BBK9 ಎರಡೇ ದಿನಕ್ಕೆ 12 ಮಂದಿ ನಾಮಿನೇಟ್; ಕಾರಣ ಕೇಳಿ ಹಾಸ್ಯ ಮಾಡಿದ ನೆಟ್ಟಿಗರು!

Published : Sep 26, 2022, 10:27 AM IST
BBK9 ಎರಡೇ ದಿನಕ್ಕೆ 12 ಮಂದಿ ನಾಮಿನೇಟ್; ಕಾರಣ ಕೇಳಿ ಹಾಸ್ಯ ಮಾಡಿದ ನೆಟ್ಟಿಗರು!

ಸಾರಾಂಶ

ಬಿಗ್ ಬಾಸ್‌ ಸೀಸನ್9ರ ಮೊದಲನೇ ವಾರದ ನಾಮಿನೇಷನ್‌ ನಡೆದಿದೆ. 18ರಲ್ಲಿ 12 ಮಂದಿ ಹೊರ ಹೋಗಲು ನೆಮಿನೇಟ್... 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಆರಂಭವಾಗಿದೆ. ವಿಭಿನ್ನತೆಯಿಂದ ಕೂಡಿರುವ ಈ ರಿಯಾಲಿಟಿ ಶೋನಲ್ಲಿ ಮೊದಲ ಬಾರಿಗೆ 9 ಮಂದಿ ಪ್ರವೀಣರು 9 ಮಂದಿ ನವೀನರಿದ್ದಾರೆ. ಪ್ರತಿಯೊಬ್ಬರು ಸ್ಟ್ರಾಂಗ್ ಆಗಿದ್ದು ಚಾಲೆಂಜ್‌ನ ತೊಡೆ ತಟ್ಟಿ ಸ್ವೀಕರಿಸುತ್ತಾರೆ. ಮೊದಲು ವಾರಕ್ಕೆ ಅರುಣ್ ಸಾಗರ್ ಪರೋಕ್ಷವಾಗಿ ಕ್ಯಾಪ್ಟರ್ ಆಗಿದ್ದಾರೆ. ಇದೇ ಸಂಭ್ರಮದಲ್ಲಿ ಮೊದಲ ವಾರದ ನಾಮಿನೇಷನ್‌ ಕೂಡ ಆರಂಭವಾಗಿದ್ದು, 12 ಮಂದಿ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. 

ನಾಮಿನೇಟ್ ಆಗಿರುವವರು:

- ಆರ್ಯವರ್ಧನ್ ಮತ್ತು ದರ್ಶ್‌
- ದಿವ್ಯಾ ಮತ್ತು ಐಶ್ವರ್ಯ
- ಪ್ರಶಾಂತ್ ಮತ್ತು ವಿನೋದ್
- ಅರುಣ್ ಮತ್ತು ನವಾಜ್
- ಸಾನ್ಯಾ ಮತ್ತು ಮಯೂರಿ
- ರೂಪೇಶ್‌ ಶೆಟ್ಟಿ ಮತ್ತು ಕಾವ್ಯಾ ಶ್ರೀ

ಎರಡೇ ದಿನಕ್ಕೆ ನಾಮಿನೇಟ್ ಆಗಿರುವ ಕಾರಣ ಸೈಕ್ ನವಾಜ್ ಗಾಬರಿ ಆಗಿದ್ದಾರೆ. 'ಇದಕ್ಕೆ ನೀನು ಗಾಬರಿ ಆಗಬೇಕಿಲ್ಲ. ನಾವೆಲ್ಲ ಎಷ್ಟು ಎಷ್ಟು ಸಲ ನಾಮಿನೇಟ್ ಆಗಿದ್ದೀವಿ ಗೊತ್ತಾ? ಫಸ್ಟ್‌ ಬಿಗ್ ಬಾಸ್‌ನಲ್ಲಿ ಪ್ರತಿ ದಿನ ನಾಮಿನೇಷನ್‌ ಇತ್ತು' ಎಂದು ಅರುಣ್ ಸಾಗರ್ ಧೈರ್ಯ ತುಂಬಿದ್ದಾರೆ. 

ನವಾಜ್ -ಅರುಣ್ ನಾಮಿನೇಟ್ ಆಗಲು ಕಾರಣ:
- ಬೇಡದೆ ಇರೋ ವಿಚಾರಗಳನ್ನು ನವಾಜ್ ಮಾತನಾಡುತ್ತಾರೆ. ಸುಮ್ಮನೆ ಹೊಡೆದು ಹಾಕ್ತೀನಿ ಹಾಗೆ ಹೀಗೆ...ಬರೀ ಮ್ಯಾನ್ ಹ್ಯಾಂಡಲಿಂಗ್ ಬಗ್ಗೆ ಹೇಳುತ್ತಾರೆ. ಅರುಣ್ ಸಾಗರ್‌ ಅವರದ್ದು ಏನೂ ತಪ್ಪಿಲ್ಲ. 
- ಅರುಣ್ ಸರ್‌ ಜೊತೆ ಏನೂ ಸಮಸ್ಯೆ ಇಲ್ಲ. ನವಾಜ್ ಮಾತನಾಡುವ ರೀತಿ ಸರಿ ಇಲ್ಲ...ಪದ ಬಳಕೆ ಸರಿ ಇಲ್ಲ.  ಬೆದರಿಕೆ ಕೊಡುವ ರೀತಿಯಲ್ಲಿ ಮಾತನಾಡುತ್ತಾರೆ.

Bigg Boss Kannada Season 9: ಬಿಗ್‌ಬಾಸ್‌ ಮನೆಗೆ ಕಾಲಿಟ್ಟ ಒಟ್ಟು 18 ಸ್ಪರ್ಧಿಗಳ ಪಟ್ಟಿ ಇಲ್ಲಿದೆ

ದರ್ಶ್ - ಆರ್ಯವರ್ಧನ್ ನಾಮಿನೇಟ್ ಆಗಲು ಕಾರಣ: 

- ಆರ್ಯವರ್ಧನ್ ಬಗ್ಗೆ ನನಗೆ ಯಾವ ಕಾರಣನೂ ಇಲ್ಲ ಆದರೆ ದರ್ಶ್‌ ಸುಮ್ಮನೆ ಏನೋ ಹೇಳಬೇಕು ಏನೋ ಮಾತನಾಡಬೇಕು ಅಂತ ಮಾತು ಅತಿಯಾಗಿದೆ. 
- ಆರ್ಯವರ್ಧನ್ ಜೋಡಿ ತುಂಬಾನೇ ಸ್ಟ್ರಾಂಗ್.
- ಗುರೂಜೀ ಜೊತೆ ನನಗೆ uncomfortable  ಅನಿಸುತ್ತಿದೆ ಅವರು ಬಳಸುವ ಪದಗಳ ಮೇಲೆ ಹಿಡಿತ ಇಲ್ಲ. ಗೊತ್ತಿಲ್ಲದೆ ಸರಿಯಾಗಿ ಮಾತನಾಡೋದು ಇಷ್ಟ ಇಲ್ಲ.
- ಆರ್ಯವರ್ಧನ್‌ ಮಾತಿನಲ್ಲಿ ಹಿಡಿತ ಬೇಕು. ದರ್ಶ್ ಮಾತನಾಡಬೇಕು ಅಂತ ಮಾತನಾಡುತ್ತಿದ್ದಾರೆ

ದಿವ್ಯಾ- ಐಶ್ವರ್ಯ ನಾಮಿನೇಟ್ ಆಗಲು ಕಾರಣ: 

- ದಿವ್ಯಾ ಅವರನ್ನು ಹೇಳಲು ಕಾರಣ ಇದೆ ಹೊಸಬ್ಬರಿಗೆ ಬಿಗ್ ಬಾಸ್‌ ಮನೆಯಲ್ಲಿ ಹೆಚ್ಚಿನ ದಿನ ಇರಲು ಅವಕಾಶ ಸಿಗಲಿ. ಅವರು ಕಳೆದ ಸೀನಿಯರ್‌ನಲ್ಲಿ ಇದ್ದರು.
- ದಿವ್ಯಾ ಜೊತೆ ನನಗೆ ಸರಿಯಾಗಿ ಬಾಂಡಿಂಗ್ ಆಗಿಲ್ಲ, ಐಶ್ವರ್ಯ ಎಲ್ಲರೊಂದಿಗೆ ಹೊಂದಾಣಿಕೆ ಆಗಿಲ್ಲ.
- ಐಶ್ವರ್ಯ ಆರ್ಯವರ್ಧನ್ ವೃತ್ತಿ ಜೀವನದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. 
- ಐಶ್ವರ್ಯ ಜೊತೆ ಹೊಂದಾಣಿಕೆ ಆಗುತ್ತಿಲ್ಲ. ಈ ಮನೆಯಲ್ಲಿ ಆ ಹುಡುಗಿಗೆ ಹೊಂದಿಕೊಳ್ಳಲು ಕಷ್ಟ ಆಗುತ್ತಿದೆ. ಜನರನ್ನು ಮಾತಿನಲ್ಲಿ ಸೋಲಿಸಬೇಕು ಅನ್ನೋದು ದಿವ್ಯಾ ಉರುಡುಗ ಗುಣ.

BBK9 ಒಳ್ಳೆ ಹುಡುಗ ಪ್ರಥಮ್‌ ಮೇಲೆ ಪ್ರತಿ ದಿನ ಕೋಪ ಬಂದಿದೆ, ಮೆಂಟಲಿ ಟಾರ್ಚರ್ ಕೊಡ್ತಾರೆ: ಅಮೂಲ್ಯ ಗೌಡ

ಪ್ರಶಾಂತ್ - ವಿನೋದ್ ನಾಮಿನೇಟ್ ಆಗಲು ಕಾರಣ: 

- ವಿನೋದ್ ಪರಿಚಯ ನನಗಿಲ್ಲ. ಪ್ರಶಾಂತ್ ಬಂದ ಎರಡನೇ ಜಗಳ ಶುರು ಮಾಡಿದ್ದಾರೆ. ಅವರ ಮುಖಭಾವ ಮತ್ತು ವರ್ತನೆ ಗಮನಿಸಿದ್ದರೆ ಹೊರಗಡೆಯಿಂದಲೇ ಏನೋ ಯೋಚನೆ ಮಾಡಿಕೊಂಡು ಬಂದಂತೆ ಇದೆ.
- ಆರ್ಯವರ್ಧನ್ ಜೊತೆ ಪ್ರಶಾಂತ್ ಜಗಳ ಮಾಡಿದ್ದರು. ಸಂಬಂಧ ಇಲ್ಲದ ವಿಚಾರ ಮಾತನಾಡಿ ಅವರದ್ದೇ ತಪ್ಪು ಅನ್ನೋ ರೀತಿಯಲ್ಲಿ ಮಾತನಾಡಿ ಜಗಳ ಮಾಡಿದ್ದು. ಅವರ ತಪ್ಪು ಇದೆ ಅಂತ ತಿಳಿದ ಮೇಲೆ ಆ ಜಾಗದಲ್ಲಿ ಅವರು ಇರಲಿಲ್ಲ. ಪ್ರಶಾಂತ್ ಜೊತೆಗೆ ವಿನೋದ್ ಇರುವ ಕಾರಣ ಅವರು ಕೂಡ ಸುಮ್ಮನೆ ಮಧ್ಯೆ ಮಧ್ಯೆ ಮಾತನಾಡುತ್ತಾರೆ. 
- ಪ್ರಶಾಂತ್ ಅವರ ಡಾಮಿನೇಷನ್‌ ನನಗೆ ಇಷ್ಟ ಆಗಿಲ್ಲ. ಬೇರೆ ಅವರದ್ದು ತಪ್ಪು ಅಂತಾರೆ ಆದರೆ ಅವರೇ ತಪ್ಪು ಮಾಡಿರುತ್ತಾರೆ. 

ಕಾವ್ಯಾ - ರೂಪೇಶ್ ಶೆಟ್ಟಿ ನಾಮಿನೇಟ್ ಆಗಲು ಕಾರಣ: 

- ಕಾವ್ಯಾ ಸ್ಪರ್ಧೆಗೆ ತುಂಬಾನೇ ವೀಕ್ ಅನಿಸುತ್ತಾರೆ.

ಸಾನ್ಯಾ- ಮಯೂರಿ ನಾಮಿನೇಟ್ ಆಗಲು ಕಾರಣ: :

- ಮಯೂರಿಗೆ ಆಪರೇಷನ್ ಆಗಿದೆ ಅಂತಿದ್ರು ಅದಿಕ್ಕೆ ಟಾಸ್ಕ್‌ ಮಾಡಲು ಅವರಿಗೆ ಕಷ್ಟ ಅಗಬಹುದು. 
- ಸಾನ್ಯಾ ಮತ್ತು ಮಯೂರಿ ತುಂಬಾ ರಿಸರ್ವ್‌ ಆಗಿದ್ದಾರೆ ಜನರ ಜೊತೆ ಹೊಂದಿಕೊಂಡಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ