
80 ರ ದಶಕದಲ್ಲಿ 'ಒಂದಾನೊಂದು ಕಾಲದಲ್ಲಿ' ಚಿತ್ರ ಮೂಲಕ ಸ್ಯಾಂಡಲ್ ವುಡ್‌ಗೆ ಪಾದಾರ್ಪಣೆ ಮಾಡಿದ ರಂಗಭೂಮಿ ಕಲಾವಿದ ಶಂಕರ್ ನಾಗ್ ಮೊದಲ ಬಾರಿಗೆ ಖ್ಯಾತ ನಟಿಯೊಂದಿಗೆ ನಟಿಸುವ ಅವಕಾಶ ಪಡೆದುಕೊಳ್ಳುತ್ತಾರೆ. ಈ ವೇಳೆ ನಿರ್ದೇಶಕರು ನಟಿಯನ್ನು ಭೇಟಿ ಮಾಡಲು ಕರೆದುಕೊಂಡು ಹೋದಾಗ ಶಂಕರ್ ನಾಗ್ ರನ್ನು ನೋಡಿ ಇವರ್ಯಾರೋ ಕೋತಿಯನ್ನು ಕರೆದುಕೊಂಡು ಬಂದಿದ್ದೀರಲ್ಲಾ ಎಂದು ಹೇಳುತ್ತಾರೆ.
'ನನ್ನ ಕಂಡರೆ ನಿಮಗೆ ಏನನಿಸುತ್ತೆ?BB ಮನೆಯಲ್ಲಿ ಶುರುವಾಯ್ತು ಲವ್ ಸ್ಟೋರಿ!
ರಾಜರ ರಾಜ ಆಟೋ ರಾಜ ಶಂಕರ್ ನಾಗ್ ಆಯ್ಕೆ ಮಾಡಿಕೊಳ್ಳುತ್ತಿದ್ದ ಚಿತ್ರಗಳೇ ಹಾಗೆ. ಸೂಪರ್ ಸ್ಕ್ರಿಪ್ಟ್, ಡೂಪರ್ ಹಾಡುಗಳು ಹಾಗೂ ಮಿಸ್ ಇಲ್ಲದೇ 25 ದಿನಗಳನ್ನು ಮುಟ್ಟುವ ಚಿತ್ರಗಳು. ಇಂತಹ ಮಹಾ ಕಲಾವಿದನನ್ನು ನಟಿ ಮಂಜುಳಾ ಮೊದಲ ಬಾರಿ ನೋಡಿ ಕೋತಿ ಎಂದು ಕರೆಯುತ್ತಾರೆ. ಇದರ ಬಗ್ಗೆ 'ಹಾಯ್ ಬೆಂಗಳೂರು' ಮುಖ್ಯ ಸಂಪಾದಕ ರವಿ ಬೆಳಗೆರೆ ಮಾತನಾಡಿದ್ದಾರೆ.
BB7; ಬಯಲಾಯ್ತು ಮದ್ವೆ ಗುಟ್ಟು, 'ಅಗ್ನಿಸಾಕ್ಷಿ' ಚಂದ್ರಿಕಾಳ ಸಿಂಗಲ್ ಲೈಫ್‌ಗೆ ಬ್ರೇಕ್?
ವಿಧಿಯಾಟ ಎಂಥದ್ದು ಅಂದ್ರೆ ನಟಿ ಮಂಜುಳ ಶಂಕರ್ ನಾಗ್ ಬಗ್ಗೆ ಹಾಗೆ ಮಾತನಾಡಿದ್ದರೂ, ಮಂಜುಳ ಸಾವಿಗೀಡಾದಾಗ ಅವರ ಬಾಡಿಯನ್ನು ಹೊತ್ತು ತಂದಿದ್ದೆ ಶಂಕರ್ ನಾಗ್. ಕೆಲವೊಂದು ಮಾಹಿತಿ ಪ್ರಕಾರ ಮಂಜುಳ ಸೈನೈಡ್ ಸೇವಿಸಿ ಸಾವನ್ನಪ್ಪಿದ್ದಾರೆ ಎಂದಿದೆ. ಇನ್ನು ಕೆಲವು ಮೂಲಗಳ ಪ್ರಕಾರ ಅಗ್ನಿ ಅವಘಡದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತದೆ.
ಅಷ್ಟೇ ಅಲ್ಲದೆ ಚಿತ್ರರಂಗದಲ್ಲಿ ಅವಕಾಶಗಳೇ ಇಲ್ಲದ ಸಮಯದಲ್ಲಿ ಶಂಕರ್ ನಾಗ್ ಯಾರ ಸಹಾಯವನ್ನು ಬೇಡದೇ ಜೀವನ ನಡೆಸುವುದಕ್ಕೆ ಕ್ಯಾಂಟೀನ್ ತೆರೆಯುತ್ತಾರೆ ಎಂದು ಜೈ ಜಗದೀಶ್ ಹೇಳಿದ್ದಾರೆ.
ಲವ್,ಡ್ರಾಮಾ ಮಾಡೋವ್ರನ್ನ ಮಾತ್ರ ಫೋಕಸ್ ಮಾಡ್ತಿದ್ಯಾ ಬಿಗ್ ಬಾಸ್?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.