ಹಿಂಸಾಚಾರಕ್ಕೆ ತಿರುಗಿದ 'ಬಿಗ್ ಬಾಸ್' ಮನೆ; ಸಹ ಸ್ಪರ್ಧಿ ಮೇಲೆ ಚಪ್ಪಲಿ ಎಸೆದ ನಟಿ

Published : Oct 23, 2022, 03:26 PM IST
 ಹಿಂಸಾಚಾರಕ್ಕೆ ತಿರುಗಿದ 'ಬಿಗ್ ಬಾಸ್' ಮನೆ; ಸಹ ಸ್ಪರ್ಧಿ ಮೇಲೆ ಚಪ್ಪಲಿ ಎಸೆದ ನಟಿ

ಸಾರಾಂಶ

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಅಜೀಂ ಮತ್ತು ಆಯೇಷಾ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಸಿಟ್ಟಿಗೆದ್ದ ನಟಿ ಆಯೇಷಾ ಸಹ ಸ್ಪರ್ಧಿ ಮೇಲೆ ಚಪ್ಪಲಿ ಎಸೆದಿದ್ದಾರೆ.

ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಹಿಂದಿಯಲ್ಲಿ ಸೂಪರ್ ಸಕ್ಸಸ್ ಆಗುತ್ತಿದ್ದಂತೆ ಬಿಗ್ ಬಾಸ್ ಅನೇಕ ಭಾಷೆಗಳಲ್ಲಿ ಪ್ರಸಾರ ಆರಂಭಿಸಿತು. ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಉತ್ತರ ಭಾರತದ ಅನೇಕ ಭಾಷೆಗಳಲ್ಲೂ ಬಿಗ್ ಬಾಸ್ ಪ್ರಸಾರವಾಗುತ್ತಿದೆ. ಕನ್ನಡದಲ್ಲಿ ಬಿಗ್ ಬಾಸ್ 9ನೇ ಸೀಸನ್ ನಡೆಯುತ್ತಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಯಶಸ್ವಿಯಾಗಿ 8 ಸೀಸನ್ ಮುಗಿಸಿ 9ನೇ ಸೀಸನ್ ನಡೆಯುತ್ತಿದೆ. ಕನ್ನಡದ ಜೊತೆಗೆ ತಮಿಳಿನಲ್ಲೂ ಬಿಗ್ ಬಾಸ್ ಪ್ರಾರಂಭವಾಗಿದೆ. ತಮಿಳಿನಲ್ಲಿ 6ನೇ ಸೀಸನ್ ನಡೆಯುತ್ತಿದೆ. ಕಮಲ್ ಹಾಸನ್ ನಡೆಸಿಕೊಡುವ ಬಿಗ್ ಬಾಸ್ ಶೋ ಎರಡು ವಾರಗಳನ್ನು ಕಳೆಯೋದ್ರೊಳಗೆ ಸ್ಪರ್ಧಿಗಳ ನಡುವಿನ ಕಿತ್ತಾಟ, ಕೂಗಾಟ ಜೋರಾಗಿದೆ. ತಮಿಳು ಬಿಗ್ ಬಾಸ್ ಮನೆ ಹಿಂಸಾಚಾರಕ್ಕೆ ತಿರುಗಿದ್ದು ಚಪ್ಪಲಿ ಎಸೆದುಕೊಳ್ಳುವ ಮಟ್ಟಕ್ಕೆ ಹೋಗಿದೆ. 

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಅಜೀಂ ಮತ್ತು ಆಯೇಷಾ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಮಹಿಳಾ ಸ್ಪರ್ಧಿಗಳನ್ನು ಕೆಟ್ಟ ಭಾಷೆಯಿಂದ ನಿಂದಿಸಿದ ಕಾರಣಕ್ಕೆ ಆಯೇಷಾ, ಅಜೀಂ ವಿರುದ್ಧ ಸಿಡಿದೆದಿದ್ದಾರೆ. ಸ್ಪರ್ಧಿ ಅಜೀಂ ಬಳಸಿದ ಪದವನ್ನು ಪಾವಾಸ್ ತೆಗೆದುಕೊಳ್ಳುವಂತೆ ಆಯೇಷಾ ಕೇಳಿದರು. ಆದರೆ ಅಜೀಂ ಪದೇ ಪದೇ ಹೇಳುತ್ತಿದ್ದರು. ಮನವಿ ಮಾಡಿದರೂ ಸಹ ನಿಲ್ಲಿಸದ ಅಜೀಂ ವಿರುದ್ಧ ಆಯೇಷಾ ಒಮ್ಮೆಗೆ ಸಿಟ್ಟಿಗೆದ್ದರು. ಉಳಿದ ಸ್ಪರ್ಧಿಗಳು  ಇಬ್ಬರ ಜಗಳ ಬಿಡಿಸಲು ಪ್ರಯತ್ನ ಪಟ್ಟರೂ ಸಹ ಸಾಧ್ಯವಾಗಲಿಲ್ಲ. ಬಳಿಕ ಆಯೇಷಾ ಕೋಪದಿಂದ ಶೋ ತೆಗೆದು ಅಜೀಂ ಮೇಲೆ ಎಳೆದರು. ಇದು ಬಿಗ್ ಬಾಸ್ ಸ್ಪರ್ಧಿಗಳನ್ನೇ ದಂಗಾಗುವಂತೆ ಮಾಡಿತು. 

BBK9 ಏನ್ ಗುರು ಇದು! ಬಿಗ್ ಬಾಸ್‌ ಮನೆಗೆ ಮತ್ತೆ ಸೋನು ಗೌಡ ಎಂಟ್ರಿ?

ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಅಜೀಂ ವರ್ತನೆ ಅನೇಕ ಸ್ಪರ್ಧಿಗಳಿಗೆ ಕಿರಿಕಿರಿ ಉಂಟು ಮಾಡಿದೆ. ನೆಟ್ಟಿಗರು ಸಹ ಅಜೀಂ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಅನೇಕರು ಅವರನ್ನು ಬಿಗ್ ಮನೆಯಿಂದ ಹೊರ ಕಳುಹಿಸುವಂತೆ ಒತ್ತಾಯಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಅಜೀಂನನ್ನು ಮನೆಯೊಳಗೆ ಕಳುಹಿಸಿ ತಪ್ಪು ಮಾಡಿದ್ದೀರಾ ಎಂದು ಬಿಗ್ ಬಾಸ್‌ಗೆ ಹೇಳುತ್ತಿದ್ದಾರೆ.

BBK9; ಸುದೀಪ್ ಇಲ್ಲದ ಎಲಿಮಿನೇಷನ್ ಪ್ರಕ್ರಿಯೆ ಹೇಗಿದೆ, ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು?

ವೀಕೆಂಡ್ ಸಂಚಿಕೆಯಲ್ಲಿ ನಟ ಕಮಲ್ ಹಾಸನ್ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಅಜೀಂ ಮನೆಯಿಂದ ಹೊರ ಹೋಗ್ತಾರಾ ಎಂದು ಕಾಯುತ್ತಿದ್ದರು. ನಿರೀಕ್ಷೆಯಂತೆ ಕಮಲ್ ಹಾಸನ್, ಅಜೀಂಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಬಳಿಕ ತನ್ನ ತಪ್ಪಿನ ಅರಿವಾಗಿ ಎಲ್ಲರ ಮುಂದೆ ಬಹಿರಂಗ ಕ್ಷಮೆ ಕೇಳಿದರು. ಬಾಲ್ಯದಿಂದನೂ ಕೋಪ ಜಾಸ್ತಿ ಎಂದಿರುವ ಅಜೀಂ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಕಮಲ್ ಹಾಸನ್ ಮುಂದೆ ಹೇಳಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!