
ಕಿರುತೆರೆಯ ಫೇಮಸ್ ಧಾರಾವಾಹಿ, ತುಂಬಾ ಚೆನ್ನಾಗಿ ಮೂಡಿ ಬರುತ್ತಿರುವ 'ಜೊತೆ ಜೊತೆಯಲಿ' ಆರ್ಯವರ್ಧನ್ ಪಾತ್ರ ತುಂಬಾ ಗಮನ ಸೆಳೆಯುತ್ತಿದೆ. ಆರ್ಯವರ್ಧನ್ ಪಾತ್ರ ಮಾಡುತ್ತಿರುವ ಅನಿರುದ್ಧ್ ಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ನಿಜಕ್ಕೂ ಆ ಪಾತ್ರದ ಯಶಸ್ಸು ಅಂತಾನೇ ಹೇಳಬಹುದು.
ತುಂಬುವಾಗ ಆರ್ಯವರ್ಧನ್ ಬೇಸರಿಸಿಕೊಳ್ಳೋದ್ಯಾಕೆ?
ಕೆಲದಿನಗಳ ಹಿಂದೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ನಡೆಯಿತು. ಈ ವೇದಿಕೆಯಲ್ಲಿ ಜೊತೆ ಜೊತೆಯಲಿ ಧಾರಾವಾಹಿ ತಂಡ ಯಶಸ್ಸಿನ ಬಗ್ಗೆ ಮಾತನಾಡುವಾಗ ಆರ್ಯವರ್ಧನ್ ಅಭಿಮಾನಿಯೊಬ್ಬರು ವೇದಿಕೆ ಮೇಲೆ ಬಂದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.
ಈ ಹೆಣ್ಣು ಮಗಳಿಗೆ ಕಿವಿ ಕೇಳಿಸುವುದಿಲ್ಲ. ಮಾತು ಬರುವುದಿಲ್ಲ. ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರ ಇವರ ಮೇಲೆ ಬಹಳ ಇನ್ಫ್ಲುಯೆನ್ಸ್ ಮಾಡಿದೆ. ಆರ್ಯವರ್ಧನ್ ರನ್ನು ಭೇಟಿ ಮಾಡಲೇಬೇಕೆಂದು ಬಂದಿದ್ದರು. ಆಕೆಯನ್ನು ಅನುಶ್ರೀ ವೇದಿಕೆ ಮೇಲೆ ಕರೆಯುತ್ತಾರೆ. ಅನಿರುದ್ದ ರನ್ನು ತೋರಿಸಿ ಇವರ್ಯಾರು ಗೊತಾಯ್ತಾ? ಇವರ ಬಗ್ಗೆ ಹೇಳಿ ಎಂದು ಕೇಳಿದಾಗ ಆರ್ಯವರ್ಧನ್ ಸೂಪರ್ ಎಂದು ಆ್ಯಕ್ಷನ್ ಮಾಡಿ ತೋರಿಸುತ್ತಾರೆ. ಬೇರೆ ಯಾರ್ಯಾರು ಇಷ್ಟ ಎಂದು ಕೇಳಿದಾಗ ಆರ್ಯವರ್ಧನ್ ಎಂದರೆ ಸಿಕ್ಕಾಪಟ್ಟೆ ಇಷ್ಟ ಎಂದು ಹೇಳುತ್ತಾರೆ. ಆ ನಂತರ ಅನು ಸಿರಿಮನೆಯವರನ್ನು ತೋರಿಸಿ ಇವರ ಬಗ್ಗೆ ಹೇಳಿ ಎಂದಾಗ ಯಾವಾಗಲೂ ಅಳ್ತಾ ಇರ್ತಾರೆ. ಅವರು ಹಚ್ಚುವ ಕಾಡಿಗೆ, ಬಿಂದಿ, ಹೇರ್ ಸ್ಟೈಲ್, ಚೂಡಿದಾರ್, ಸ್ಟೈಲ್ ಎಲ್ಲವೂ ಸೂಪರ್ ಎನ್ನುತ್ತಾರೆ.
BB7: ಮಧ್ಯರಾತ್ರಿ ಮನೆಯಿಂದ ಹೊರಟು ಇದ್ದದ್ದನ್ನೆಲ್ಲಾ ಮಾರಿಕೊಂಡ 'ದುನಿಯಾ' ನಟಿ!
ಆ ಹೆಣ್ಣುಮಗಳಿಗೆ ಕಿವಿ ಕೇಳಿಸದಿದ್ದರೂ ಆರ್ಯವರ್ಧನ್ ಮಾತು ಅವರಿಗೆ ಕೇಳಿಸಿದೆ. ಆಕೆಗೆ ಮಾತು ಬರದಿದ್ದರೂ ಆರ್ಯವರ್ಧನ್ ಬಗ್ಗೆ ಮಾತುಗಳು ಬಂದಿದೆ. ಇದು ಧಾರಾವಾಹಿಯ, ಪಾತ್ರದ ನಿಜವಾದ ಯಶಸ್ಸು ಎಂದು ಅನುಶ್ರೀ ಹೇಳುತ್ತಾರೆ.
ಇದಕ್ಕೆ ಅನಿರುದ್ಧ್ ಪ್ರತಿಕ್ರಿಯಿಸುತ್ತಾ, ನನ್ನ ಮೇಲಿನ ಅಭಿಮಾನವನ್ನು, ಪ್ರೀತಿಯನ್ನು ಪದಗಳಲ್ಲಿ ವ್ಯಕ್ತಪಡಿಸಿಲ್ಲ. ಅದೇ ರೀತಿ ನನಗೂ ಹೇಗೆ ಕೃತಜ್ಞತೆಗಳನ್ನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಪದಗಳೇ ಹುಟ್ಟುತ್ತಿಲ್ಲ ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.