ರಮ್ಮಿ ಜೊತೆ ಬ್ಯುಸಿಸೆನ್ ಪಾರ್ಟನರ್ ಆಗಿರುವುದು ಯಾಕೆ ಎಂದು ಪ್ರಶ್ನಿಸಿದ ಪತ್ರಕರ್ತನಿಗೆ ಖಡಕ್ ಉತ್ತರ ಕೊಟ್ಟ ಕಿಚ್ಚಾ ಸುದೀಪ್.....
ಸ್ಯಾಂಡಲ್‌ವುಡ್ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರಲಿರುವ ಬಿಗ್ ಬಾಸ್ ಸೀಸನ್ 11 ಶೀಘ್ರದಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್ 29ರಂದು ಗ್ರ್ಯಾಂಡ್ ಓಪನಿಂಗ್ ನಡೆಯಲಿದ್ದು ನಿನ್ನ ಪ್ರೆಸ್‌ಮೀಟ್ ಹಮ್ಮಿಕೊಂಡಿದ್ದರು. ಸ್ವರ್ಗ ಮತ್ತು ನರಕದ ಕಾನ್ಸೆಪ್ಟ್ ಎಂದು ಅನೌನ್ಸ್ ಮಾಡಿದ ದಿನದಿಂದಲೂ ಜನರಲ್ಲಿ ಸಾಕಷ್ಟು ಗೊಂದಲವಿತ್ತು ಅದಿಕ್ಕೆ ಫುಲ್ ಕ್ಲಾರಿಟಿ ನೀಡಿದ್ದಾರೆ. ಆದರೆ ಜನರಿಗೆ ಬೇಸರ ಆಗಿರುವುದು ಏನೆಂದರೆ ಸುದೀಪ್ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಯಾಕೆ ರಮ್ಮಿ ಕಂಪನಿ ಬ್ಯುಸಿನೆಸ್ ಪಾರ್ಟನರ್ ಆಗಿದೆ ಎಂದು. ಈ ಪ್ರಶ್ನೆಗೆ ವೇದಿಕೆ ಮೇಲಿದ್ದ ಇಡೀ ಬಿಗ್ ಬಾಸ್ ತಂಡ ಉತ್ತರಿಸಿದೆ.
ಸುದೀಪ್ ನಡೆಸಿಕೊಡುವ ಕಾರ್ಯಕ್ರಮವನ್ನು ಅನೇಕರು ನೋಡುತ್ತಾರೆ ಅದರಲ್ಲೂ ಕೆಲವದರು ಸುದೀಪ್ ಮಾತುಗಳನ್ನು ವೇದವಾಕ್ಯದಂತೆ ಪಾಲಿಸುತ್ತಾರೆ. ಹೀಗಿರುವಾಗ ರಮ್ಮಿ ಜೊತೆ ಪಾರ್ಟನರ್ ಆಗಿರುವುದು ಪ್ರಚೋದನೆಗೆ ದಾರಿ ಆಗುತ್ತದೆ ಅನಿಸುತ್ತದೆ' ಎಂದು ಪತ್ರಕರ್ತ ಪ್ರಶ್ನೆ ಮಾಡಿದಾಗ ಬಿಗ್ ಬಾಸ್ ಮುಖ್ಯಸ್ಥರಾದ ಪ್ರಶಾಂತ್ 'A23 rummy ಅವರು ನಮಗೆ ಕ್ಲೈಂಟ್ ಆಗಿರುತ್ತಾರೆ ನಾವು ಖರೀದಿ ಮಾಡಿರುತ್ತಾರೆ ನಾವು ಏನೂ ಹೇಳುವುದಕ್ಕೆ ಆಗಲ್ಲ' ಎನ್ನುವ ಗೊಂದಲದ ಉತ್ತರ ನೀಡುತ್ತಾರೆ. ಅದೇ ವೇದಿಕೆಯಲ್ಲಿದ್ದ ಬಿಬಿ ತಂಡದವರಲ್ಲಿ ಒಬ್ಬರಾದವರು 'ರಮ್ಮಿ ಆಟವಾಡುವುದನ್ನು ನಮ್ಮ ರಾಜ್ಯದಲ್ಲಿ ಬ್ಯಾನ್ ಮಾಡಿಲ್ಲ ಆಟವಾಡಲು ಅನುಮತಿ ಇದೆ. ನಮ್ಮ ಭಾರತ ಸರ್ಕಾರ ಇದನ್ನು ತಡೆಯುವುದರ ಬಗ್ಗೆ ನಿರ್ಧಾರ ಮಾಡಬೇಕು. ನಿಮಗೆ ತಪ್ಪು ಅನಿಸಿದ್ದು ಮತ್ತೊಬ್ಬರಿಗೆ ಸರಿ ಅನಿಸಬಹುದು ಆದರೆ ನಾವು ಯಾವುದೇ ಕಾರಣಕ್ಕೆ ಸರ್ಕಾರದ ನಿಮಯ ಉಲ್ಲಂಘನೆ ಮಾಡುವುದಿಲ್ಲ. ಒಂದರಿಂದ ಒಳ್ಳೆಯದು ಆಗುತ್ತದೆ ಅಂದ್ರೂ ಅದನ್ನು ದುರ್ಬಳಕೆ ಮಾಡಿಕೊಳ್ಳುವವರು ಇದ್ದೇ ಇರುತ್ತಾರೆ. ಇದು ಸಂಪೂರ್ಣವಾಗಿ ಕಂಪನಿ ನಿರ್ಧಾರ ತೆಗೆದುಕೊಳ್ಳುತ್ತದೆ'ಎಂದು ಮಾತನಾಡುತ್ತಾರೆ.
ನನ್ನ ಯೋಗ್ಯತೆ ಎಷ್ಟಿದೆ ಅಷ್ಟೇ ದುಡಿಯುವುದು; ಬಿಗ್ ಬಾಸ್ ಸಂಭಾವನೆ ವಿಚಾರದಲ್ಲಿ ಸುದೀಪ್ ನೇರನುಡಿ!
ಸುದೀಪ್ ರಿಯಾಕ್ಷನ್ ವೈರಲ್:
'ಏನೆಂದರೆ ಹೆಚ್ಚು ತಿಳುವಳಿಕೆ ಇರುವಂತ ಸಮಾಜ ನಮ್ಮದ್ದು, ಬುದ್ಧಿವಂತಿಕೆ ಇರುವ ಸಮಾಜ ಇದು...ಇಲ್ಲಿ ಸಿಗರೇಟ್ ಇದೆ ಕುಡಿತ ಇದೆ ಸಾಕಷ್ಟಿದೆ...ಎಲ್ಲದ್ದಕ್ಕಿಂತ ಹೆಚ್ಚಾಗಿ ಮನೆಯಲ್ಲಿ ತಂದೆ ತಾಯಿ ಇದ್ದಾರೆ. ನಮಗೆ ಏನು ಬೇಕು ನಾವು ಆಯ್ಕೆ ಮಾಡಬೇಕು. ಸರ್ಕಾರ ನಮ್ಮಿಂದ ತುಂಬಾ ಟ್ಯಾಕ್ಸ್ ತೆಗೆದುಕೊಳ್ಳುತ್ತಿದ್ದಾರೆ ತುಂಬಾ ದುಡ್ಡು ವಸೂಲಿ ಮಾಡುತ್ತಿದ್ದಾರೆ ಅನಿಸುತ್ತದೆ ಆದರೆ ದೇಶ ನಡೆಸುವುದಕ್ಕೆ ಸರ್ಕಾರ ಏನು ಮಾಡಬೇಕು ಅದನ್ನು ಮಾಡಲೇ ಬೇಕು. ಈ ರೀತಿ ದೊಡ್ಡ ಶೋ ನಡೆಸುವುದಕ್ಕೆ ಬಿಗ್ ಬಾಸ್ ತಂಡದವರು ಕೂಡ ಅವರ ಕೆಲಸ ಮಾಡಬೇಕು ಏಕೆಂದರೆ ಒಂದು ದೊಡ್ಡ ಶೋ ಮಾಡಲು ಅಷ್ಟೇ ಖರ್ಚು ಆಗುತ್ತದೆ. ಬಿಗ್ ಬಾಸ್ ಕಾರ್ಯಕ್ರಮದಿಂದ ಎಷ್ಟು ಮನೆಗಳು ಉದ್ದಾರ ಅಯ್ತು ಎಷ್ಟು ವ್ಯಕ್ತಿತ್ವಗಳು ಉದ್ದಾರ ಆಯ್ತು ಎಷ್ಟು ಜನರಿಗೆ ಕೆಲಸ ಸಿಗ್ತು..ಇಲ್ಲಿ ಕೆಲಸ ಗಿಟ್ಟಿಸಿಕೊಂಡವರು A23 ರಮ್ಮಿಯನ್ನು ಆಯ್ಕೆ ಮಾಡಿಕೊಂಡ್ರಾ ಇಲ್ಲ ಏನು ಕೆಲಸ ಮಾಡಿದ್ದರು ಅದರಿಂದ ಏನು ಕಲಿತರು ಹೀಗೆ ನಾನು ದೊಡ್ಡದಾಗಿ ಯೋಚನೆ ಮಾಡಲು ಇಷ್ಟ ಪಡುತ್ತೀನಿ. ನನ್ನ ಪ್ರಕಾರ ಸಮಾಜದಲ್ಲಿ ಇರುವ ಪ್ರತಿಯೊಬ್ಬರು ತಿಳುವಳಿಕೆ ಇರುವವರು ಸರಿಯಾಗಿರುವು ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಹೀಗಾಗಿ ನಮಗೆ ಒಂದು ಕುಟುಂಬ, ಒಬ್ಬಳೆ ಹೆಂಡತಿ ಮತ್ತು ಒಬ್ಬರೆ ತಂದೆ ತಾಯಿ ಇದ್ದಾರೆ. ಮೋದಿ ಅವರ ನಿವಾಸಕ್ಕೆ ಹೋಗಿ ಇಲ್ಲ ಸಿದ್ಧರಾಮಯ್ಯ ಅವರ ನಿವಾಸಕ್ಕೆ ಹೋಗಿ ಅಲ್ಲಿ ಸ್ಟ್ರೈಕ್ ಮಾಡಿ' ಎಂದು ಸುದೀಪ್ ಕೊಂಚ ಗರಂ ಆಗಿ ಉತ್ತರಿಸಿದ್ದಾರೆ.