
ಚಿಕ್ಕ ವಯಸ್ಸಿನಲ್ಲಿಯೇ ಧಾರಾವಾಹಿಯಲ್ಲಿ ನಟಿಸಿ ತ್ಯಾಗಮಯಿ, ಕರುಣಾಮಯಿ ಎಂದೆಲ್ಲಾ ಪಟ್ಟ ಗಿಟ್ಟಿಸಿಕೊಂಡಿರುವ ಕಿನ್ನರಿ ಅಲಿಯಾಸ್ ಭೂಮಿ ಶೆಟ್ಟಿ ರಿಯಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಡಿಫರೆಂಟ್.
ಧಾರಾವಾಹಿ ಮುಗಿದರೂ ‘ಕಿನ್ನರಿ’ಬೆನ್ನತ್ತಿದ್ದಾರೆ ಅಭಿಮಾನಿಗಳು!
ಮೂಲತಃ ಕುಂದಾಪುರದ ಚೆಲುವೆ. ತಂದೆ-ತಾಯಿಗಿಂತ ಹೆಚ್ಚಾಗಿ ತಾತ-ಅಜ್ಜಿ ಜೊತೆ ಸಮಯ ಕಳೆದಿರುವ ಭೂಮಿ ವಿದ್ಯಾಭ್ಯಾಸ ಮಾಡಿದ್ದೆಲ್ಲಾ ಬೆಂಗಳೂರಿನಲ್ಲೇ. ಯಾವುದಾದರೂ ಒಂದು ವಸ್ತು ಬೇಕು ಅಂದರೆ ಬೇಕು ಎನ್ನುವಷ್ಟು ಹಠಮಾರಿ ಸ್ವಭಾವ ಇವರದು. ಶಾಲೆಯಲ್ಲಿ ಸ್ನೇಹಿತರೆಲ್ಲರೂ ರಾಯಲ್ ಶೆಟ್ಟಿ ಎಂದು ಕರೆಯುತ್ತಿದ್ದರಂತೆ!
ಬಿಗ್ ಬಾಸ್ ಮನೆಯಲ್ಲಿ ಬಯಲಾಯ್ತು ಚೈತ್ರಾ ವಾಸುದೇವನ್ ಮದುವೆ ಗುಟ್ಟು!
ಚಿಕ್ಕ ವಯಸ್ಸಿನಲ್ಲಿ ಇವರು ಮಾಡುತ್ತಿದ್ದ ಕಿತಾಪತಿ ಒಂದೆರಡಲ್ಲ. ಬಹಳ ಚೂಟಿಯಾಗಿದ್ದ ರಾಯಲ್ ಶೆಟ್ಟಿ ಒಮ್ಮೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅಜ್ಜ ಸೇದಿ ಬಿಟ್ಟ ಬೀಡಿಯನ್ನು ಬಿಡಿಸಿ ಅದರೊಳಗೆ ಇದ್ದ ಪುಡಿಯನ್ನು ತಿನ್ನುತ್ತಿದ್ದರಂತೆ. ಹೀಗೆ ಮಾಡುತ್ತಿದ್ದಾಗ ಒಮ್ಮೆ ಮಾವನ ಕೈಯಲ್ಲಿ ಸಿಕ್ಕಾಕಿಕೊಂಡು ಬಿದ್ರಂತೆ. ಆಗ ಅವರು ಮೈಮೇಲೆ ಚಿಗಳಿ ಬಿಟ್ಟು ಶಿಕ್ಷೆ ಕೊಟ್ಟಿದ್ದರಂತೆ. ಇನ್ಯಾವತ್ತೂ ಹೀಗೆ ಮಾಡಲ್ಲ ಅಂತ ಹೇಳಿದ್ರಂತೆ.
40 ರಿಂದ 38, ತಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲದ ತಮ್ಮದೇ ರಹಸ್ಯ ಹೇಳಿದ ಬೆಳಗೆರೆ
ದಿನಾ ಬಂಗಡೆ ಮೀನು ಇಲ್ಲದೇ ಭೂಮಿ ಊಟವನ್ನೇ ಮಾಡಲ್ಲ ಎಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಬಿಟ್ಟು ಹೇಗಿರುತ್ತಾರೆಂದು ಕಾದು ನೋಡಬೇಕಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.