ಬಿಗ್ ಬಾಸ್ ಮನೆಯೊಳಗೆ ಹೋಗಿ 38 ಗಂಟೆಯೊಳಗೆ ಹೊರಬಿದ್ರು ರವಿ ಬೆಳಗೆರೆ?

By Web Desk  |  First Published Oct 14, 2019, 12:35 PM IST

ಬಿಗ್ ಬಾಸ್ ರಿಯಾಲಿಟಿ ಶೋನಿಂದ ರವಿ ಬೆಳಗೆರೆ ಔಟ್ |  ಮನೆಯೊಳಗೆ ಹೋಗಿ 38 ಗಂಟೆಯೊಳಗೆ ಹೊರ ಬಿದ್ದಿದ್ದಾರೆ ಬಾಸ್ | ಬಾತ್ ರೂಮ್ ನಲ್ಲಿ ಕಾಲು ಜಾರಿ ಬಿದ್ದಿದ್ದಾರೆ 


ಬಿಗ್ ಬಾಸ್ ಮನೆಯೊಳಗೆ ಹೋಗಿದ್ದ ಫೈರ್ ಬ್ರಾಂಡ್ ಪತ್ರಕರ್ತ ರವಿ ಬೆಳಗೆರೆ ಮನೆಯೊಳಗೆ ಹೋಗಿ ಒಂದು ದಿನದೊಳಗೆ ವಾಪಸ್ ಬಂದಿದ್ದಾರೆ. 

ಶನಿವಾರ ಸಂಜೆ ಬಿಗ್ ಬಾಸ್ ಮನೆಯೊಳಗೆ ರವಿ ಬೆಳಗೆರೆ ಎಂಟ್ರಿಯಾಗಿದ್ದರು. ಭಾನುವಾರ ಇಡೀ ದಿನ ಮನೆಯೊಳಗೆ ಇದ್ದರು. ಇತರ ಸ್ಪರ್ಧಿಗಳ ಜೊತೆ ಚೆನ್ನಾಗಿ ಮಾತನಾಡುತ್ತಾ ಹೊಂದಿಕೊಳ್ಳುತ್ತಿದ್ದಾರೆ ಎನ್ನುತ್ತಿರುವಾಗಲೇ ದಿಢೀರನೇ ಅನಾರೋಗ್ಯ ಕಾಣಿಸಿಕೊಂಡಿದೆ. ಹಾಗಾಗಿ ಮನೆಯೊಳಗೆ ಇರಲಾರದೇ ಹೊರ ಬಂದಿದ್ದಾರೆ. 

Tap to resize

Latest Videos

undefined

40 ರಿಂದ 38 ತಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲದ ತಮ್ಮದೇ ರಹಸ್ಯ ಹೇಳಿದ ಬೆಳಗೆರೆ

ಬಾತ್ ರೂಮ್ ಗೆ ಹೋದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಪದ್ಮನಾಭ ನಗರ ನಿವಾಸಕ್ಕೆ ಕಳುಹಿಸಲಾಗಿದೆ.  ಪದ್ಮನಾಭ ನಗರ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. 

ರವಿ ಬೆಳಗೆರೆ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಡೆಯುವುದಕ್ಕೆ, ಕೂರುವುದಕ್ಕೆ, ಸ್ವಂತ ಕೆಲಸ ಮಾಡಿಕೊಳ್ಳುವುದಕ್ಕೂ ಬೇರೆಯವರನ್ನು ಅವಲಂಬಿಸಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹೋದಾಗಿನಿಂದಲೂ ಕುರಿ ಪ್ರತಾಪ್ ಹಿಡಿದುಕೊಂಡೇ ಓಡಾಡುತ್ತಿದ್ದರು.  

ಬಿಗ್ ಮನೆಗೆ ಕುರಿ ಎಂಟ್ರಿ, ಮೊದಲ ದಿನವೇ ಕುರಿಗೆ ಇಂಗ್ಲೀಷ್ ಟಾಸ್ಕ್!

ಬಿಗ್ ಬಾಸ್ ಮನೆಯೊಳಗೆ ಹೋಗುವಾಗ ಸುದೀಪ್ ಜೊತೆ ಫುಲ್ ಜೋಶ್ ನಲ್ಲಿಯೇ ಮಾತನಾಡಿದ್ದರು. ನನ್ನ ಜೀವನದ ಅನುಭವಗಳನ್ನು ನನಗಿಂತ ಕಿರಿಯರಿಗೆ ಕಲಿಸಿಕೊಡಲು ಮನೆಯೊಳಗೆ ಹೋಗುತ್ತಿದ್ದೇನೆ. ನಿಮಗೆ ಇದುವರೆಗೂ ಗೊತ್ತಿರಲಿಕ್ಕಿಲ್ಲ. ನನಗೆ ಜ್ಯೋತಿಷ್ಯ ಹೇಳುವುದಕ್ಕೂ ಬರುತ್ತದೆ. ಮನೆಯೊಳಗೆ ಹೇಗೆಲ್ಲಾ ಭವಿಷ್ಯ ಹೇಳುತ್ತೀನಿ ನೀವೇ ಕೇಳಿ’ ಎಂದು ಸುದೀಪ್ ಗೆ ಹೇಳಿ ಗಮನ ಸೆಳೆದಿದ್ದರು. 

ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಸುವರ್ಣ ನ್ಯೂಸ್, ಭಾವನಾ ಬೆಳೆಗೆರೆಯವರನ್ನು ಸಂಪರ್ಕಿಸಿದಾಗ, ‘ನಮ್ಮ ತಂದೆ ಮನೆಗೆ ಬಂದಿದ್ದಾರೆ. ಈಗ ಆರಾಮಾಗಿದ್ದಾರೆ. ನಿದ್ದೆಗಣ್ಣಿನಲ್ಲಿ ಎದ್ದು ಟಾಯ್ಲೆಟ್ ಗೆ ಎದ್ದು ಹೋಗುವಾಗ ಮೆಟ್ಟಿಲಿನಿಂದ ಜಾರಿ ಬಿದ್ದಿದ್ದಾರೆ. ಆಮೇಲೆ ಅವರೇ ಎದ್ದು ಟಾಯ್ಲೆಟ್ ಗೆ ಹೋಗಿ, ಸ್ಮೋಕಿಂಗ್ ಜೋನ್ ಗೆ ಹೋಗಿ ಬಂದಿದ್ದಾರೆ. ಆಮೇಲೆ ಬಂದು ಶುಗರ್ ಲೆವೆಲ್ ಹೆಚ್ಚು ಕಡಿಮೆ ಆಗ್ತಾ ಇದೆ. ಆ್ಯಂಬುಲೆನ್ಸ್ ಕಳುಹಿಸಿ ಎಂದಿದ್ದಾರೆ. ಡಾಕ್ಟರ್ ಚೆಕಪ್ ಮಾಡಿ ಮನೆಗೆ ಕಳುಹಿಸಿದ್ದಾರೆ. ಈಗ ಮಲಗಿದ್ದಾರೆ. ಆರಾಮಾಗಿದ್ದಾರೆ. ಮತ್ತೆ ಹೋಗ್ತಾರೋ ಇಲ್ವೋ ಈಗಲೇ ಹೇಳಲಾಗುವುದಿಲ್ಲ’ ಎಂದಿದ್ದಾರೆ. 

click me!