶನಗಳಲ್ಲಿ ಈ ಕಾರ್ಯಕ್ರಮದ ಬಗ್ಗೆ ನೀವು ಒಳ್ಳೆಯದ ಮಾತನಾಡಬೇಕು ಅಂತಲ್ಲ, ಈ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಮಾತನಾಡುವ ಅಧಿಕಾರವಿದೆ, ವಿಮರ್ಶೆ ಮಾಡುವ ಅಧಿಕಾರವಿದೆ, ತಮ್ಮ ಅಭಿಪ್ರಯಾ ಹೇಳುವ ಅಧಿಕಾರವಿದೆ ಆದರೆ ಇನ್ನೊಬ್ಬರಿಗೆ ನೋವು ಕೊಡುವ ಅಧಿಕಾರಿ ಯಾರಿಗೂ ಇಲ್ಲ. ಒಬ್ಬರಿಗೆ ನೋವು ಕೊಡುವ ವೇದಿಕೆ ಇದಾಗಿದ್ದರೆ 10 ವರ್ಷಗಳಿಂದ ಈ ಶೋ ನಡೆಸಿಕೊಂಡು ವೇದಿಕೆ ಮೇಲೆ ನಾನು ಇರುತ್ತಿರಲಿಲ್ಲ. ಎಲ್ಲಿ ಎಥಿಕ್ಸ್ ಮತ್ತು ಪ್ರಿನ್ಸಿಪಲ್ ಇರಲ್ಲ ಅಲ್ಲಿ ನಾನು ಇರುವುದಿಲ್ಲ' ಎಂದು ಕಿಚ್ಚ ಸುದೀಪ್ ಮಾತನಾಡಿದ್ದಾರೆ.
'ಬಿಗ್ ಬಾಸ್‌ನಲ್ಲಿ ಇದ್ದಾಗ ಒಂದು ಮಾತು ಹೋದ ಮೇಲೆ ಒಂದು ಮಾತು. ಇದೆಲ್ಲಾ ಬೇಕಾ? ರಕ್ಷಕ್ ಅವರೇ ಬೇಕಾ? ಯಾರಾದರೂ ಪ್ರಶ್ನೆ ಕೇಳಿದಾಗ ಉತ್ತರ ಕೊಡುವ ಆವೇಶದಲ್ಲಿ ಮಾತನಾಡುತ್ತೀರಾ ಪರ್ವಾಗಿಲ್ಲ. ಇದು ತಪ್ಪು ಎಂದು ನಾನು ಹೇಳುತ್ತಿಲ್ಲ ಆದರೆ ಇದು ಟೆಲಿಕಾಸ್ಟ್ ಆಗಲ್ವಾ? ಹೊರಗಡೆ ಬರಲ್ವಾ? ಆ 5 ನಿಮಿಷ ಸಂದರ್ಶನದಲ್ಲಿ ನಿಮಗೆ ನೀವು ಹೀರೋ ಅನಿಸಬಹುದು ಸರ್ ಆದರೆ ಲೈಫ್‌ನಲ್ಲಿ ಅದೆಷ್ಟು ಜನರನ್ನು ಕಳೆದುಕೊಳ್ಳುತ್ತೀರಾ ಗೊತ್ತಾ?' ಎಂದು ಸುದೀಪ್ ಹೇಳಿದ್ದಾರೆ.
'ನಿಮ್ಮಲ್ಲಿ ಯಾರು ಏನೇ ಸಂದರ್ಶನ ಕೊಟ್ಟರೂ ನನಗೆ ಮ್ಯಾಟರ್ ಆಗುವುದಿಲ್ಲ. ಆದರೆ ಇನ್ನಿತ್ತರ ಸ್ಪರ್ಧಿಗಳ ವಿಚಾರ ಬಂದಾಗ ನಾನು ಕಂಡಿತಾ ಡೀಪ್ ರೂಟ್ ಹೋಗಿ ಸ್ಟಡಿ ಮಾಡಿ ವಿಚಾರ ಮಾಡೇ ಮಾಡುತ್ತೀನಿ. ಇದರಲ್ಲಿ ನನಗೆ ಇಂಟ್ರೆಸ್ಟಿ ಇಲ್ಲ. ನಿಮ್ಮಿಂದ ಸಾರಿ ಕೇಳಿಸಬೇಕು ಅನ್ನೋದು ನನ್ನ ಯೋಚನೆ ಅಲ್ಲ. ನನಗೆ ಹಿಂದೆ ಒಂದು ಮುಂದೆ ಒಂದು ಮಾತನಾಡಲು ಬರುವುದಿಲ್ಲ ಪ್ರೀತಿನೂ ಇಲ್ಲೇ ವ್ಯಕ್ತ ಪಡಿಸುತ್ತೀನಿ. ನೀವು ನಮಗೆ ಎಷ್ಟು ಮುಖ್ಯ ಅಷ್ಟೇ ಮುಖ್ಯ ಇನ್ನಿತ್ತರ ಸ್ಪರ್ಧಿಗಳು. ಯಾರ ಬಗ್ಗೆ ನೀವು ಮಾತನಾಡುತ್ತೀರೋ ಅವರು ನಿಮ್ಮೊಟ್ಟಿಗೆ ಇದ್ದವರೇ. ನಮ್ಮ ಆಪ್ತ ಗೆಳೆಯ ಬುಲೆಟ್ ಅವರ ಪುತ್ರ ನೀವು ಅವರನ್ನು ನಾವು ಇನ್ನೂ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೀವಿ ಅಂದ್ಮೇಲೆ ನಿಮ್ಮನ್ನು ಪ್ರೀತಿಸಲ್ವಾ ಸರ್ ನಾವು?' ಎಂದಿದ್ದಾರೆ ಸುದೀಪ್.
ನಾನು ಕಾಮೆಂಟ್ ಮಾಡಿದ್ರೆ ಉಚ್ಚೆ ಹೊಯ್ಕಂಬಿಡಬೇಕು: ಡ್ರೋನ್ ಪ್ರತಾಪ್ ಪರ ನಿಂತವರಿಗೆ ರಕ್ಷಕ್ ಬುಲೆಟ್ ಟಾಂಗ್
ಇದಾದ ಮೇಲೆ ರಕ್ಷಕ್ 'ನಾನು ನಿನ್ನೆ ನನ್ನ ಜೀವನದ ಒಂದು ಅವಿಸ್ಮರಣೀಯ ಸಮಯವನ್ನು ಸುದೀಪ್ ಅಣ್ಣರವರೊಂದಿಗೆ ಕಳೆದೆ. ಸುದೀಪ್ ಅಣ್ಣ ಅವರು ಮತ್ತು ನನ್ನ ತಂದೆಯ ಆತ್ಮೀಯತೆ, ಸ್ನೇಹ, ಪ್ರೀತಿ ಹಾಗೂ ಬಾಂಧವ್ಯದ ಬಗ್ಗೆ ಹೇಳಿದರು, ನಾನು ತುಂಬಾ ಭಾವುಕಾನದೆ, ನನಗೆ ಸಾಕಷ್ಟು ವಿಚಾರಗಳನ್ನು ಹೇಳಿದರು ಮತ್ತು ಹೇಗಿರಬೇಕು ಎಂದು ಉತ್ತಮ ಸಲಹೆ ನೀಡಿದ್ದರು. ವಿಶೇಷ ಎಂದರೆ ಅವರ ತಮ್ಮ ಬರ್‌ಬರಿ ಗಾಗಲ್ಸ್ (ಕನ್ನಡ) ನನಗೆ ಉಡುಗರೆಯಾಗಿ ನೀಡಿದರ. ಅದು ನಿಜಕ್ಕೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಥ್ಯಾಂಕ್ಸ್ ಸುದೀಪ್ ಅಣ್ಣ' ಎಂದು ರಕ್ಷಕ್ ಬರೆದುಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.